ಯಾವಾಗಲೂ ಸುಸ್ತು ಅನ್ನೋರಿಗೆ ಈ ಟಿಪ್ಸ್ ಹೇಳಿ ನೋಡಿ

ಕೆಲಸದ ಒತ್ತಡದಿಂದ ಆಯಾಸ ಅಥವಾ ಸುಸ್ತು ಆಗುವುದು ಕಾಮನ್. ಅನೇಕರು ಇದರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಕೆಲಸದ ನಡುವೆ ವಿಶ್ರಾಂತಿ ಕಡಿಮೆಯಾಗಿ, ದೇಹದ ಶಕ್ತಿ ಕುಂದಿದಾಗ ಆಯಾಸವಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೇಗೆ ಎಂಬ ಮಾಹಿತಿ ಇಲ್ಲಿದೆ.

Remedies for fatigue or tiredness causes and symptoms

ಜೀವನಶೈಲಿಯಲ್ಲಿ ಮಾಡುವ ತಪ್ಪುಗಳು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂದಿನ ಓಡುತ್ತಿರುವ ಜಗತ್ತು ಮನುಷ್ಯನ ಶಕ್ತಿ ಕಡಿಮೆ ಮಾಡಿ, ಆಯಾಸವನ್ನು ಹೆಚ್ಚು ಮಾಡಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಆಯಾಸದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಕೆಲವು ವೇಳೆ ಕೆಲಸ ಮಾಡದಿದ್ದರೂ ಆಯಾಸ ಉಂಟಾಗುತ್ತದೆ. ಇದಕ್ಕೆ ಕಾರಣ ವಿಟಮಿನ್ ಕೊರತೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಆಯಾಸ ಅಷ್ಟೇ ಅಲ್ಲ, ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಕಡಿಮೆ ಕ್ಯಾಲೋರಿಯ ಆಹಾರಗಳು, ತಂಪು ಪಾನೀಯ ಸೇವನೆಯು ಆಯಾಸಕ್ಕೆ ಕಾರಣವಾಗಬಹುದು. ಅದರಲ್ಲಿ ಮುಖ್ಯವಾಗಿ ಒತ್ತಡವು ಆಯಾಸಕ್ಕೆ ಕಾರಣವಾಗಿದೆ. ಇಂದಿನ ಅವಶ್ಯಕತೆಗಳನ್ನು ಪೂರೈಸಲು ಅನಿವಾರ್ಯವಾಗಿ ಹೆಚ್ಚು ಶ್ರಮ ಪಡಬೇಕಿದೆ. ಕೆಲಸದ ನಡುವೆ ವಿಶ್ರಾಂತಿ ಕಡಿಮೆಯಾಗಿ, ದೇಹದ ಶಕ್ತಿಯನ್ನು ಕುಂದುತ್ತದೆ. ಆದರೆ ಆಯಾಸದಿಂದ ಪಾರಾಗಲು ಇಲ್ಲಿವೆ ಸಲಹೆಗಳು.

ಪೌಷ್ಠಿಕಾಂಶ ಹೆಚ್ಚಿರುವ ಆಹಾರ ಸೇವಿಸಿ
ಆಯಾಸ ಕಡಿಮೆಯಾಗಲು ಪೌಷ್ಠಿಕಾಂಶ ಹೆಚ್ಚಿರುವ ಆಹಾರದ ಸೇವನೆ ಅತಿ ಮುಖ್ಯ. ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಜೀವಸತ್ವಗಳು (Vitamins)ಮತ್ತು ಖನಿಜಗಳ ಪೂರೈಕೆಯಾಗುತ್ತದೆ. ಹಾಗೂ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ. ನಿತ್ಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು (Cereals), ಪ್ರೋಟೀನ್ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಇವುಗಳಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಸಿಗಲಿದೆ. ವಯಸ್ಸು, ತೂಕ ಮತ್ತು ಚಟುವಟಿಕೆಗೆ ಸರಿಯಾಗಿ ಕ್ಯಾಲೊರಿ ಸೇವಿಸಿ. ಮುಖ್ಯವಾಗಿ ದಿನಕ್ಕೆ ಮೂರು ಹೊತ್ತು ಊಟ ಮಾಡಿ, ಸಾಕಷ್ಟು ನೀರು ಕುಡಿಯಿರಿ. ಸರಿಯಾದ ಪ್ರಮಾಣದ ನೀರನ್ನು ಕುಡಿಯದಿರುವುದು ಮೆದುಳಿನ ಕಾರ್ಯ, ಶಕ್ತಿಯ ಮಟ್ಟ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗಬೇಕು. ಇದು ಆಯಾಸವನ್ನು (fatigue) ತಡೆಯುತ್ತದೆ.

