Home Remedies: ಬೆಳಿಗ್ಗೆ ಕಾಡುವ ತಲೆನೋವನ್ನು ಹೀಗೆ ಗಾಯಬ್ ಮಾಡಿ
ತಲೆನೋವು ಬಂದ್ರೆ ವಿಪರೀತ ಹಿಂಸೆಯಾಗುತ್ತದೆ. ಅದ್ರಲ್ಲೂ ಬೆಳ್ಳಂಬೆಳಿಗ್ಗೆ ಕಾಡುವ ತಲೆನೋವನ್ನು ಸಹಿಸಿಕೊಳ್ಳುವುದು ಕಷ್ಟ. ಬೆಳಿಗ್ಗೆ ಬರುವ ತಲೆನೋವು ಸಂಜೆಯವರೆಗೆ ಕಾಡುತ್ತದೆ. ಇದ್ರಿಂದ ಪರಿಹಾರಬೇಕು ಎನ್ನುವವರು ಕೆಲ ಮನೆ ಮದ್ದನ್ನು ಬಳಸಬಹುದು.
ದಿನದ ಆರಂಭ ಚೆನ್ನಾಗಿರ್ಬೇಕು. ಬೆಳಿಗ್ಗೆ ಹಾಸಿಗೆಯಿಂದ ಏಳ್ತಿದ್ದಂತೆ ಮುಖದಲ್ಲಿ ನಗುವಿರಬೇಕು. ಮನಸ್ಸು ಶಾಂತವಾಗಿಬೇಕು. ಆದ್ರೆ ಅನೇಕರಿಗೆ ಬೆಳಿಗ್ಗೆ ಯಾಕಾದ್ರೂ ಆಗುತ್ತೋ ಎನ್ನುವ ಭಾವನೆ ಮೂಡುತ್ತೆ. ಯಾಕೆಂದ್ರೆ ಬೆಳಗ್ಗೆ ಎದ್ದಾಗ ತಲೆನೋವಿನ ಸಮಸ್ಯೆ ಅವರನ್ನು ಕಾಡುತ್ತದೆ. ನಿದ್ರೆಯಿಂದ ಎಚ್ಚರವಾಗ್ತಿದ್ದಂತೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅನೇಕ ಕಾರಣವಿದೆ. ಹಲವು ಬಾರಿ ಗ್ಯಾಸ್ ಸಮಸ್ಯೆಯಾಗಿದ್ದರೆ ಇಲ್ಲವೆ ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಮಲಗಿದ್ರೆ, ಸರಿಯಾಗಿ ನಿದ್ದೆ ಮಾಡದೆ ಹೋದ್ರೆ ತಲೆನೋವಿನ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಅನಾರೋಗ್ಯದಿಂದ ಕೂಡ ತಲೆ ನೋವು ಕಾಡುತ್ತದೆ. ಅನೇಕ ಬಾರಿ ಈ ತಲೆನೋವು ತುಂಬಾ ಹೆಚ್ಚಾಗಿರುತ್ತದೆ. ತಲೆ ನೋವು ಎದ್ದ ನಂತ್ರ ಕಡಿಮೆಯಾಗುವುದಿಲ್ಲ. ದಿನವಿಡಿ ಈ ತಲೆನೋವು ಕಾಡುತ್ತದೆ. ಇದ್ರಿಂದ ಕಚೇರಿ, ಕಾಲೇಜು ಅಥವಾ ಹೊರಗೆ ಹೋಗಲು ಕಿರಿಕಿರಿಯಾಗುತ್ತದೆ. ಯಾವುದೇ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ. ತಲೆನೋವು ಬರ್ತಿದ್ದಂತೆ ಕೆಲವರು ತಲೆನೋವಿನ ಮಾತ್ರೆಯನ್ನು ಸೇವನೆ ಮಾಡ್ತಾರೆ. ತಲೆನೋವಿನ ಮಾತ್ರೆ ಆ ಕ್ಷಣದಲ್ಲಿ ನೋವು ಕಡಿಮೆ ಮಾಡುತ್ತದೆ. ಆದ್ರೆ ಪದೇ ಪದೇ ಅದನ್ನು ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕಾಡುವ ತಲೆನೋವನ್ನು ಹೇಗೆ ಕಡಿಮೆ ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಬೆಳಿಗ್ಗೆ ಎದ್ದ ತಕ್ಷಣ ತಲೆನೋವು (Headache) ಬರಲು ರಕ್ತದಲ್ಲಿ ಸಕ್ಕರೆ (Sugar ) ಪ್ರಮಾಣ ಹೆಚ್ಚಾಗುವುದ್ರಿಂದ, ನಿರ್ಜಲೀಕರಣ (Dehydration) ದಿಂದ,ರಕ್ತದ ಕೊರತೆಯಿಂದಲೂ ಈ ಸಮಸ್ಯೆ ಕಾಡುತ್ತದೆ.
ಮುಂಜಾನ ಎದ್ದಾಗ ಕಾಡುವ ತಲೆನೋವಿಗೆ ಮನೆ ಮದ್ದು :
ನಿಂಬೆ ರಸ (Lemon Juice ) ದ ಜೊತೆ ಜೇನುತುಪ್ಪ (Honey) : ಹ್ಯಾಂಗೊವರ್ ಕಡಿಮೆ ಮಾಡಲು ಜನರು ಬೆಳಿಗ್ಗೆ ಎದ್ದ ತಕ್ಷಣ ನಿಂಬೆ ನೀರನ್ನು ಸೇವನೆ ಮಾಡ್ತಾರೆ. ಇದು ಆಯಾಸ ಮತ್ತು ತಲೆ ನೋವನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ತಲೆನೋವು ಬರುತ್ತೆ ಎನ್ನುವವರು ನಿಂಬೆ ರಸಕ್ಕೆ ನೀರು ಹಾಗೂ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದರಿಂದ ತಲೆನೋವು ಕಡಿಮೆಯಾಗುವ ಜೊತೆಗೆ ಹಲವು ಪ್ರಯೋಜನವಿದೆ.
ಬಿಸಿ ನೀರಿನ ಸ್ನಾನ : ಬೆಳಿಗ್ಗೆ ಕಾಡುವ ತಲೆನೋವಿಗೆ ಬಿಸಿನೀರಿನ ಸ್ನಾನ ಕೂಡ ಪರಿಣಾಮಕಾರಿ. ಬಿಸಿ ನೀರು ಆಯಾಸವನ್ನು ಹೋಗಲಾಡಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಇದ್ರಿಂದ ತಲೆನೋವು ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: Interesting Fact: ಬೆಳ್ಳುಳ್ಳಿಯನ್ನು ಪಾದಗಳಡಿ ಇಡೋದ್ರಿಂದ ಏನಾಗುತ್ತೆ ಗೊತ್ತಾ?
ಹರ್ಬಲ್ ಟೀ ಸೇವನೆ : ತಲೆನೋವು ಬರ್ತಿದ್ದಂತೆ ಕೆಲವರು ಟೀ ಹಾಗೂ ಕಾಫಿ ಸೇವನೆ ಮಾಡ್ತಾರೆ. ಟೀ ಹಾಗೂ ಕಾಫಿಯಲ್ಲಿ ಕೆಫೇನ್ ಇರುವ ಕಾರಣ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ. ನೀವು ಕಾಫಿ, ಟೀ ಬದಲು ಗ್ರೀನ್ ಟೀ, ನಿಂಬೆ ಟೀ, ಪುದೀನ ಟೀ, ಶುಂಠಿ ಟೀ ಸೇರಿದಂತೆ ಗಿಡಮೂಲಿಕೆ ಟೀಗಳನ್ನು ಸೇವನೆ ಮಾಡಬಹುದು. ಇದ್ರಿಂದ ತಲೆನೋವು ಕಡಿಮೆಯಾಗುತ್ತದೆ.
ಯೋಗದಿಂದ ತಲೆನೋವು ಮಾಯ : ಬೆಳಿಗ್ಗೆ ಕಾಡುವ ತಲೆನೋವಿಗೆ ಯೋಗ ಮದ್ದು. ನೀವು ಪ್ರತಿನಿತ್ಯ ಯೋಗ ಹಾಗೂ ಧ್ಯಾನವನ್ನು ಮಾಡ್ಬೇಕು. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಧ್ಯಾನದಿಂದ ಮನಸ್ಸು ಶಾಂತವಾಗುವ ಜೊತೆಗೆ ಆಯಾಸ ಕಡಿಮೆಯಾಗುತ್ತದೆ. ನಿಯಮಿತವಾಗಿ ಧ್ಯಾನ ಮಾಡುವುದ್ರಿಂದ ತಲೆನೋವು ಕಡಿಮೆ ಮಾಡಬಹುದು.
ಇದನ್ನೂ ಓದಿ: Health Problems: ಒಂದು ಪೆಗ್ ತೆಗೆದುಕೊಳ್ತಿದ್ದಂತೆ ಓವರ್ ಡ್ರಂಕ್ ಅನುಭವವಾಗ್ತಿದ್ಯಾ?
ತಲೆ ಮಸಾಜ್ ಮಾಡಿ : ತಲೆ ನೋವಿನಿಂದ ಬಳಲುತ್ತಿರುವವರು ಬಿಸಿ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿಕೊಳ್ಳಬೇಕು. ಇದ್ರಿಂದ ರಕ್ತ ಸಂಚಾರ ಸರಿಯಾಗಿ ಆಗುವ ಜೊತೆಗೆ ಸ್ನಾಯುಗಳು ರಿಲ್ಯಾಕ್ಸ್ ಆಗ್ತವೆ. ತಲೆನೋವಿಗೆ ತಲೆ ಮಸಾಜ್ ಉತ್ತಮ ಹಾಗೂ ನೈಸರ್ಗಿಕ ಪರಿಹಾರವಾಗಿದೆ.