- Home
- Life
- Relationship
- ತುಳು ಸಂಪ್ರದಾಯಕ್ಕೆ ಮನಸೋತ ನಟಿ ಕರಿಷ್ಮಾ: ಮಂಗಳೂರು ಸ್ಟೈಲ್ನಲ್ಲಿ ಸೀಮಂತ- ವಿಡಿಯೋ ವೈರಲ್
ತುಳು ಸಂಪ್ರದಾಯಕ್ಕೆ ಮನಸೋತ ನಟಿ ಕರಿಷ್ಮಾ: ಮಂಗಳೂರು ಸ್ಟೈಲ್ನಲ್ಲಿ ಸೀಮಂತ- ವಿಡಿಯೋ ವೈರಲ್
ಬಾಲಿವುಡ್ ನಟಿ ಕರಿಷ್ಮಾ ತನ್ನಾ, ತಮ್ಮ ಮಂಗಳೂರಿನ ಪತಿ ವರುಣ್ ಬಂಗೇರಾ ಅವರ ತುಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದಾರೆ. ಗುಜರಾತಿ ಮೂಲದ ನಟಿ, ಗುಲಾಬಿ ಸೀರೆಯಲ್ಲಿ ಮಿಂಚಿದ್ದು, ಈ ಕಾರ್ಯಕ್ರಮದಲ್ಲಿ ತುಳುನಾಡಿನ ಪದ್ಧತಿಗಳು, ಭಜನೆ ಮತ್ತು ಕೀರ್ತನೆಗಳು ಪ್ರಮುಖವಾಗಿದ್ದವು.

ಕರಿಷ್ಮಾ ತನ್ನಾ ಸೀಮಂತ
ಬಾಲಿವುಡ್ ನಟಿ ಕರಿಷ್ಮಾ ತನ್ನಾ ತಮ್ಮ ನಟನೆ ಮತ್ತು ಶೈಲಿಯಿಂದ ಉದ್ಯಮದಲ್ಲಿ ಬಲವಾದ ಹೆಸರು ಮಾಡಿದ್ದಾರೆ. ಅವರು ಹಲವಾರು ಹಿಟ್ ಸಿನಿಮಾ ಮಾತ್ರವಲ್ಲದೇ ಟಿವಿ ಕಾರ್ಯಕ್ರಮಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್ ಚಲನಚಿತ್ರಗಳು ಮತ್ತು OTT ಸರಣಿಗಳಲ್ಲಿಯೂ ನಟಿಸಿದ್ದಾರೆ. ಸಂಜು, ಗ್ರ್ಯಾಂಡ್ ಮಸ್ತಿ, ಲಾಹೋರ್ ಕಾನ್ಫಿಡೆನ್ಷಿಯಲ್ ಸೇರಿದಂತೆ ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ ನಟಿ ಕರಿಷ್ಮಾ.
ತುಳು ಸಂಪ್ರದಾಯದಂತೆ ಕಾರ್ಯಕ್ರಮ
ಇದೀಗ ಅವರು ಮಂಗಳೂರಿನ ಪದ್ಧತಿಯಂತೆ ಅರ್ಥಾತ್ ತುಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು, ಅದರ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಪತಿ ವರುಣ್ ಬಂಗೇರಾ ಅವರ ಜೊತೆಗೆ ಮಂಗಳೂರಿನ ಬೇರುಗಳನ್ನು ಅಳವಡಿಸಿಕೊಂಡು ತುಳು ಸಂಪ್ರದಾಯದಂತೆ ಸೀಮಂತ ಆಚರಿಸಿಕೊಂಡರು.
ಗುಜರಾತಿನ ಬೆಡಗಿ
ಕರಿಷ್ಮಾ ತನ್ನಾ ಮೂಲತಃ ಗುಜರಾತಿನವರು. ಪತಿ ವರುಣ್ ಅವರು ಮಂಗಳೂರಿನವರು. ಆದ್ದರಿಂದ ದಕ್ಷಿಣ ಭಾರತದ ಸೊಗಡಿಗೆ ನಟಿ ಮೊರೆ ಹೋಗಿದ್ದು, ಇಲ್ಲಿಯ ಪದ್ಧತಿಯಂತೆ ಸೀಮಂತ ಆಚರಿಸಿಕೊಂಡರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಹೇಳಿಕೊಂಡಿರುವ ನಟಿ, ತಮ್ಮ ನೆಚ್ಚಿನ ಗುಲಾಬಿ ಸೀರೆಯಲ್ಲಿ ಮಿಂಚಿದರು. ಸೀಮಂತ ಕಾರ್ಯಕ್ರಮದಲ್ಲಿ ಭಜನೆ ಮತ್ತು ಕೀರ್ತನೆಗಳು ಹೈಲೈಟ್ ಆಗಿದ್ದವು. ವರುಣ್ ಬಂಗೇರಾ ಅವರ ಜೊತೆಗೆ ನಾಲ್ಕು ವರ್ಷದ ದಾಂಪತ್ಯದ ನಂತರ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರಾ ಮದುವೆ
ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರಾ ಫೆಬ್ರವರಿ 5, 2022 ರಂದು ವಿವಾಹವಾದರು. ಅವರ ಮದುವೆಯಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಇದೀಗ ಸೀಮಂತ ಕಾರ್ಯಕ್ರಮದಲ್ಲಿ ಅಪ್ಪ-ಅಮ್ಮ ಎಂದು ಬರೆದುಕೊಂಡಿರುವ ನಟಿ, ತಮ್ಮ ಹೃದಯಪೂರ್ವಕ ಭಾವನೆಗಳನ್ನು ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ, ಆ ಕ್ಷಣವನ್ನು "ಕನಸು ನನಸಾಯಿತು" ಎಂದು ವಿವರಿಸಿದ್ದಾರೆ.
ಪ್ರತಿಯೊಂದು ಕಾರ್ಯಕ್ರಮ
ಸುಂದರವಾದ ತುಳು ಪದ್ಧತಿಗಳು, ಪವಿತ್ರ ಸಂಪ್ರದಾಯಗಳು, ಮಂತ್ರಗಳು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರೆ, ತುಳು ಸಂಪ್ರದಾಯದ ಪ್ರತಿಯೊಂದು ಚಿಕ್ಕ ಮತ್ತು ದೊಡ್ಡ ಆಚರಣೆಗಳು ಎಲ್ಲವೂ ನಡೆಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

