MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಅಮ್ಮನಾದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ದಿವ್ಯಾ ವಸಂತ್​: ಖುಷಿ ಹಂಚಿಕೊಂಡ ಮಾಜಿ ಆ್ಯಂಕರ್​

ಅಮ್ಮನಾದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ದಿವ್ಯಾ ವಸಂತ್​: ಖುಷಿ ಹಂಚಿಕೊಂಡ ಮಾಜಿ ಆ್ಯಂಕರ್​

'ಗಿಚ್ಚಿ ಗಿಲಿಗಿಲಿ' ಶೋ ಮತ್ತು ನಿರೂಪಕಿಯಾಗಿ ಖ್ಯಾತಿ ಪಡೆದಿದ್ದ ದಿವ್ಯಾ ವಸಂತ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಸಚಿನ್ ಯಾದವ್ ಅವರೊಂದಿಗೆ ವಿವಾಹವಾಗಿರುವ ಇವರು, ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದರು.

1 Min read
Author : Suchethana D
Published : Sep 21 2026, 07:56 PM IST
Share this Photo Gallery
  • FB
  • TW
  • Linkdin
  • Whatsapp
15
‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ದಿವ್ಯಾ
Image Credit : Divya Vasant Instagram

‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ದಿವ್ಯಾ

‘ಗಿಚ್ಚಿ ಗಿಲಿಗಿಲಿ’ ಶೋ ಖ್ಯಾತಿಯ ಹಾಗೂ ಕೆಲವೊಂದು ವಿಷಯಗಳಿಂದ ಟ್ರೋಲ್​ ಮೂಲಕವೇ ಫೇಮಸ್​ ಆಗಿದ್ದ ಮಾಜಿ ನ್ಯೂಸ್ ಆ್ಯಂಕರ್​​ ದಿವ್ಯಾ ವಸಂತ ಅವರು ನಿನ್ನೆ ಅರ್ಥಾತ್​ ಸೆಪ್ಟೆಂಬರ್​ 20ರಂದು ಗಂಡುಮಗುವಿನ ತಾಯಿಯಾಗಿದ್ದಾರೆ. ಸಚಿನ್ ಯಾದವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿವ್ಯಾ ಅವರು ಇದೀಗ ಅಮ್ಮನಾಗುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮದುವೆಯ ಬಂಧ
Image Credit : Instagram

ಮದುವೆಯ ಬಂಧ

ಇತ್ತೀಚೆಗೆ ತಾವು ಗರ್ಭಿಣಿಯಾಗಿರುವ ವಿಷಯವನ್ನ ಅಭಿಮಾನಿಗಳ ಜೊತೆಗೆ ಶೇರ್‌ ಮಾಡಿಕೊಂಡಿದ್ದರು ದಿವ್ಯಾ ವಸಂತ. ಇತ್ತೀಚೆಗಷ್ಟೇ, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಅತ್ಯಂತ ಸಡಗರ-ಸಂಭ್ರಮದಿಂದ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನ ನೆರವೇರಿಸಿದ್ದರು.

Related Articles

Related image1
ಸ್ಯಾಂಡಲ್​ವುಡ್​ ತಾರೆ ಅಂಬಿಕಾ ವಿರುದ್ಧ 43 ಕೋಟಿ ರೂ. ವಂಚನೆ ಆರೋಪ! ತಂಗಿಯಿಂದ್ಲೇ ಕೇಸ್​- ಆಗಿದ್ದೇನು
Related image2
Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​
35
ನಿರೂಪಕಿಯಾಗಿ ಸದ್ದು
Image Credit : social media

ನಿರೂಪಕಿಯಾಗಿ ಸದ್ದು

ಅಂದಹಾಗೆ ದಿವ್ಯಾ ಅವರು ಗಿಚ್ಚಿಗಿಲಿಗಿಲಿಗೂ ಹೋಗುವ ಮುನ್ನ ನಿರೂಪಕಿಯಾಗಿ ಸಕತ್​ ಸದ್ದುಮಾಡಿದವರು. ಮಾಡೆಲ್​ ಆಗಿಯೂ ಗುರುತಿಸಿಕೊಂಡವರು. ಕೆಲವೊಂದು ಕಾಂಟ್ರವರ್ಸಿಗೂ ಸಿಲುಕಿಕೊಂಡಿದ್ದರು. ಇವೆಲ್ಲಕ್ಕೂ ತಿಲಾಂಜಲಿ ಇತ್ತು, ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ದಿವ್ಯಾ, ಸಚಿನ್ ಯಾದವ್ ಅವರನ್ನ ಪ್ರೀತಿಸಿ, ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಸಚಿನ್ ಯಾದವ್ ಅವರು ವೃತ್ತಿಯಲ್ಲಿ ಬೌನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

