- Home
- Life
- Health
- ಹಿರಿಯರು ಬೆಳ್ಳಂಬೆಳಗ್ಗೆ ಜಿಲೇಬಿ-ಹಾಲು ಸೇವಿಸುತ್ತಿದ್ದದ್ದು ಏಕೆ ಗೊತ್ತಾ? ಇದರ ಹಿಂದಿದೆ ಈ ಆರೋಗ್ಯ ರಹಸ್ಯ
ಹಿರಿಯರು ಬೆಳ್ಳಂಬೆಳಗ್ಗೆ ಜಿಲೇಬಿ-ಹಾಲು ಸೇವಿಸುತ್ತಿದ್ದದ್ದು ಏಕೆ ಗೊತ್ತಾ? ಇದರ ಹಿಂದಿದೆ ಈ ಆರೋಗ್ಯ ರಹಸ್ಯ
Milk and jalebi early morning: ಬಿಸಿಬಿಸಿ ಜಿಲೇಬಿ ಮತ್ತು ಹಾಲು ತಿಂದರೆ ಯಾವ ಪ್ರಯೋಜನವಿದೆ? ಹಿರಿಯರ ಕಾಲದ ಈ ಮನೆಮದ್ದಿನ ಹಿಂದಿರೋ ಅಸಲಿ ಸತ್ಯ ಮತ್ತು ಸೇವಿಸುವ ಸರಿಯಾದ ವಿಧಾನ ಇಲ್ಲಿದೆ ನೋಡಿ...
ತೀವ್ರ ತಲೆನೋವಿಗೆ 'ಜಿಲೇಬಿ-ಹಾಲು' ರಾಮಬಾಣ
ತೀವ್ರ ತಲೆನೋವಿಗೆ 'ಜಿಲೇಬಿ-ಹಾಲು' ರಾಮಬಾಣ
ಮೈಗ್ರೇನ್ ಅಥವಾ ಅರ್ಧ ತಲೆನೋವಿನಿಂದ ನರಳುತ್ತಿರುವವರಿಗೆ ನಮ್ಮ ಹಿರಿಯರ ಕಾಲದಿಂದಲೂ ಬಂದಿರುವ ಅದ್ಭುತ ಮನೆಮದ್ದು ಎಂದರೆ ಬಿಸಿಬಿಸಿಯಾದ ಜಿಲೇಬಿಯನ್ನು ಹಾಲಿನೊಂದಿಗೆ ಸೇವಿಸುವುದು. ಇದು ತಲೆನೋವಿಗೆ ತ್ವರಿತ ಶಮನ ನೀಡುತ್ತದೆ.
ಇದು ತಲೆನೋವನ್ನು ಹೇಗೆ ಕಡಿಮೆ ಮಾಡುತ್ತದೆ?
ಇದು ತಲೆನೋವನ್ನು ಹೇಗೆ ಕಡಿಮೆ ಮಾಡುತ್ತದೆ?
ಮೈಗ್ರೇನ್ ಬರಲು ರಕ್ತದಲ್ಲಿ ಸಕ್ಕರೆ ಅಂಶ ಕುಸಿಯುವುದು ಅಥವಾ ನರಗಳ ಒತ್ತಡವೂ ಮುಖ್ಯ ಕಾರಣ. ಜಿಲೇಬಿಯಲ್ಲಿರುವ ಸಿಹಿ (ಕಾರ್ಬೋಹೈಡ್ರೇಟ್ಸ್) ರಕ್ತದಲ್ಲಿ 'ಸೆರೊಟೋನಿನ್' ಹಾರ್ಮೋನ್ ಹೆಚ್ಚಿಸುತ್ತದೆ. ಹಾಲು ನರಗಳನ್ನು ಶಾಂತಗೊಳಿಸಿ ಒತ್ತಡ ಕಡಿಮೆ ಮಾಡುತ್ತದೆ.
ಸೇವಿಸುವ ಸರಿಯಾದ ವಿಧಾನ ಹೀಗಿರಲಿ
ಸೇವಿಸುವ ಸರಿಯಾದ ವಿಧಾನ ಹೀಗಿರಲಿ
ಬೆಚ್ಚಗಿನ ಹಸುವಿನ ಹಾಲಿಗೆ ಹೊಸದಾಗಿ ತಯಾರಿಸಿದ ಬಿಸಿಬಿಸಿ ಜಿಲೇಬಿಯನ್ನು ಹಾಕಿ -3 ನಿಮಿಷ ನೆನೆಯಲು ಬಿಡಿ. ಜಿಲೇಬಿ ಮೃದುವಾದ ನಂತರ ಹಾಲಿನೊಂದಿಗೆ ನಿಧಾನವಾಗಿ ಅಗಿದು ಸೇವಿಸಿ.
ಸೇವಿಸಲು ಅತ್ಯಂತ ಸೂಕ್ತ ಸಮಯ ಯಾವುದು?
ಸೇವಿಸಲು ಅತ್ಯಂತ ಸೂಕ್ತ ಸಮಯ ಯಾವುದು?
ಆಯುರ್ವೇದದ ಪ್ರಕಾರ, ಈ ಮನೆಮದ್ದನ್ನು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಪರಿಣಾಮಕಾರಿ. ತಲೆನೋವು ಆರಂಭವಾಗುವ ಲಕ್ಷಣ ಕಂಡ ತಕ್ಷಣವೇ ಇದನ್ನು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಯಾರಿಗೆ ಇದು ಸೂಕ್ತವಲ್ಲ? (ಮುನ್ನೆಚ್ಚರಿಕೆ)
ಯಾರಿಗೆ ಇದು ಸೂಕ್ತವಲ್ಲ? (ಮುನ್ನೆಚ್ಚರಿಕೆ)
ಜಿಲೇಬಿಯಲ್ಲಿ ಸಿಹಿ ಮತ್ತು ಕ್ಯಾಲೊರಿ ಹೆಚ್ಚಿರುವುದರಿಂದ ಮಧುಮೇಹ (Diabetes) ಇರುವವರು ಈ ವಿಧಾನವನ್ನು ಬಳಸಬಾರದು. ಕೇವಲ ತುರ್ತು ಪರಿಹಾರವಾಗಿ ಸಾಮಾನ್ಯ ಜನರು ಇದನ್ನು ಬಳಸಬಹುದು, ತಲೆನೋವು ನಿರಂತರವಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
