MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಲವಂಗ ಬೆರೆಸಿದ ಹಾಲು ಕುಡಿಯೋದ್ರಿಂದ ಪುರುಷರ ಗುಪ್ತ ರೋಗಗಳು ದೂರ

ಲವಂಗ ಬೆರೆಸಿದ ಹಾಲು ಕುಡಿಯೋದ್ರಿಂದ ಪುರುಷರ ಗುಪ್ತ ರೋಗಗಳು ದೂರ

ಗುಪ್ತ ರೋಗಗಳಿಗೆ ಚಿಕಿತ್ಸೆ ಪಡೆಯಲು ಹೆಚ್ಚಿನ ಪುರುಷರು ನಾಚಿಕೆಪಡುತ್ತಾರೆ. ಇದರಿಂದಾಗಿ ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ ಆಯುರ್ವೇದದಲ್ಲಿ, ಲವಂಗದ ಹಾಲನ್ನು ಗುಪ್ತ ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದು ಅಕಾಲಿಕ ಸ್ಖಲನ, ಕಡಿಮೆ ಸೆಕ್ಸ್ ಡ್ರೈವ್, ಕಡಿಮೆ ವೀರ್ಯಾಣುಗಳ ಸಂಖ್ಯೆ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತೆ.

2 Min read
Suvarna News
Published : Nov 08 2022, 03:46 PM IST
Share this Photo Gallery
  • FB
  • TW
  • Linkdin
  • Whatsapp
17

ಜೀವನಶೈಲಿಯಲ್ಲಿ ಸ್ವಲ್ಪ ತೊಂದರೆ ಇದ್ದರೆ, ಮೊದಲನೆಯದಾಗಿ, ಲೈಂಗಿಕ ಆರೋಗ್ಯವು(Sex life) ಹದಗೆಡುವ ಅಪಾಯವಿದೆ. ಏಕೆಂದರೆ, ಇದು ನಮ್ಮ ಆರೋಗ್ಯದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಪುರುಷರು ಒಂದಲ್ಲ ಒಂದು ಕಾರಣದಿಂದಾಗಿ ಅನೇಕ ಗುಪ್ತ ರೋಗಗಳನ್ನು ಎದುರಿಸಬೇಕಾಗಬಹುದು. ದೊಡ್ಡ ಸಮಸ್ಯೆಯೆಂದರೆ ಅವರು ಈ ಸಮಸ್ಯೆಗಳ ಬಗ್ಗೆ ಯಾರೊಂದಿಗೂ ಮಾತನಾಡಲು ಸಹ ಇಷ್ಟಪಡೋದಿಲ್ಲ. ಈ ಕಾರಣದಿಂದಾಗಿ ಈ ಗುಪ್ತ ರೋಗಗಳು ಗಂಭೀರವಾಗುತ್ತವೆ.

27

ಆಯುರ್ವೇದ ತಜ್ಞರು ಪುರುಷರು ಲವಂಗದ(Clove) ಹಾಲನ್ನು ಕುಡಿಯಬೇಕು ಎಂದು ಹೇಳುತ್ತಾರೆ. ಇದು ಅವರ ಪುರುಷ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಆಯುರ್ವೇದದ ಪ್ರಕಾರ, ಪುರುಷರು ಲವಂಗದ ಹಾಲನ್ನು ನಿಯಮಿತವಾಗಿ ಸೇವಿಸಿದರೆ, ಅವರ ಗುಪ್ತ ರೋಗಗಳಿಗೆ ಚಿಕಿತ್ಸೆ ನೀಡಬಹುದು. ಉದಾಹರಣೆಗೆ ಅಕಾಲಿಕ ಸ್ಖಲನ, ಕಡಿಮೆ ವೀರ್ಯಾಣುಗಳ ಸಂಖ್ಯೆ, ಕಡಿಮೆ ಸೆಕ್ಸ್ ಡ್ರೈವ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್ ಕಡಿಮೆಯಾಗೋದನ್ನು ತಡೆಯಬಹುದು.

37

ಲವಂಗದ ಹಾಲನ್ನು ಕುಡಿಯೋದರಿಂದ ಪುರುಷರಿಗೇನು(Men) ಪ್ರಯೋಜನ?
ಅಕಾಲಿಕ ಸ್ಖಲನ ತಡೆಗಟ್ಟಲು ಆಯುರ್ವೇದ ಚಿಕಿತ್ಸೆ
ವೈದ್ಯರ ಪ್ರಕಾರ, ಲವಂಗವು ಒಳಗೆ ಕಾಮೋತ್ತೇಜಕ ಗುಣಲಕ್ಷಣ ಹೊಂದಿದೆ. ಇದು ದೇಹದ ಕಾರ್ಯಕ್ಷಮತೆಯನ್ನು ಸುಧಾರಿಸುವ ಮೂಲಕ ಅಚ್ಚರಿ ಎನಿಸುವ ಪ್ರಯೋಜನ ನೀಡುತ್ತೆ. 2020 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಲವಂಗದ ಸೇವನೆಯು ಅಕಾಲಿಕ ಸ್ಖಲನವನ್ನು ತಡೆಯುತ್ತೆ.

