Charge Sheet 03-08 Review: ಪ್ರೀತಿ- ಪ್ರೇಮ, ಕೊಲೆ, ಪೊಲೀಸು ಮತ್ತು ತನಿಖೆ ಇದಿಷ್ಟೇ ಅಂಶಗಳ ಸುತ್ತಾ ಸಾಗುವ ಸಿನಿಮಾ ‘ಚಾರ್ಜ್ ಶೀಟ್‌ 03-08’. ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ.ಉಮೇಶ್‌ ವೃತ್ತಿ ಅನುಭವದ ಕಥನ.

- ಕೇಶವ

ಪ್ರೀತಿ- ಪ್ರೇಮ, ಕೊಲೆ, ಪೊಲೀಸು ಮತ್ತು ತನಿಖೆ ಇದಿಷ್ಟೇ ಅಂಶಗಳ ಸುತ್ತಾ ಸಾಗುವ ಸಿನಿಮಾ ‘ಚಾರ್ಜ್ ಶೀಟ್‌ 03-08’. ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ.ಉಮೇಶ್‌ ವೃತ್ತಿ ಅನುಭವದ ಕಥನ. ಅವರೇ ತೆರೆ ಮೇಲೆ ಬಂದು ಹೇಳುವ ಕೊಲೆ ಪ್ರಕರಣವೊಂದರ ತನಿಖೆ ಹಾಗೂ ಆ ಪ್ರಕರಣದ ಆರೋಪಿಗಳಿಗೆ ಯಾವ ರೀತಿ ಶಿಕ್ಷೆ ಆಯಿತು ಎಂಬುದನ್ನು ತೋರಿಸುವ ಸಿನಿಮಾ. ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ಅವರನ್ನೂ ಒಳಗೊಂಡಂತೆ ನಾಲ್ಕೈದು ಪಾತ್ರಗಳೇ ಕತೆಯ ಪಿಲ್ಲರ್‌ಗಳು.

ಪ್ರೀತಿಯ ಹೆಸರಿನಲ್ಲಿ ಕರ್ನಾಟಕದಲ್ಲಿ ನಡೆದ ಹುಡುಗಿಯೊಬ್ಬಳ ಅಮಾನುಷ ಕೊಲೆ ಪ್ರಕರಣಕ್ಕೂ ಆಂಧ್ರದ ನರ್ಸಾ ರೆಡ್ಡಿ ಎನ್ನುವ ವ್ಯಕ್ತಿಗೂ ಹೇಗೆ ಲಿಂಕು ಎಂಬುದು ಚಿತ್ರದ ಆಸಕ್ತಿಕರ ತಿರುವು. ಹಿರಿಯ ವ್ಯಕ್ತಿಯೊಬ್ಬ ‘ತನ್ನ ಮಗಳು ಕಾಣೆಯಾಗಿದ್ದಾಳೆ. ಆಕೆಯನ್ನು ಹುಡುಕಿಕೊಡಿ’ ಎಂದು ಪೊಲೀಸ್‌ ಠಾಣೆಗೆ ಬರುತ್ತಾನೆ. ಸಾಮಾನ್ಯ ಪ್ರಕರಣವಾಗಿ ದಾಖಲಾಗುವ ಈ ನಾಪತ್ತೆ ಕೇಸಿಗೆ ಮುಕ್ತಾಯ ಸಿಗುವುದಿಲ್ಲ. ಇನ್ನೇನು ಫೈಲ್‌ ಕ್ಲೋಸ್‌ ಮಾಡಬೇಕು ಎಂದುಕೊಂಡಾಗ ಪೊಲೀಸ್‌ ಇಲಾಖೆಗೆ ಒಬ್ಬರ ಮೇಲೆ ಅನುಮಾನ ಹುಟ್ಟಿಕೊಳ್ಳುತ್ತದೆ.

ಚಿತ್ರ: ಚಾರ್ಜ್ ಶೀಟ್‌ 03-08

ತಾರಾಗಣ: ಸುಂದರ್‌ ರಾಜ್‌, ಹರ್ಷ ಕಲಾಲ್‌, ಪ್ರಮೋದ್‌ ಹಿರೇಮಠ್

ನಿರ್ದೇಶನ: ವೆಂಕಟ್‌ ಭಾರದ್ವಾಜ್‌

ಅಲ್ಲಿಂದ ಚಿತ್ರ ಯಾವ ರೀತಿ ತಿರುವು ಪಡೆಯುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ‘ಚಾರ್ಜ್ ಶೀಟ್‌ 03-08’, ಅಧ್ಯಯನ, ಚಿತ್ರಕಥೆ, ಗಟ್ಟಿಯಾದ ಸಂಭಾಷಣೆ ಮತ್ತು ಪಾತ್ರಗಳ ಸಂಯೋಜನೆಯಲ್ಲಿ ಸಿನಿಮಾ ಸೊರಗಿರುವುದು ಅಲ್ಲಲ್ಲಿ ಕಾಣಿಸುತ್ತದೆ. ಒಂದು ಒಳ್ಳೆಯ ಕ್ರೈಮ್ ಥ್ರಿಲ್ಲರ್‌ ಆಗುವ ಸಾಧ್ಯತೆಗಳಿದ್ದವು. ಆದರೆ ಸುಂದರ್‌ರಾಜ್‌ ನಟನೆಯೇ ಈ ಚಿತ್ರದ ಜೀವಾಳ. ಅವರ ನಟನೆ ಚಿತ್ರದ ಮೆರುಗು ಹೆಚ್ಚಿಸಿದೆ.