Lung Cancer: ಶ್ವಾಸಕೋಶ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸ್ಬೇಡಿ
Lung Cancer Early Signs: ಕ್ಯಾನ್ಸರ್ ಆರಂಭದಲ್ಲಿ ಅಷ್ಟಾಗಿ ತೊಂದರೆ ಕೊಡದಿದ್ದರೂ, ಒಳಗೊಳಗೇ ಆರೋಗ್ಯವನ್ನು ಹದಗೆಡಿಸುವ ಒಂದು ಮಾರಕ ಕಾಯಿಲೆ. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಕೇವಲ ಸಾಮಾನ್ಯ ಕೆಮ್ಮು ಅಥವಾ ಸುಸ್ತಿನಂತೆ ಕಂಡುಬರುವುದರಿಂದ ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ.

ಶ್ವಾಸಕೋಶದ ಕ್ಯಾನ್ಸರ್ ಶುರುವಾಗುವುದು ಹೇಗೆ?
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣ
ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೇ ಪ್ರಮುಖ ಕಾರಣ. ಸುಮಾರು 85% ಪ್ರಕರಣಗಳಿಗೆ ಇದೇ ಕಾರಣವಾಗುತ್ತೆ. ಹೆಚ್ಚಿನ ಜನರು ರೋಗದ ಆರಂಭಿಕ ಲಕ್ಷಣಗಳನ್ನು ಗಮನಿಸದೇ ಇರುವುದರಿಂದ ಸಮಸ್ಯೆ ಹೆಚ್ಚಾಗುತ್ತೆ. ಈ ಲಕ್ಷಣಗಳನ್ನು ಬೇಗ ಪತ್ತೆ ಮಾಡಿದರೆ, ಚಿಕಿತ್ಸೆ ಸುಲಭವಾಗುತ್ತೆ. ಶ್ವಾಸಕೋಶದ ಕ್ಯಾನ್ಸರ್‌ನ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ.
ಉಸಿರಾಟದ ತೊಂದರೆ ಅಥವಾ ಸುಸ್ತು, ಉಸಿರುಗಟ್ಟಿದಂತೆ ಆಗುವುದು
ತೋಳಿನ ಒಳಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ
ಭುಜ, ತೋಳಿನ ಮೇಲ್ಭಾಗ ಅಥವಾ ತೋಳಿನ ಒಳಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ, ಅದು 'ಪ್ಯಾನ್‌ಕೋಸ್ಟ್ ಟ್ಯೂಮರ್'ನ ಲಕ್ಷಣವಾಗಿರಬಹುದು. ಇದು ಶ್ವಾಸಕೋಶದ ತುದಿಯಲ್ಲಿ, ಕುತ್ತಿಗೆಯ ಹತ್ತಿರ ರೂಪುಗೊಳ್ಳುವ ಒಂದು ಅಪರೂಪದ ಕ್ಯಾನ್ಸರ್. ಈ ಗಡ್ಡೆಗಳು ಹತ್ತಿರದ ನರಗಳು ಮತ್ತು ಪಕ್ಕೆಲುಬುಗಳ ಮೇಲೆ ಒತ್ತಡ ಹಾಕಿ, ಸಂಧಿವಾತದಂತಹ ನೋವನ್ನು ಉಂಟುಮಾಡುತ್ತವೆ.
ಧ್ವನಿಯಲ್ಲಿ ಬದಲಾವಣೆ
ಧ್ವನಿಯಲ್ಲಿ ಬದಲಾವಣೆ ಆಗುವುದು ಮತ್ತೊಂದು ಲಕ್ಷಣ. ಇದರಿಂದ ಧ್ವನಿ ಒಡಕು, ಗಡಸಾಗಬಹುದು. ಇದು ಗಂಟಲು ನೋವಿಗಿಂತ (laryngitis) ಭಿನ್ನ. ಯಾಕಂದ್ರೆ ಇದರಲ್ಲಿ ಗಂಟಲು ಊದಿಕೊಳ್ಳುವುದು, ನುಂಗಲು ಕಷ್ಟ ಅಥವಾ ಕಿವಿನೋವು ಇರುವುದಿಲ್ಲ. ಧ್ವನಿ ಬದಲಾವಣೆ ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಧೂಮಪಾನ ಮಾಡದವರಲ್ಲಿ ಉಸಿರಾಟದ ತೊಂದರೆ ಅಥವಾ ಅಸ್ತಮಾ ಹೆಚ್ಚಾಗುವುದೂ ಕೂಡ ಇದರ ಲಕ್ಷಣವೇ.
ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಶ್ವಾಸಕೋಶದ ಸೋಂಕು
ವಯಸ್ಕರಲ್ಲಿ ಪದೇ ಪದೇ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಶ್ವಾಸಕೋಶದ ಸೋಂಕುಗಳು ಕಾಣಿಸಿಕೊಂಡರೆ ಅದನ್ನು ಎಂದಿಗೂ ನಿರ್ಲಕ್ಷಿಸಬಾರದು. ಇದು ಕೂಡ ಒಂದು ಎಚ್ಚರಿಕೆಯ ಗಂಟೆ.
ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಾಕರಿಕೆ, ಗೊಂದಲ
3-4 ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಕೆಮ್ಮು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

