ಮಲಬದ್ಧತೆ ಸಮಸ್ಯೆಯೇ? ಆಯುರ್ವೇದ ವೈದ್ಯರು ತಿಳಿಸಿದ ಈ ಟಿಪ್ಸ್ ಪಾಲಿಸಿ
Ayurveda Health Tips: ಮಲಬದ್ಧತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಇದರಿಂದ ಅನೇಕ ಜನರು ಆಗಾಗೆ ತೊಂದರೆಗೀಡಾಗುತ್ತಾರೆ. ನಿಮಗೂ ಈ ಸಮಸ್ಯೆ ಒಮ್ಮೆಯಾದರೂ ಕಂಡು ಬಂದಿರಬಹುದು ಅಲ್ವಾ? ಇನ್ನು ಕೆಲವು ಜನ ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ಎದುರಿಸುತ್ತಾರೆ. ಪ್ರಯಾಣದ ಸಮಯದಲ್ಲಿ ಸರಿಯಾದ ದೈಹಿಕ ಚಟುವಟಿಕೆಯ ಕೊರತೆ, ಸರಿಯಾದ ಸಮಯದಲ್ಲಿ ಸಾಕಷ್ಟು ಆಹಾರ ಮತ್ತು ನೀರನ್ನು ಪಡೆಯದಿರುವುದು, ಸಾಕಷ್ಟು ನಿದ್ರೆ ಸಿಗದಿರುವುದು ಮತ್ತು ಸ್ಥಳಗಳನ್ನು ಬದಲಾಯಿಸುವುದರಿಂದ ಜನರು ಮಲಬದ್ಧತೆ ಸಮಸ್ಯೆ ಎದುರಿಸುತ್ತಾರೆ.
ವೈದ್ಯಕೀಯ ಭಾಷೆಯಲ್ಲಿ, ಇದನ್ನು ಪ್ರಯಾಣದ ಮಲಬದ್ಧತೆ (travel constipation) ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಪ್ರವಾಸದ ಸಮಯದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು ಹೊಟ್ಟೆಯಲ್ಲಿ ಕೆಲಸಗಳನ್ನು ನಿಧಾನಗೊಳಿಸುತ್ತದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಈ ಸಮಸ್ಯೆ ಹೆಚ್ಚು ಎಂದು ನಂಬಲಾಗಿದೆ. ರಸ್ತೆ ಪ್ರಯಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಸುವ ಜನರು ಮಲಬದ್ಧತೆಯ ಸಮಸ್ಯೆಗಳನ್ನು ಸಹ ಹೊಂದಿರಬಹುದು.
ಮಲಬದ್ಧತೆಗೆ ಅನೇಕ ಔಷಧಿಗಳು(Medicine) ಮತ್ತು ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ ಆದರೆ ಕೆಲವು ಮನೆಮದ್ದುಗಳ ಮೂಲಕ ಮಲಬದ್ಧತೆಯಿಂದ ಪರಿಹಾರವನ್ನು ಸಹ ಪಡೆಯಬಹುದು. ಆಯುರ್ವೇದದಲ್ಲಿ ಮಲಬದ್ಧತೆಗೆ ಅನೇಕ ಪರಿಹಾರಗಳಿವೆ. ಅವುಗಳ ಬಗ್ಗೆ ನೀವು ತಿಳಿದುಕೊಂಡರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತೆ.
ಹೈಡ್ರೇಟೆಡ್ (Hydrate) ಆಗಿರಿ
ಮಲಬದ್ಧತೆಯಿಂದ ಪರಿಹಾರ ಸಿಗಬೇಕಾದ್ರೆ ನೀವು ಹೆಚ್ಚು ನೀರು ಕುಡಿಯಬೇಕಾಗಿಲ್ಲ, ಅಗತ್ಯವಿರುವಷ್ಟು ಕುಡಿಯಿರಿ. ನೀವು ಕನಿಷ್ಠ 5 ಲೋಟಗಳಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ (ನೀವು ತಂಪಾದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರೆ) ಮತ್ತು ನೀವು ಬೆಚ್ಚಗಿನ ಸ್ಥಳದಲ್ಲಿದ್ದರೆ 7-8 ಲೋಟಗಳು ಕುಡಿಯಬೇಕು.
