ಆಪರೇಷನ್ ಇಲ್ಲದೆಯೇ ಕಣ್ಣಿನ ದೃಷ್ಟಿ ಹೆಚ್ಚಿಸಲು ದಿನಕ್ಕೊಂದು ಗ್ಲಾಸ್ ಈ ಟೀ ಕುಡಿಯಿರಿ!
Natural Eye Care Tips: ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದ ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯವಾಗಿದೆ. ಆದರೆ, ಕಣ್ಣಿನ ದೃಷ್ಟಿಯನ್ನು ನೈಸರ್ಗಿಕವಾಗಿ ಸುಧಾರಿಸಲು ಮತ್ತು ಕನ್ನಡಕದಿಂದ ಮುಕ್ತಿ ಪಡೆಯಲು ಪ್ರಕೃತಿಯಲ್ಲೇ ಒಂದು ಅದ್ಭುತ ಔಷಧಿಯಿದೆ.

ಅಡುಗೆಮನೆಯಲ್ಲೇ ಇರುವ ಒಂದು ಸುಲಭ ಮನೆಮದ್ದು
ಅಡುಗೆಮನೆಯಲ್ಲೇ ಇರುವ ಒಂದು ಸುಲಭ ಮನೆಮದ್ದು
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಕನ್ನಡಕ ಅನಿವಾರ್ಯವಾಗಿದೆ. ದಿನವಿಡೀ ಮೊಬೈಲ್ ನೋಡುವುದು, ಗಂಟೆಗಟ್ಟಲೆ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಟಿವಿ ನೋಡುವುದರಿಂದ ಕಣ್ಣುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಇದರಿಂದ ಕಣ್ಣು ಉರಿ, ಕಣ್ಣಿನಿಂದ ನೀರು ಬರುವುದು ಮತ್ತು ದೃಷ್ಟಿ ಮಸುಕಾಗುವಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಅಡುಗೆಮನೆಯಲ್ಲೇ ಇರುವ ಒಂದು ಸುಲಭ ಮನೆಮದ್ದು ಅಂದರೆ ಅದು ಪೇರಲೆ ಎಲೆ ಅಥವಾ ಸೀಬೆ ಕಾಯಿ ಎಲೆ (Guava Leaves).
ಪೇರಲೆ ಎಲೆ ಕಣ್ಣಿಗೆ ಹೇಗೆ ಪ್ರಯೋಜನಕಾರಿ?
ಪೇರಲೆ ಎಲೆ ಕಣ್ಣಿಗೆ ಹೇಗೆ ಪ್ರಯೋಜನಕಾರಿ?
ಪೇರಲೆ ಎಲೆಯಲ್ಲಿ ವಿಟಮಿನ್ ಎ (Vitamin A) ಮತ್ತು ಹೇರಳವಾದ ಆಂಟಿಆಕ್ಸಿಡೆಂಟ್‌ಗಳು ಅಡಗಿವೆ. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಇದು ಕಣ್ಣಿನ ದೃಷ್ಟಿ ಮಂದವಾಗುವುದನ್ನು ತಡೆಯುವುದಲ್ಲದೆ, ರೆಟಿನಾದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಇದರಲ್ಲಿರುವ ಪೋಷಕಾಂಶಗಳು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ. ನಿರಂತರವಾಗಿ ಸ್ಕ್ರೀನ್ ನೋಡುವವರಿಗೆ ಕಣ್ಣಿನ ಆಯಾಸವನ್ನು (Eye Strain) ನೀಗಿಸಲು ಪೇರಲೆ ಎಲೆ ರಾಮಬಾಣವಾಗಿದೆ.
ಪೇರಳೆ ಎಲೆಯ ಕಷಾಯ ಅಥವಾ ಟೀ ತಯಾರಿಸುವ ವಿಧಾನ
ಪೇರಳೆ ಎಲೆಯ ಕಷಾಯ ಅಥವಾ ಟೀ ತಯಾರಿಸುವ ವಿಧಾನ
*ಕೆಲವು ತಾಜಾ ಮತ್ತು ಪೇರಲೆ ಎಲೆಗಳನ್ನು ತೆಗೆದುಕೊಂಡು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
*ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಈ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.
*ನೀರಿನ ಬಣ್ಣ ಬದಲಾದ ನಂತರ ಅದನ್ನು ಸೋಸಿಕೊಳ್ಳಿ.
*ಈ ಕಷಾಯ ಅಥವಾ ಟೀಗೆ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ.
*ಈ ಪಾನೀಯವನ್ನು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಕ್ರಮೇಣ ಸುಧಾರಿಸುತ್ತದೆ.
*ಈ ಚಹಾ ಕೇವಲ ಕಣ್ಣಿನ ದೃಷ್ಟಿಗಷ್ಟೇ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ಕಲ್ಮಶಗಳನ್ನು ಹೊರಹಾಕಲು ಕೂಡ ಸಹಾಯ ಮಾಡುತ್ತದೆ. ಕನ್ನಡಕದಿಂದ ಮುಕ್ತಿ ಪಡೆಯಲು ಬಯಸುವವರು ನಿಯಮಿತವಾಗಿ ಈ ಪೇರಲೆ ಎಲೆಯ ಟೀಯನ್ನು ರೂಢಿಸಿಕೊಳ್ಳಬಹುದು.
ಗಮನಿಸಿ (Disclaimer)
ಗಮನಿಸಿ (Disclaimer)
ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಮನೆಮದ್ದಿನ ಆಧಾರದ ಮೇಲೆ ನೀಡಲಾಗಿದೆ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಕಣ್ಣಿನ ತೀವ್ರ ಸಮಸ್ಯೆ ಇರುವವರು ಅಥವಾ ಯಾವುದೇ ಮನೆಮದ್ದುಗಳನ್ನು ಅನುಸರಿಸುವ ಮೊದಲು ನೇತ್ರ ತಜ್ಞರನ್ನು (Ophthalmologist) ಅಥವಾ ಕುಟುಂಬ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
