ಫಾಸ್ಟ್ ಫುಡ್ ತಿನ್ನೋದ ಬಿಟ್ಟರೆ ಸ್ಟ್ರೆಸ್ ಲೆವೆಲ್ಲೂ ಆಗುತ್ತೆ ಕಡಿಮೆ!
ಸಾಮಾನ್ಯವಾಗಿ ಮನುಷ್ಯರು ಒತ್ತಡಕ್ಕೆ ಒಳಗಾದರೆ, ನೀವು ಏನನ್ನು ತಿನ್ನುತ್ತೀರಿ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಫಾಸ್ಟ್ ಫುಡ್ನ ಹೆಚ್ಚುವರಿ ಸೇವನೆಗೆ ಕಾರಣವಾಗಬಹುದು, ಅಲ್ಲದೆ ಕ್ಯಾಲರಿ ಮತ್ತು ಕೊಬ್ಬು ಅಧಿಕ ಪ್ರಮಾಣದಲ್ಲಿಯೂ ದೇಹಕ್ಕೆ ಸೇರಬಹುದು. ನಿಯಮಿತವಾಗಿ ಅಧಿಕ ಕೊಬ್ಬಿನ ಆಹಾರಗಳನ್ನು ಸೇವಿಸುವ ಮೂಲಕ ಜೀರ್ಣಕಾರಿ ಸಮಸ್ಯೆಗಳು, ಬೊಜ್ಜು ಮತ್ತು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಟೈಪ್ 2 ಮಧುಮೇಹದಂತಹ ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚೆಚ್ಚು ಫಾಸ್ಟ್ ಫುಡ್ ತಿಂದರೂ ಸ್ಟ್ರೆಸ್ ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ ಅನ್ನುತ್ತೆ ಸ್ಟಡಿ.

ಫಾಸ್ಟ್ ಫುಡ್. ನೋಡಲು ಚೆಂದ, ತಿನ್ನಲು ಬಲು ರುಚಿ. ಮಾಡಲೂ ಸುಲಭ. ಆದರೆ, ಇದು ಆರೋಗ್ಯದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಕೇವಲ ಕೊಬ್ಬನ್ನು ಹೆಚ್ಚಿಸಿ, ಬಿಪಿ, ಶುಗರ್‌ನಂಥ ರೋಗಗಳಿಗೆ ಕಾರಣವಾಗುವುದು ಮಾತ್ರವಲ್ಲ, ಹೆಚ್ಚೆಚ್ಚು ಫಾಸ್ಟ್ ಫುಡ್ಸ್ ಮಾನಸಿಗ ಆರೋಗ್ಯದ ಮೇಲೂ ಪ್ರಭಾವ ಬೀರಿ, ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸುಮಾರು 18 ರಿಂದ 39 ವಯಸ್ಸಿನ 338 ಸ್ಥೂಲಕಾಯದ ಮಹಿಳೆಯರನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿತ್ತು. ಇವರಲ್ಲಿ 212 ಮಹಿಳೆಯರು ಆರೋಗ್ಯಕರ ಆಹಾರ ಸೇವನೆ ಮತ್ತು ಆಹಾರ ಸೇವಿಸುತ್ತಿದ್ದರು. ಅಧ್ಯಯನದಲ್ಲಿ ಪಾಲ್ಗೊಂಡ ಅನೇಕ ಮಹಿಳೆಯರಿಗೆ ತಾಳ್ಮೆ ಕಳದುಕೊಳ್ಳುವುದು, ತಲೆ ಮತ್ತು ಕುತ್ತಿಗೆ ನೋವು ಮತ್ತು ನಿದ್ರಾ ಹೀನತೆ ಒತ್ತಡದ ಚಿಹ್ನೆಗಳು ಎಂದು ತಿಳಿದಿರಲಿಲ್ಲ, ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಮುಖ್ಯ ಲೇಖಕ ಮೇಯ್-ವೀ ಚಾಂಗ್ ಹೇಳಿದ್ದಾರೆ.

16 ವಾರಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸ್ಪರ್ಧಿಗಳು ಗ್ರಹಿಸಿದ ಒತ್ತಡವನ್ನು ಕಡಿಮೆಗೊಳಿಸಿದಾಗ, ಅವರ ಅಧಿಕ ಕೊಬ್ಬು ಮತ್ತು ಫಾಸ್ಟ್ ಫುಡ್‌ಗಳ ಸೇವನೆಯೂ ಕ್ರಮೇಣ ಕಡಿಮೆಯಾಯಿತು. "ಈ ಮಹಿಳೆಯರು ಆರೋಗ್ಯಕರವಾಗಿ ತಿನ್ನಬೇಕೆಂದು ಬಯಸುವುದಿಲ್ಲ ಎಂದಲ್ಲ. ಆದರೆ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂಬುದೇ ಗೊತ್ತಿಲ್ಲದಿದ್ದರೆ, ಆಗ ತುಂಬಾ ಒತ್ತಡಕ್ಕೆ ಒಳಗಾದಾಗ, ತಿನ್ನುವ ಆಹಾರದ ಮೇಲೆ ಕಾಳಜಿ ವಹಿಸುವುದಿಲ್ಲ. ಬೇಗ ಸಿಗುವಂಥದ್ದು, ಸಿಕ್ಕಿದನ್ನು ತಿನ್ನೋದು ಮಾಡುತ್ತಾರೆ. ಒಟ್ಟಿನಲ್ಲಿ ಫಾಸ್ಟ್ ಫುಡ್ ಹಾಗೂ ಒತ್ತಡ ಒಂದೇ ನಾಣ್ಯದ ಎರಡು ಮುಖಗಳು. ಅದರಿಂದ ಇದು, ಇದರಿಂದ ಅದು, ಎನ್ನಬಹುದು.

ಫಾಸ್ಟ್ ಫುಡ್ ಬಯಕೆಯನ್ನು ಹೇಗೆ ನಿಗ್ರಹಿಸುವುದು?
ಒತ್ತಡದಲ್ಲಿದ್ದಾಗ, ಸಕ್ಕರೆ ಮತ್ತು ಕೊಬ್ಬಿನ ಅಂಶವಿರುವ ಆಹಾರಗಳನ್ನು ಹುಡುಕಿದರೆ, ಇದರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು. ಒತ್ತಡ ನಿರ್ವಹಣೆ ಜೊತೆಗೆ ಫಾಸ್ಟ್ ಫುಡ್ಗಳ ಬಗ್ಗೆ ಬಯಕೆಯನ್ನು ನಿಯಂತ್ರಿಸಲು ಕೆಲವು ಸಲಹೆಗಳು ಇಲ್ಲಿವೆ.

ಊಟ, ತಿಂಡಿ ತೆಗೆದುಕೊಂಡು ಹೋಗುವುದರಿಂದ ಫಾಸ್ಟ್ ಫುಡ್ ಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಕೆಲಸದ ವಾರ ಪ್ರಾರಂಭವಾಗುವ ಒಂದು ದಿನ ಅಥವಾ ಭಾನುವಾರಗಳಂದು ವಾರದ ಊಟ, ಅಂದರೆ ಈ ವಾರ ಪೂರ್ತಿಯಾಗಿ ಏನು ಸೇವಿಸಬೇಕು ಎಂಬುದನ್ನು ಆಲೋಚಿಸಿ.

