MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮದುವೆಯಾದರೂ ಸಿಕ್ಕಿಲ್ಲ ದಾಂಪತ್ಯ ಸುಖ: ಪತಿಯಿಂದ ದೂರ- ಆ ದಿನಗಳ ನೆನೆದು ಮಾಧುರಿ ದೀಕ್ಷಿತ್​ ಕಣ್ಣೀರು

ಮದುವೆಯಾದರೂ ಸಿಕ್ಕಿಲ್ಲ ದಾಂಪತ್ಯ ಸುಖ: ಪತಿಯಿಂದ ದೂರ- ಆ ದಿನಗಳ ನೆನೆದು ಮಾಧುರಿ ದೀಕ್ಷಿತ್​ ಕಣ್ಣೀರು

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ವೈದ್ಯ ಪತಿ ಶ್ರೀರಾಮ್ ನೆನೆ ಅವರೊಂದಿಗಿನ ತಮ್ಮ ದಾಂಪತ್ಯ ಜೀವನದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಪತಿಯ ವೃತ್ತಿಯಿಂದಾಗಿ ತಾವು ಅನುಭವಿಸಿದ ಒಂಟಿತನ, ಮಕ್ಕಳನ್ನು ಒಬ್ಬರೇ ಬೆಳೆಸಿದ ಕಷ್ಟ ಹಾಗೂ ಹಬ್ಬದ ದಿನಗಳಲ್ಲಿಯೂ ಅವರು ಜೊತೆಗಿರದ ನೋವಿನ ಬಗ್ಗೆ  ಮಾತನಾಡಿದ್ದಾರೆ.

2 Min read
Author : Suchethana D
Published : May 31 2026, 01:53 PM IST
Share this Photo Gallery
  • FB
  • TW
  • Linkdin
  • Whatsapp
17
60ನೇ ವಯಸ್ಸಿಗೆ ಕಾಲಿಟ್ಟ ಬೆಡಗಿ
Image Credit : Social Media

60ನೇ ವಯಸ್ಸಿಗೆ ಕಾಲಿಟ್ಟ ಬೆಡಗಿ

ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಮಾಧುರಿ ದೀಕ್ಷಿತ್​ ಈಚೆಗಷ್ಟೇ ಅರ್ಥಾತ್​ ಮೇ 15ರಂದು 59 ವರ್ಷ ಪೂರೈಸಿದ್ದಾರೆ. ಆದರೆ ಇದುವರೆಗೂ ಅವರು ಅದೇ ಚಾರ್ಮ್​ ಉಳಿಸಿಕೊಂಡವರು. ಜೊತೆಗೆ, ಒಬ್ಬರ ಜೊತೆನೇ ದೀರ್ಘಕಾಲ ಸಂಸಾರ ನಡೆಸಿರುವ ಕೆಲವೇ ಕೆಲವು ನಟಿಯರ ಪೈಕಿ ಇವರೂ ಒಬ್ಬರು. 80-90ರ ದಶಕದಲ್ಲಿ ಬಾಲಿವುಡ್​ನ ನಂ.1 ನಟಿ ಎನಿಸಿಕೊಂಡಿದ್ದ ಮಾಧುರಿ, ಈ 57ರ ಹರೆಯದಲ್ಲಿಯೂ ಅದೇ ಚೆಲುವನ್ನು, ಚಾರ್ಮ್​ ಅನ್ನು ಜೊತೆಗೆ ಬೇಡಿಕೆಯನ್ನೂ ಉಳಿಸಿಕೊಂಡವರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
1999ರಲ್ಲಿ ಮದುವೆ
Image Credit : instagram

1999ರಲ್ಲಿ ಮದುವೆ

ಬಾಲಿವುಡ್​ನಲ್ಲಿ ಭಾರಿ ಡಿಮಾಂಡ್​ನಲ್ಲಿ ಇರುವಾಗಲೇ ಇವರು ಡಾಕ್ಟರ್​ ಆಗಿರುವ ಶ್ರೀರಾಮ್ ನೆನೆ ಅವರನ್ನು ಮಾಧುರಿ ದೀಕ್ಷಿತ್ ಮದುವೆಯಾದರು. 1999ರಲ್ಲಿ ಇವರ ಮದುವೆ ನಡೆಯಿತು. ಅಲ್ಲಿಂದ ಮಾಧುರಿ ದೀಕ್ಷಿತ್​ ಜೊತೆ ನೇನೆ ಕೂಡ ಸೇರಿಕೊಂಡಿತು. ಮದುವೆಗೂ ಮುನ್ನ ಮಾಧುರಿ ಅವರ ಹೆಸರು ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಿಥುನ್ ಚಕ್ರವರ್ತಿಯಂತಹ ನಟರೊಂದಿಗೆ ಸೇರಿಕೊಂಡಿತ್ತು.

Related Articles

Related image1
ಸೀತಾರಾಮ ನಟಿ ವೈಷ್ಣವಿ ಗೌಡ ಕೆನ್ನೆಗೆ ಎಲ್ಲರೆದುರೇ ಹೊಡೆದ ಪತಿ: ವಿಡಿಯೋ ವೈರಲ್​- ಆಗಿದ್ದೇನು
Related image2
ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು
37
ವೈದ್ಯರ ಜೊತೆ ವಿವಾಹ
Image Credit : instagram

ವೈದ್ಯರ ಜೊತೆ ವಿವಾಹ

ಆದರೆ ಮಾಧುರಿ ಭಾರತೀಯ ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಎಲ್ಲಾ ಗುಸುಗುಸು ಪಿಸುಪಿಸು ನಡುವೆಯೇ ಮಾಧುರಿ ಅವರ ಮದುವೆ ವೈದ್ಯರ ಜೊತೆ ನಡೆಯಿತು. ಮದುವೆಯ ನಂತರ ಮಾಧುರಿ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟು ವಿದೇಶದಲ್ಲಿ ನೆಲೆಸಿದರು.

47
ಮದುವೆ ಬಳಿಕದ ನೋವು
Image Credit : our own

ಮದುವೆ ಬಳಿಕದ ನೋವು

ಇದೀಗ ಮಾಧುರಿ ದೀಕ್ಷಿತ್ ಮದುವೆಯಾದ ಬಳಿಕ ತಮ್ಮ ದಾಂಪತ್ಯ ಜೀವನದ ಕೆಲವೊಂದು ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಪತಿ ಶ್ರೀರಾಮ್ ನೆನೆ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿ ಇದ್ದರೆ ಇಲ್ಲವೇ ಇಬ್ಬರಲ್ಲಿ ಒಬ್ಬರು ತುಂಬಾ ಹೊಣೆಗಾರಿಕೆ ಕೆಲಸದಲ್ಲಿ ಇದ್ದಾಗ ಸಾಮಾನ್ಯವಾಗಿ ಆಗುವ ತೊಂದರೆಗಳನ್ನು ತಾವು ಅನುಭವಿಸಿರುವ ಕುರಿತು ಅವರು ಮಾತನಾಡಿದ್ದಾರೆ.

57
ಒಂಟಿಯಾಗಿ ಕಳೆದೆ
Image Credit : instagram

ಒಂಟಿಯಾಗಿ ಕಳೆದೆ

ಇವರ ಪತಿ ದೊಡ್ಡ ವೈದ್ಯರಾಗಿದ್ದ ಕಾರಣ, ತಮಗೆ ಮದುವೆಯಾದ ಮೇಲೆ ಒಟ್ಟಿಗೆ ಇರಲು ಸಮಯವೇ ಸಿಗುತ್ತಿರಲಿಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಅವರು ಇಲ್ಲದೇ ನಾನು ಎಷ್ಟೋ ಸಮಯವನ್ನು ಒಂಟಿಯಾಗಿಯೇ ಕಳೆಯಬೇಕಿತ್ತು ಎಂದಿದ್ದಾರೆ.