Women Health: ಸುಸ್ತು, ಆಯಾಸ ಎನ್ನೋ ಮಹಿಳೆಯರು ಇದನ್ನೋದಿ

ಮದ್ಯಪಾನ-ಧೂಮಪಾನ ನಿಲ್ಲಿಸಿ
ಆಯಾಸಕ್ಕೆ ಮದ್ಯಪಾನ ಹಾಗೂ ಧೂಮಪಾನವು ಕಾರಣವಾಗಿದೆ. ಆಲ್ಕೋಹಾಲ್  ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವ ಕಾರಣ, ರಾತ್ರಿಯಲ್ಲಿ ನಿದ್ರೆಗೆ ಸಮಸ್ಯೆ ಉಂಟು ಮಾಡುತ್ತದೆ. ಇದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಇನ್ನು ಧೂಮಪಾನವು (smoking) ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹೊಗೆಯಲ್ಲಿರುವ ಟಾಕ್ಸಿನ್ ಮತ್ತು ಟಾರ್ ಶ್ವಾಸಕೋಶದಲ್ಲಿ ಆಮ್ಲಜನಕದ (oxygen) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಆಯಾಸವನ್ನುಂಟು ಮಾಡುತ್ತದೆ. ಧೂಮಪಾನ ತ್ಯಜಿಸುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ. ಕಾಫಿಯು ಶಕ್ತಿಯ ಮಟ್ಟವನ್ನು ಹೆಚ್ಚಿಸುವ ತಾತ್ಕಾಲಿಕ ಮೆದುಳಿನ ಉತ್ತೇಜಕವಾಗಿ ಕಾರ್ಯನಿರ್ವಹಿಸಬಹುದು. ಆದರೆ ನಂತರದಲ್ಲಿ ತ್ವರಿತವಾಗಿ ಶಕ್ತಿಯ ಕುಸಿತಕ್ಕೆ ಕಾರಣವಾಗಬಹುದು.

ಆಯಾಸ ದೂರ ಮಾಡುತ್ತೆ ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣು (Strawberry) ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹಲವಾರು ಬಗೆಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಹುಳಿಮಿಶ್ರಿತ ಸಿಹಿ ಇರುವ ಸ್ಟ್ರಾಬೆರಿ ಹಣ್ಣುಗಳು ಆಂಟಿ  ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿವೆ. ಇದರಿಂದ ಆರೋಗ್ಯಕ್ಕೆ (health) ಅದ್ಭುತವಾದ ಪ್ರಯೋಜನಗಳು ಸಿಗಲಿವೆ. ಇದರಲ್ಲಿ ಆರೋಗ್ಯಕ್ಕೆ ಅವಶ್ಯವದ ಖನಿಜಗಳು ಮತ್ತು ವಿಟಮಿನ್ನುಗಳು ಉತ್ತಮ ಪ್ರಮಾಣದಲ್ಲಿವೆ. ಇವುಗಳಲ್ಲಿ ಸಿಗುವ ಪೌಷ್ಟಿಕ ಸತ್ವಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಸ್ಟ್ರಾಬೆರಿ ಹಣ್ಣುಗಳಿಂದ ಇಷ್ಟೆಲ್ಲಾ ಲಾಭಗಳು ದೇಹಕ್ಕೆ ಸಿಗಲಿವೆ. ಇದರಿಂದ ಆಯಾಸ ಅಷ್ಟೇ ಅಲ್ಲ, ಅನೇಕ ಸಮಸ್ಯೆಗಳು ದೂರಾಗಲಿವೆ.

Long Covid: ಬೆಂಬಿಡದ ಆಯಾಸ, ತಲೆನೋವು, ಕೊರೋನಾ ಕಾಟ ಇನ್ನೂ ಮುಗ್ದಿಲ್ಲ !

ನಟ್ಸ್ ಹಾಗೂ ಮೊಟ್ಟೆಗಳ ಸೇವನೆ
ನಟ್ಸ್ ಹಾಗೂ ಮೊಟ್ಟೆಗಳ ಸೇವನೆಯು ಆಯಾಸದಂತಹ ಸಮಸ್ಯೆಯನ್ನು ದೂರ ಮಾಡುತ್ತವೆ. ಆಯಾಸವೆನಿಸಿದಾಗ ನಟ್ಸ್ (nuts)  ಸೇವಿಸಬೇಕು. ಇವು ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಕಪ್  ನಟ್ಸ್ ಗಳು ಪ್ರೋಟೀನ್ಗಳು, ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಹೀಗಾಗಿ ಇವುಗಳ  ಸೇವನೆ  ಸ್ನಾಯುಗಳ  ಶಕ್ತಿ ವೃದ್ಧಿಗೆ ಸಹಾಯ ಮಾಡಿ, ಆಯಾಸವನ್ನು ದೂರ ಮಾಡುತ್ತದೆ. ಇನ್ನು ಮೊಟ್ಟೆಗಳು (eggs)ಉತ್ತಮ ಗುಣಮಟ್ಟದ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಮೊಟ್ಟೆಯ ಸೇವನೆಯಿಂದ ಶಕ್ತಿಯು ಹೆಚ್ಚುತ್ತದೆ. ಇದರಿಂದ ಆಯಾಸದಂತಹ ಸಮಸ್ಯೆ ಬರುವುದು ಕಡಿಮೆ.

Latest Videos
Follow Us:
Download App:
  • android
  • ios