ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ
ಎಕ್ಸ್‌ಪ್ರೆಸ್ ರೈಲೊಂದರ ಶೌಚಾಲಯವು ಸುಮಾರು ಒಂದೂವರೆ ಗಂಟೆಗಳ ಕಾಲ ಲಾಕ್ ಆಗಿತ್ತು. ಅನುಮಾನಗೊಂಡ ಪ್ರಯಾಣಿಕರು ಬಾಗಿಲು ತೆರೆಸಿದಾಗ, ಒಳಗಿನಿಂದ ಯುವಕ ಮತ್ತು ಯುವತಿಯೊಬ್ಬಳು ಹೊರಬಂದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರು ಮತ್ತು ಜೋಡಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.

ಎಕ್ಸ್‌ಪ್ರೆಸ್ ರೈಲಿನ ವಿಡಿಯೋ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್‌ಪ್ರೆಸ್ ರೈಲಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವೈರಲ್ ವಿಡಿಯೋದಲ್ಲಿ ಯುವಕ ಮತ್ತು ಯುವತಿಯೊಬ್ಬಳು ಟ್ರೈನ್ ಟಾಯ್ಲೆಟ್‌ನಿಂದ ಹೊರ ಬರುತ್ತಿರೋದನ್ನು ಗಮನಿಸಬಹುದು. ಶೌಚಾಲಯದಿಂದ ಹೊರ ಬರುತ್ತಿದ್ದಂತೆ ಯುವತಿ ವಿಡಿಯೋ ಮಾಡದಂತೆ ಅವಾಜ್ ಹಾಕಿದ್ದಾಳೆ. ಆದರೆ ಪ್ರಯಾಣಿಕರು ಮಾತ್ರ ಯುವಕ-ಯುವತಿಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಹೊರಗೆ ಬಂದ ಯುವಕ
ಎಕ್ಸ್‌ಪ್ರೆಸ್ ರೈಲಿನಲ್ಲಿ ಘಟನೆ ನಡೆದಿದ್ದು, ನಿಖರವಾಗಿ ಯಾವ ಟ್ರೈನ್ ಎಂದು ತಿಳಿದು ಬಂದಿಲ್ಲ. ಸುಮಾರು ಒಂದೂವರೆ ಗಂಟೆ ಕಾಲ ರೈಲಿನ ಶೌಚಾಲಯದ ಬಾಗಿಲು ಬಂದ್ ಆಗಿತ್ತು. ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಪ್ರಯಾಣಿಕರು, ಒಳಗೆ ಯಾರಿದ್ದೀರಿ? ಹೊರಗೆ ಬನ್ನಿ ಎಂದು ಕರೆದಿದ್ದಾರೆ. ಪ್ರಯಾಣಿಕರು ಕೂಗುತ್ತಿದ್ದಂತೆ ಬಾಗಿಲು ತೆರೆದು ಯುವಕ ಹೊರಗೆ ಬರುತ್ತಾನೆ. ಯುವಕ ಬರುತ್ತಿದ್ದಂತೆ ಹಿಂದಿನಿಂದಲೇ ಶೌಚಾಲಯದ ಬಾಗಿಲು ಕ್ಲೋಸ್ ಆಗುತ್ತದೆ.
ಒಂದೂವರೆ ಗಂಟೆಯಿಂದ ಟಾಯ್ಲೆಟ್ ಬಂದ್
ವೈರಲ್ ವಿಡಿಯೋ ಶುರುವಾಗುವುದೇ ಟ್ರೈನ್ ಟಾಯ್ಲೆಟ್‌ನ ಮುಚ್ಚಿದ ಬಾಗಿಲಿನಿಂದ ವಿಡಿಯೋ ಮಾಡುತ್ತಿರುವ ವ್ಯಕ್ತಿ, ಈ ಬಾಗಿಲು ಸುಮಾರು ಒಂದೂವರೆ ಗಂಟೆಯಿಂದ ಒಳಗಿನಿಂದ ಲಾಕ್ ಆಗಿದೆ ಅಂತ ಹೇಳುತ್ತಾನೆ. ಬಾಗಿಲು ತೆರೆಯಿರಿ ಅಂದಾಗ, ಒಳಗೆ ಯಾರಿಗೋ ಹುಷಾರಿಲ್ಲ ಅಂತ ಉತ್ತರ ಬಂದಿದೆ. ಆದರೆ ಇಷ್ಟೊಂದು ಹೊತ್ತು ಟಾಯ್ಲೆಟ್ ಬಂದ್ ಆಗಿದ್ದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇದೇ ವೇಳೆ ಕೆಲ ಪ್ರಯಾಣಿಕರು ಬಾಗಿಲು ತಟ್ಟಲು ಶುರುಮಾಡಿದ್ದಾರೆ
ಬಾಗಿಲು ತೆರೆಯುತ್ತಿದ್ದಂತೆ ಜೋಡಿ ಪ್ರತ್ಯಕ್ಷ
ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲದ ವಾಗ್ವಾದದ ನಂತರ, ಇದ್ದಕ್ಕಿದ್ದಂತೆ ಟಾಯ್ಲೆಟ್ ಬಾಗಿಲು ತೆರೆದುಕೊಳ್ಳುತ್ತದೆ. ಒಳಗಿನಿಂದ ಒಬ್ಬ ಯುವಕ ಹೊರಗೆ ಬರುತ್ತಾನೆ. ಬೋಗಿಯಲ್ಲಿದ್ದ ಕೆಲವು ಪ್ರಯಾಣಿಕರು ಅವನ ಮೇಲೆ ಗರಂ ಆಗಿ, ಯಾಕೆ ಇಷ್ಟು ಹೊತ್ತು ಬೇಕಾಯ್ತು ಅಂತ ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ, ಟಾಯ್ಲೆಟ್‌ನಿಂದ ಒಬ್ಬ ಯುವತಿಯೂ ಹೊರಗೆ ಬರುತ್ತಾಳೆ. ಹೊರಗೆ ಬರ್ತಿದ್ದಂತೆ ಪ್ರಯಾಣಿಕರನ್ನು ನೋಡಿ ಯುವತಿ ತುಂಬಾನೇ ಗಾಬರಿಯಾಗಿದ್ದಳು. ಪ್ರಯಾಣಿಕರು ಮತ್ತು ಆ ಜೋಡಿಯ ನಡುವೆ ಮಾತಿನ ಚಕಮಕಿ ಶುರುವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ವಿಡಿಯೋ ಮಾಡಿದ್ದಕ್ಕೂ ಶುರುವಾಯ್ತು ಜಗಳ
