ಎಲಾನ್ ಮಸ್ಕ್ ಒಂದು ದಿನದ ಆದಾಯ ಎಷ್ಟು ಗೊತ್ತಾ? ಮುಕೇಶ್ ಅಂಬಾನಿ ಒಟ್ಟು ಇನ್‌ಕಮ್‌ನ ಎರಡು ಪಟ್ಟು
ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ ಎಲಾನ್ ಮಸ್ಕ್ ಒಂದು ದಿನ ಗಳಿಸುವ ಆದಾಯವೆಷ್ಟು? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ವಿಶೇಷ ಅಂದರೆ ಈ ಆದಾಯ ಏಷ್ಯಾ ಶ್ರೀಮಂತ ಮುಕೇಶ್ ಅಂಬಾನಿಯ ಒಟ್ಟು ಆದಾಯದ ಎರಡರಷ್ಟಿದೆ.

ಮಸ್ಕ್ ಖಾತೆಗೆ ಹಣದ ಹೊಳೆ
ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಶ್ರೀಮಂತಿಕೆ ಈಗಾಗಲೇ ಭಾರಿ ಚರ್ಚೆಯಾಗುತ್ತಿದೆ. ವಿಶ್ವದ ಮೊದಲ ಟ್ರಿಲೇನಿಯರ್ ಕಿರೀಟ ಪಡೆದಿರುವ ಎಲಾನ್ ಮಸ್ಕ್ ಮಿಲಿಯನ್, ಬಿಲಿಯನ್ ಲೆಕ್ಕವೇ ಇಲ್ಲದಂತಾಗಿದೆ. ಸ್ಪೇಸ್‌ಎಕ್ಸ್ ಐಪಿಎ ಸೆಕ್ಟರ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಮಸ್ಕ್‌ಗೆ ಹಣದ ಹೊಳೆಯೇ ಹರಿಯುತ್ತಿದೆ. ಇದೀಗ ಎಲಾನ್ ಮಸ್ಕ್ ಒಂದು ದಿನದ ಆದಾಯದ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಒಂದು ದಿನದ ಆದಾಯ
ಸ್ಪೇಸ್ ಎಕ್ಸ್ ಐಪಿಎ ಲಿಸ್ಟ್ ಆದ ಬಳಿಕ ಇದೀಗ ಎಲಾನ್ ಮಸ್ಕ್ ಒಂದು ದಿನ 164.8 ಬಿಲಿಯನ್ ಅಮೆರಿಕನ್ ಡಾಲರ್ ಆದಾಯಗಳಿಸುತ್ತಿದ್ದಾರೆ. ಇಂದಿನ ಟ್ರೇಡಿಂಗ್ ಬಳಿಕ ಮಸ್ಕ್ ಆದಾಯದಲ್ಲಿ ಶೇಕಡಾ 14.71ರಷ್ಟು ಏರಿಕೆ ಕಂಡಿದೆ. ಸದ್ಯ ಸ್ಪೇಸ್ಎಕ್ಸ್ ಷೇರು ಮೌಲ್ಯಗಳು ಗಗನಕ್ಕೇರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಆದಾಯ ಮತ್ತಷ್ಟು ಏರಿಕೆಯಾಗಲಿದೆ.
ಮುಕೇಶ್ ಅಂಬಾನಿ ಒಟ್ಟು ಆದಾಯಕ್ಕಿಂತ ದುಪ್ಪಟ್ಟು
ಏಷ್ಯಾದ ಶ್ರೀಮಂತ ಉದ್ಯಮಿ, ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಒಟ್ಟು ನೆಟ್‌ವರ್ತ್ 89.7 ಬಿಲಿಯನ್ ಅಮೆರಿಕನ್ ಡಾಲರ್. ಇದರ ಎಡರಷ್ಟು ನೆಟ್‌ವರ್ತ್ ಎಲಾನ್ ಮಸ್ಕ್ ಕೇವಲ ಒಂದು ದಿನದಲ್ಲಿ ಪಡೆಯುತ್ತಿದ್ದಾರೆ. ಇಲ್ಲಿಗೆ ಎಲಾನ್ ಮಸ್ಕ್ ಟ್ರಿಲೇನಿಯರ್ ಶ್ರೀಮಂತಿ ಎಷ್ಟಿದೆ ಅನ್ನೋದು ಊಹಿಸಲು ಸಾಧ್ಯ.
ಎಲಾನ್ ಮಸ್ಕ್ ಒಟ್ಟು ನೆಟ್‌ವರ್ತ್
ಟೆಸ್ಲಾ ಹಾಗೂ ಸ್ಪೇಸ್ಎಕ್ಸ್‌ನಿಂದ ಪ್ರಮುಖವಾಗಿ ಹಣ ಹೊಳೆ ಹರಿಯುತ್ತಿದೆ. ಪರಿಣಾಮ ಎಲಾನ್ ಮಸ್ಕ್ ಒಟ್ಟು ನೆಟ್‌ವರ್ತ್ ಇದೀಗ 1.3 ಟ್ರಿಲಿಯನ್ ಅಮೆರಿಕನ್ ಡಾಲರ್. ಮಸ್ಕ್ ನೆಟ್‌ವರ್ತ್ ಪಕ್ಕಕ್ಕೂ ಯಾವ ಶ್ರೀಮಂತ ಉದ್ಯಮಿಗಳು ಬರುವುದು ಕಷ್ಟ. ಇಷ್ಟೇ ಅಲ್ಲ ಹಲವು ದೇಶಗಳ ಆರ್ಥಿಕತೆಗಿಂತ ಎಲಾನ್ ಮಸ್ಕ್ ನೆಟ್‌ವರ್ತ್ ಹೆಚ್ಚಿದೆ.
ಮಸ್ಕ್ ಒಟ್ಟು ಆಸ್ತಿ ಹಾಗೂ ಭಾರತದ ಜಿಡಿಪಿ
ಎಲಾನ್ ಮಸ್ಕ್ ಒಟ್ಟು ಆಸ್ತಿ, ಶ್ರೀಮಂತಿಕೆ ಕುರಿತು ಮತ್ತಷ್ಟು ಬಿಡಿಸಿ ಹೇಳಬೇಕು ಎಂದರೆ, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಜಿಡಿಪಿ ಈಗ 4.15 ಟ್ರಿಲಿಯನ್ ಅಮೆರಿಕನ್ ಡಾಲರ್. ಇತ್ತ ಎಲಾನ್ ಮಸ್ಕ್ ಒಟ್ಟು ಆಸ್ತಿ 1.3 ಟ್ರಿಲಿಯನ್ ಅಮೆರಿಕನ್ ಡಾಲರ್.
ಸರಿದಾರಿಯಲ್ಲಿ ಎಲಾನ್ ಮಸ್ಕ್
ಜೂನ್ 12ರಂದು ಸ್ಪೇಸ್ಎಕ್ಸ್ ಪಬ್ಲಿಕ್ ಸೆಕ್ಟರ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಮಸ್ಕ್ ಆದಾಯ ಟ್ರಿಲಿಯನ್ ಪಟ್ಟಿ ಸೇರಿಕೊಂಡಿತ್ತು. ಎಲಾನ್ ಮಸ್ಕ್ ಇದೀಗ ವಿಶ್ವದ ಏಕೈಕ ಹಾಗೂ ಮೊದಲ ಟ್ರಿಲೇನಿಯರ್ ಶ್ರೀಮಂತ. ಹಲವು ಕ್ಷೇತ್ರಗಳಲ್ಲಿ ಎಲಾನ್ ಮಸ್ಕ್ ಹೂಡಿಕೆ ಮಾಡಿದ್ದಾರೆ. ಊಹೆಗೂ ನಿಲಕುದ ಮಸ್ಕ್ ನಿರ್ಧಾರಗಳು ಹಲವು ಬಾರಿ ಅಚ್ಚರಿ ನೀಡಿದರೂ ಆದಾಯದ ವಿಚಾರದಲ್ಲಿ ಮಸ್ಕ್ ಸರಿದಾಯಲ್ಲೇ ಸಾಗುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

