C Section ಆದ ಎಷ್ಟು ದಿನದ ನಂತರ ದೈಹಿಕ ಸಂಬಂಧ ಬೆಳೆಸಿದರೆ ಓಕೆ?
ಶಾರೀರಿಕ ಸಂಬಂಧ (Physical Relationship) ಹೊಂದುವುದು ವೈವಾಹಿಕ ಜೀವನದ ಒಂದು ಭಾಗವಾಗಿದೆ ನಿಜಾ. ಆದರೆ ಅದಕ್ಕೆ ಮಹಿಳೆಯ ದೇಹ ಬೆಂಬಲ ನೀಡಿದರೆ ಮಾತ್ರ ಎಲ್ಲವೂ ಚೆನ್ನಾಗಿರುತ್ತೆ. ಇಲ್ಲವಾದರೆ ತೊಂದರೆ ಅನುಭವಿಸೋದು ಖಚಿತಾ. ಸಿಸೇರಿಯನ್ ಹೆರಿಗೆಯ ನಂತರ ದೈಹಿಕ ಸಂಬಂಧ ಹೊಂದಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಸಿಸೇರಿಯನ್ ಹೆರಿಗೆಯ ನಂತರ ಮಹಿಳೆಯೊಂದಿಗೆ ದೈಹಿಕ ಸಂಬಂಧ (physical relationship) ಹೊಂದಲು ಆತುರಪಡುವುದು ಅವಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಿಸೇರಿಯನ್ ಹೆರಿಗೆಯ ನಂತರ ಮಹಿಳೆ 7-10 ವಾರಗಳವರೆಗೆ ತನ್ನನ್ನು ತಾನು ನೋಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾದ್ರೆ ಸಿಸೇರಿಯನ್ ಹೆರಿಗೆಯಾದ ಎಷ್ಟು ದಿನಗಳ ನಂತರ, ಮಹಿಳೆ ಸಾಮಾನ್ಯ ಜೀವನವನ್ನು ನಡೆಸಬಹುದು ಎಂಬ ಪ್ರಶ್ನೆ ನೀವು ಕೇಳಬಹುದು ಅಲ್ವಾ? ಸಾಮಾನ್ಯ ಜೀವನ ಎಂದರೆ ಮಹಿಳೆಯ ದೇಹವು ದೈಹಿಕ ಸಂಬಂಧಗಳನ್ನು ಹೊಂದಲು ಸಾಧ್ಯವಾದಾಗ ಎಂದು ಅರ್ಥ. ಸಿಸೇರಿಯನ್ ಹೆರಿಗೆಯ ನಂತರ ಮಹಿಳೆ ಯಾವಾಗ ದೈಹಿಕ ಸಂಬಂಧ ಹೊಂದಬೇಕು ಅನ್ನೋದನ್ನು ತಿಳಿಯೋಣ.
ಸಿಸೇರಿಯನ್ ಡೆಲಿವರಿ (cesarean delivery) ಎಂದರೇನು ಮತ್ತು ಅದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ:
ಸಿಸೇರಿಯನ್ ಹೆರಿಗೆಯಲ್ಲಿ, ಮಗುವಿನ ಹೆರಿಗೆಯನ್ನು ಯೋನಿಯಿಂದ ಮಾಡಲಾಗುವುದಿಲ್ಲ, ಹೊಟ್ಟೆ ಮತ್ತು ಗರ್ಭಾಶಯದಲ್ಲಿ ಛೇದನ ಮಾಡುವ ಮೂಲಕ ಮಗುವನ್ನು ಹೊರ ತೆಗಿಯಲಾಗುತ್ತೆ. ಸಾಮಾನ್ಯ ಹೆರಿಗೆಯಲ್ಲಿ, ತೊಂದರೆ ಇದ್ದಾಗ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲು ಸಿ ಸೆಕ್ಷನ್ ಡೆಲಿವರಿ ಮಾಡಲಾಗುತ್ತದೆ. ಮಗುವಿನ ಹೆರಿಗೆಯ ಈ ವೇಗದ ವಿಧಾನಗಳು ತುರ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳಾಗಿವೆ.
ಸಿಸೇರಿಯನ್ ಹೆರಿಗೆಯ ನಂತರ ಎಷ್ಟು ದಿನಗಳ ನಂತರ ನೀವು ಲೈಂಗಿಕ ಕ್ರಿಯೆ ನಡೆಸಬಹುದು:
ಸಿ-ಸೆಕ್ಷನ್ ಹೆರಿಗೆಯಲ್ಲಿ (c- section delivery), ಹೆರಿಗೆಯ ಸಮಯದಲ್ಲಿ ಮಹಿಳೆಗೆ ಹೊಲಿಗೆಗಳನ್ನು ಹಾಕಲಾಗುತ್ತದೆ, ಇದು ಚೇತರಿಸಿಕೊಳ್ಳಲು ಯೋನಿ ಹೆರಿಗೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಿಸೇರಿಯನ್ ಹೆರಿಗೆಯ ಆರು ವಾರಗಳ ನಂತರ ಮಹಿಳೆ ದೈಹಿಕ ಸಂಬಂಧವನ್ನು ಹೊಂದಬಹುದು.