ವಿಷಯ ಇಷ್ಟಕ್ಕೇ ನಿಲ್ಲಲಿಲ್ಲ. ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ತನ್ನ ಅನುಮತಿ ಇಲ್ಲದೆ ವಿಡಿಯೋ ರೆಕಾರ್ಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ತಾನು ಯಾರ ಜೊತೆ ಒಳಗೆ ಹೋಗಿದ್ದೆ ಅನ್ನೋದು ತನ್ನ ವೈಯಕ್ತಿಕ ವಿಚಾರ, ಅದರ ವಿಡಿಯೋ ಮಾಡಲು ಯಾರಿಗೂ ಹಕ್ಕಿಲ್ಲ ಅಂತ ವಾದಿಸಿದ್ದಾಳೆ. ಇನ್ನೊಂದೆಡೆ, ಇಷ್ಟು ಹೊತ್ತು ಟಾಯ್ಲೆಟ್ ಬಂದ್ ಮಾಡಿದ್ದು ತಪ್ಪು, ಇದರಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಅಂತ ಕೆಲವು ಪ್ರಯಾಣಿಕರು ಹೇಳಿದ್ದಾರೆ.
RPFಗೆ ಒಪ್ಪಿಸುವುದಾಗಿ ಎಚ್ಚರಿಕೆ, ಟ್ರೈನ್‌ನಲ್ಲಿ ಟೆನ್ಶನ್
ಜಗಳ ಜೋರಾದಾಗ, ಕೆಲವು ಪ್ರಯಾಣಿಕರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿ, ಇಬ್ಬರನ್ನೂ ರೈಲ್ವೆ ಪೊಲೀಸರಿಗೆ (RPF) ಒಪ್ಪಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಯುವತಿ, ತನಗೇನೂ ಅಭ್ಯಂತರವಿಲ್ಲ, ಆದರೆ ಮೊದಲು ನನ್ನ ವಿಡಿಯೋ ಡಿಲೀಟ್ ಮಾಡಿ ಅಂತ ಪಟ್ಟು ಹಿಡಿದಿದ್ದಾಳೆ. ಈ ವಿಡಿಯೋ ವೈರಲ್ ಆದರೆ ತನಗೆ ತೊಂದರೆಯಾಗಬಹುದು ಅಂತ ಯುವತಿ ಹೇಳುತ್ತಿರುವುದನ್ನು ವಿಡಿಯೋದ ಕೊನೆಯಲ್ಲಿ ಕೇಳಬಹುದು.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿಯೇ ಕಾಮದ ಅಮಲಿನಲ್ಲಿ ತೇಲಾಡಿದ ಜೋಡಿ; ಬೆತ್ತಲಾದವರಿಗೆ ಬಿಗ್ ಶಾಕ್
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗ್ತಿದೆ. ಈ ಘಟನೆ ನಡೆದ ನಿಖರವಾದ ದಿನಾಂಕ, ಸ್ಥಳ ಅಥವಾ ರೈಲಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ರೈಲ್ವೆ ಇಲಾಖೆಯಿಂದಲೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ವೈರಲ್ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಸರಸದಲ್ಲಿದ್ದಾಗಲೇ ಹೆಂಡ್ತಿಯನ್ನ ಹಿಡಿದ ಗಂಡ; ಚಿನ್ನ, ರನ್ನ ಅಂತಿದ್ದವ್ಳ ಅಸಲಿಯತ್ತು ಬಯಲು
#BreakingNews आजकल लोगो को थोड़ा भी बर्दास्त नहीं हो रहा हैं ट्रैन को हीं oyo बना दे रहे हैं। और इन्हे लोगो की परवाह भी नहीं हैं। फिर से ट्रैन के बाथरूम में एक कपल 2 घण्टे तक बंद मिले #NewsUpdate#TrendingNews#viralnewspic.twitter.com/rutJ9NX3LJ
— awsurnews (@mr_suryag) January 21, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

