Kannada

ಡಾರ್ಕ್ ಚಾಕೊಲೇಟ್‌ನ 6 ಅದ್ಭುತ ಪ್ರಯೋಜನಗಳು

ಡಾರ್ಕ್ ಚಾಕೊಲೇಟ್ ಕೇವಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲ, ಇದು ನಮ್ಮ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದರ 6 ಅದ್ಭುತ ಪ್ರಯೋಜನಗಳನ್ನು ತಿಳಿಯೋಣ.

Kannada

ಹೃದಯ ಮತ್ತು ಮೆದುಳಿಗೆ ಒಳ್ಳೆಯದು

ಹೆಚ್ಚಿನ ಪ್ರಮಾಣದ ಕೊಕೊ ಹೊಂದಿರುವ ಡಾರ್ಕ್ ಚಾಕೊಲೇಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಖನಿಜಗಳು ಹೇರಳವಾಗಿವೆ. ಇವು ಹೃದಯ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ.

Image credits: Getty
Kannada

ರಕ್ತ ಪರಿಚಲನೆ ಸುಧಾರಿಸುತ್ತೆ

ಇದರಲ್ಲಿರುವ ಕೊಕೊ ಫ್ಲಾವನಾಲ್‌ಗಳು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತೆ

ಡಾರ್ಕ್ ಚಾಕೊಲೇಟ್‌ನಲ್ಲಿ ಪಾಲಿಫಿನಾಲ್‌ಗಳಂತಹ ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

Image credits: Getty
Kannada

ನೆನಪಿನ ಶಕ್ತಿ ಹೆಚ್ಚಿಸುತ್ತೆ

ಹೆಚ್ಚು ಕೊಕೊ ಇರುವ ಚಾಕೊಲೇಟ್ ತಿನ್ನುವುದರಿಂದ ಮೆದುಳಿಗೆ ರಕ್ತದ ಹರಿವು ಸುಧಾರಿಸುತ್ತದೆ. ಇದರಿಂದ ಆಲೋಚನಾ ಶಕ್ತಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ.

Image credits: Getty
Kannada

ಮಾನಸಿಕ ಒತ್ತಡ ನಿವಾರಣೆ

ಡಾರ್ಕ್ ಚಾಕೊಲೇಟ್ ಎಂಡಾರ್ಫಿನ್ ಮತ್ತು ಸಿರೊಟೋನಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡಿ, ನಿಮ್ಮ ಮೂಡ್ ಅನ್ನು ಉತ್ತಮಗೊಳಿಸುತ್ತದೆ.

Image credits: Getty
Kannada

ದಿನಕ್ಕೆ ಎಷ್ಟು ತಿನ್ನಬೇಕು?

ಪ್ರತಿದಿನ 10 ರಿಂದ 30 ಗ್ರಾಂ (ಸುಮಾರು 1 ರಿಂದ 3 ಸಣ್ಣ ತುಂಡುಗಳು) ಡಾರ್ಕ್ ಚಾಕೊಲೇಟ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Image credits: Getty

ಪ್ರತಿದಿನ ಎಳ್ಳು ತಿನ್ನಿ, ಆರೋಗ್ಯದಲ್ಲಿ ಭಾರೀ ಮ್ಯಾಜಿಕ್ ನೋಡಿ!

Coconut Milk: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಬೇಕಾ? ತೆಂಗಿನ ಹಾಲಿನ ಈ ಟ್ರಿಕ್ ಬಳಸಿ!

ರಕ್ತಸಂಚಾರ ಹೆಚ್ಚಿಸಲು ನೀವು ಈ ಆಹಾರಗಳನ್ನು ತಪ್ಪದೇ ತಿನ್ನಬೇಕು!

ಸಕ್ಕರೆ ತಿನ್ನುವ ಬಯಕೆ ಕಡಿಮೆ ಮಾಡಲು ಈ 7 ಫುಡ್ಸ್ ಬಳಸಿ