- Home
- Entertainment
- Movie Reviews
- ರಿವಾಲ್ವರ್ ಸುತ್ತ ಸಾಗುವ ಕ್ರೈಂ-ಸಸ್ಪೆನ್ಸ್-ಥ್ರಿಲ್ಲರ್ ಸೌಥ್ ಸಿನಿಮಾ! ಈ ವೀಕೆಂಡ್‌ಗೆ ನೋಡಿ
ರಿವಾಲ್ವರ್ ಸುತ್ತ ಸಾಗುವ ಕ್ರೈಂ-ಸಸ್ಪೆನ್ಸ್-ಥ್ರಿಲ್ಲರ್ ಸೌಥ್ ಸಿನಿಮಾ! ಈ ವೀಕೆಂಡ್‌ಗೆ ನೋಡಿ
ಈ ವೀಕೆಂಡ್ ನೋಡಲು ಒಂದು ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ ರಿವಾಲ್ವರ್ ಕಳೆದುಹೋಗಿ, ಅದು ಬ್ಯಾಂಕ್ ದರೋಡೆಗೆ ಬಳಕೆಯಾದಾಗ ನಡೆಯುವ ರೋಚಕ ತನಿಖೆಯು ಈ ಸಿನಿಮಾದ ಕಥಾವಸ್ತುವಾಗಿದೆ.

ಕ್ರೈಂ, ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಚಲನಚಿತ್ರ
ಈ ವೀಕೆಂಡ್‌ನಲ್ಲಿ ಸಿನಿಮಾ ನೋಡಲು ಪ್ಲಾನ್ ಮಾಡಿಕೊಂಡಿದ್ರೆ, ಇಂದು OTT ಪ್ಲಾಟ್‌ಫಾರಂನಲ್ಲಿರೋ ಕ್ರೈಂ, ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಚಲನಚಿತ್ರದ ಬಗ್ಗೆ ಹೇಳುತ್ತಿದ್ದೇವೆ. ಪ್ರತಿಕ್ಷಣವೂ ಅಚ್ಚರಿ ಮೂಡಿಸುವ ಈ ಸೌಥ್ ಸಿನಿಮಾ ನಿಮ್ಮ ಸುತ್ತಲೇ ನಡೆಯುತ್ತಿದೆಯಾ ಎಂಬ ಅನುಭವ ನಿಮಗಾಗುತ್ತದೆ. ಈ ಸಿನಿಮಾ ಹೆಸರು ಏನು? ಯಾವ OTT ಪ್ಲಾಟ್‌ಫಾರಂನಲ್ಲಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
8 Thottakkal
ನಾವು ಹೇಳುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 2017ರಲ್ಲಿಯೇ ಬಿಡುಗಡೆಯಾಗಿದೆ. ಶ್ರೀಗಣೇಶ್ ನಿರ್ದೇಶನದ "8 Thottakkal" ಸಿನಿಮಾದಲ್ಲಿ ವೆಟ್ರಿ, ಅಪರ್ಣಾ ಬಾಲಮುರಳಿ, ನಾಸರ್, ಎಂಎಸ್ ಭಾಸ್ಕರ್, ಮೀರಾ ಮಿಥುನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಮೂಲತಃ ಇದೊಂದು ತಮಿಳು ಸಿನಿಮಾ ಆಗಿದ್ದು, ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ಬೇರೆ ಆವೃತ್ತಿಯಲ್ಲಿಯೂ ನೋಡಬಹುದಾಗಿದೆ.
8 Thottakkal ಸಿನಿಮಾದ ಕಥೆ ಏನು?
2 ಗಂಟೆ 55 ನಿಮಿಷದ ಈ ಚಿತ್ರ ಸತ್ಯ (ವೆಟ್ರಿ) ಎಂಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಸುತ್ತ ಸಾಗುತ್ತದೆ. ಪೊಲೀಸ್ ಆದರೂ ಸತ್ಯ ತುಂಬಾ ಸಿಂಪಲ್ ಆಗಿರುತ್ತಾನೆ. ಇದರಿಂದ ಸತ್ಯಾ ವೀಕ್ ಪೊಲೀಸ್ ಎಂದು ಎಲ್ಲರೂ ತಿಳಿದಿರುತ್ತಾರೆ. ಒಂದು ವಾರಿ ಸತ್ಯಾ ಹೊಂದಿರುವ ಸರ್ವಿಸ್ ರಿವಾಲ್ವರ್ ಕಾಣೆಯಾಗುತ್ತದೆ. ಇದೇ ರಿವಾಲ್ವರ್ ಬಳಸಿ ಬ್ಯಾಂಕ್ ದರೋಡೆ ಮಾಡಲಾಗುತ್ತದೆ. ಈ ದರೋಡೆಯಲ್ಲಿ ಕೆಲವರ ಸಾವು ಆಗುತ್ತದೆ.
ನಿವೃತ್ತ ಪೊಲೀಸ್ ಅಧಿಕಾರಿ
ಈ ಘಟನೆ ಬಳಿಕ ಸತ್ಯನನ್ನು ಅಮಾನತುಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ತನ್ನ ಠಾಣೆಯವರೇ ರಿವಾಲ್ವರ್ ಕಳ್ಳತನ ಮಾಡಿರೋದು ಸತ್ಯ ಗಮನಕ್ಕೆ ಬರುತ್ತದೆ. ಮುಂದೆ ಸತ್ಯ ತನಿಖೆ ಆರಂಭಿಸುತ್ತದೆ. ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯ (ಎಂಎಸ್ ಭಾಸ್ಕರ್) ಆಗಮನ ಕಥೆಗೆ ಹೊಸ ತಿರುವು ಸಿಗುತ್ತದೆ.
ಜಿಯೋ ಹಾಟ್‌ಸ್ಟಾರ್ ಮತ್ತು Zee5ನಲ್ಲಿ ಲಭ್ಯ
ಮುಂದೆ ತಿರುವುಗಳನ್ನು ಪಡೆದುಕೊಳ್ಳುತತಾ ಸಾಗುವ ಕಥೆ ವೀಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಈ ಸಿನಿಮಾವನ್ನು ಜಿಯೋ ಹಾಟ್‌ಸ್ಟಾರ್ ಮತ್ತು Zee5ನಲ್ಲಿ ಲಭ್ಯವಿದೆ. ಈ ವೀಕೆಂಡ್‌ಗೆ ಮನೆಯಲ್ಲಿ ಕುಳಿತುಕೊಂಡು 8 Thottakkal ಸಿನಿಮಾವನ್ನು ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

