MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Paratha Health Risks: ರುಚಿಯಲ್ಲಿ ನಂಬರ್ ಒನ್ ಇದ್ರೂ ಆರೋಗ್ಯಕ್ಕೆ ಹಾನಿಕರ ಈ ಆಹಾರ, ದಿನ ತಿನ್ಬೇಡಿ

Paratha Health Risks: ರುಚಿಯಲ್ಲಿ ನಂಬರ್ ಒನ್ ಇದ್ರೂ ಆರೋಗ್ಯಕ್ಕೆ ಹಾನಿಕರ ಈ ಆಹಾರ, ದಿನ ತಿನ್ಬೇಡಿ

ಭಾರತದ ಅನೇಕ ಮನೆಗಳಲ್ಲಿ ಬೆಳಿಗ್ಗೆ ಬಿಸಿ ಬಿಸಿ ಪರೋಟ ಸಿದ್ಧವಾಗುತ್ತೆ. ರುಚಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಈ ಪರೋಟವನ್ನು ಪ್ರತಿ ದಿನ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ್ರಿಂದ ನಾನಾ ಸಮಸ್ಯೆ ನಮ್ಮನ್ನು ಕಾಡುತ್ತದೆ.

1 Min read
Author : Roopa Hegde
Published : Jun 24 2026, 02:57 PM IST
Share this Photo Gallery
  • FB
  • TW
  • Linkdin
  • Whatsapp
16
ರುಚಿ ರುಚಿ ಪರೋಟ
Image Credit : ai

ರುಚಿ ರುಚಿ ಪರೋಟ

ಆಲೂಗಡ್ಡೆ ಪರೋಟ, ಈರುಳ್ಳಿ ಪರೋಟ ಪಾಲಕ್ ಪರೋಟ, ಪನ್ನೀರ್ ಪರೋಟ ಅಂತ ನಾನಾ ರೀತಿಯಲ್ಲಿ ಪ್ರತಿ ದಿನ ಪರೋಟ ತಿನ್ನುವವರಿದ್ದಾರೆ. ಈ ಪರೋಟ ಆರೋಗ್ಯಕ್ಕೆ ಹಾಳಲ್ಲ. ಆದ್ರೆ ಅದನ್ನು ತಯಾರಿಸುವ ವಿಧಾನದಿಂದ ಇದು ನಮ್ಮ ಆರೋಗ್ಯವನ್ನು ಹಾಳು ಮಾಡ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಧಿಕ ಕಾರ್ಬೋಹೈಡ್ರೇಟ್
Image Credit : ai

ಅಧಿಕ ಕಾರ್ಬೋಹೈಡ್ರೇಟ್

ತಜ್ಞರ ಪ್ರಕಾರ, ಪರೋಟದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಇದೆ. ಇದು ತ್ವರಿತ ಶಕ್ತಿ ನೀಡುತ್ತದೆ. ಆದ್ರೆ ದೈಹಿಕ ಚಟುವಟಿಕೆ ಕಡಿಮೆಯಿದ್ರೆ ಮತ್ತು ಇದ್ರಲ್ಲಿ ಎಣ್ಣೆ ಹಾಗೇ ತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ರೆ ಪ್ರತಿ ದಿನ ಸೇವನೆ ಒಳ್ಳೆಯದಲ್ಲ. ಇದ್ರಿಂದ ಹೆಚ್ಚುವರಿ ಕ್ಯಾಲೊರಿ ದೇಹದಲ್ಲಿ ಕೊಬ್ಬಿನಂತೆ ಸಂಗ್ರಹವಾಗುತ್ತೆ. ಇದು ದೀರ್ಘಕಾಲದವರೆಗೆ ಮುಂದುವರಿದ್ರೆ ತೂಕ ಹೆಚ್ಚಾಗಿ ಬೊಜ್ಜು ಬರುವ ಅಪಾಯ ಹೆಚ್ಚು.

Related Articles

Related image1
ದಿನಕ್ಕೆ ಎಷ್ಟು ಗೋಡಂಬಿ, ಬಾದಾಮಿ ತಿನ್ನಬೇಕು ಗೊತ್ತಾ?
Related image2
How to Cut Onions Without Crying: ಈರುಳ್ಳಿ ಕಟ್‌ ಮಾಡುವಾಗ ಕಣ್ಣೀರು ಬರುತ್ತಾ? ಏನ್‌ ಮಾಡಬೇಕು?
36
ಸಕ್ಕರೆ ಮಟ್ಟ ಏರಿಕೆ
Image Credit : Asianet News

ಸಕ್ಕರೆ ಮಟ್ಟ ಏರಿಕೆ

ಕಾರ್ಬೋಹೈಡ್ರೇಟ್ ಹೆಚ್ಚಿರುವ ಪರೋಟಗಳನ್ನು ತಿನ್ನೋದ್ರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗುತ್ತೆ. ಜಡ ಜೀವನಶೈಲಿ ಹೊಂದಿರುವವರಿಗೆ ಇದು ದೊಡ್ಡ ಸಮಸ್ಯೆ. ದೇಹ ಈ ಶಕ್ತಿ ಬಳಸಿಕೊಳ್ಳಲು ಸಾಧ್ಯವಾಗದಿದ್ದಾಗ, ಅದು ಕ್ರಮೇಣ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುತ್ತೆ.

46
ಪೋಷಕಾಂಶದ ಅಸಮತೋಲನ
Image Credit : Asianet News

ಪೋಷಕಾಂಶದ ಅಸಮತೋಲನ

ಪ್ರತಿ ದಿನ ನೀವು ಒಂದೇ ರೀತಿಯ ಪರೋಟ ಸೇವನೆ ಮಾಡ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಸಿಗೋದಿಲ್ಲ. ಕೆಲ ಪೋಷಕಾಂಶದ ಕೊರತೆ ನಿಮ್ಮನ್ನು ಕಾಡುತ್ತದೆ.

56
ಹೃದಯ ಸಂಬಂಧಿ ಖಾಯಿಲೆ
Image Credit : Asianet News

ಹೃದಯ ಸಂಬಂಧಿ ಖಾಯಿಲೆ

ಪರೋಟ ಜೊತೆ ತುಪ್ಪ ಹಾಗೂ ಎಣ್ಣೆಯನ್ನು ನಿಯಮಿತವಾಗಿ ಹಾಗು ಹೆಚ್ಚಿನ ಪ್ರಮಾಣದಲ್ಲಿ ತಿಂದಾಗ ಅವು ದೇಹದಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಬಹುದು. ಇದು ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಹೆಚ್ಚಿರುವವರು ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಇದ್ರಿಂ ದೂರ ಇರುವುದು ಉತ್ತಮ.

66
ಆಮ್ಲೀಯತೆ
Image Credit : Asianet News

ಆಮ್ಲೀಯತೆ

ಪರೋಟ ಎಲ್ಲ ದೆಹ ಪ್ರಕೃತಿಗೆ ಸೂಕ್ತವಲ್ಲ. ಕೆಲವರಿಗೆ ಇದರ ಸೇವನೆ ನಂತ್ರ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆ ಕಾಣಿಸುತ್ತದೆ. ಎಣ್ಣೆಯುಕ್ತ ಪರಾಟ ಜೀರ್ಣವಾಗಲು ಹೆಚ್ಚು ಸಮಯಬೇಕು. ಅವು ಸಾಕಷ್ಟು ಫೈಬರ್ ಮತ್ತು ಪ್ರೋಟೀನ್ ಹೊಂದಿಲ್ಲದಿದ್ದರೆ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಆಹಾರ
ಆರೋಗ್ಯ

Latest Videos
Recommended Stories
Recommended image1
How to Cut Onions Without Crying: ಈರುಳ್ಳಿ ಕಟ್‌ ಮಾಡುವಾಗ ಕಣ್ಣೀರು ಬರುತ್ತಾ? ಏನ್‌ ಮಾಡಬೇಕು?
Recommended image2
90% ಜನರಿಗೆ ತಿಳಿಯದ ಅಡುಗೆ ರಹಸ್ಯ! ಸ್ಟೀಲ್ ಪಾತ್ರೆಯಲ್ಲಿ ಆಹಾರ ಸೀದುಹೋಗದಂತೆ ತಡೆಯಲು ಈ ನೀರಿನ ಟ್ರಿಕ್ ಬಳಸಿ
Recommended image3
Lemon Tea: ಪ್ರತಿದಿನ ಲೆಮನ್ ಟೀ ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ!
Related Stories
Recommended image1
ದಿನಕ್ಕೆ ಎಷ್ಟು ಗೋಡಂಬಿ, ಬಾದಾಮಿ ತಿನ್ನಬೇಕು ಗೊತ್ತಾ?
Recommended image2
How to Cut Onions Without Crying: ಈರುಳ್ಳಿ ಕಟ್‌ ಮಾಡುವಾಗ ಕಣ್ಣೀರು ಬರುತ್ತಾ? ಏನ್‌ ಮಾಡಬೇಕು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved