ಆ ಮಹಿಳೆ "ಚಂದ್ರ ಗ್ರಹಣದಂದು ಹೆರಿಗೆ ಬೇಡ" ಅಂದಿದ್ದಕ್ಕೆ ಡಾಕ್ಟರ್ ಕೊಟ್ಟ ಉತ್ತರ ಅಚ್ಚರಿಯಾಗಿತ್ತು!
ಇತ್ತೀಚೆಗೆ ಒಬ್ಬ ಮಹಿಳೆ ಡೆಲಿವರಿಗೆಂದು ಆಸ್ಪತ್ರೆಗೆ ಬಂದರು. ಆದರೆ ಚಂದ್ರಗ್ರಹಣದಿಂದಾಗಿ ಅವರು ಹೆರಿಗೆಯನ್ನು ಮಾಡಿಸಿಕೊಳ್ಳಲು ನಿರಾಕರಿಸಿದರು ಎಂದು ವೈದ್ಯರು ಹೇಳಿದ್ದಾರೆ.

ಗರ್ಭಾವಸ್ಥೆಯನ್ನು ಬಹಳ ಸೂಕ್ಷ್ಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಸುರಕ್ಷಿತವಾಗಿರಲು ಮಹಿಳೆಯರು ಸಣ್ಣದಿರಲಿ, ದೊಡ್ಡದಿರಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಚಂದ್ರಗ್ರಹಣದ ವಿಷಯಕ್ಕೆ ಬಂದಾಗ ಈ ಜಾಗರೂಕತೆಯು ಇನ್ನಷ್ಟು ಹೆಚ್ಚಾಗುತ್ತದೆ. ಗ್ರಹಣದ ಸಮಯದಲ್ಲಿ ಸೂತಕವು ಗರ್ಭಿಣಿಯರಿಗೆ ಒಳ್ಳೆಯದಲ್ಲ ಎಂಬುದು ಸಾಮಾನ್ಯ ನಂಬಿಕೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಏತನ್ಮಧ್ಯೆ ವರ್ಷದ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಅಂದರೆ ಇಂದು ನಡೆಯಲಿದೆ. ಇದನ್ನು 'ಬ್ಲಡ್ ಮೂನ್' ಎಂದೂ ಕರೆಯುತ್ತಾರೆ.
ಈ ಸಂದರ್ಭದಲ್ಲಿ ಡಾ. ಶೈಫಾಲಿ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಗರ್ಭಿಣಿಯರಿಗೆ ಪ್ರಮುಖ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಒಬ್ಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದರು. ಆದರೆ ಚಂದ್ರಗ್ರಹಣದಿಂದಾಗಿ ಅವರು ಹೆರಿಗೆಯನ್ನು ಮಾಡಿಸಿಕೊಳ್ಳಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ. ವೈದ್ಯರು ಸ್ಪಷ್ಟವಾಗಿ ಹೇಳುವಂತೆ ಇಂತಹ ನಿರ್ಧಾರಗಳು ಸರಿಯಲ್ಲ. ಏಕೆಂದರೆ ಹೆರಿಗೆ ಒಂದು ನೈಸರ್ಗಿಕ ಪ್ರಕ್ರಿಯೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಗ್ರಹಣಕ್ಕಾಗಿ ಕಾಯಲು ಸಾಧ್ಯವಿಲ್ಲ.
ವಿಡಿಯೋದಲ್ಲಿ ಡಾ. ಶೈಫಾಲಿ ಮಹಿಳೆಯೊಬ್ಬರಿಗೆ, "ವಾಣಿ, ನಿಮ್ಮ ಹೆರಿಗೆ ದಿನಾಂಕ ಸೆಪ್ಟೆಂಬರ್ 7. ಅದನ್ನು ಮುಂದೂಡಲು ಸಾಧ್ಯವಿಲ್ಲ. ನಾವು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸುತ್ತೇವೆ" ಎಂದು ಹೇಳಿದರು. ಇದಕ್ಕೆ ಮಹಿಳೆ ತಕ್ಷಣವೇ "ಇಲ್ಲ ಮೇಡಂ, ಸೆಪ್ಟೆಂಬರ್ 7 ರಂದು ಚಂದ್ರಗ್ರಹಣವಿದೆ. ಆ ದಿನ ಮನೆಯಿಂದ ಹೊರಗೆ ಕಾಲಿಡುವುದನ್ನು ಸಹ ನಿಷೇಧಿಸಲಾಗಿದೆ" ಎಂದು ಉತ್ತರಿಸಿದಳು.
"ಚಂದ್ರಗ್ರಹಣವಾಗಲಿ ಅಥವಾ ಸೂರ್ಯಗ್ರಹಣವಾಗಲಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಾರದು. ಸೆಪ್ಟೆಂಬರ್ 7 ರಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದೆ ಎಂದು ನನಗೂ ತಿಳಿದಿದೆ" ಎಂದು ವೈದ್ಯರು ಹೇಳುತ್ತಾರೆ.
ವೈದ್ಯರು ಹೇಳುವ ಪ್ರಕಾರ, ಚಂದ್ರಗ್ರಹಣದ ಸೂತಕ ಕಾಲವು ಮಧ್ಯರಾತ್ರಿ 12:58 ಕ್ಕೆ ಪ್ರಾರಂಭವಾಗುತ್ತದೆ. ಇದರ ನಂತರ ನೀವು ಗರ್ಭಿಣಿ ಮಹಿಳೆಗೆ ತಿನ್ನಲು ಅಥವಾ ಮಲಗಲು ಬಿಡುವುದಿಲ್ಲ. ಯಾವುದೇ ತೀಕ್ಷ್ಣವಾದ ಅಥವಾ ಅಪಾಯಕಾರಿ ವಸ್ತುಗಳನ್ನು ಬಳಸಲು ಬಿಡುವುದಿಲ್ಲ. ಗರ್ಭಿಣಿಯರು ಚಂದ್ರಗ್ರಹಣದ ಸಮಯದಲ್ಲಿ ಮೇಲೆ ತಿಳಿಸಿದ ಯಾವುದೇ ಕೆಲಸಗಳನ್ನು ಮಾಡಿದರೆ ಮಗುವಿನ ಏನೋ ಅಪಾಯ ಆಗಲಿದೆ ಎಂಬ ತಪ್ಪು ಕಲ್ಪನೆಯೂ ಜನರಲ್ಲಿದೆ ಎಂದು ತಿಳಿಸಿದ್ದಾರೆ.
ಆದರೆ ಈ ಅವಧಿಯಲ್ಲಿ ಗರ್ಭಿಣಿಯರು ಏನು ಬೇಕಾದರೂ ತಿನ್ನಬಹುದು ಮತ್ತು ಯಾವಾಗ ಬೇಕಾದರೂ ಮಲಗಬಹುದು ಎಂದು ಎಲ್ಲಾ ಗರ್ಭಿಣಿಯರಿಗೆ ಹೇಳಲು ಬಯಸುತ್ತೇನೆ ಎಂದು ತಜ್ಞರು ಹೇಳುತ್ತಾರೆ. ಗ್ರಹಣದ ಸಮಯದಲ್ಲಿ ತಿನ್ನುವುದು ಕುಡಿಯುವುದು ಮಾಡುವುದರಿಂದ ಮಗುವಿಗೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಗರ್ಭಿಣಿಯರು ಮಾಡಬೇಕಾದ ಮುಖ್ಯವಾದ ಕೆಲಸವೆಂದರೆ ರೆಸ್ಟ್. ಒಂದು ವೇಳೆ ಗ್ರಹಣದ ಸಮಯಕ್ಕೆ ನಿಮಗೆ ಡೇಟ್ ಕೊಟ್ಟಿದ್ದರೆ ಆ ಸಮಯದಲ್ಲಿ ನಿಮ್ಮ ಮಗು ತಿರುಗದಿದ್ದರೆ ಅಥವಾ ನೋವು ಕಾಣಿಸದಿದ್ದರೆ ನೀವು ಮತ್ತು ನಿಮ್ಮ ಮಗು ಇಬ್ಬರೂ ಆರೋಗ್ಯವಾಗಿರಲು ತಕ್ಷಣ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾರೆ ಡಾಕ್ಟರ್.