- Home
- Entertainment
- News
- ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್
ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್
ಖ್ಯಾತ ಸಿನಿಮಾ ತಾರೆಯರು ತಮ್ಮ ಸುರಕ್ಷತೆಗಾಗಿ ಅಂಗರಕ್ಷಕರನ್ನು ನೇಮಿಸಿಕೊಳ್ಳುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ನಟರು ತಮ್ಮ ಬಾಡಿಗಾರ್ಡ್‌ಗಳಿಗೆ ಕೋಟಿಗಟ್ಟಲೆ ಸಂಬಳ ನೀಡುತ್ತಾರೆ, ಇದು ಕೆಲವೊಮ್ಮೆ ಸಿಇಒಗಳ ವೇತನವನ್ನೂ ಮೀರಿಸುತ್ತದೆ.

ಸಿನಿಮಾ ನಟರಿಗೂ ಬಾಡಿಗಾರ್ಡ್
ರಾಜಕಾರಣಿಗಳಂತೆ ಖ್ಯಾತ ಸಿನಿಮಾ ತಾರೆಯರಿಗೂ ಬಾಡಿಗಾರ್ಡ್ ಅವಶ್ಯಕತೆ ಇದೆ. ಸಿನಿಮಾ ನಟರನ್ನೇ ದೇವರೆಂದು ಕಾಣುವ ಅಭಿಮಾನಿಗಳಿಗೆ ಕೊರತೆ ಇಲ್ಲ. ಇದೇ ಕಾರಣಕ್ಕೆ, ನಟ-ನಟಿಯರು ಹೋದಲ್ಲೆಲ್ಲಾ ಅವರನ್ನು ಮುತ್ತಿಗೆ ಹಾಕಿ ತೊಂದರೆ ಕೊಡುವ ಕಾರಣದಿಂದಾಗಿ ಬಾಡಿಗಾರ್ಡ್ ಅಗತ್ಯ ಇರುತ್ತದೆ. ಇಂಥ ಅಂಗರಕ್ಷಕರಿಗೆ ಭಾರಿ ಪ್ರಮಾಣದ ಸಂಬಳವನ್ನು ನಟ-ನಟಿಯರು ನೀಡುತ್ತಾರೆ. ಹಾಗಿದ್ದರೆ ಯಾರು ಎಷ್ಟು ಸಂಬಳವನ್ನು ತಮ್ಮ ಅಂಗರಕ್ಷಕರಿಗೆ ನೀಡುತ್ತಾರೆ ಎನ್ನುವುದನ್ನು ಇಲ್ಲಿ ನೋಡೋಣ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು (Celebrities) ಅಂಗರಕ್ಷಕರನ್ನು ನೇಮಕ ಮಾಡಿಕೊಂಡಿದ್ದರೂ, ಇಲ್ಲಿ ಕೆಲವು ನಟ-ನಟಿಯರ ಅಂಗರಕ್ಷಕರ ಕುರಿತು ವಿವರಣೆ ನೀಡಲಾಗಿದೆ. ಇವರ ಪೈಕಿ ಹಲವರ ಸಂಬಳ ದೊಡ್ಡ ದೊಡ್ಡ ಕಂಪೆನಿಗಳ ಸಿಇಒಗಳನ್ನೂ ಮೀರಿಸುವಂತಿದೆ.
ಶಾರುಖ್ ಖಾನ್ (Shah Rukh Khan),
ಕಿಂಗ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಅತ್ಯಧಿಕ ಸಂಬಳ ಪಡೆಯುತ್ತಾರೆ. ಅವರ ವಾರ್ಷಿಕ ಸಂಬಳ ಸುಮಾರು 2.5 ಕೋಟಿ ರೂಪಾಯಿಗಳು. ಮಾಸಿಕದ ಲೆಕ್ಕಾಚಾರದಲ್ಲಿ 20 ಲಕ್ಷಕ್ಕೂ ಅಧಿಕ.
ಸಲ್ಮಾನ್ ಖಾನ್
ಶೇರಾ ಎಂದು ಕರೆಯಲ್ಪಡುವ ಗುರ್ಮೀತ್ ಸಿಂಗ್ ಜಾಲಿ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರು ಸ್ವತಃ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ. ಇವರು ಸಲ್ಮಾನ್ ಖಾನ್ (Salman Khan) ಅವರ ಅಂಗರಕ್ಷಕರಾಗಿದ್ದು, ಇವರ ಮಾಸಿಕ ವೇತನವು 15 ಲಕ್ಷ ರೂಪಾಯಿಯಾಗಿದೆ. ವಾರ್ಷಿಕ 2 ಕೋಟಿ ರೂಪಾಯಿ.
ಆಮೀರ್ ಖಾನ್ (Aamir Khan),
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಯಲ್ಪಡುವ ಆಮೀರ್ ಖಾನ್ ಅವರು ತಮ್ಮ ಅಂಗರಕ್ಷಕ ಯುವರಾಜ್ ಘೋರ್ಪಡೆ ಅವರಿಗೆ ನೀಡುವ ಸಂಬಳ ವಾರ್ಷಿಕ 2 ಕೋಟಿ ರೂಪಾಯಿಗಳು. ಮಾಸಿಕದ ಲೆಕ್ಕಾಚಾರದಲ್ಲಿ ಸುಮಾರು 15 ಲಕ್ಷ ರೂಪಾಯಿ.
ಅಮಿತಾಭ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರ ಅಂಗರಕ್ಷಕನ ಹೆಸರು ಜಿತೇಂದ್ರ ಶಿಂಧೆ. ಅವರು ಪಡೆಯುತ್ತಿರುವುದು ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳು.
ದೀಪಿಕಾ ಪಡುಕೋಣೆ (Deepika Padukone),
ದೀಪಿಕಾ ಪಡುಕೋಣೆ ಅವರು ತಮ್ಮ ಅಂಗರಕ್ಷಕ ಜಲಾಲ್ ಅವರಿಗೆ ವಾರ್ಷಿಕವಾಗಿ 80 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ. ಅಂಗರಕ್ಷಕ ಜಲಾಲ್ ಅವರನ್ನು ತಮ್ಮ ರಾಖಿ ಸಹೋದರನನ್ನಾಗಿ ಮಾಡಿಕೊಂಡಿದ್ದಾರೆ.
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್‌ನ ಫಿಟೆಸ್ಟ್ ನಟರಲ್ಲಿ ಒಬ್ಬರಾಗಿದ್ದರೂ, ಅವರನ್ನು ಜನಸಂದಣಿಯಿಂದ ಸುರಕ್ಷಿತವಾಗಿರಿಸುವ ಅಂಗರಕ್ಷಕನ ಅಗತ್ಯವಿದೆ. ಅವರ ಅಂಗರಕ್ಷಕ ಶ್ರೇಯ್ಸೆ ಥೆಲೆ ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

