Health Tips : ಬೆನ್ನಿನ ಕೊಬ್ಬು ಕರಗ್ಬೇಕೆಂದ್ರೆ ದಿನನಿತ್ಯ ಮಾಡಿ ಈ ಆಸನ
ಇಡೀ ದೇಹ ಆರೋಗ್ಯವಾಗಿರಬೇಕು. ಒಂದು ಕಡೆ ಅತಿಯಾಗಿ ಕೊಬ್ಬಿದ್ದರೆ ಅದು ಅನಾರೋಗ್ಯದ ಜೊತೆ ದೇಹದ ಸೌಂದರ್ಯ ಹಾಳು ಮಾಡ್ತದೆ. ಪ್ರತಿ ನಿತ್ಯ ಯೋಗ ಮಾಡುವುದ್ರಿಂದ ಆರೋಗ್ಯದ ಜೊತೆ ದೇಹಕ್ಕೊಂದು ಸುಂದರ ಆಕಾರ ಬರುತ್ತದೆ.
ಕೊಬ್ಬು (Fat) ಹೆಚ್ಚಾಗ್ತಿದ್ದಂತೆ ಅದನ್ನು ಕರಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತದೆ. ಹೊಟ್ಟೆ (Stomach) ಯ ಕೊಬ್ಬು, ತೋಳುಗಳಲ್ಲಿರುವ ಹೆಚ್ಚುವರಿ ಕೊಬ್ಬು ಇತ್ಯಾದಿಗಳನ್ನು ಕಡಿಮೆ ಮಾಡಲು ಜನರು ವ್ಯಾಯಾಮ, ಯೋಗ ಇತ್ಯಾದಿಗಳನ್ನು ಆಶ್ರಯಿಸುತ್ತಾರೆ. ಆದರೆ ದೇಹದ ಇನ್ನೊಂದು ಭಾಗ, ಬೆನ್ನಿನ ಭಾಗದಲ್ಲಿರುವ ಕೊಬ್ಬನ್ನು ಕರಗಿಸುವುದು ಕಷ್ಟ. ತೋಳಿನ, ಕಾಲಿನ, ಎರಡು ಗಲ್ಲದ ಅಥವಾ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಬಹುದು. ಆದರೆ ಹಿಂಭಾಗದ ಕೊಬ್ಬು ಕರಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಿಂಭಾಗದ ಕೊಬ್ಬನ್ನು ಕಡಿಮೆ ಮಾಡಲು ಹೆಚ್ಚು ಕಷ್ಟಕರವಾಗುತ್ತದೆ. ಯೋಗದ ಸಹಾಯದಿಂದ ನೀವು ಬೆನ್ನಿನ ಮೇಲೆ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕಬಹುದು. ಕೆಲವು ಸುಲಭವಾದ ಯೋಗಾಸನಗಳ ಮೂಲಕ ನೀವು ದೇಹವನ್ನು ಆಕಾರಕ್ಕೆ ತರಬಹುದು. ಈ ಯೋಗಾಸನ (Yogasana) ಗಳಿಗೆ ನೀವು ಕೇವಲ ಐದು ನಿಮಿಷಗಳ ನಿಯಮಿತ ಸಮಯವನ್ನು ನೀಡಬೇಕಾಗುತ್ತದೆ. ಹಿಂಭಾಗದ ಕೊಬ್ಬನ್ನು ಕಡಿಮೆ ಮಾಡುವ ಯೋಗಾಸನಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.
ಧನುರಾಸನ : ಧನುರಾಸನ ಮಾಡಲು ಮೊದಲು ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಅಂಗೈಗಳಿಂದ ಹಿಮ್ಮಡಿಯ ಗಂಟನ್ನು ಹಿಡಿದುಕೊಳ್ಳಿ. ನಂತರ ಎರಡೂ ಕಾಲುಗಳನ್ನು ಮತ್ತು ತೋಳುಗಳನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ. ದೃಷ್ಟಿ ನೇರವಾಗಿರಲಿ. ಸ್ವಲ್ಪ ಸಮಯದವರೆಗೆ ಈ ಸ್ಥಿತಿಯಲ್ಲಿರಿ. ನಂತರ ಹಳೆಯ ಸ್ಥಿತಿಗೆ ಹಿಂತಿರುಗಿ. ಇದು ಬೆನ್ನಿನ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.
ಒಳ್ಳೇದು ಅಂತ ನೀರನ್ನು ಬೇಕಾಬಿಟ್ಟಿ ಕುಡಿದರೆ ಅನಾರೋಗ್ಯ ಕಾಡಬಹುದು!
ಪಾದಹಸ್ತಾಸನ : ಪಾದಹಸ್ತಾಸನವನ್ನು ಮಾಡಲು ನೀವು ನಿಮ್ಮ ಪಾದಗಳ ಮೇಲೆ ನೇರವಾಗಿ ನಿಲ್ಲಬೇಕು. ಉಸಿರನ್ನು ಎಳೆದುಕೊಳ್ತಾ ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ನಂತ್ರ ಉಸಿರನ್ನು ಬಿಡ್ತಾ, ಕೈಗಳನ್ನು ಮುಂದೆ ಚಾಚುತ್ತಾ ಕೆಳಗೆ ಬಾಗಿ. ನಿಮ್ಮ ಹಸ್ತವನ್ನು ಕಾಲಿನ ಪಾದಗಳ ಕೆಳಕ್ಕೆ ಇಡಿ. ಹಣೆಯನ್ನು ಮೊಳಕಾಲಿಗೆ ತಾಗಿಸುವ ಪ್ರಯತ್ನ ನಡೆಸಿ.
ಮರ್ಕಟಾಸನ : ಈ ಆಸನವನ್ನು ಮಾಡಲು ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ. ಎರಡೂ ಕೈಗಳನ್ನು ಸೊಂಟದ ಕೆಳಗೆ ಇರಿಸಿ. ಎರಡೂ ಕಾಲುಗಳನ್ನು ಜೋಡಿಸುವ ಮೂಲಕ ಮೊಣಕಾಲುಗಳನ್ನು ಬಾಗಿಸಿ. ಕೈಗಳನ್ನು ಕುತ್ತಿಗೆ ಮೇಲ್ಭಾಗಕ್ಕೆ ತೆಗೆದುಕೊಂಡು ಹೋಗಿ. ಇಡೀ ದೇಹವನ್ನು ಕೈ ಸಹಾಯದಿಂದ ಮೇಲಕ್ಕೆ ಎತ್ತಿ. ಸೊಂಟವನ್ನು ಮೇಲಕ್ಕೆ ಎತ್ತಬೇಕು. ಕಾಲುಗಳನ್ನು ನಿಧಾನವಾಗಿ ನೇರ ಮಾಡಿ. ಈ ಆಸನವನ್ನು ಆರಂಭದಲ್ಲಿ 10 ರಿಂದ 20 ಸೆಕೆಂಡುಗಳವರೆಗೆ ಮಾಡಿ ನಂತ್ರ ಸಮಯವನ್ನು ಹೆಚ್ಚಿಸಬೇಕು.
‘ವಿಫಲವಾದ’ ಕಿಡ್ನಿ, ಮರು ಪರೀಕ್ಷೆಯಲ್ಲಿ ನಾರ್ಮಲ್ !
ಏಕ ಪಾದ ರಾಜಕಪೋತಾಸನ : ಮೊದಲು ನೆಲದ ಮೇಲೆ ಕುಳಿತುಕೊಳ್ಳಿ. ಮೊಣಕಾಲುಗಳು, ಸೊಂಟ ಮತ್ತು ಎರಡೂ ಕೈಗಳನ್ನು ಭುಜದ ರೇಖೆಗಿಂತ ಸ್ವಲ್ಪ ಮುಂದಕ್ಕೆ ಇರಿಸಿ. ನಂತರ ಎಡಗಾಲನ್ನು ಮೇಲಕ್ಕೆತ್ತಿ ಅದನ್ನು ಹಿಂದಕ್ಕೆ ಸರಿಸಿ, ಹಾಗೆಯೇ ಎಡಗಾಲನ್ನು ಹಿಂದಿನಿಂದ ನೇರಗೊಳಿಸಿ. ಈಗ ಎಡ ಮೊಣಕಾಲನ್ನು ಬಗ್ಗಿಸುವಾಗ ಎರಡೂ ಪಾದಗಳ ಮೇಲೆ ನಿಮ್ಮ ತೂಕವನ್ನು ಸಮತೋಲನಗೊಳಿಸಿ. ಆಳವಾದ ಉಸಿರನ್ನು ತೆಗೆದುಕೊಂಡು ನೇರವಾದ ತೋಳನ್ನು ಮೇಲಕ್ಕೆ ತೆಗೆದುಕೊಂಡು, ಮೊಣಕೈಯನ್ನು ಬಗ್ಗಿಸಿ ಮತ್ತು ಎಡಗಾಲನ್ನು ಹಿಡಿದುಕೊಳ್ಳಿ. ನಂತರ ಅದೇ ರೀತಿ ಎಡಗೈಯಿಂದ ಕಾಲನ್ನು ಹಿಡಿದು ಎದೆಯನ್ನು ಮೇಲಕ್ಕೆತ್ತಿ ಕುತ್ತಿಗೆಯನ್ನು ಹಿಂದಕ್ಕೆ ಬಗ್ಗಿಸಲು ಪ್ರಯತ್ನಿಸಿ. ಸಾಮಾನ್ಯವಾಗಿ ಉಸಿರಾಡುವಾಗ 15-20 ಸೆಕೆಂಡ್‌ಗಳ ಕಾಲ ಈ ಭಂಗಿಯಲ್ಲಿರಿ ಮತ್ತು ನಂತರ ಉಸಿರನ್ನು ಬಿಡುವಾಗ ಸಮ ಸ್ಥಿತಿಗೆ ಬನ್ನಿ. ಏಕ ಪಾದ ರಾಜಕ ಪೋತಾಸನ ಕೂಡ ಬೆನ್ನಿನಲ್ಲಿರುವ ಹಾಗೂ ದೇಹದ ಹಿಂಭಾಗದಲ್ಲಿರುವ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಈ ಎಲ್ಲ ಯೋಗಾಸನಗಳನ್ನು ನಿಯಮಿತವಾಗಿ ಮಾಡ್ತಾ ಬಂದಲ್ಲಿ ಮಾತ್ರ ಕೊಬ್ಬು ಕರಗಲು ಸಾಧ್ಯ.