- Home
- Life
- ವಾಷಿಂಗ್ ಮಷಿನ್‌ನ ಡಿಟರ್ಜೆಂಟ್ ಡಿಸ್ಪೆನ್ಸರ್ ಪಾಚಿ ಕಟ್ಟಿ ವಾಸನೆ ಬರ್ತಿದ್ಯಾ? ತಿಂಗಳಿಗೊಮ್ಮೆ ಈ ರೀತಿ ಕ್ಲೀನ್ ಮಾಡಿ
ವಾಷಿಂಗ್ ಮಷಿನ್‌ನ ಡಿಟರ್ಜೆಂಟ್ ಡಿಸ್ಪೆನ್ಸರ್ ಪಾಚಿ ಕಟ್ಟಿ ವಾಸನೆ ಬರ್ತಿದ್ಯಾ? ತಿಂಗಳಿಗೊಮ್ಮೆ ಈ ರೀತಿ ಕ್ಲೀನ್ ಮಾಡಿ
Clean detergent dispenser: ನಿಮ್ಮ ವಾಷಿಂಗ್ ಮಷಿನ್‌ನ ಡಿಟರ್ಜೆಂಟ್ ಡಿಸ್ಪೆನ್ಸರ್ (ಡಿಟರ್ಜೆಂಟ್ ಅಥವಾ ಲಿಕ್ವಿಡ್ ಪೌಡರ್ ಹಾಕುವ ಡಬ್ಬಿ) ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ. ಪೌಡರ್ ಅವಶೇಷಗಳು, ಪಾಚಿ (mold)ಅಥವಾ ಶಿಲೀಂಧ್ರ ತೆಗೆದುಹಾಕುವುದರಿಂದ ನಿಮ್ಮ ಬಟ್ಟೆಗಳು ಹೆಚ್ಚು ಶುಭ್ರವಾಗಿರುತ್ತವೆ.

ಜಿಗುಟಾಗಿ ಪಾಚಿ ಕಟ್ಟುತ್ತೆ
ಜಿಗುಟಾಗಿ ಪಾಚಿ ಕಟ್ಟುತ್ತೆ
ಇತ್ತೀಚೆಗೆ ನಿಮ್ಮ ಬಟ್ಟೆಗಳು ಮಸುಕಾಗಿ ಕಾಣುತ್ತಿದ್ದರೆ, ನಿಮ್ಮ ವಾಷಿಂಗ್ ಮಷಿನ್‌ನ ಡಿಟರ್ಜೆಂಟ್ ಡಿಸ್ಪೆನ್ಸರ್ (ಡಿಟರ್ಜೆಂಟ್ ಅಥವಾ ಲಿಕ್ವಿಡ್ ಪೌಡರ್ ಹಾಕುವ ಡಬ್ಬಿ) ಸ್ವಚ್ಛಗೊಳಿಸುವ ಸಮಯ ಬಂದಿದೆ ಎಂದರ್ಥ. ಡಿಟರ್ಜೆಂಟ್ ಅಥವಾ ಲಿಕ್ವಿಡ್ ಪೌಡರ್ ಮತ್ತು ಫ್ಯಾಬ್ರಿಕ್ ಸಾಫ್ಟನರ್‌ಗಳು ಜಿಗುಟಾಗಿರುವುದರಿಂದ ಅವು ಡಿಸ್ಪೆನ್ಸರ್‌ನಲ್ಲಿ ಶೇಖರಣೆಯಾಗಿ ಪಾಚಿ ಕಟ್ಟುವಂತೆ ಮಾಡುತ್ತವೆ.
ಡಿಟರ್ಜೆಂಟ್ ಡಿಸ್ಪೆನ್ಸರ್ ಎಷ್ಟು ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು?
ಡಿಟರ್ಜೆಂಟ್ ಡಿಸ್ಪೆನ್ಸರ್ ಎಷ್ಟು ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು?
ಸಾಮಾನ್ಯವಾಗಿ ಪ್ರತಿ ಎರಡರಿಂದ ನಾಲ್ಕು ವಾರಗಳಿಗೊಮ್ಮೆ ಇದನ್ನು ಸ್ವಚ್ಛಗೊಳಿಸುವುದು ಉತ್ತಮ. ನಿಮ್ಮ ಪ್ರದೇಶದಲ್ಲಿ ಗಟ್ಟಿ ನೀರು ಅಥವಾ ಬೋರ್ವೆಲ್ ನೀರು (hard water) ಇದ್ದರೆ ಅಥವಾ ನೀವು ಹೆಚ್ಚಾಗಿ ತಣ್ಣೀರಿನಲ್ಲಿ ಬಟ್ಟೆ ಒಗೆಯುತ್ತಿದ್ದರೆ, ಇನ್ನೂ ಬೇಗನೆ ಸ್ವಚ್ಛಗೊಳಿಸಬೇಕಾಗಬಹುದು. ಮೊದಲಿಗೆ ತೆಗೆಯಲಾಗದ (Non-Removable) ಡಿಸ್ಪೆನ್ಸರ್, ಆ ನಂತರ ತೆಗೆಯಬಹುದಾದ (Removable) ಡಿಸ್ಪೆನ್ಸರ್ ಅನ್ನು ಸ್ವಚ್ಛಗೊಳಿಸುವ ವಿಧಾನವನ್ನು ನೋಡೋಣ..
ತೆಗೆಯಲಾಗದ (Non-Removable) ಡಿಸ್ಪೆನ್ಸರ್ ಸ್ವಚ್ಛಗೊಳಿಸುವ ವಿಧಾನ
ತೆಗೆಯಲಾಗದ (Non-Removable) ಡಿಸ್ಪೆನ್ಸರ್ ಸ್ವಚ್ಛಗೊಳಿಸುವ ವಿಧಾನ
*ಡ್ರಾಯರ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಹೊರಕ್ಕೆ ಎಳೆಯಿರಿ.
*ಹಳೆಯ ಟೂತ್‌ಬ್ರಷ್ ಅನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ ಒಳಭಾಗವನ್ನು ನಿಧಾನವಾಗಿ ಸ್ಕ್ರಬ್ ಮಾಡಿ.
*ಮೃದುವಾದ ಬಟ್ಟೆಯಿಂದ ಕೊಳೆಯನ್ನು ಒರೆಸಿ.
ಗಮನಿಸಿ: ಡಿಸ್ಪೆನ್ಸರ್ ಒಳಗೆ ಅತಿಯಾದ ನೀರನ್ನು ಸುರಿಯಬೇಡಿ, ಇದು ಕೊಳೆಯನ್ನು ಇನ್ನಷ್ಟು ಒಳಕ್ಕೆ ತಳ್ಳಬಹುದು.
ಪಾಚಿ ಮತ್ತು ಶಿಲೀಂಧ್ರವನ್ನು (Mold and Mildew) ಹೋಗಲಾಡಿಸುವುದು ಹೇಗೆ?
*ಡಿಸ್ಪೆನ್ಸರ್‌ನಲ್ಲಿ ಪಾಚಿ ಕಟ್ಟಿದ್ದರೆ ಅದನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅದು ಬಟ್ಟೆಗಳನ್ನು ಸೇರುವ ನೀರಿನೊಂದಿಗೆ ಬೆರೆಯುತ್ತದೆ.
*ಬೆಚ್ಚಗಿನ ನೀರಿನಿಂದ ಸ್ಕ್ರಬ್ ಮಾಡುವುದು ಉತ್ತಮ ಪರಿಹಾರ.
*ಒಂದು ವೇಳೆ ಪಾಚಿ ಹೋಗದಿದ್ದರೆ, ನಿಮ್ಮ ಮಷಿನ್‌ನ ಮ್ಯಾನುಯಲ್ ಪರಿಶೀಲಿಸಿ. ಕೆಲವು ಮಾಡೆಲ್‌ಗಳಿಗೆ ಅಲ್ಪ ಪ್ರಮಾಣದ ಲಿಕ್ವಿಡ್ ಕ್ಲೋರಿನ್ ಬ್ಲೀಚ್ ಬಳಸಿ ಕ್ಲೀನ್ ಮಾಡಬಹುದು.
ತೆಗೆಯಬಹುದಾದ (Removable) ಡಿಸ್ಪೆನ್ಸರ್ ಸ್ವಚ್ಛಗೊಳಿಸುವ ವಿಧಾನ
ತೆಗೆಯಬಹುದಾದ (Removable) ಡಿಸ್ಪೆನ್ಸರ್ ಸ್ವಚ್ಛಗೊಳಿಸುವ ವಿಧಾನ
ಇದು ತುಂಬಾ ಸುಲಭವಾದ ಕೆಲಸ. ಇದಕ್ಕೆ ಮೃದುವಾದ ಸೋಪ್, ನೀರು ಮತ್ತು ಬ್ರಷ್ ಸಾಕು.
ಡಿಸ್ಪೆನ್ಸರ್ ಬಿಡುಗಡೆ ಮಾಡುವ ಲಿವರ್ ಅನ್ನು ಒತ್ತಿ ಅದನ್ನು ಹೊರತೆಗೆಯಿರಿ.
ಡ್ರಾಯರ್‌ನಲ್ಲಿರುವ ಇನ್ಸರ್ಟ್‌ಗಳನ್ನು (ಒಳಗಿನ ಭಾಗಗಳು) ಬೇರ್ಪಡಿಸಿ.
ಉಗುರುಬೆಚ್ಚಗಿನ ನೀರಿನಲ್ಲಿ ಮೃದುವಾದ ಬ್ರಷ್ ಬಳಸಿ ಶೇಖರಣೆಯಾದ ಕೊಳೆಯನ್ನು ತೆಗೆಯಿರಿ.
ಕೊಳೆ ಗಟ್ಟಿಯಾಗಿದ್ದರೆ, ಆ ಭಾಗಗಳನ್ನು 5 ರಿಂದ 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ.
ಡಿಸ್ಪೆನ್ಸರ್ ಕುಳಿತುಕೊಳ್ಳುವ ಜಾಗವನ್ನು (housing) ಮೃದುವಾದ ಬಟ್ಟೆ ಅಥವಾ ಸ್ಪಂಜಿನಿಂದ ಒರೆಸಿ.
ಎಲ್ಲವನ್ನೂ ಒಣ ಬಟ್ಟೆಯಿಂದ ಒರೆಸಿ ಅಥವಾ ಗಾಳಿಯಲ್ಲಿ ಒಣಗಲು ಬಿಡಿ, ನಂತರ ಮತ್ತೆ ಜೋಡಿಸಿ.
ಮಾಡಬಾರದ ಕೆಲಸಗಳು (Avoid these)
ಮಾಡಬಾರದ ಕೆಲಸಗಳು (Avoid these)
ಡಿಶ್‌ವಾಶರ್ ಬಳಸಬೇಡಿ: ಡಿಸ್ಪೆನ್ಸರ್ ಅನ್ನು ಡಿಶ್‌ವಾಶರ್‌ನಲ್ಲಿ ಹಾಕಿ ತೊಳೆಯಬೇಡಿ, ಅತಿಯಾದ ಶಾಖದಿಂದ ಪ್ಲಾಸ್ಟಿಕ್ ಸೊಟ್ಟಗಾಗಬಹುದು.
ತೀಕ್ಷ್ಣ ವಸ್ತುಗಳನ್ನು ಬಳಸಬೇಡಿ: ಮೆಟಲ್ ಬ್ರಷ್ ಅಥವಾ ಚೂಪಾದ ವಸ್ತುಗಳನ್ನು ಬಳಸಬೇಡಿ, ಇವು ಪ್ಲಾಸ್ಟಿಕ್ ಮೇಲೆ ಗೀರುಗಳನ್ನು ಉಂಟುಮಾಡುತ್ತವೆ.
ಮ್ಯಾನುಯಲ್ ನೋಡದೆ ಬ್ಲೀಚ್ ಬಳಸಬೇಡಿ: ಕೆಲವು ಫ್ರಂಟ್-ಲೋಡ್ ಮಷಿನ್‌ಗಳಿಗೆ ಬ್ಲೀಚ್ ಹಾನಿಕಾರಕವಾಗಬಹುದು.
ಕೊಳೆಯನ್ನು ತಡೆಗಟ್ಟಲು ಸಲಹೆಗಳು
ಕೊಳೆಯನ್ನು ತಡೆಗಟ್ಟಲು ಸಲಹೆಗಳು
ಸರಿಯಾದ ಡಿಟರ್ಜೆಂಟ್ ಬಳಸಿ: ನಿಮ್ಮ ಮಷಿನ್ HE (High Efficiency) ಡಿಟರ್ಜೆಂಟ್ ಪೌಡರ್ ಕೇಳುತ್ತಿದ್ದರೆ ಅದನ್ನೇ ಬಳಸಿ.
ಬೆಚ್ಚಗಿನ ನೀರು ಬಳಸಿ: ಬಟ್ಟೆಗಳಿಗೆ ತೊಂದರೆಯಿಲ್ಲದಿದ್ದರೆ ಬೆಚ್ಚಗಿನ ನೀರಿನಲ್ಲಿ ಒಗೆಯಿರಿ, ಇದು ಡಿಟರ್ಜೆಂಟ್ ಚೆನ್ನಾಗಿ ಕರಗಲು ಸಹಾಯ ಮಾಡುತ್ತದೆ.
ಸರಿಯಾದ ಪ್ರಮಾಣ: ಅತಿಯಾಗಿ ಡಿಟರ್ಜೆಂಟ್ ಬಳಸಬೇಡಿ. ಪ್ಯಾಕೆಟ್ ಮೇಲಿರುವ ಸೂಚನೆಯಂತೆ ಬಳಸಿ.
ಒರೆಸಿ: ಸೋಪ್ ಚೆಲ್ಲಿದ ತಕ್ಷಣ ಅದನ್ನು ಒರೆಸಿ ಹಾಕಿ.
ತೆರೆದಿಡಿ: ಬಟ್ಟೆ ಒಗೆದ ನಂತರ ಡಿಸ್ಪೆನ್ಸರ್ ಡ್ರಾಯರ್ ಅನ್ನು ಸ್ವಲ್ಪ ಸಮಯ ತೆರೆದಿಡಿ, ಇದರಿಂದ ತೇವಾಂಶ ಆರಿ ಪಾಚಿ ಕಟ್ಟುವುದಿಲ್ಲ.
ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ನಿಮ್ಮ ವಾಷಿಂಗ್ ಮಷಿನ್ ದೀರ್ಘಕಾಲ ಬಾಳಿಕೆ ಬರುತ್ತದೆ ಮತ್ತು ಬಟ್ಟೆಗಳು ಶುಚಿಯಾಗಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

