Health Tips : ಥೈರಾಯ್ಡ್ ಸಮಸ್ಯೆ ಇರೋರಿಗೆ ಈ ಜ್ಯುಸ್ ಬೆಸ್ಟ್ ಔಷಧಿ

ನಿಸರ್ಗದಲ್ಲಿಯೇ ನಮ್ಮ ಅನಾರೋಗ್ಯಕ್ಕೆ ಮದ್ದಿದೆ. ಆದ್ರೆ ನಾವು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ಮಾತ್ರೆ, ಔಷಧಿಗಳ ಸೇವನೆ ಮಾಡಿ, ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ತಿದ್ದೇವೆ. ಇದ್ರಲ್ಲಿ ಥೈರಾಯ್ಡ್ ಕೂಡ ಹೊರತಾಗಿಲ್ಲ. ಈ ರೋಗವನ್ನು ಕೂಡ ಆಹಾರದ ಮೂಲಕವೇ ನಿಯಂತ್ರಿಸಬಹುದು.
 

Lifestyle disease thyroid could control with Gourd and Hyacinth juice

ಥೈರಾಯ್ಡ್ (Thyroid ) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಥೈರಾಯ್ಡ್ ಒಮ್ಮೆ ಶುರುವಾದ್ರೆ ಹೋಗೋದಿಲ್ಲ. ಅದನ್ನು ನಿಯಂತ್ರಣದಲ್ಲಿಡಬೇಕು. ಪ್ರತಿ ದಿನ ಮಾತ್ರೆ ಸೇವನೆ ಮಾಡ್ಬೇಕು. ಥೈರಾಯ್ಡ್ ಸಮಸ್ಯೆ (Problem) ಹೆಚ್ಚಾದ್ರೆ ಇದ್ರಿಂದ ಮತ್ತೊಂದಿಷ್ಟು ಸಮಸ್ಯೆ ಕಾಡಲು ಶುರುವಾಗುತ್ತದೆ. ಅನೇಕ ಬಾರಿ ರೋಗಿ (Patient) ಗಂಭೀರ ಸ್ಥಿತಿ ತಲುಪುವುದಿದೆ. ಹಾಗಾಗಿ ಥೈರಾಯ್ಡ್ ಗ್ರಂಥಿ (Thyroid Gland) ಯನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಣದಲ್ಲಿಡಲು ನಿಮ್ಮ ಆಹಾರ (Food) ದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಕಟ್ಟುನಿಟ್ಟಾದ ಡಯಟ್ ನಿಮ್ಮ ಥೈರಾಯ್ಡ್ ನಿಯಂತ್ರಣಕ್ಕೆ ದೊಡ್ಡ ಮಟ್ಟಿಗೆ ನೆರವಾಗುತ್ತದೆ. ಥೈರಾಯ್ಡ್ ಸಮಸ್ಯೆಯಿರುವವರು ಕೆಲವು ಆಹಾರಗಳಿಂದ ದೂರವಿರಬೇಕು. ಹಾಗೆಯೇ ಕೆಲ ಆಹಾರವನ್ನು ಅವಶ್ಯಕವಾಗಿ ಸೇವನೆ ಮಾಡ್ಬೇಕು. ಥೈರಾಯ್ಡ್ ಸಮಸ್ಯೆ ನಿಮಗೂ ಕಾಡ್ತಿದ್ದರೆ ಕೆಲವು ಜ್ಯೂಸ್‌ಗಳನ್ನು ಸೇವನೆ ಮಾಡುವ ಮೂಲಕವೂ ನೀವು  ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಬಹುದು. ಇಂದು ಥೈರಾಯ್ಡ್ ನಿಯಂತ್ರಣ ಮಾಡಲು ಸಹಾಯ ಮಾಡುವ ಜ್ಯೂಸ್ (Juice) ಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳ್ತೇವೆ. ನೀವೂ ಆ ಜ್ಯೂಸ್ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ.  

ಥೈರಾಯ್ಡ್ ಸಮಸ್ಯೆ ಕಡಿಮೆ ಮಾಡುವ ಜ್ಯೂಸ್ : 

ಥೈರಾಯ್‌ ನಲ್ಲಿ ಎರಡು ವಿಧನವಿದೆ. ಒಂದು ವಿಧಾನದಲ್ಲಿ ತೂಕ ಹೆಚ್ಚಾಗಲು ಶುರುವಾಗುತ್ತದೆ.  ತೂಕ ಹೆಚ್ಚಾಗ್ತಿದ್ದಂತೆ ಅನೇಕರು ಥೈರಾಯ್ಡ್ ಪರೀಕ್ಷೆ (Examination) ಮಾಡಿಸಿದ್ದೀರಾ ಎಂದು ಪ್ರಶ್ನೆ (question) ಮಾಡುವುದನ್ನು ನೀವು ಕೇಳಿರಬಹುದು. ಥೈರಾಯ್ಡ್ ನ ಈ ಸಮಸ್ಯೆಯಿಂದ ದೂರವಿರಲು ಹೆಚ್ಚಿನ ಜನರು ಔಷಧಿ (Medicine) ಗಳ ಮೊರೆ ಹೋಗ್ತಾರೆ. ನಿಯಮತಿವಾಗಿ ಔಷಧಿ ಸೇವನೆ ಮಾಡಬೇಕಾಗುತ್ತದೆ. ಔಷಧಿ ತೆಗೆದುಕೊಳ್ಳದೆ ಹೋದ್ರೆ ಥೈರಾಯ್ಡ್ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿಯೇ ಅನೇಕರು ಥೈರಾಯ್ಡ್ ನಿಯಂತ್ರಣದಲ್ಲಿಡಲು ತಮ್ಮ ಆಹಾರವನ್ನು ಬದಲಾಯಿಸುವ ಪ್ರಯತ್ನವನ್ನು ಮಾಡ್ತಾರೆ. ಯಾವುದೇ ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯ (Doctor) ರನ್ನು ಸಂಪರ್ಕಿಸಬೇಕು. 

ಸೋರೆಕಾಯಿ (Gourd) ಜ್ಯೂಸ್ : ಥೈರಾಯ್ಡ್ ಸಮಸ್ಯೆಯಿದ್ದು, ಆಹಾರದಿಂದ ಇದನ್ನು ನಿಯಂತ್ರಣದಲ್ಲಿ ಇಡುತ್ತೇವೆ ಎನ್ನುವವರು ಸೋರೆಕಾಯಿ ಜ್ಯೂಸ್ ಕೂಡ ಕುಡಿಯಬಹುದು. ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಬಾಟಲ್ ಸೋರೆಕಾಯಿಯು ಎಲ್ಲಾ ಜನರಿಗೂ ಒಳ್ಳೆಯದು. ಆದರೆ ನೀವು ಥೈರಾಯ್ಡ್ ಸಮಸ್ಯೆ ಹೊಂದಿದ್ದರೆ, ನಿಮ್ಮ ಡಯಟ್ ನಲ್ಲಿ ಸೋರೆಕಾಯಿ ರಸವನ್ನು ಖಂಡಿತವಾಗಿ ಸೇರಿಸಿ. ಇದನ್ನು ಕುಡಿಯುವುದರಿಂದ ಥೈರಾಯ್ಡ್ ನಿಯಂತ್ರಣಕ್ಕೆ ಬರುವ ಶುರುವಾಗುತ್ತದೆ ಎಂದು ತಜ್ಞರು ಹೇಳ್ತಾರೆ. 

ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ಈ ವಿಚಾರ ಗಮನದಲ್ಲಿರಲಿ

ಹೈಸಿಂತ್ (Hyacinth) ಜ್ಯೂಸ್ ಕುಡಿದು ನೋಡಿ : ಹೈಸಿಂತ್  ರಸವು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಹೈಸಿಂತ್ ರಸವು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹೈಸಿಂತ್ ಜ್ಯೂಸ್ ಮಾಡಲು ಎರಡು ಕಪ್ ಹೈಸಿಂತ್ ಎಲೆಗಳು ಮತ್ತು 2 ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಈ ಎರಡನ್ನೂ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಸಾಧ್ಯವಾದರೆ, 1 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಮತ್ತು ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ತೂಕವೂ ಕಡಿಮೆಯಾಗುತ್ತದೆ. ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ. 

ಬ್ರೇಕ್‌ಫಾಸ್ಟ್‌ಗೆ ಯಾವಾಗ್ಲೂ ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಒಳ್ಳೇದಾ ?

ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ನಲ್ಲಿದೆ ಥೈರಾಯ್ಡ್ ನಿಯಂತ್ರಣದ ಶಕ್ತಿ : ಈ ಎರಡು ಜ್ಯೂಸ್ ಅಲ್ಲದೆ  ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಎರಡೂ ರಸಗಳು ಥೈರಾಯ್ಡ್ ಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತ ಹೆಚ್ಚಿ ಕಬ್ಬಿಣಾಂಶದ ಕೊರತೆ ನೀಗುತ್ತದೆ.

Lifestyle disease thyroid could control with Gourd and Hyacinth juice

 

Latest Videos
Follow Us:
Download App:
  • android
  • ios