ಈ ರಾಶಿಯವರು ಮಕ್ಕಳೊಂದಿಗೆ ಮಕ್ಕಳಾಗಿ ಮಾತಾಡೋದ್ರಲ್ಲಿ ನಿಸ್ಸೀಮರು
ಮಕ್ಕಳೊಂದಿಗೆ ಮಾತಾಡುವುದು ಕಲೆ. ಅದು ಎಲ್ಲರಿಗೂ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಆದರೆ, ಈ ರಾಶಿಯವರು ಲೀಲಾಜಾಲವಾಗಿ ಮಕ್ಕಳೊಂದಿಗೆ ಬೆರೆಯಬಲ್ಲರು.
ಪೋಷಕ(parent)ರಾಗೋ ವಿಷಯ ಎಷ್ಟು ಅದ್ಭುತವಾದದ್ದೋ ಅಷ್ಟೇ ಸವಾಲೆಸೆಯುವಂಥದ್ದು ಕೂಡಾ. ಮಕ್ಕಳ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಅವರ ಜೊತೆ ಮಕ್ಕಳಂತೆಯೇ ಉತ್ತಮವಾಗಿ ಸಂವಹನ ನಡೆಸುವ ಕಲೆ ತಿಳಿದಿರಬೇಕು. ಆರೋಗ್ಯಕರ ಮಾತುಗಳಿಲ್ಲದೆ ಮಗು ನಿಮ್ಮನ್ನು ಹಚ್ಚಿಕೊಳ್ಳುವುದಿಲ್ಲ. ನಿಮ್ಮ ಮಾತು ಕೇಳುವುದೂ ಇಲ್ಲ. ಅವಕ್ಕೆ ಆಸಕ್ತಿ ಹುಟ್ಟುವಂತೆ ಮಾತನಾಡುವುದು, ನಿಮ್ಮ ಮಾತುಗಳು ಮಕ್ಕಳಿಗೆ ಅರ್ಥವಾಗುವಂತೆ ಆಡುವುದು ಎಲ್ಲವೂ ಸವಾಲೇ. ಬಹಳಷ್ಟು ಜನರಿಗೆ ದೊಡ್ಡವರೊಂದಿಗೆ ಮಾತನಾಡಲೇ ಬರುವುದಿಲ್ಲ. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ. ಇನ್ನು ಮಕ್ಕಳೊಂದಿಗೆ ಮಾತಾಡುವುದು ದೂರದ ಮಾತೇ. ಮಕ್ಕಳೊಂದಿಗೆ ಸಂವಹನ ನಡೆಸುವುದು ಕೂಡಾ ಒದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದರೆ, ಈ ಕೆಲ ರಾಶಿಯವರು(zodiac signs) ಮಾತ್ರ ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪಳಗಿಸೋದರಲ್ಲಿ, ನಕ್ಕು ನಗಿಸೋದರಲ್ಲಿ, ಅವರ ಗಮನ ಹಿಡಿದಿಟ್ಟುಕೊಳ್ಳುವುದರಲ್ಲಿ ಎತ್ತಿದ ಕೈ.
ಮಿಥುನ(Gemini)
ಮಿಥುನ ರಾಶಿಯವರಿಗೆ ಮಾತು ಜಾಸ್ತಿ. ಅವರಿಗೆ ಪದಗಳನ್ನು ಹೇಗೆ ಬಳಸಬೇಕೆಂಬುದು ಚೆನ್ನಾಗಿ ಗೊತ್ತು. ಒರಟು ಮಾತಾಡುವವರಲ್ಲ, ತಾಳ್ಮೆಯೂ ಇವರಲ್ಲಿ ಹೆಚ್ಚು. ಉತ್ತಮವಾದ ಸಂವಹನವನ್ನು ಆರಂಭಿಸುವುದು ಹೇಗೆ, ಬೆಳೆಸುವುದು ಹೇಗೆ ಎಂಬುದು ಇವರಿಗೆ ತಿಳಿದಿದೆ. ಅದರಲ್ಲೂ ಮಕ್ಕಳನ್ನು ನಿಭಾಯಿಸಬೇಕಾಗಿ ಬಂದಾಗ, ಮಗುವನ್ನು ಸಮಾಧಾನಿಸುವುದು ಹೇಗೆ, ಅವರ ಮನಸ್ಸಿನ ಮಾತನ್ನು ಹೊರ ಹಾಕುವಂತೆ ಮಾಡುವುದು ಹೇಗೆ, ತಮ್ಮ ಮಾತುಗಳನ್ನು ಅವರು ಕೇಳುವಂತೆ ನೋಡಿಕೊಳ್ಳುವುದು ಹೇಗೆ ಎಲ್ಲವೂ ಇವರಿಗೆ ಗೊತ್ತು. ಹಾಗಾಗಿಯೇ ಮಕ್ಕಳು ಇವರೊಂದಿಗೆ ಉತ್ತಮ ಸಂವಹನ ನಡೆಸುತ್ತಾರೆ. ಮಕ್ಕಳ ಮಾತುಗಳನ್ನು ಜಡ್ಜ್ ಮಾಡದೆ, ಅದರ ಬಗ್ಗೆ ದೂರದೆ ಆರಾಮಾಗಿ ಅವು ಮಾತಾಡುವಂತೆ ನೋಡಿಕೊಳ್ಳುತ್ತಾರೆ.
ಸಿಂಹ(Leo)
ಸಿಂಹ ರಾಶಿಯವರು ತಮ್ಮ ಮಕ್ಕಳ ಬದುಕಿನಲ್ಲಿ ಸಾಕಷ್ಟು ತೊಡಗಿಸಿಕೊಳ್ಳುತ್ತಾರೆ. ಮಕ್ಕಳ ಬದುಕಲ್ಲಾಗುತ್ತಿರುವ ಪ್ರತಿ ವಿಷಯವನ್ನೂ ತಿಳಿಯಲು ಬಯಸುತ್ತಾರೆ. ಮಕ್ಕಳು ಹೇಳುವ ಎಲ್ಲ ಮಾತುಗಳನ್ನೂ ಕೇಳಿಸಿಕೊಳ್ಳುತ್ತಾರೆ. ಅವರ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಾರೆ. ಮಕ್ಕಳು ಸಮಸ್ಯೆಗಳನ್ನು ಹೇಳಿಕೊಂಡಾಗ ಅದಕ್ಕೆ ಕೂಡಲೇ ಹೇಗೆ ಪರಿಹಾರದ ಹಾದಿ ಹಿಡಿಯುತ್ತಾರೆ. ಅದೂ ಅಲ್ಲದೆ, ಆಹಾರದಿಂದ ಹಿಡಿದು ಪ್ರತಿ ವಿಷಯದಲ್ಲೂ ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತಿಳಿಸಿ ಹೇಳಿ ಅವರಿಗೆ ಒಳ್ಳೆಯದನ್ನು ಮಾತ್ರ ನೀಡುವ ಗುಣ ಇವರದು.
Chanakya Niti: ವಿದ್ಯಾರ್ಥಿ ಜೀವನಕ್ಕೆ ಚಾಣಕ್ಯ ಸೂತ್ರಗಳು..
ತುಲಾ(Libra)
ತುಲಾ ರಾಶಿಯವರಿಗೆ ಮಾತುಗಳನ್ನು ಕೇಳಿಸಿಕೊಳ್ಳುವುದಿಷ್ಟ. ಎಲ್ಲವೂ ತಮ್ಮ ಬಗ್ಗೆಯೇ ಅಲ್ಲ ಎಂಬುದು ಚೆನ್ನಾಗಿ ಅರಿತವರಿವರು. ಮಾತು ಕಡಿಮೆ ಆಡುತ್ತಾರೆ ಹಾಗೂ ಇತರರ ಮಾತುಗಳನ್ನು ಜಾಸ್ತಿ ಕೇಳಿಸಿಕೊಳ್ಳುತ್ತಾರೆ. ಮಕ್ಕಳಿಗೆ ಇವರಲ್ಲಿ ಇದೇ ವಿಷಯ ಇಷ್ಟವಾಗುವುದು. ತಾವು ಹೇಳುವುದನ್ನೆಲ್ಲ ಚೆನ್ನಾಗಿ ಕೇಳಿಸಿಕೊಂಡು, ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು. ಮಕ್ಕಳೊಂದಿಗೆ ಬಹಳ ತಾಳ್ಮೆಯಿಂದ ಇರುತ್ತಾರೆ.
ಸಣ್ಣಪುಟ್ಟದ್ದಕ್ಕೂ ಅಳೋ ಅಭ್ಯಾಸ ಈ ಐದು ರಾಶಿಗಳಿಗೆ
ಧನು(Sagittarius)
ಧನು ರಾಶಿಯವರು ತಮಾಷೆ ಇಷ್ಟ ಪಡುವವರು. ಸಾಹಸ ಪ್ರವೃತ್ತಿಯವರು. ಎಲ್ಲರೂ ಬಯಸುವಂಥ ಕೂಲ್ ಪೇರೆಂಟ್ ಆಗಬಲ್ಲವರು. ಯಾವುದಕ್ಕೂ ಹೆಚ್ಚು ಸ್ಟ್ರಿಕ್ಟ್ ಮಾಡದವರು. ಹಾಗಾಗಿ, ಮಕ್ಕಳೊಂದಿಗೆ ಉತ್ತಮ ಸಂವಹನ ನಡೆಸಬಲ್ಲರು. ಮಕ್ಕಳು ಮಾತಾಡಬೇಕೆಂದಾಗೆಲ್ಲ ಅವರಿಗೆ ಕಿವಿಯಾಗುವವರು. ಅವರನ್ನು ಚುಡಾಯಿಸುತ್ತಲೇ ಮನಸ್ಸು ಗೆದ್ದು ತಮ್ಮೊಂದಿಗೆ ಸಾಹಸ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳುವವರು. ಹೀಗಾಗಿ, ಮಕ್ಕಳು ಇವರನ್ನು ತುಂಬಾ ಇಷ್ಟಪಡುವರು. ಸ್ವತಂತ್ರವನ್ನು ಪ್ರೀತಿಸುವ ಇವರು, ಮಕ್ಕಳಿಗೂ ಸ್ವತಂತ್ರದ ರುಚಿ ತೋರಿಸುವರು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.