45
ಮಾಡೆಲ್​ ಆಗಿಯೂ ಹೆಸರುವಾಸಿ
Image Credit : our own

ಮಾಡೆಲ್​ ಆಗಿಯೂ ಹೆಸರುವಾಸಿ

ಇನ್ನು ದಿವ್ಯಾ ಕುರಿತು ಹೇಳುವುದಾದರೆ, ಇವರು ನಿರೂಪಕಿ ಮತ್ತು ಮಾಡೆಲ್. ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಕೆಲಸ ಮಾಡುವ ಇವರು, ತಮ್ಮ ಅಭಿನಯ ಮತ್ತು ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ದಿವ್ಯ, ನಂತರ ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದರು.

55
ಬಹುಮುಖ ಪ್ರತಿಭೆ
Image Credit : our own

ಬಹುಮುಖ ಪ್ರತಿಭೆ

ಅವರ ನೈಸರ್ಗಿಕ ಅಭಿನಯ ಮತ್ತು ಪರದೆಯ ಮೇಲಿನ ಆಕರ್ಷಕ ವ್ಯಕ್ತಿತ್ವವು ಅವರಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ವಿವಿಧ ಪಾತ್ರಗಳಲ್ಲಿನ ಅವರ ಬಹುಮುಖ ಪ್ರತಿಭೆ ಅವರನ್ನು ಜನಪ್ರಿಯ ನಟಿಯನ್ನಾಗಿ ಮಾಡಿದೆ. ದಿವ್ಯ ವಸಂತ್ ಅವರು ತಮ್ಮ ಸಾಮಾಜಿಕ ಕಾರ್ಯಗಳಿಗಾಗಿಯೂ ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳ ಜೊತೆಗೆ, ಅವರು ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದಿವ್ಯ ವಸಂತ್
ಮನರಂಜನಾ ಸುದ್ದಿ
ಸಂಬಂಧಗಳು
ತಾಯ್ತನ
ತಾಯಿ
 

Latest Videos
Recommended Stories
Recommended image1
ಅಮೆರಿಕ, ಇಟಲಿ, ಫ್ರಾನ್ಸ್​ ಎಲ್ಲೇ ಹೋದ್ರೂ ನನ್ನನ್ನು ರಶ್ಮಿಕಾ ಹೀಗೆ ಕುಣಿಸ್ತಾಳೆ: ಆ್ಯಂಕರ್​ ಅನುಶ್ರೀ ಎದುರು ಗುಟ್ಟು ರಟ್ಟು
Recommended image2
ಬಾಯ್‌ಫ್ರೆಂಡ್ ಜೊತೆ ಮದುವೆಗೆ ಸಿದ್ಧಳಾಗಿದ್ದ ಯುವತಿ; ತಾಯಿಯ ಒಂದೇ ಒಂದು ಮಾತಿನಿಂದ ಬದಲಾಯ್ತು ನಿರ್ಧಾರ!
Recommended image3
ತಾಯಿಗಾಗಿ ಮಗನ ಅಪರೂಪದ ಸಂಕಲ್ಪ! ಅಮ್ಮ ಕಾಯಿಲೆಯಿಂದ ಗುಣಮುಖರಾದ ತಕ್ಷಣ ಮಗ ಮಾಡಿದ ಕೆಲಸವೇನು ಗೊತ್ತಾ?
Related Stories
Recommended image1
ಸ್ಯಾಂಡಲ್​ವುಡ್​ ತಾರೆ ಅಂಬಿಕಾ ವಿರುದ್ಧ 43 ಕೋಟಿ ರೂ. ವಂಚನೆ ಆರೋಪ! ತಂಗಿಯಿಂದ್ಲೇ ಕೇಸ್​- ಆಗಿದ್ದೇನು
Recommended image2
Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved