ಈ ಯೋಗಾಸನಗಳ ಮೂಲಕ ಮಲಬದ್ಧತೆಯನ್ನು ನಿವಾರಿಸಿ
ನೀವು ಸಹ ಪದೇ ಪದೇ ಮಲಬದ್ಧತೆ (Constipation)ಯಿಂದ ಬಳಲುತ್ತಿದ್ದರೆ, ಈ ಯೋಗಾಸನಗಳ (Yogasana) ಮೂಲಕ ನೀವು ಸಮಸ್ಯೆ ನಿವಾರಿಸಬಹುದು. ಮಲಬದ್ಧತೆಯ ಸಮಸ್ಯೆಗೆ, ನೀವು ಅನೇಕ ರೀತಿಯ ಔಷಧಿ (Medicine)ಗಳನ್ನು ಬಳಸಿರಬಹುದು, ಆದರೆ ಅದರಿಂದ ಏನು ಪ್ರಯೋಜನ ಆಗದೇ ಇರಬಹುದು. ಅದಕ್ಕಾಗಿಯೇ ನೀವು ಈ ಯೋಗಾಸನಗಳನ್ನು ಟ್ರೈ ಮಾಡಬಹುದು.
ವಾಸ್ತವವಾಗಿ, ವ್ಯಕ್ತಿಯು ತನ್ನ ದೊಡ್ಡ ಕರುಳನ್ನು ಖಾಲಿ ಮಾಡಲು ಕಷ್ಟಪಟ್ಟಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದಾಗಿ, ವ್ಯಕ್ತಿಯು ಇನ್ನೂ ಅನೇಕ ಇತರ ರೋಗಗಳನ್ನು ಎದುರಿಸಬೇಕಾಗಬಹುದು. ನಿಮಗೂ ಮಲಬದ್ಧತೆಯ(Constipation) ಸಮಸ್ಯೆಯಿದ್ದರೆ, ಈ ಯೋಗಾಸನಗಳು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತವೆ. ಈ ಯೋಗಾಸನಗಳ ಬಗ್ಗೆ ತಿಳಿಯೋಣ.
ಪವನ ಮುಕ್ತಾಸನ (Pavana Muktasana)
ಪವನಮುಕ್ತಾಸನವು ಜೀರ್ಣಾಂಗದಿಂದ ಅನಗತ್ಯ ಗ್ಯಾಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಈ ಆಸನವು ಅತ್ಯುತ್ತಮವಾಗಿದೆ. ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಗಳಿಗೆ ಈ ಆಸನವನ್ನು ಮಾಡಲು ಸಲಹೆ ನೀಡಲಾಗುತ್ತದೆ.
ಭುಜಂಗಾಸನ(Bhujangasana)
ಈ ಆಸನ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಬೆಸ್ಟ್ ಎಂದು ಪರಿಗಣಿಸಲಾಗಿದೆ. ಈ ಆಸನದ ಮೂಲಕ, ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಇದು ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಸನವನ್ನು ಅಭ್ಯಾಸ ಮಾಡಿ.
ಅರ್ಧ ಚಕ್ರಾಸನ (Arda chakrasana)
ಈ ಆಸನವು ಮಲಬದ್ಧತೆಯನ್ನು ನಿವಾರಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ. ಈ ಆಸನವನ್ನು ಮಾಡುವಾಗ ದೇಹವು ಅರ್ಧ ಚಕ್ರದಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಆಸನವನ್ನು ಅರ್ಧಚಕ್ರಾಸನ ಎಂದು ಕರೆಯಲಾಗುತ್ತದೆ. ಈ ಆಸನವು ಮಲಬದ್ಧತೆಯ ಜೊತೆಗೆ ಮಧುಮೇಹ ಮತ್ತು ಹೊಟ್ಟೆಯ ಕೊಬ್ಬನ್ನು ಕೂಡ ತೆಗೆದುಹಾಕುತ್ತದೆ.
ವಜ್ರಾಸನ (Vajrasana)
ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿರಿಸುವುದು ಮಾತ್ರವಲ್ಲದೆ, ನಿಮ್ಮ ಕೆಳಭಾಗದ ಬೆನ್ನುಹುರಿಯ ನೋವನ್ನು ನಿವಾರಿಸುತ್ತದೆ. ಪ್ರತಿದಿನ ವಜ್ರಾಸನ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಿ.