ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ಫಿಟ್ ಮತ್ತು ಫೈನ್ ಆಗಿರೋದು ಹೇಗೆ?
ನಿಮ್ಮ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆ ಇನ್ನೂ ಮುಂದುವರಿದಿದ್ದರೆ, ಇದು ಬಹಳ ದೊಡ್ಡ ರೇಲಕ್ಸಾಷನ್ ಆಗಿದೆ. ನೋ ಡೌಟ್ ಮನೆಯಿಂದ ಕೆಲಸ ಮಾಡೋದ್ರಿಂದ ಆರಾಮವಾಗಿ ತಿನ್ನುವುದು ಮತ್ತು ಕುಡಿಯುವುದು ಮತ್ತು ಆಗಾಗ ರೆಸ್ಟ್ ಮಾಡೋ ಚಾನ್ಸ್ ಕೂಡ ಸಿಗುತ್ತೆ. ಆದರೆ ನೀವು ಫಿಟ್ ಆಗಿರಲು ಇದು ಸಹಾಯ ಮಡುತ್ತದೆಯೇ? ಇಲ್ಲಾ ಅಲ್ವಾ?
ವರ್ಕ್ ಫ್ರಮ್ ಹೋಮ್(Work from home) ಆರಾಮವಾಗಿರುತ್ತೆ ನಿಜಾ. ಆದರೆ, ಈ ಆಯ್ಕೆಯು ಜನರ ಫಿಟ್ನೆಸ್ ಅನ್ನು ಎಲ್ಲೋ ಹಾಳುಮಾಡುವ ಕೆಲಸ ಸಹ ಮಾಡುತ್ತಿದೆ ಎಂದು ನಿಮಗೆ ಅನ್ಸೋದಿಲ್ವಾ?. ಈ ಮೊದಲು ಆಫೀಸ್ ಹೋಗುವ ನೆಪದಲ್ಲಿ ಸ್ವಲ್ಪ ಎಕ್ಸರ್ಸೈಜ್ ಆಗುತ್ತಿತ್ತು ಈಗ ಅದು ನಿಂತಿದೆ. ಆದ್ದರಿಂದ ಮನೆಯಿಂದ ಕೆಲಸ ಮಾಡುವಾಗ ಫಿಟ್ ಆಗಿರಿಸಲು ಈ ಸಲಹೆಗಳನ್ನು ನೀವು ಫಾಲೋ ಮಾಡಿದ್ರೆ ಬೆಸ್ಟ್.
ಆರೋಗ್ಯಕರ ಆಹಾರ(Food) ಸೇವಿಸಿ:
ಮನೆಯಿಂದ ಕೆಲಸ ಮಾಡುವಾಗ, ದೈಹಿಕ ಚಟುವಟಿಕೆಯು ತುಂಬಾ ಕಡಿಮೆಯಾಗುತ್ತದೆ, ಆಗ ನಿಮ್ಮನ್ನು ನೀವು ಸದೃಢವಾಗಿಡಲು ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಮನೆಯಲ್ಲೆ ಇರೋದು ಆದ್ರೂ ಸಿಕ್ಕಿದ್ದನ್ನೆಲ್ಲಾ ತಿನ್ನೋ ಅಭ್ಯಾಸ ಮಾಡ್ಬೇಡಿ.
ನಿಮ್ಮ ಆಹಾರದಲ್ಲಿ ಕಡಿಮೆ ಕೊಬ್ಬಿನ ಆಹಾರ ಉತ್ಪನ್ನಗಳನ್ನು ಸೇರಿಸಿ. ಸಂಪೂರ್ಣ ಧಾನ್ಯಗಳು, ಹಾಲು, ಹಣ್ಣುಗಳು ಮತ್ತು ತರಕಾರಿಗಳು, ದ್ವಿದಳ ಧಾನ್ಯಗಳು, ಮೊಟ್ಟೆಗಳು ಎಲ್ಲಾ ರೀತಿಯಲ್ಲೂ ಆರೋಗ್ಯಕರ ಆಯ್ಕೆಗಳಾಗಿವೆ. ಫಾಸ್ಟ್ ಫುಡ್(Fast food) ಸೇವಿಸುವ ಬದಲು, ಆರೋಗ್ಯಕರ ಆಹಾರ ಸೇವಿಸಿ.
ಹೈಡ್ರೇಟ್(Hydrate) ಆಗಿರಿ
ಸ್ನಾಯುಗಳು ಮತ್ತು ಆಬ್ಸ್ ಅನ್ನು ಬೆಳೆಸುವುದು ಫಿಟ್ ಆಗಿರುವ ಸಂಕೇತವಲ್ಲ. ರೋಗಗಳಿಂದ ದೂರ ಉಳಿಯುವುದು, ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿ ಬದುಕುವುದು ನಿಜವಾದ ಫಿಟ್ ನೆಸ್ ನ ಲಕ್ಷಣವಾಗಿದೆ. ಆದುದರಿಂದ ಆಗಾಗ ನೀರನ್ನು ಕುಡಿಯಿರಿ. ಚಹಾ ಮತ್ತು ಕಾಫಿಯಿಂದ ದೂರವಿರಿ. ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಕೆಫಿನ್ ಇರುವ ಡ್ರಿಂಕ್ಸ್ ಗಳನ್ನು ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ.
ವ್ಯಾಯಾಮದ ಸಮಯವನ್ನು ನಿಗದಿಪಡಿಸಿ:
ನೀವು ಮನೆಯಿಂದ ಕೆಲಸ ಮಾಡುವ ಸಮಯದಲ್ಲಿ ಫಿಟ್ ಆಗಿರಲು ಬಯಸಿದರೆ ಅಥವಾ ಫಿಟ್ ನೆಸ್ ಅನ್ನು ಕಾಪಾಡಿಕೊಳ್ಳಲು ಬಯಸಿದರೆ, ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲಿಡಿ. ಎಕ್ಸರ್ಸೈಜ್ ಗೆ(Exercise) ಸಮಯವನ್ನು ಫಿಕ್ಸ್ ಮಾಡಿ, ಇದು ಖಂಡಿತಾ ಫಿಟ್ ಆಗಿರಲು ಸಹಾಯ ಮಾಡುತ್ತೆ. ಬೆಳಿಗ್ಗೆ ಅಥವಾ ಸಂಜೆ, ನಿಮಗೆ ಯಾವುದು ಸೂಕ್ತವೋ, ಆ ಸಮಯದಲ್ಲಿ ವ್ಯಾಯಾಮ ಮಾಡಿ.
ಮನೆಯಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿ:
ಆಫೀಸ್ ನಲ್ಲಿ ಸರಿಯಾದ ಸೀಟಿಂಗ್(Seating) ವ್ಯವಸ್ಥೆ ಇರುತ್ತದೆ, ಇದರಿಂದಾಗಿ ಬೆನ್ನು ನೋವಿನ ಸಮಸ್ಯೆ ಕಡಿಮೆ ಉಂಟಾಗುತ್ತೆ, ಆದ್ದರಿಂದ ಮನೆಯಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯನ್ನು ನೀವೇ ಮಾಡಲು ಪ್ರಯತ್ನಿಸಿ. ಹಾಸಿಗೆ ಅಥವಾ ಸೋಫಾದ ಮೇಲೆ ಕೆಲಸ ಮಾಡುವುದು ಸುಲಭ, ಆದರೆ ಭಂಗಿಯನ್ನು ಹಾಳುಮಾಡುವ ಸಾಧ್ಯತೆಯೂ ಹೆಚ್ಚಿದೆ.
ದಿನಚರಿಯನ್ನು ಹೊಂದಿಸಿ:
ಮನೆಯಿಂದ ಕೆಲಸ ಮಾಡುವಾಗ, ನೋಡಲು ಯಾರೂ ಬರುವುದಿಲ್ಲ ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ನಮ್ಮ ಪ್ರಕಾರ ಕೆಲಸ ಮಾಡಿ, ಹೆಚ್ಚಿನ ಜನರು ದಿನವನ್ನು ಮುಗಿಸುತ್ತಾರೆ ಮತ್ತು ಕೆಲವರು ರಾತ್ರಿವರೆಗೆ(Night) ಕೆಲಸ ಮಾಡಿ ಮುಗಿಸುತ್ತಾರೆ. ಇದು ಆರೋಗ್ಯಕ್ಕೆ ಹೆಚ್ಚಿನ ಪರಿಣಾಮ ಬೀರುತ್ತೆ.
ಯಾವುದೋ ಸಮಯಕ್ಕೆ ಕೆಲಸ ಮಾಡಿ ಮುಗಿಸೋದ್ರಿಂದ ಆಹಾರದ ಜೊತೆಗೆ, ನಿದ್ರೆಯ(Sleep) ಮೇಲೂ ಪರಿಣಾಮ ಬೀರುತ್ತೆ ಮತ್ತು ಇದು ಮರುದಿನದ ಕೆಲಸಕ್ಕೆ ಅಡ್ಡಿಯಾಗುತ್ತದೆ. ಇದು ಹೀಗೆಯೇ ಮುಂದುವರಿದರೆ, ದೇಹವು ಕೆಲವೇ ದಿನಗಳಲ್ಲಿ ದಣಿಯುತ್ತದೆ. ಆದ್ದರಿಂದ ವರ್ಕ್ ಫ್ರಮ್ ಹೋಮ್ ಇದ್ದರೂ ಸಹ, ಆಫೀಸ್ ನ ಅದೇ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿ.
ರೆಸ್ಟ್ ಪಡೆಯುವುದು ಸಹ ಮುಖ್ಯ:
ಕೆಲಸದ ನಡುವೆಯೂ ವಿರಾಮ ತೆಗೆದುಕೊಳ್ಳಿ. ನಿರಂತರವಾಗಿ ಕುಳಿತುಕೊಳ್ಳುವುದು ದೇಹ ಮತ್ತು ಮನಸ್ಸು ಎರಡಕ್ಕೂ ಸೂಕ್ತವಲ್ಲ. ಇದಲ್ಲದೆ, ಕೆಲಸ ಮುಗಿದ ನಂತರ, ಅಡುಗೆ, ಡಾನ್ಸ್(Dance) ಅಥವಾ ಇತರ ಯಾವುದೇ ಹವ್ಯಾಸವಾಗಿರಲಿ, ನೀವು ಇಷ್ಟಪಡುವ ವಿಷಯಗಳಿಗಾಗಿ ಸಮಯವನ್ನು ತೆಗೆದುಕೊಳ್ಳಿ. ಇದು ನಿಜವಾಗಿಯೂ ಒತ್ತಡವನ್ನು ನಿವಾರಿಸುತ್ತದೆ.