Shankh Mitra: ಎಲಾನ್ ಮಸ್ಕ್‌ಗೆ ಸವಾಲೆಸೆದ ಭಾರತೀಯ! ಇವರ ಸಂಬಳ ಕೇಳಿದ್ರೆ ದಂಗಾಗ್ತೀರಾ?
Indian CEO vs Elon Musk: ಜಗತ್ತಿನಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒಗಳ ಪಟ್ಟಿಗೆ ಭಾರತೀಯರೊಬ್ಬರು ಸೇರಿದ್ದಾರೆ. ಅವರ ಹೆಸರು ಶಂಖ್ ಮಿತ್ರ. ಎಲಾನ್ ಮಸ್ಕ್‌ಗೆ ಪೈಪೋಟಿ ನೀಡುವಂತಹ ಸಂಬಳದ ಪ್ಯಾಕೇಜ್ ಪಡೆಯುತ್ತಿರುವ ಇವರು ಯಾರು? ಇಲ್ಲಿದೆ ವಿವರ.

ಶಂಖ್ ಮಿತ್ರ ಸಂಬಳ ಎಷ್ಟು?
ಶಂಖ್ ಮಿತ್ರ ಸಂಬಳ ಎಷ್ಟು?
ಶಂಖ್ ಮಿತ್ರ ಹೆಸರು ಈಗ ಜಗತ್ತಿನಾದ್ಯಂತ ಚರ್ಚೆಯಲ್ಲಿದೆ. ಅಮೆರಿಕದ ಪ್ರಸಿದ್ಧ ಹೆಲ್ತ್‌ಕೇರ್ ಮತ್ತು ಸೀನಿಯರ್ ಹೌಸಿಂಗ್ ರಿಯಲ್ ಎಸ್ಟೇಟ್ ಸಂಸ್ಥೆಯಾದ ವೆಲ್‌ಟವರ್ (Welltower) ಸಿಇಒ ಆಗಿರುವ ಇವರಿಗೆ, 821 ಮಿಲಿಯನ್ ಡಾಲರ್ (ಸುಮಾರು 7,700 ಕೋಟಿ ರೂ.) ಮೌಲ್ಯದ ಸಂಬಳ ಪ್ಯಾಕೇಜ್ ಸಿಕ್ಕಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬೃಹತ್ ಪ್ಯಾಕೇಜ್‌ನಿಂದಾಗಿ, ಶಂಖ್ ಮಿತ್ರ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.
ಹೆಚ್ಚಾಯ್ತು ಮಾರುಕಟ್ಟೆ ಮೌಲ್ಯ
ಹೆಚ್ಚಾಯ್ತು ಮಾರುಕಟ್ಟೆ ಮೌಲ್ಯ
ಶಂಖ್ ಮಿತ್ರ ವ್ಯಾಪಾರದಲ್ಲಿ ಅಪಾರ ಅನುಭವ ಹೊಂದಿದ ವ್ಯಕ್ತಿ. ವೆಲ್‌ಟವರ್ ಸಂಸ್ಥೆಯ ನೇತೃತ್ವ ವಹಿಸಿ, ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೃದ್ಧರಿಗಾಗಿ ವಸತಿ ಸೌಲಭ್ಯ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳ ನಿರ್ವಹಣೆಯಲ್ಲಿ ವೆಲ್‌ಟವರ್ ಹೆಸರುವಾಸಿಯಾಗಿದೆ. ಶಂಖ್ ಮಿತ್ರ ಜವಾಬ್ದಾರಿ ವಹಿಸಿಕೊಂಡ ನಂತರ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಯಶಸ್ವಿಯಾಗಿ ಮುನ್ನಡೆದರೆ ಮಾತ್ರ ಸಾಧ್ಯ
ಯಶಸ್ವಿಯಾಗಿ ಮುನ್ನಡೆದರೆ ಮಾತ್ರ ಸಾಧ್ಯ
ಅವರಿಗೆ ಸಿಕ್ಕಿರುವ 821 ಮಿಲಿಯನ್ ಡಾಲರ್ ಪ್ಯಾಕೇಜ್ ಪೂರ್ತಿಯಾಗಿ ನಗದು ರೂಪದಲ್ಲಿಲ್ಲ. ಇದರ ಬಹುಪಾಲು ಕಂಪನಿಯ ಷೇರುಗಳು, ಸ್ಟಾಕ್ ಅವಾರ್ಡ್‌ಗಳು ಮತ್ತು ದೀರ್ಘಾವಧಿಯ ಪ್ರೋತ್ಸಾಹಕ ಯೋಜನೆಗಳ ರೂಪದಲ್ಲಿ ನೀಡಲಾಗುತ್ತದೆ. ಕಂಪನಿಯು ಭವಿಷ್ಯದಲ್ಲಿ ನಿಗದಿತ ಗುರಿಗಳನ್ನು ತಲುಪಿದರೆ ಮಾತ್ರ ಈ ಎಲ್ಲಾ ಪ್ರಯೋಜನಗಳು ಅವರಿಗೆ ಸಿಗುತ್ತವೆ. ಅಂದರೆ, ಕಂಪನಿ ಯಶಸ್ವಿಯಾಗಿ ಮುನ್ನಡೆದರೆ ಮಾತ್ರ ಶಂಖ್ ಮಿತ್ರ ಈ ದೊಡ್ಡ ಮೊತ್ತವನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯ.
ಯಾರು ಈ ಶಂಖ್ ಮಿತ್ರ ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

