ಮರೆಯುವ ರೋಗಕ್ಕೆ ಗುರಿಯಾಗುವ ಮುನ್ನ ನೀವು ಮಾಡಬೇಕಾಗಿರೋದೇನು?
ಪ್ರತಿಯೊಂದು ವಿಷಯವನ್ನು ಮರೆಯುವ ರೋಗದ ಹೆಸರೇ ಡೆಮೆನ್ಶಿಯಾ, ಇದನ್ನು ಗುಣಪಡಿಸಲು ಇಂದಿನ ವಿಜ್ಞಾನವು ಸಹ ಏನನ್ನೂ ಮಾಡಲು ಸಾಧ್ಯವಿಲ್ಲ. ಒಂದು ಲಿಮಿಟ್ ನಂತರ, ಈ ರೋಗದಿಂದ ಬಳಲುತ್ತಿರುವ ರೋಗಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಹಾಗಾದರೆ ಈ ಸಮಸ್ಯೆ ಕಂಡು ಬಂದ್ರೆ ಏನು ಮಾಡೋದು?
ಈ ರೋಗ ಇರುವಂತಹ ವ್ಯಕ್ತಿ ತನ್ನ ಸ್ವಂತ ಗುರುತನ್ನು ಸಹ ಮರೆಯಬಹುದು. ಯಾವುದೇ ಕುಟುಂಬದಲ್ಲಿ ಡೆಮೆನ್ಶಿಯಾದಿಂದ(Dementia) ಬಳಲುತ್ತಿರುವ ರೋಗಿ ಇದ್ದರೆ, ಇಡೀ ಫ್ಯಾಮಿಲಿ ತೊಂದರೆಗೊಳಗಾಗುತ್ತದೆ. ಏಕೆಂದರೆ ಈ ರೋಗವು ಪ್ರೀತಿಪಾತ್ರರನ್ನು ಎಲ್ಲಿಯಾದರೂ ಕಳೆದುಕೊಳ್ಳುವೆನೇನೋ ಎಂಬ ಭಯದಲ್ಲಿ ಉಂಟಾಗುತ್ತೆ.
ಹೆಚ್ಚುತ್ತಿರುವ ವಯಸ್ಸಿನೊಂದಿಗೆ, ಜ್ಞಾಪಕ ಶಕ್ತಿ ನಷ್ಟದ ಅಪಾಯದಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾದ ಕೆಲವು ಹ್ಯಾಬಿಟ್ಸ್ ನಾವು ನಮ್ಮ ಲೈಫ್ ಸ್ಟೈಲ್ ನಲ್ಲಿ (Lifestyle) ಅಳವಡಿಸಿಕೊಳ್ಳುವುದು ಉತ್ತಮ. ಕೆಲವು ಸುಲಭ ಟಿಪ್ಸ್ ಇಲ್ಲಿವೆ, ಇವುಗಳನ್ನು ನೀವು ಅಳವಡಿಸಿಕೊಂಡರೆ ಈ ರೀತಿಯ ಸಮಸ್ಯೆ ನಿವಾರಣೆಯಾಗಬಹುದು.
ಡೆಮೆನ್ಶಿಯಾ ಏಕೆ ಉಂಟಾಗುತ್ತೆ?
ಮೆದುಳಿನ(Brain)ಜೀವಕೋಶಗಳ ನಡುವಿನ ಕನೆಕ್ಷನಲ್ಲಿ ಅಡಚಣೆ ಉಂಟಾದರೆ, ಗಾಯದಿಂದಾಗಿ ಮೆದುಳಿನ ಜೀವಕೋಶಗಳಿಗೆ ಹಾನಿ, ಅಥವಾ ವಯಸ್ಸಾಗುತ್ತಿರುವ ಕಾರಣ ಮೆದುಳಿನ ನರಗಳಲ್ಲಿ ಫ್ಲೂಯಿಡ್ ಕೊರತೆಯಿಂದಾಗಿ ಡೆಮೆನ್ಶಿಯಾ ಉಂಟಾಗುತ್ತದೆ. ಇದರ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಯಲ್ಲಿ ವಿಭಿನ್ನವಾಗಿರುತ್ತೆ. ಏಕೆಂದರೆ ಈ ರೋಗದ ಪರಿಣಾಮವು ಮೆದುಳಿನ ಯಾವ ಭಾಗದ ಮೇಲೆ ಪರಿಣಾಮ ಬೀರಿದೆ ಮತ್ತು ಎಷ್ಟು ಪರಿಣಾಮ ಬೀರಿದೆ ಎಂಬುದರ ಮೇಲೆ ರೋಗ ಅವಲಂಬಿತವಾಗಿರುತ್ತೆ.
ಡೆಮೆನ್ಶಿಯಾ ತಪ್ಪಿಸಲು ಏನು ಮಾಡಬೇಕು?
ಮರೆಗುಳಿತನವು ಮೆದುಳಿಗೆ ಸಂಬಂಧಿಸಿದೆ ಎಂದಾದಲ್ಲಿ, ನೀವು ನಿಮ್ಮ ಮೆದುಳಿಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು ಎಂಬುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ವಯಸ್ಸಾದಂತೆ, ನಿದ್ರೆ ಕಡಿಮೆಯಾಗುತ್ತೆ, ಅದಕ್ಕಾಗಿ ನೀವು ಪ್ರತಿದಿನ ನಿಮ್ಮನ್ನು ದೈಹಿಕವಾಗಿ ಸಕ್ರಿಯವಾಗಿರಿಸಿಕೊಳ್ಳಬೇಕು, ಇದರಿಂದ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತೆ. ನಿದ್ರೆ(Sleep) ಚೆನ್ನಾಗಿದ್ದಾಗ, ಮನಸ್ಸು ಸಹ ಶಾಂತವಾಗಿರುತ್ತೆ.
ಡೆಮೆನ್ಶಿಯಾ ತಪ್ಪಿಸಲು ಮತ್ತೊಂದು ಅತ್ಯಂತ ಪರಿಣಾಮಕಾರಿ ಮತ್ತು ಸುಲಭ ಮಾರ್ಗವೆಂದರೆ ಮೆದುಳಿನ ಹೆಚ್ಚಿನ ಬಳಕೆ ಒಳಗೊಂಡಿರುವ ಆಟ ಅಂದರೆ ಕ್ರಿಯೇಟಿವ್ ಆಟಗಳನ್ನು ಆಡುವುದು. ಫ್ಯಾಮಿಲಿಯಲ್ಲಿ ಮಕ್ಕಳೊಂದಿಗೆ (Children)ನಿಮ್ಮನ್ನು ನೀವು ಕಾರ್ಯನಿರತರಾಗಿರಿಸಿಕೊಳ್ಳಿ. ಅವರ ಮಾತುಗಳನ್ನು ಕೇಳಿ, ನಿಮ್ಮ ಅನುಭವಗಳ ಕಥೆಗಳನ್ನು ಅವರೊಂದಿಗೆ ಹಂಚಿ.
Image: Storyblocks
ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳಿ ಮತ್ತು ಸೋಶಿಯಲ್ ಆಕ್ಟಿವಿಟಿಗಳಲ್ಲಿ ಆಕ್ಟೀವ್ ಆಗಿರಿ. ಡೆಮೆನ್ಶಿಯಾ ತಪ್ಪಿಸಲು, ನಿಮ್ಮನ್ನು ನೀವು ಏಕಾಂಗಿಯಾಗಿ ಬಿಡದಿರುವುದು ಬಹಳ ಮುಖ್ಯ. ಇದಕ್ಕಾಗಿ ನಿಮ್ಮ ಸ್ನೇಹಿತರು(Friends), ಕುಟುಂಬ, ಸಂಬಂಧಿಕರೊಂದಿಗೆ ಸಮಯ ಕಳೆಯಿರಿ. ಒಂದು ಕ್ಲಬ್ ಗೆ ಸೇರಿ ಅಥವಾ ನೀವು ಯೋಗ ಸೆಂಟರ್ ಗೆ ಸೇರಬಹುದು.
ಸಂಗೀತ ಕೇಳೋದ್ರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಸಾಕಷ್ಟು ಓದಿರಬಹುದು. ಆದರೆ ಮ್ಯೂಸಿಕ್ (Music)ಕೇಳೋದ್ರಿಂದ ಮೆದುಳು ಆಕ್ಟಿವ್ ಆಗಿರುತ್ತೆ. ಬೆಳೆಯುತ್ತಿರುವ ವಯಸ್ಸಿನಲ್ಲಿ ಮೆದುಳನ್ನು ಸಕ್ರಿಯವಾಗಿಡಲು, ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ನುಡಿಸಲು ಕಲಿಯಿರಿ. ಅದು ಡೋಲಕ್ ಆಗಿರಲಿ, ಕೊಳಲು ಆಗಿರಲಿ ಅಥವಾ ಹಾರ್ಮೋನಿಯಂ ಯಾವುದೇ ಆಗಿರಲಿ. ಇವುಗಳನ್ನು ಕಲಿಯೋದು ಒಳ್ಳೆಯದು.
ಉಸಿರಾಟದ ವ್ಯಾಯಾಮಗಳು (Breathing exercise)ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿರಿಸುತ್ತವೆ. ಆದ್ದರಿಂದ ಯೋಗ ಮತ್ತು ಧ್ಯಾನ ಮತ್ತು ಪ್ರಾಣಾಯಾಮವನ್ನು ಪ್ರತಿದಿನವೂ ಮಿಸ್ ಮಾಡದೆ ಮಾಡಿ. ಎಲ್ಲಾದಕ್ಕೂ ಸಮಯ ನಿಗಧಿ ಪಡಿಸಿ, ಇದರಿಂದ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.