MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಆರೋಗ್ಯಕ್ಕೆ ಉತ್ತಮ ಎನಿಸುವ ಈ ಆಹಾರಗಳನ್ನ ತಪ್ಪಾಗಿ ತಿಂದ್ರೆ ಅಪಾಯ ಗ್ಯಾರಂಟಿ

ಆರೋಗ್ಯಕ್ಕೆ ಉತ್ತಮ ಎನಿಸುವ ಈ ಆಹಾರಗಳನ್ನ ತಪ್ಪಾಗಿ ತಿಂದ್ರೆ ಅಪಾಯ ಗ್ಯಾರಂಟಿ

ನಿಮ್ಮ ತಟ್ಟೆಯಲ್ಲಿ ಪನೀರ್, ಒಂದು ಹಿಡಿ ಬಾದಾಮಿ, ಒಂದು ಲೋಟ ಫ್ರುಟ್ ಜ್ಯೂಸ್, ಅಥವಾ ಒಂದು ಚಿಟಿಕೆ ತುಪ್ಪ ಇದ್ದರೆ ಅದು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಕೆಲವೊಮ್ಮೆ ನಾವು ಉತ್ತಮ ಎಂದು ಭಾವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಮುಳುವಾಗುತ್ತದೆ. ಅಂತಹ ಆಹಾರಗಳು ಯಾವುವು ನೋಡೋಣ.

2 Min read
Author : Pavna Das
Published : Jun 26 2026, 04:06 PM IST
Share this Photo Gallery
  • FB
  • TW
  • Linkdin
  • Whatsapp
17
ಈ ರೀತಿ ಆಹಾರ ಸೇವಿಸಬೇಡಿ
Image Credit : Getty

ಈ ರೀತಿ ಆಹಾರ ಸೇವಿಸಬೇಡಿ

ಪನೀರ್, ಬಾದಾಮಿ. ಫ್ರುಟ್ ಜ್ಯೂಸ್, ಎನರ್ಜಿ ಬಾರ್ ಎಲ್ಲವೂ ಆರೋಗ್ಯಕ್ಕೆ ಉತ್ತಮವಾದ ಆಹಾರಗಳು. ಆದರೆ ಈ ಆಹಾರಗಳನ್ನು ಸೇವಿಸುವಾಗ ನೀವು ಮಾಡುವ ತಪ್ಪಿನಿಂದಾಗಿ, ಆ ಆರೋಗ್ಯಕರ ಆಹಾರಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗಬಹುದು. ಹಾಗಿದ್ರೆ ಯಾವ ರೀತಿಯ ಆಹಾರ ಸೇವಿಸಬಾರದು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪನೀರ್
Image Credit : others

ಪನೀರ್

ಸಸ್ಯಾಹಾರಿ ಆಹಾರಗಳಲ್ಲಿ ಪನೀರ್ ಪ್ರೋಟೀನ್ ಭರಿತ ಪ್ರಧಾನ ಆಹಾರವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಪೂರ್ಣವಾಗಿಡುತ್ತದೆ, ಆದರೆ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ಪನೀರ್ ಅನ್ನು ತರಕಾರಿಗಳು ಅಥವಾ ಧಾನ್ಯಗಳೊಂದಿಗೆ ಸೇರ್ಸಿ ತಿಂದರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

Related Articles

Related image1
Heart Healthy food: ಹೃದಯದ ಆರೋಗ್ಯಕ್ಕೆ ನೀವು ಸೇವಿಸಲೇಬೇಕಾದ ಸೂಪರ್ ಆಹಾರಗಳಿವು
Related image2
Paratha Health Risks: ರುಚಿಯಲ್ಲಿ ನಂಬರ್ ಒನ್ ಇದ್ರೂ ಆರೋಗ್ಯಕ್ಕೆ ಹಾನಿಕರ ಈ ಆಹಾರ, ದಿನ ತಿನ್ಬೇಡಿ
37
ಬಾದಾಮಿ
Image Credit : Getty

ಬಾದಾಮಿ

ಬಾದಾಮಿ ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರದ ಆಕ್ಸಲೇಟ್ ಮಟ್ಟ ಹೆಚ್ಚಾಗಬಹುದು ಮತ್ತು ಕೆಲವು ಜನರಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ. ಪ್ರತಿದಿನ ಒಂದು ಹಿಡಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ.

47
ಫ್ರುಟ್ ಜ್ಯೂಸ್
Image Credit : Getty

ಫ್ರುಟ್ ಜ್ಯೂಸ್

ಹಲವು ಪ್ಯಾಕ್ ಮಾಡಲಾದ ಫ್ರುಟ್ ಜ್ಯೂಸ್ ಹೆಚ್ಚುವರಿ ಸಕ್ಕರೆ ಹೊಂದಿರುತ್ತವೆ ಮತ್ತು ಫೈಬರ್ ಕೊರತೆಯನ್ನು ಹೊಂದಿರುತ್ತವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಾಗುವುದು ಮತ್ತು ಚಯಾಪಚಯ ಸಮಸ್ಯೆಗಳಿಗೆ ಕಾರಣವಾಗಬಹುದು. ನ್ಯಾಚುರಲ್ ಸಿಹಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ, ಫ್ರೆಶ್ ಆಗಿ ಮಾಡಿದ ಹಣ್ಣುಗಳ ಜ್ಯೂಸ್ ಕುಡಿಯಿರಿ ಅಥವಾ ಹಣ್ಣುಗಳನ್ನು ಸಂಪೂರ್ಣವಾಗಿ ಸೇವಿಸಿ.

57
ತುಪ್ಪ
Image Credit : Getty

ತುಪ್ಪ

ಭಾರತೀಯ ಅಡುಗೆ ಮನೆಯಲ್ಲಿ ತುಪ್ಪವು ಇದ್ದೆ ಇರುತ್ತದೆ, ಇದು ಅಡುಗೆಗೆ ರಿಚ್ ಪರಿಮಳವನ್ನು ನೀಡುತ್ತದೆ. ಆದರೆ, ಅತಿಯಾದ ತುಪ್ಪದ ಸೇವನೆ ಒಳ್ಳೆಯದಲ್ಲ. ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅಧಿಕವಾಗಿದ್ದು, ಇದು ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ತುಪ್ಪವನ್ನು ಮಿತವಾಗಿ ಬಳಸಿ ಮತ್ತು ಸುರಕ್ಷಿತ ಆಹಾರಕ್ಕಾಗಿ ಆಲಿವ್ ಅಥವಾ ಸಾಸಿವೆ ಎಣ್ಣೆಯಂತಹ ಇತರ ಆರೋಗ್ಯಕರ ಕೊಬ್ಬು ಬಳಸೋದು ಉತ್ತಮ.

67
ಮೊಸರು
Image Credit : Asianet News

ಮೊಸರು

ಮೊಸರು ಪ್ರೋಬಯಾಟಿಕ್‌ಗಳಿಂದ ತುಂಬಿದ್ದು, ಇದು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ಫ್ಲೇವರ್ಡ್ ಮೊಸರುಗಳು ಹೆಚ್ಚಾಗಿ ಆಡೆಡ್ ಶುಗರ್ ಮತ್ತು ಕೃತಕ ಪದಾರ್ಥಗಳನ್ನು ಹೊಂದಿರುತ್ತವೆ. ಹಾಗಾಗಿಸ್ ಸಾಮಾನ್ಯ ಮೊಸರನ್ನು ಆರಿಸಿ ಮತ್ತು ಹೆಚ್ಚುವರಿ ಸಕ್ಕರೆ ಇಲ್ಲದೆ ಗರಿಷ್ಠ ಪ್ರಯೋಜನ ಪಡೆಯಲು ತಾಜಾ ಹಣ್ಣುಗಳು , ನ್ಯಾಚುರಲ್ ಸ್ವೀಟ್ ಆಡ್ ಮಾಡಿ.

77
ಎನರ್ಜಿ ಬಾರ್‌ಗಳು
Image Credit : Getty

ಎನರ್ಜಿ ಬಾರ್‌ಗಳು

ಎನರ್ಜಿ ಬಾರ್‌ಗಳನ್ನು ಆರೋಗ್ಯಕರ ತಿಂಡಿ ಎಂದು ಮಾರಾಟ ಮಾಡಲಾಗುತ್ತದೆ. ಆದರೆ ಹೆಚ್ಚಿನ ಎನರ್ಜಿ ಬಾರ್ ಗಳಲ್ಲಿ ಸಕ್ಕರೆ, ಅನಾರೋಗ್ಯಕರ ಫ್ಯಾಟ್ ಮತ್ತು ಪ್ರಿಸರ್ವೇಟೀವ್ ಇರುತ್ತದೆ. ಪದೆ ಪದೇ ಇದನ್ನು ಸೇವಿಸುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಮತ್ತು ಪೌಷ್ಟಿಕಾಂಶದ ಸಮತೋಲನ ಕಡಿಮೆಯಾಗುತ್ತದೆ. ನೈಸರ್ಗಿಕವಾಗಿ ಶಕ್ತಿ ಮತ್ತು ಪೋಷಣೆಯನ್ನು ಕಾಪಾಡಿಕೊಳ್ಳಲು ನಟ್ಸ್, ಸೀಡ್ಸ್ ಮತ್ತು ಹಣ್ಣುಗಳಂತಹ ಸಂಪೂರ್ಣ ಆಹಾರವನ್ನು ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಜೀವನಶೈಲಿ

Latest Videos
Recommended Stories
Recommended image1
ನಿಮ್ಮ ಫೋನ್‌ನಲ್ಲೇ ಇದೆ ಜೀವರಕ್ಷಕ ಸೀಕ್ರೆಟ್ ಫೀಚರ್; Lock Screen ಮೇಲೆ Emergency Info ಸೇರಿಸೋದು ಹೇಗೆ? ಇಲ್ಲಿದೆ ಸಿಂಪಲ್ ಹಂತಗಳು!
Recommended image2
IVF: ಮಗು ಪಡೆಯಲು ಹಂಬಲಿಸಿ IVF ಹೆಚ್ಚುವರಿಗೆ ಚಿಕಿತ್ಸೆಯಿಂದ ಮಗು ಪಡೆಯುವ ಸಾಧ್ಯತೆ ಹೆಚ್ಚುತ್ತದೆಯೇ?
Recommended image3
English Ivy: ಬೆಡ್‌ರೂಮ್‌ನಲ್ಲಿ ಇಂಗ್ಲಿಷ್ ಐವಿ ಬೆಳೆಸುವುದರಿಂದ ಸಿಗುತ್ತೆ 7 ಅದ್ಭುತ ಪ್ರಯೋಜನ!
Related Stories
Recommended image1
Heart Healthy food: ಹೃದಯದ ಆರೋಗ್ಯಕ್ಕೆ ನೀವು ಸೇವಿಸಲೇಬೇಕಾದ ಸೂಪರ್ ಆಹಾರಗಳಿವು
Recommended image2
Paratha Health Risks: ರುಚಿಯಲ್ಲಿ ನಂಬರ್ ಒನ್ ಇದ್ರೂ ಆರೋಗ್ಯಕ್ಕೆ ಹಾನಿಕರ ಈ ಆಹಾರ, ದಿನ ತಿನ್ಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved