ನೋವಾದ ಜಾಗವನ್ನು ಒತ್ತೋದ್ರಿಂದ ನೋವು ಹೇಗೆ ಕಡಿಮೆಯಾಗುತ್ತೆ; ಆದರೆ ಒತ್ತುವ ವಿಧಾನ ಸರಿಯಿರಬೇಕು
ಕೈ , ಕಾಲಿನಲ್ಲಿ ಅಥವಾ ತಲೆಯಲ್ಲಿ ನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತೆ. ಈ ನೋವಿಗೆ ಏನಾದರೂ ಔಷಧಿ ಹಚ್ಚೋ ಮೊದಲು ನಾವು ನೀಡೋ ಪ್ರಥಮ ಚಿಕಿತ್ಸೆ ಎಂದರೆ ನೋವಿರುವ ಜಾಗವನ್ನು ಒತ್ತುವುದು. ನೋವು ಇದ್ದಾಗ ಒತ್ತುವುದು ತಕ್ಷಣವೇ ಪರಿಹಾರವನ್ನು ನೀಡುತ್ತದೆ. ಕೆಲವು ಬಿಂದುಗಳನ್ನು ಒತ್ತುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ನೋವನ್ನು ಕಡಿಮೆ ಮಾಡುತ್ತದೆ. ಇದು ಏಕೆ ಸಂಭವಿಸುತ್ತದೆ ಎಂದು ತಿಳಿದಿದೆಯೇ?
ಕೈ, ಪಾದ ಅಥವಾ ತಲೆಯಲ್ಲಿ ನೋವು ಇದ್ದಾಗ ನಾವು ಸಾಮಾನ್ಯವಾಗಿ ಏನು ಮಾಡುತ್ತೇವೆ ಹೇಳಿ. ನೋವಿರುವ ಜಾಗವನ್ನು ಮೆಲ್ಲಗೆ ಕೈಗಳಿಂದ ಒತ್ತುತ್ತೇವೆ ಅಲ್ವಾ? ಹೀಗೆ ಮಾಡೊದ್ರಿಂದ ನೋವಿನಿಂದ ರಿಲೀಫ್(Pain relief) ಸಿಗುತ್ತೆ ಅನ್ನೋದು ನಿಮ್ಮ ಅನುಭವಕ್ಕೂ ಬಂದಿರಬೇಕು ಅಲ್ವಾ?. ಅನೇಕ ಬಾರಿ ಯಾರಾದರೂ ನಿಮ್ಮ ತಲೆಯನ್ನು ಒತ್ತಿರಬಹುದು ಮತ್ತು ಕೆಲವೊಮ್ಮೆ ನೀವು ನಿಮ್ಮ ಜನರ ಕೈ ಮತ್ತು ಕಾಲುಗಳನ್ನು ಒತ್ತುತ್ತೀರಿ. ಇದರಿಂದ ನೋವಿನಿಂದ ಪರಿಹಾರ ಸಿಗುತ್ತೆ. ಇದಕ್ಕೆ ಕಾರಣ ಏನು ಗೊತ್ತಾ?
ಒತ್ತುವುದು(Pressure) ನೋವಿನಲ್ಲಿ ತಕ್ಷಣದ ಪರಿಹಾರವನ್ನು ಒದಗಿಸುತ್ತೆ, ಆದರೆ ಒತ್ತುವುದರಿಂದ ಯಾವುದೇ ನೋವಿಗೆ ಹೇಗೆ ಪರಿಹಾರ ಸಿಗುತ್ತೆ ಎಂದು ನೀವು ಆಶ್ಚರ್ಯಪಟ್ಟಿದ್ದೀರಾ? ಈ ಬಗ್ಗೆ ನಿಮ್ಮ ಮನಸಿನಲ್ಲೂ ಪ್ರಶ್ನೆಗಳು ಕಾಡಿದರೆ ಇನ್ನು ಜಾಸ್ತಿ ಯೋಚನೆ ಮಾಡ್ಬೇಡಿ, ಯಾಕಂದ್ರೆ ಒತ್ತುವುದರಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ.
ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಜನರು ತಪ್ಪಾದ ಭಂಗಿಯಲ್ಲಿ(Posture) ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು ಮತ್ತು ದಿನವಿಡೀ ಕುಳಿತುಕೊಳ್ಳುವ ಕೆಲಸದಿಂದಾಗಿ ಅನೇಕ ರೀತಿಯ ನೋವಿನಿಂದ ತೊಂದರೆಗೀಡಾಗಿದ್ದಾರೆ. ಉದ್ವಿಗ್ನತೆ ಮತ್ತು ಜೀವನಶೈಲಿಯಿಂದಾಗಿ, ತಲೆನೋವಿನ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಯುವಕರು ಕೈ, ಕಾಲು, ತಲೆನೋವು ಮತ್ತು ದೇಹದ ನೋವಿನಿಂದ ತೊಂದರೆಗೀಡಾಗುತ್ತಿದ್ದಾರೆ. ನೋವಿನ ಕಾರಣ ಮತ್ತು ಒತ್ತುವುದು ನೋವನ್ನು ಹೇಗೆ ಗುಣಪಡಿಸುತ್ತೆ ಎಂದು ಇಲ್ಲಿ ತಿಳಿದುಕೊಳ್ಳಿ..
ತೋಳು, ಕಾಲು ಮತ್ತು ತಲೆನೋವಿನ ಕಾರಣ
ಆಯಾಸದಿಂದಾಗಿ(Tired), ದೇಹದಲ್ಲಿ ನೋವು ಉಂಟಾಗುತ್ತೆ. ಇದಲ್ಲದೆ, ಕೈ ಮತ್ತು ಪಾದಗಳಲ್ಲಿ ನೋವಿನ ಸಮಸ್ಯೆ ಇರುವ ಇತರ ಅನೇಕ ಕಾರಣಗಳಿವೆ. ಜೀವಕೋಶಗಳಲ್ಲಿ ಲ್ಯಾಕ್ಟಿಕ್ ಆಸಿಡ್ ಮಟ್ಟ ಹೆಚ್ಚಾಗುತ್ತೆ, ಇದು ನೋವಿಗೆ ಮುಖ್ಯ ಕಾರಣ. ಅನೇಕ ಬಾರಿ, ಕಷ್ಟಪಟ್ಟು ಅಥವಾ ಕಡಿಮೆ ಕೆಲಸ ಮಾಡೋದು ಸಹ ನೋವನ್ನು ಉಂಟುಮಾಡುತ್ತೆ.
ತೋಳು, ಕಾಲು ಮತ್ತು ತಲೆನೋವನ್ನು ಒತ್ತುವುದರಿಂದ ನೋವು ಗುಣಪಡಿಸೋದು ಹೇಗೆ?
ಒತ್ತುವುದು ತಲೆನೋವನ್ನು(Head pain) ಬೇಗನೆ ಗುಣಪಡಿಸುತ್ತೆ ಎಂಬುದನ್ನು ನೀವು ನೋಡಿರಬಹುದು. ಇದು ಶಾಶ್ವತ ಚಿಕಿತ್ಸೆಯಲ್ಲದಿದ್ದರೂ, ಇದು ಸ್ವಲ್ಪ ಸಮಯದವರೆಗೆ ಪರಿಹಾರ ಒದಗಿಸುತ್ತೆ. ಹೇಗೆ ಇದು ನೋವನ್ನು ನಿವಾರಿಸುತ್ತೆ?
ಸಾಮಾನ್ಯವಾಗಿ ನಮಗೆ ನೋವು ಕಂಡು ಬಂದರೆ ಆ ಜಾಗವನ್ನು ಒತ್ತುತ್ತೇವೆ. ಕೈ, ಪಾದ ಅಥವಾ ತಲೆಯನ್ನು ಒತ್ತುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತೆ, ಇದರಿಂದ ಜೀವಕೋಶಗಳಲ್ಲಿ ಸಂಗ್ರಹವಾಗಿರುವ ಲ್ಯಾಕ್ಟಿಕ್ ಆಸಿಡ್ ರಕ್ತದೊಂದಿಗೆ ಚಲಿಸುತ್ತೆ ಮತ್ತು ನೋವಿನಲ್ಲಿ ನಮಗೆ ಪರಿಹಾರ ನೀಡುತ್ತೆ.
ರಕ್ತ ಹೆಪ್ಪುಗಟ್ಟುವಿಕೆ ಅಥವಾ ತಂಪಾಗುವಿಕೆಯಿಂದಾಗಿ, ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಹಾಗಾಗಿ, ಕೈ ಮತ್ತು ಪಾದಗಳ ನೋವಿನಿಂದ ಬಳಲುತ್ತಿರುವ ಅಂಗವನ್ನು ಮಸಾಜ್ ಮಾಡಿದಾಗ, ರಕ್ತದಲ್ಲಿ ಶಾಖ ಕ್ರಿಯೇಟ್ ಆಗುತ್ತೆ. ಇದು ರಕ್ತವನ್ನು ತೆಳುವಾಗಿಸುತ್ತೆ ಮತ್ತು ರಕ್ತನಾಳಗಳಲ್ಲಿ ಪೂರ್ಣ ವೇಗದಲ್ಲಿ ಹರಿಯಲು ಪ್ರಾರಂಭಿಸುತ್ತೆ. ಇದು ಸ್ವಲ್ಪ ಸಮಯದವರೆಗೆ ನೋವನ್ನು(Pain) ನಿವಾರಿಸುತ್ತೆ.
ಔಷಧ ಅಥವಾ ಮಸಾಜ್ ನಿಂದ(Massage) ಊತ ಕಡಿಮೆಯಾಗುತ್ತೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ. ನೋವನ್ನು ನಿಗ್ರಹಿಸೋದರಿಂದ ಉರಿಯೂತಕ್ಕೆ ಕಾರಣವಾಗುವ ಸೈಟೋಕೈನ್ ಗಳನ್ನು ಸಹ ಕಡಿಮೆ ಮಾಡಬಹುದು. ಚೆನ್ನಾಗಿ ಮಸಾಜ್ ಮಾಡಿದರೆ, ಇದು ನೋವು ನಿವಾರಕಕ್ಕಿಂತ ಹೆಚ್ಚಿನ ಪರಿಹಾರ ನೀಡುತ್ತೆ.