ನಡೆಯುವುದು(Walking) ಕೂಡ ಅವಶ್ಯಕ
ಮಲಬದ್ಧತೆಯಂತಹ ಗಂಭೀರ ಸಮಸ್ಯೆಯನ್ನು ತೊಡೆದುಹಾಕಲು, ನೀವು ಪ್ರತಿದಿನ ಬೆಳಿಗ್ಗೆ ಕನಿಷ್ಠ 30 ನಿಮಿಷಗಳ ಲಘು ವ್ಯಾಯಾಮ ಮಾಡಬೇಕು. ಯೋಗ ಮತ್ತು ಪ್ರಾಣಾಯಾಮ ಮಾಡಬೇಕು. ಸಾಧ್ಯವಾದರೆ, ದಿನಕ್ಕೆ 5,000 ಸ್ಟೆಪ್ಸ್ ನಡೆಯಬೇಕು.
ಬೆಚ್ಚಗಿನ ನೀರನ್ನು ಸೇವಿಸಿ (ಗ್ರೀನ್ ಟೀ)
ಬೆಳಿಗ್ಗೆ ಮತ್ತು ಮಲಗುವಾಗ 1 ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಪ್ರತಿದಿನ ಮಲವಿಸರ್ಜನೆಯನ್ನು ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮುಂಜಾನೆಯನ್ನು ಬ್ರೆಡ್ ಅಥವಾ ಡೀಪ್ ಫ್ರೈ ತಿಂಡಿಗಳ ಬದಲಿಗೆ ಗ್ರೀನ್ ಟೀಯೊಂದಿಗೆ(Green tea) ಪ್ರಾರಂಭಿಸಿ.
ಆರೋಗ್ಯಕರ ಆಹಾರ ಸೇವಿಸಿ
ಬಾಳೆಹಣ್ಣುಗಳು, ಪಪ್ಪಾಯಿಗಳು ಮತ್ತು ಇತರ ನೀರಿನಂತಹ ಹಣ್ಣುಗಳು ಮಲಬದ್ಧತೆ ಸಮಸ್ಯೆಗೆ ಉತ್ತಮ ಪರಿಹಾರ. ಬೆಳಗಿನ ಉಪಾಹಾರಕ್ಕೆ ನೀವು ಮೈದಾ ತಿನ್ನಬೇಡಿ. ಮಧ್ಯಾಹ್ನದ ಊಟಕ್ಕೆ ರೊಟ್ಟಿ/ ಪರಾಟ, ಪಲ್ಯ, ಸಲಾಡ್(Salad) ಸೇವಿಸಿ. ಸಾಧ್ಯವಾದರೆ, ಮಧ್ಯಾಹ್ನದ ಊಟದೊಂದಿಗೆ ಮಜ್ಜಿಗೆ ಸೇವಿಸಿ. ರಾತ್ರಿ ಹೊತ್ತು ಕಡಿಮೆ ಆಹಾರ ಸೇವಿಸಿ.
ಜೀರ್ಣಕ್ರಿಯೆ ಮಾತ್ರೆ ನಿಮ್ಮ ಬಳಿ ಇರಲಿ
ಪುದೀನಾ, ನೆಲ್ಲಿಕಾಯಿ ಮಿಠಾಯಿ, ಹಜ್ಮೋಲಾ ಮತ್ತು ಹಿಂಗೆ ವಟಿ ಅತ್ಯುತ್ತಮ ಆಯುರ್ವೇದ ಜೀರ್ಣಕ್ರಿಯೆ ಮಾತ್ರೆಗಳಾಗಿವೆ. ನಿಮಗೆ ಉಬ್ಬಿದ/ಭಾರವಾದ ಅನುಭವವಾದಾಗಲೆಲ್ಲಾ, ಅದನ್ನು ತೆಗೆದುಕೊಳ್ಳಿ. ತುಪ್ಪವನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ ಮತ್ತು ಬೆಳಿಗ್ಗೆ ಅಥವಾ ರಾತ್ರಿಯಲ್ಲಿ ಬೆಚ್ಚಗಿನ ನೀರಿನೊಂದಿಗೆ ಒಂದು ಟೀ ಚಮಚ ತುಪ್ಪ(Ghee) ಸೇವಿಸಿ.