47
Image: Getty Images

Image: Getty Images

ವೀರ್ಯಾಣುಗಳ(Sperm) ಸಂಖ್ಯೆಯನ್ನು ಹೆಚ್ಚಿಸುತ್ತೆ
ವೀರ್ಯಾಣುಗಳ ಸಂಖ್ಯೆಯಲ್ಲಿನ ಇಳಿಕೆಯಿಂದಾಗಿ, ಪುರುಷರಲ್ಲಿ ಫಲವತ್ತತೆಯ ಸಮಸ್ಯೆ ಹೆಚ್ಚುತ್ತಿದೆ. ಆದರೆ ಆಯುರ್ವೇದ ತಜ್ಞರ ಪ್ರಕಾರ, ಲವಂಗವು ಫ್ಲೇವನಾಯ್ಡ್ಗಳು, ವಿಟಮಿನ್ಸ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತೆ. ಇದರ ಸೇವನೆಯು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತೆ. ಆದರೆ, ಅದರ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ಹೊಂದಿರುವುದು ಮುಖ್ಯ.

57

ಸೆಕ್ಸ್ ಡ್ರೈವ್(Sex drive) ಹೆಚ್ಚುತ್ತೆ
ವಿವಾಹಿತ ಪುರುಷರಲ್ಲಿ ಕಡಿಮೆ ಸೆಕ್ಸ್ ಡ್ರೈವ್ ನ ಸಮಸ್ಯೆ ಸಂಬಂಧಗಳಲ್ಲಿ ಕಹಿಯನ್ನು ತರಬಹುದು. ಆದರೆ ಲವಂಗವು ಅಫ್ರೋಡಿಸಿಯಾಕ್ ಗುಣಲಕ್ಷಣಗಳನ್ನು ಹೊಂದಿದೆ, ಇದರಿಂದಾಗಿ ಲವಂಗದ ಹಾಲು ಕುಡಿಯೋದರಿಂದ ಪುರುಷರ ರಕ್ತದ ಹರಿವನ್ನು ಸುಧಾರಿಸುತ್ತೆ. ಸಾಕಷ್ಟು ಪೌಷ್ಠಿಕಾಂಶ ಮತ್ತು ರಕ್ತವು ಖಾಸಗಿ ಭಾಗವನ್ನು ತಲುಪಿದಾಗ, ಸೆಕ್ಸ್ ಡ್ರೈವ್ ಹೆಚ್ಚಾಗಲು ಪ್ರಾರಂಭಿಸುತ್ತೆ.

67

ಟೆಸ್ಟೋಸ್ಟೆರಾನ್(Testosterone) ಹೆಚ್ಚಿಸೋದು ಹೇಗೆ?
ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಎಂಬ ಲೈಂಗಿಕ ಹಾರ್ಮೋನ್ ಇದೆ. ಅದರ ಮೇಲೆ ಅವರ ಲೈಂಗಿಕ ಆರೋಗ್ಯ ಅವಲಂಬಿತವಾಗಿರುತ್ತೆ. ದೇಹದಲ್ಲಿ ಟೆಸ್ಟೋಸ್ಟೆರಾನ್ ಕಡಿಮೆ ಇದ್ದರೆ, ನಿಮಿರುವಿಕೆಯ ಡಿಸ್ ಫ್ಯಾಂಕ್ಷನಿಂಗ್, ಕಡಿಮೆ ವೀರ್ಯಾಣುಗಳ ಸಂಖ್ಯೆ, ಬೊಕ್ಕತಲೆ, ದೌರ್ಬಲ್ಯದಂತಹ ಸಮಸ್ಯೆ ಎದುರಿಸಬೇಕಾಗುತ್ತೆ. ಆದರೆ ಆಯುರ್ವೇದದಲ್ಲಿ, ಲವಂಗದ ಹಾಲನ್ನು ಟೆಸ್ಟೋಸ್ಟೆರಾನ್ ಹೆಚ್ಚಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.

77

ಲವಂಗದ ಹಾಲನ್ನು ಹೇಗೆ ಮತ್ತು ಯಾವಾಗ ಕುಡಿಯಬೇಕು?
ಆಯುರ್ವೇದ ತಜ್ಞರ ಪ್ರಕಾರ,  ಒಂದು ಲೋಟ ಹಾಲನ್ನು ಬೆಚ್ಚಗೆ ಮಾಡಿ. ನಂತರ ಹಾಲಿಗೆ 2 ಲವಂಗ ಅಥವಾ ಅರ್ಧ ಟೀಸ್ಪೂನ್ ಲವಂಗ ಪುಡಿಯನ್ನು ಸೇರಿಸಿ. ಗುಪ್ತ  ರೋಗಗಳಿಗೆ ಚಿಕಿತ್ಸೆ ನೀಡಲು ಪುರುಷರು ರಾತ್ರಿ ಮಲಗುವ ಮೊದಲು ಲವಂಗದ ಹಾಲನ್ನು ಕುಡಿಯಬೇಕು. ಆಗ ನಿಮ್ಮ ಸೆಕ್ಸ್ ಲೈಫ್(Sex life) ಅದ್ಭುತವಾಗಿರುತ್ತೆ.  

About the Author

SN
Suvarna News
ಸಂಬಂಧಗಳು
ಹಾಲು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved