ಗಂಡ-ಹೆಂಡತಿ ಬೇರೆ ರೂಮಲ್ಲಿ ಮಲಗಿದರೂ ಬಾಂಧವ್ಯ ಚೆನ್ನಾಗಿದೆ ಎಂದರ್ಥ!

ಗಂಡ ಒಂದು ರೂಮಿನಲ್ಲಿ, ಹೆಂಡತಿ ಒಂದು ರೂಮಿನಲ್ಲಿ ಮಲಗಿದ್ರೆ ಮುಗೀದೆ ಹೋಯ್ತು. ಇಬ್ಬರ ಮಧ್ಯೆ ಯಾವ್ದು ಸರಿ ಇಲ್ಲ ಅಂತಾ ಗಾಳಿ ಸುದ್ದಿ ಹರಿದಾಡೋಕೆ ಶುರುವಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿ ಪ್ರತ್ಯೇಕವಾಗಿ ಮಲಗುವುದ್ರ ಲಾಭ ಅರಿತಿದ್ದಾರೆ. ನಾಲ್ಕರಲ್ಲಿ ಒಂದು ಜೋಡಿ ಪ್ರತ್ಯೇಕವಾಗಿ ಮಲಗೋದಕ್ಕೆ ಆದ್ಯತೆ ನೀಡ್ತಿದೆ. 
 

Why Do Husband And Wife Should Sleep In Different Rooms

ಮದುವೆಯಾದ್ಮೇಲೆ ದಂಪತಿ ಒಂದಿಷ್ಟು ಅಲಿಖಿತ ನಿಯಮಗಳನ್ನು ಪಾಲನೆ ಮಾಡ್ಬೇಕು. ಇಬ್ಬರು ಒಟ್ಟಿಗೆ ವಾಸ ಮಾಡ್ಬೇಕು. ಇಬ್ಬರು ಒಟ್ಟಿಗೆ ಮಲಗಬೇಕು. ತಮ್ಮ ದಾಂಪತ್ಯಕ್ಕೆ ಸಂಬಂಧಿಸಿದಂತೆ ದಂಪತಿ ತಮ್ಮದೆ ನಿಯಮ ರೂಪಿಸಿಕೊಳ್ಳುವಂತಿಲ್ಲ. ಸಮಾಜ ಹಾಕಿರುವ ನಿಯಮಗಳನ್ನು ಪಾಲನೆ ಮಾಡ್ಬೇಕು. ಅದನ್ನು ತಪ್ಪಿದ್ರೆ ಸಮಾಜದಲ್ಲಿ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ದಂಪತಿ ಯಾವಾಗ್ಲೂ ಒಟ್ಟಿಗೆ ಮಲಗಬೇಕು. ಬೇರೆ ಬೇರೆ ರೂಮಿನಲ್ಲಿ ದಂಪತಿ ಮಲಗ್ತಿದ್ದಾರೆ ಎಂಬ ಸಂಗತಿ ತಿಳಿದ್ರೆ ಕುಟುಂಬಸ್ಥರು, ಸಂಬಂಧಿಕರು ಇದನ್ನು ದೊಡ್ಡ ಸಮಸ್ಯೆ ಮಾಡ್ತಾರೆ. ಈ ಬಗ್ಗೆ ಬಗೆ ಬಗೆಯ ಚರ್ಚೆಗಳು ನಡೆಯುತ್ತವೆ. ಇದೇ ಕಾರಣಕ್ಕೆ ಎಷ್ಟೇ ಕಷ್ಟವಾದ್ರೂ ದಂಪತಿ ಒಟ್ಟಿಗೆ ಮಲಗ್ತಾರೆ.