ಸಿಸೇರಿಯನ್ ಹೆರಿಗೆಯ 6 ವಾರಗಳ ನಂತರ ದೈಹಿಕ ಸಂಬಂಧವನ್ನು ಹೊಂದುವುದು ಸೂಕ್ತ ಸಮಯ. ಆದರೆ ಚೇತರಿಕೆಯ ಸಮಯವು ಪ್ರತಿಯೊಬ್ಬ ಮಹಿಳೆಯಲ್ಲಿ ವಿಭಿನ್ನವಾಗಿರುತ್ತದೆ. ಕೆಲವು ಮಹಿಳೆಯರ ಚೇತರಿಕೆ ತಡವಾಗಿದೆ, ಆದ್ದರಿಂದ ಅವರು ದೈಹಿಕ ಸಂಬಂಧವನ್ನು ಹೊಂದುವ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
ಪ್ರಸವದ ನಂತರ, ಗರ್ಭಾಶಯದ ಗಾತ್ರ ಬದಲಾಗುತ್ತೆ, ಇದು ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಮತ್ತು ರಕ್ತಸ್ರಾವದ ಮಾದರಿ ಬದಲಾಗುತ್ತದೆ. ಆದ್ದರಿಂದ ನಿಮ್ಮ ದೇಹವು ದೈಹಿಕ ಸಂಬಂಧ ರೂಪಿಸುವ ಸಾಮರ್ಥ್ಯ ಹೊಂದಿದೆಯೇ ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳುವ ಅಗತ್ಯವಿದೆಯೇ ಎಂದು ತಿಳಿಯಲು ವೈದ್ಯರನ್ನು ಸಂಪರ್ಕಿಸಿ.
ಸಿಸೇರಿಯನ್ ಹೆರಿಗೆಯ ನಂತರ ದೈಹಿಕ ಸಂಬಂಧ ಬೆಳೆಸೋದ್ರಿಂದ ಸಮಸ್ಯೆ ಏನು?
ಸಿಸೇರಿಯನ್ ಹೆರಿಗೆಯ ನಂತರ ದೈಹಿಕ ಸಂಬಂಧ ಹೊಂದಿರುವುದು ನೋವಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ, ಮಹಿಳೆ ಮಗುವಿಗೆ ಸ್ತನ್ಯಪಾನ ಮಾಡುತ್ತಾಳೆ, ಇದರಿಂದಾಗಿ ಯೋನಿಯಲ್ಲಿ ಹೆಚ್ಚು ಶುಷ್ಕತೆ ಇರುತ್ತದೆ. ನೈಸರ್ಗಿಕ ಲ್ಯೂಬ್ರಿಕೆಂಟ್ ಗಳ (natural lubricant) ಕೊರತೆಯು ದೈಹಿಕ ಸಂಬಂಧ ಮಾಡಲು ತೊಂದರೆಯನ್ನುಂಟುಮಾಡುತ್ತದೆ. ಸಿಸೇರಿಯನ್ ಹೆರಿಗೆಯ 6 ವಾರಗಳ ನಂತರ, ವೈದ್ಯರ ಸಲಹೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದರೆ ಉತ್ತಮ.
ಸರಿಯಾದ ಪೊಸಿಶನ್ ಗಳು :
ಎರಡು ತಿಂಗಳ ನಂತರ ನೀವು ಶಾರೀರಿಕ ಸಂಬಂಧ ಬೆಳೆಸುವಾಗ ಕೆಲವು ಪೊಜಿಶನ್ ಗಳ (position) ಬಗ್ಗೆ ಗಮನ ಹರಿಸಬೇಕು. ಈ ಸಂದರ್ಭದಲ್ಲಿ ವಿಮೆನ್ ಆನ್ ಟಾಪ್ ಬೆಸ್ಟ್ ಆಯ್ಕೆ ಏಕೆಂದರೆ ಅವು ನಿಮಗೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತೆ. ಇದು ನಿಮಗೆ ಹೆಚ್ಚು ಆರಾಮದಾಯಕವಾದ ಮಾರ್ಗಗಳಲ್ಲಿ ಚಲಿಸಲು ಸಹ ಅನುವು ಮಾಡಿಕೊಡುತ್ತದೆ. ಇದಲ್ಲದೆ, ಸೈಡ್ ಅಥವಾ ರಿಯರ್ ಎಂಟ್ರಿ, ಅಥವಾ ಸ್ಪೂನ್ ಪೊಸಿಶನ್ ಸಹ ಉತ್ತಮ ಆಯ್ಕೆಯಾಗಿದೆ.
ಲ್ಯೂಬ್ರಿಕೆಂಟ್ ಬಳಕೆ ಅಗತ್ಯ
ಹೆರಿಗೆಯ ನಂತರ ಲೈಂಗಿಕ ಕ್ರಿಯೆಯು ಅಹಿತಕರವಾಗಬಹುದು. ಯೋನಿ ಶುಷ್ಕತೆ ಹೆಚ್ಚು ನೋವನ್ನು ಉಂಟು ಮಾಡುತ್ತೆ. ಆದುದರಿಂದ ಅನಗತ್ಯ ಕಿರಿಕಿರಿ ಮತ್ತು ನೋವನ್ನು ತಡೆಗಟ್ಟಲು ಕಡಿಮೆ ಪ್ರಮಾಣದ ಯೋನಿ ಈಸ್ಟ್ರೋಜೆನ್, ವಾಟರ್ ಬೇಸ್ಡ್ ಲ್ಯೂಬ್ರಿಕೆಂಟ್, ಅಥವಾ ಯೋನಿ ಮಾಯಿಶ್ಚರೈಸರ್ ಗಳನ್ನು ಬಳಕೆ ಮಾಡಬಹುದು.