ದೇಹಕ್ಕೆ ಕೊಬ್ಬು ಬೇಕು, ಆದರೆ ಸರಿಯಾದುದನ್ನು ಆಯ್ಕೆ ಮಾಡಿ
ಎಲ್ಲಾ ಕೊಬ್ಬು ನಿಮ್ಮನ್ನು ದಪ್ಪಗಾಗಿಸುವುದಿಲ್ಲ. ಇದರಲ್ಲಿ ಹಲವಾರು ವಿಧಗಳಿವೆ. ಪರ್ಯಾಪ್ತ ಮತ್ತು ಟ್ರಾನ್ಸ್ ಕೊಬ್ಬುಗಳೆರಡೂ LDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು, ಇದನ್ನು 'ಕೆಟ್ಟ' ಕೊಲೆಸ್ಟರಾಲ್ ಎಂದು ಸಹ ಕರೆಯಲಾಗುತ್ತದೆ, ಇದು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು.

ಅಪರ್ಯಾಪ್ತ ಕೊಬ್ಬುಗಳು ಆರೋಗ್ಯಕರ ಕೊಬ್ಬುಗಳು, ಇದು ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಕೊಬ್ಬು ಆಲಿವ್ ಎಣ್ಣೆ, ಅವಕಾಡೋ, ಸಾಲ್ಮನ್, ಬೀಜಗಳಲ್ಲಿ ಕಂಡುಬರುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುವ ಜೊತೆಗೆ ಬಯಕೆಗಳನ್ನು ಕಡಿಮೆ ಮಾಡುತ್ತದೆ.

ಸಾಕಷ್ಟು ಪ್ರೋಟೀನ್ ಅನ್ನು ಸೇವಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ
ಪ್ರೋಟೀನ್ ಕಡಿಮೆ ಆಹಾರದಿಂದ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಪ್ರೋಟೀನ್ ಹಸಿವಿನ ಹಾರ್ಮೋನ್ ಘ್ರೇಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಪೆಪ್ಟೈಡ್ YY ಎಂಬ ಹಾರ್ಮೋನ್ ಅನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಹೊಟ್ಟೆ ತುಂಬಿದಾಗ ಫಾಸ್ಟ್ ಫುಡ್ ಹುಡುಕುವ ಸಾಧ್ಯತೆ ಕಡಿಮೆ. ಪ್ರೋಟೀನ್ ನ ಕೆಲವು ಆರೋಗ್ಯಕರ ಮೂಲಗಳೆಂದರೆ ತೆಳು ಮಾಂಸಗಳು, ಮೊಟ್ಟೆ, ಮೀನು, ಅವರೆಕಾಳು, ತರಕಾರಿ ಮತ್ತು ಬೀಜಗಳು.

ಊಟವನ್ನು ಇನ್ನಷ್ಟು ಕಲರ್ ಫುಲ್ ಮಾಡಿ
ದಿನಚರಿಗೆ ವಿವಿಧ ಆಹಾರಗಳನ್ನು ಸೇರಿಸಲು ಪ್ರಯತ್ನಿಸಿ ಏಕೆಂದರೆ ಆಹಾರ ಕ್ರಮವು ಹೆಚ್ಚು ವೈವಿಧ್ಯಮಯವಾದಷ್ಟೂ, ಬೇಸರಕ್ಕೆ ಬೀಳುವ ಮತ್ತು ಅನಾರೋಗ್ಯಕರ ಆಹಾರ ತಿನ್ನುವ ಅಪಾಯ ತಪ್ಪುತ್ತದೆ.

ಪ್ರತಿದಿನ ಸಲಾಡ್ ಸೇವಿಸಿ, ಅದನ್ನು ವಿವಿಧ ಸಾಮಾಗ್ರಿಗಳನ್ನು ಬಳಸಿ ತಯಾರಿಸಿ. ವಿವಿಧ ರೀತಿಯ ತರಕಾರಿಗಳನ್ನು ಸೇರಿಸಿ ಊಟವನ್ನು ಹೆಚ್ಚು ವರ್ಣರಂಜಿತವಾಗಿ ಮಾಡಿ. ವೈವಿಧ್ಯಮಯ ಆಹಾರ ಸೇವಿಸುವ ಮೂಲಕ ದೇಹಕ್ಕೆ ಲಾಭ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಬಹುದು.