Personality Development: ಯಾವಾಗ್ಲೂ ಕೆಟ್ಟ ಆಲೋಚನೆನಾ ? ಹೋಗಲಾಡಿಸಲು ಹೀಗೆ ಮಾಡಿ

ದಿನಪೂರ್ತಿ ಸಪ್ಪಗಿರ್ತೀರಾ ? ಎಲ್ಲಿಗೆ ಹೋದ್ರೂ, ಏನ್ ಮಾಡಿದ್ರೂ ಖುಷಿ (Happy)ಯಾಗಲ್ಲ ಅನ್ನೋ ಸಮಸ್ಯೆನಾ ? ಯಾವಾಗ್ಲೂ ತಲೆಗೆ ಕೆಟ್ಟ ಆಲೋಚನೆ ಬರ್ತಿದ್ಯಾ. ಈ ನೆಗೆಟಿವ್ ಥಿಂಕಿಂಗ್‌ (Negative Thinking)ನಿಂದ ಹೊರಬರುವುದು ಹೇಗೆ. ನಾವ್ ಹೇಳ್ತೀವಿ.

Powerful Tips To Get Rid Of Negative Thought

ಕೆಲವೊಬ್ರನ್ನು ನೋಡಿರ್ತೀರಾ. ಆಕಾಶಾನೇ ತಲೆಮೇಲೆ ಬಿದ್ದಂಗೆ ಆಡ್ತಿರ್ತಾರೆ. ಪಾರ್ಟಿ (Party)ಯಿರ್ಲಿ, ಹಬ್ಬ ಇರ್ಲಿ ಅವ್ರದ್ದು ಅದೇ ಗೋಳು. ಇತರರನ್ನು ಪ್ರೀತಿಸುವುದು ಬಿಡಿ. ತಮ್ಮನ್ನು ತಾವೇ ಪ್ರೀತಿಸುವುದಿಲ್ಲ. ತಮ್ಮ ಬಗ್ಗೆಯೇ ಅಪನಂಬಿಕೆ, ಕೀಳರಿಮೆ ಹೊಂದಿರುತ್ತಾರೆ. ಯಾವಾಗಲೂ ಹಾಗಾಗುವುದಿಲ್ಲ, ಹೀಗಾಗುವುದಿಲ್ಲ ಎಂಬ ಭಯ. ಕೆಟ್ಟದಾಗುತ್ತದೆ ಎಂದೇ ಆಲೋಚಿಸುತ್ತಿರುತ್ತಾರೆ. ಆಗದ ಘಟನೆಗಳ ಬಗ್ಗೆ ಭಯಪಡುತ್ತಿರುತ್ತಾರೆ. ಅಥವಾ ನೀವು ಹೀಗೇ ಆಗುತ್ತಿರಬಹುದು.

ಪ್ರತಿಯೊಬ್ಬರ ಜೀವನಶೈಲಿ (Lifestyle)ಯೂ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರೂ ಒಂದೊಂದು ರೀತಿಯ ಜೀವನಕ್ರಮವನ್ನು ಅನುಸರಿಸುತ್ತಾರೆ, ವಿವಿಧ ರೀತಿಯ ಚಟುವಟಿಕೆಗೆಳಲ್ಲಿ ತೊಡಗಿಸಿಕೊಳ್ಳುತ್ತಾರೆ.  ನಾವೆಲ್ಲರೂ ಪ್ರತಿದಿನವೂ ನಮ್ಮ ದಿನಚರಿಯ ಭಾಗವಾಗಿರುವ ಕೆಲಸಗಳನ್ನು ಮಾಡುತ್ತೇವೆ. ಈ ದಿನಚರಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತದೆ. ಈ ರೀತಿಯ ಚಟುವಟಿಕೆಗಳೇ ನಮ್ಮ ಮನೋಭಾವವನ್ನು ನಿರ್ಧರಿಸುತ್ತದೆ. ಕೆಲವೊಬ್ಬರು ಖುಷಿ (Happy)ಯಾಗಿರಲು, ಕೆಲವೊಬ್ಬರು ಡಲ್ ಆಗಿರಲು ಕಾರಣವಾಗುತ್ತದೆ. 

Personality Development: ಹ್ಯಾಪ್ ಮೋರೆ ಹಾಕೋದು ಬಿಟ್ವಿಡಿ..ಹ್ಯಾಪಿಯಾಗಿರಿ

ಯಾವಾಗಲೂ ಮನಸ್ಸಿನಲ್ಲಿ ಹೀಗೆ ನಕಾರಾತ್ಮಕ ಆಲೋಚನೆಗಳು ತುಂಬಿದ್ದಾಗ ಜೀವನದಲ್ಲಿ ಏನನ್ನಾದರೂ ಸಾಧಿಸುವುದು ಕಷ್ಟ. ಬದುಕಿನ ಪ್ರತಿ ದಿನವೂ ನೀರಸವಾಗಿ ಬಿಡುತ್ತದೆ. ಖುಷಿಯಿಂದ ಜೀವನ (Life) ನಡೆಸಲು ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯುವುದು ಮುಖ್ಯ. ಸೋಲು, ನಿಮ್ಮಲ್ಲಿರುವ ನ್ಯೂನ್ಯತೆ, ಅಪೂರ್ಣತೆಯನ್ನು ತಿಳಿದುಕೊಂಡ ಬಳಿಕವೂ ನೀವು ನಿಮ್ಮ ಬಗ್ಗೆ ಆತ್ಮವಿಶ್ವಾಸ (Confidence) ಬೆಳೆಸಿಕೊಳ್ಳಬೇಕು. ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ಯಾವಾಗಲೂ ಖುಷಿಯಾಗಿರಲು ಏನು ಮಾಡಬಹುದು ? ತಲೆಯಿಂದ ನಕಾರಾತ್ಮಕ ಆಲೋಚನೆಗಳನ್ನು ಹೋಗಲಾಡಿಸಲು ಏನು ಮಾಡಬೇಕು ತಿಳಿಯೋಣ.

ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಿರಿ
ವ್ಯಕ್ತಿಯು ಎಷ್ಟು ಆಶಾವಾದಿಯಾಗಿದ್ದರೂ, ನಕಾರಾತ್ಮಕತೆ ಯೋಚನೆಗಳು ಬಂದೇ ಬರುತ್ತದೆ. ವಿಷಯಗಳ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸುವುದು ಮನುಷ್ಯನ ಮನಸ್ಸಿನ ಒಂದು ಭಾಗವಾಗಿದೆ. ಹೀಗಾಗಿ ಈ ನಕಾರಾತ್ಮಕತೆಯನ್ನು ತೊಡೆದು ಹಾಕುವುದು ಹೇಗೆ ಎಂದು ಮೊದಲು ತಿಳಿದುಕೊಳ್ಲಬೇಕು. ಅದರಲ್ಲಿ ಮುಖ್ಯವಾದುದು ಮನಸ್ಸಿನಲ್ಲಿ ಭಾವನೆಗಳನ್ನು ತುಂಬಿಕೊಳ್ಳಬೇಡಿ. ಏನನ್ನಿಸುತ್ತದೋ ಅದನ್ನು ಪುಸ್ತಕದಲ್ಲಿ ಬರೆಯಿರಿ.

Relationship Tips : 30ರ ಹರೆಯದಲ್ಲೂ ಒಂಟಿಯಾಗಿರುವವರಿಗೆ ಕಿವಿಮಾತು

ನಾವು ಕೆಲವೊಮ್ಮೆ ಮನಸ್ಫೂರ್ತಿಯಾಗಿ ಅಥವಾ ಓಪನ್ ಅಪ್ ಆಗಿ ಎಲ್ಲರ ಜತೆ ಮಾತನಾಡಲು ಸಾಧ್ಯವಾಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಅತಿಯಾದ ಆಲೋಚನೆ ನೆಗೆಟಿವ್ ಥಿಂಕಿಂಗ್‌ (Negative Thinking)ಗೆ ಕಾರಣವಾಗುತ್ತದೆ. ಹೀಗಾಗಿ ಭಾವನೆಗಳನ್ನು ಯಾವತ್ತೂ ಅದುಮಿ ಇಡಬೇಡಿ. ನಿಮ್ಮ ಎಲ್ಲಾ ಭಾವನೆಗಳನ್ನು ಪ್ರದರ್ಶಿಸಿ. ಸಂತೋಷವಾದಾಗ ನಕ್ಕು ಬಿಡಿ. ಅಳಲು ಬಯಸಿದರೆ ಅತ್ತು ಬಿಡಿ. ನಿಮಗೆ ಸಂತೋಷವಾಗುವ ಕೆಲಸವನ್ನು ಹೆಚ್ಚಾಗಿ ಮಾಡಿ. ಇದು ಮನಸ್ಸಿನಿಂದ ನಕಾರಾತ್ಮಕ ಚಿಂತನೆಯನ್ನು ಇಲ್ಲವಾಗಿಸುತ್ತದೆ.

ಧ್ಯಾನ ಮಾಡಿ
ಧ್ಯಾನ (Meditation)ವು ನಮ್ಮ ಮೆದುಳಿಗೆ ವಿಶ್ರಾಂತಿ ನೀಡುತ್ತದೆ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ. ಆದ್ದರಿಂದ, ಹಗಲಿನಲ್ಲಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಲು ಮತ್ತು ಶಾಂತಿಯನ್ನು ಅನುಭವಿಸಲು ಸ್ವಲ್ಪ ಸಮಯವನ್ನು ಬಿಡಿ. ಅಲ್ಲದೆ, ಈ ಪ್ರಕ್ರಿಯೆ ಸಮಯದಲ್ಲಿ ನಿಮ್ಮನ್ನು ಸುತ್ತುವರೆದಿರುವ ಎಲ್ಲಾ ಧನಾತ್ಮಕತೆಯ ಬಗ್ಗೆ ಯೋಚಿಸಿ.

ಪುಸ್ತಕಗಳನ್ನು ಓದಿ
ಓದುವುದು ಒಂದು ಅತ್ಯುತ್ತಮ ಹವ್ಯಾಸ. ಇದು ಮನಸ್ಸಿಗೆ ನಕಾರಾತ್ಮಕ ಚಿಂತನೆ ಬರದಂತೆ ಮಾಡುತ್ತದೆ. ಯಶಸ್ವಿ ಜನರ ಜೀವನಚರಿತ್ರೆಗಳನ್ನು ಓದಿ. ಇವುಗಳು ನಿಮಗೆ ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸುತ್ತವೆ ಮತ್ತು ಋಣಾತ್ಮಕತೆಯನ್ನು ಬಿಟ್ಟು ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ನಿಮಗೆ ಕಲಿಸುತ್ತವೆ.

ಸಂಗೀತವನ್ನು ಆಲಿಸಿ
ಮ್ಯೂಸಿಕ್ (Music) ಮನಸ್ಸಿಗೆ ಥೆರಪಿಯಾಗಿ ಕೆಲಸ ಮಾಡುತ್ತದೆ. ಸಂಗೀತ ಆಲಿಸುವಾಗ ಮನಸ್ಸು ಋಣಾತ್ಮಕ ಯೋಚನೆಯಿಂದ ಹೊರಬಂದು ಪಾಸಿಟಿವ್ ಥಿಂಕಿಂಗ್ ಮಾಡುತ್ತದೆ.

ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳಿ
ನೀವು ಎಷ್ಟೇ ಕಷ್ಟಗಳನ್ನು ಎದುರಿಸುತ್ತಿರಬಹುದು. ಆದರೂ, ಮನಸ್ಸನ್ನು ಧನಾತ್ಮಕ ಅಂಶಗಳ ಮೇಲೆ ಮಾತ್ರ ಕೇಂದ್ರೀಕರಿಸಿ. ನಿಮ್ಮ ಮುಖದಲ್ಲಿ ಯಾವಾಗಲೂ ನಗುವನ್ನು ಇಟ್ಟುಕೊಳ್ಳಿ. ಒಳ್ಳೆಯ ಜನರ ಸಹವಾಸದಲ್ಲಿರಿ. ಏಕೆಂದರೆ ಅವರು ಯಾವಾಗಲೂ ನೀವು ಜೀವನದಲ್ಲಿ ಯಶಸ್ವಿಯಾಗಲು ನೆರವಾಗುತ್ತಾರೆ.

Latest Videos
Follow Us:
Download App:
  • android
  • ios