ಮೊದಲನೇಯದಾಗಿ ದಂಪತಿ (Couple) ಬೇರೆ ಬೇರೆ ಮಲಗುವುದು ತಪ್ಪಲ್ಲ. 2017 ರ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಸಮೀಕ್ಷೆ (Survey) ಯು 4 ರಲ್ಲಿ 1 ದಂಪತಿ ವಿವಿಧ ಹಾಸಿಗೆಗಳಲ್ಲಿ ಮಲಗುತ್ತಾರೆ ಎಂದು ವರದಿ ನೀಡಿದೆ. 2012 ರಲ್ಲಿ ಬೆಟರ್ ಸ್ಲೀಪ್ ಕೌನ್ಸಿಲ್ ಕೂಡ ಸಮೀಕ್ಷೆ ಮಾಡಿದೆ. ಈ ಸಂಶೋಧನೆ (Research) ಯಲ್ಲಿ ಎಷ್ಟು ದಂಪತಿ ಪ್ರತ್ಯೇಕವಾಗಿ ಮಲಗುತ್ತಾರೆ ಎಂಬುದರ ಕುರಿತು ಡೇಟಾ ಕಲೆ ಹಾಕಲಾಗಿದೆ. ಹಾಗೆಯೇ ಪತಿ-ಪತ್ನಿ  ಪ್ರತ್ಯೇಕವಾಗಿ ಮಲಗುವುದರಿಂದ ಯಾವೆಲ್ಲ ಪ್ರಯೋಜನವಿದೆ ಎಂಬುದನ್ನು ಕೂಡ ಹೇಳಲಾಗಿದೆ. ನೀವು ಪ್ರತ್ಯೇಕವಾಗಿ ಮಲಗ್ತಿದ್ದರೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಅದ್ರಿಂದಲೂ ಅನೇಕ ಪ್ರಯೋಜನಗಳಿವೆ.

ಮದ್ವೆಯಾಗೋ ಹುಡುಗನಲ್ಲಿ ಇಂಥಾ ಗುಣವಿರ್ಲಿ ಅಂತ ಹುಡುಗೀರು ಬಯಸ್ತಾರಂತೆ

ನಿದ್ರೆ (Sleep) ಯ ಸಮಸ್ಯೆ ಕಾಡೋದಿಲ್ಲ : ಪತಿ – ಪತ್ನಿ ಬೇರೆಯಾಗಿ ಮಲಗುವುದ್ರಿಂದ ಆಗುವ ಮೊದಲ ಮತ್ತು ಪ್ರಮುಖ ಪ್ರಯೋಜನವೆಂದರೆ ನಿದ್ರೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಅನೇಕ ವರ್ಷಗಳಿಂದ ಸಂಗಾತಿಯೊಂದಿಗೆ ಮಲಗಿದ್ದವರಿಗೆ ಇಡೀ ರಾತ್ರಿ ಯಾವುದೇ ತೊಂದರೆಯಿಲ್ಲದೆ ಮಲಗುವುದು ಎಷ್ಟು ಕಷ್ಟ ಎಂಬುದು ಗೊತ್ತಿರುತ್ತದೆ. ಗೊರಕೆ, ಕೈ, ಮೈ ಟಚ್ ಆಗುವುದು ಅಥವಾ ದೇಹದ ಉಷ್ಣತೆಯ ಬದಲಾವಣೆ, ಉಸಿರಾಟದಿಂದ ಬರುವ ವಾಸನೆ ಇವೆಲ್ಲವೂ ನಿದ್ರೆಗೆ ಭಂಗ ತರುತ್ತದೆ. ಆದ್ರೆ ಪ್ರತ್ಯೇಕವಾಗಿ ಮಲಗಿದಾಗ ಇದ್ಯಾವ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ನೀವು ಯಾವುದೇ ಸಮಸ್ಯೆಯಲ್ಲದೆ ಆರಾಮವಾಗಿ ನಿದ್ರೆ ಮಾಡಬಹುದು.  

ಸಂಬಂಧ (Relationship) ಬಲಗೊಳ್ಳಲು ಸಹಕಾರಿ : ಪ್ರತಿ ದಿನ ನೀರಸ ಜೀವನ ನಡೆಸ್ತಿದ್ದರೆ ಕೆಲವೊಮ್ಮೆ ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ. ಸ್ವಲ್ಪ ಸಮಯದ ಅಂತರ ಸಂಬಂಧವನ್ನು ಉತ್ತಮಗೊಳಿಸುತ್ತದೆ. ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ಇಬ್ಬರ ಮಧ್ಯೆ ಇರುವ ಕೋಪ ಶಾಂತವಾಗುತ್ತದೆ. ದೈಹಿಕ ಅನ್ಯೋನ್ಯತೆಯೊಂದಿಗೆ ಭಾವನಾತ್ಮಕ ಅನ್ಯೋನ್ಯತೆಯ ಅವಶ್ಯಕತೆ. ಹಾಗಾಗಿ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದ್ರಿಂದ ಈ ಭಾವನಾತ್ಮಕ ಅನ್ಯೋನ್ಯತೆಯನ್ನು ನೀವು ಪಡೆಯಬಹುದು.

ಉತ್ತಮ ಲೈಂಗಿಕ ಜೀವನಕ್ಕೆ (Sexual Relationship) ಸಹಕಾರಿ : ಸ್ವಲ್ಪ ದಿನ ದೂರವಿದ್ದು ನಂತ್ರ ಒಂದಾದ್ರೆ ಅದು ಲೈಂಗಿಕ ಸುಖವನ್ನು ಹೆಚ್ಚಿಸುತ್ತದೆ ಎಂಬುದು ಸಾಭೀತಾಗಿದೆ. ಲೈಂಗಿಕ ಜೀವನಕ್ಕೆ ಬ್ರೇಕ್ ನೀಡಲು ಪ್ರತ್ಯೇಕವಾಗಿ ಮಲಗುವುದು ಮುಖ್ಯವಾಗುತ್ತದೆ.  

ಸಂಗಾತಿಯನ್ನು ಕಂಡ್ರೆ ಲೈಂಗಿಕ ಬಯಕೆ ಮೂಡ್ತಿಲ್ವಾ ? ಸ್ಪಾರ್ಕ್‌ ಮರಳಿ ತರಲು ಹೀಗೆ ಮಾಡಿ

ಆರಾಮವಾಗಿ ಮಲಗಬಹುದು : ಹಾಸಿಗೆಯಲ್ಲಿ ಹೆಚ್ಚು ಜಾಗ ಇರುವುದ್ರಿಂದ ನೀವು ಹೇಗೆ ಬೇಕಾದ್ರೂ ಮಲಗಬಹುದು. ಸಂಗಾತಿಗೆ ನಿಮ್ಮ ಮೈ ಟಚ್ ಆಗುತ್ತೆ, ನಿದ್ರೆ ಭಂಗವಾಗುತ್ತೆ ಎನ್ನುವ ಟೆನ್ಷನ್ ಇರೋದಿಲ್ಲ.ಮಹಿಳೆಯರು ಕೆಲವೊಮ್ಮೆ ಕೆಲ ಸಮಸ್ಯೆ ಎದುರಿಸುತ್ತಾರೆ. ಆಗ ಏಕಾಂಗಿಯಾಗಿ ಮಲಗಲು ಅವರು ಬಯಸ್ತಾರೆ. ಏಕಾಂತದಲ್ಲಿ ಸ್ವಲ್ಪ ಸಮಯ ಕಳೆಯುವುದ್ರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ಕಡಿಮೆ ಬಟ್ಟೆ ಧರಿಸಿ ಅಥವಾ ಬೆತ್ತಲಾಗಿ ಮಲಗುವ ಬಯಕೆಯಿರುತ್ತದೆ. ಆದ್ರೆ ಸಂಗಾತಿಯ ಕಾರಣಕ್ಕೆ ಅವರಿಷ್ಟದಂತೆ ನಡೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಪ್ರತ್ಯೇಕವಾಗಿ ಮಲಗಿದಾಗ ಈ ಬಯಕೆಯನ್ನು ತೀರಿಸಿಕೊಳ್ಳಬಹುದು. ಮನಸ್ಸಿಗೆ ಬಂದಂತೆ ನಿದ್ರೆ ಮಾಡಬಹುದು.  

Latest Videos
Follow Us:
Download App:
  • android
  • ios