67
ಇಬ್ಬರು ಮಕ್ಕಳ ಅಮ್ಮ
Image Credit : Instagram

ಇಬ್ಬರು ಮಕ್ಕಳ ಅಮ್ಮ

ಇವರಿಗೆ ಇಬ್ಬರು ಮಕ್ಕಳು ಅರಿಯನ್​ ಮತ್ತು ರಿಯಾನ್​. ಮಕ್ಕಳು ಹುಟ್ಟಿದ ಮೇಲೂ ಪತಿಯ ಜೊತೆ ಟೈಂ ಸ್ಪೆಂಡ್​ ಮಾಡುವುದು ಕಷ್ಟವೇ ಆಯಿತು. ಅವರಿಗೆ ನಮಗೆ ಹೆಚ್ಚು ವೇಳೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಎಲ್ಲಾ ಪ್ಲಾನ್ ಬದಲಾಗಿತ್ತು. ನಾನು ಇಡೀ ದಿನ ಫೋನ್​ನಲ್ಲಿ ಬ್ಯುಸಿಯಾಗಿ ಇರಬೇಕಿತ್ತು. ಆ ದಿನಗಳು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯೂ ನನ್ನ ಮೇಲೆಯೇ ಇತ್ತು. ಅಷ್ಟೇ ಅಲ್ಲ... ನಮ್ಮ ಮನೆಯಲ್ಲಿ ಏನಾದರೂ ವಿಶೇಷವಿದ್ದರೂ, ಹಬ್ಬದ ಸಮಯದಲ್ಲಿಯೂ ಅವರು ಜೊತೆಯಲ್ಲಿ ಇರುತ್ತಿರಲಿಲ್ಲ ಎಂದಿರುವ ಮಾಧುರಿ, ಒಂದು ಹಂತದಲ್ಲಿ ಕಣ್ಣೀರಿಟ್ಟಿದ್ದಾರೆ.

77
ಪತಿಯ ಬಗ್ಗೆ ಶ್ಲಾಘನೆ
Image Credit : instagram

ಪತಿಯ ಬಗ್ಗೆ ಶ್ಲಾಘನೆ

'ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನೀವು ಬೇರೆಯವರನ್ನು ನೋಡಿಕೊಂಡಿದ್ದೀರಿ. ಇದೆಲ್ಲಾ ನನಗೆ ಕೆಲವೊಮ್ಮೆ ತುಂಬಾ ಕಷ್ಟಕರ ಅನಿಸಿದೆ. ಇದರ ಹೊರತಾಗಿಯೂ ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ನೀವು ಯಾವಾಗಲೂ ರೋಗಿಗಳ ಪರವಾಗಿ ನಿಂತಿದ್ದೀರಿ, ಅವರ ಜೀವಕ್ಕಾಗಿ ಶ್ರಮಿಸಿದ ರೀತಿ ನನ್ನ ಹೃದಯವನ್ನು ಗೆದ್ದಿವೆ' ಎಂದು ಪತಿಯನ್ನು ಉದ್ದೇಶಿಸಿ ನಟಿ ಹೇಳಿದ್ದಾರೆ. ಪತಿ ನೆನೆ ಕೂಡ ಮಾತನಾಡಿದ್ದು, 'ನಾವಿಬ್ಬರೂ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದೇವೆ. ಮಕ್ಕಳಿಗಾಗಿ ಸದಾ ಜೊತೆಯಾಗಿ ನಿಂತಿದ್ದೇವೆ. ಜೀವನದಲ್ಲಿ ಏನೇ ಮಾಡಿದರೂ ಕುಟುಂಬದ ಒಳಿತಿಗಾಗಿ ಮಾಡುತ್ತೇವೆ’ ಎಂದು ಹೇಳಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮಾಧುರಿ ದೀಕ್ಷಿತ್
ಮನರಂಜನಾ ಸುದ್ದಿ
ಪ್ರೀತಿ
ಮದುವೆ
ಸಂಬಂಧಗಳು

Latest Videos
Recommended Stories
Recommended image1
Rare Love Story: 15 ವರ್ಷಗಳ ಮೌನ ಪ್ರೀತಿ, But ಮದುವೆಯಾಗದ ನಟಿಯ ನಿಗೂಢ ಕಥೆ: ಈ 'ದೋಸ್ತಿ ಖತಂ' ಆಗಿದ್ಯಾಕೆ?
Recommended image2
ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು
Recommended image3
June Numerology 2026: ಈ 3 ಸಂಖ್ಯೆಗಳನ್ನು ಹೊಂದಿರುವ ಜನರ ಅದೃಷ್ಟ ಜೂನ್‌ನಲ್ಲಿ ಬೆಳಗುತ್ತದೆ
Related Stories
Recommended image1
ಸೀತಾರಾಮ ನಟಿ ವೈಷ್ಣವಿ ಗೌಡ ಕೆನ್ನೆಗೆ ಎಲ್ಲರೆದುರೇ ಹೊಡೆದ ಪತಿ: ವಿಡಿಯೋ ವೈರಲ್​- ಆಗಿದ್ದೇನು
Recommended image2
ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved