ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
Diaper Myth Truth: ಸೋಶಿಯಲ್ ಮೀಡಿಯಾದಲ್ಲಿ ಡೈಪರ್ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳಿಗೆ ಡೈಪರ್ ಹಾಕುವುದರಿಂದ ಕಿಡ್ನಿ ಹಾಳಾಗುತ್ತದೆ ಎಂಬ ಸುದ್ದಿ ವೈರಲ್ ಆಗಿದೆ. ಇದರಲ್ಲಿ ಸತ್ಯಾಂಶವೇನು ಎಂದು ಈಗ ತಿಳಿಯೋಣ.

ತಪ್ಪು ಮಾಹಿತಿ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಿಡ್ನಿಗಳು ದೇಹದ ಒಳಭಾಗದಲ್ಲಿರುತ್ತವೆ. ಅವುಗಳಿಗೆ ಸ್ನಾಯು ಮತ್ತು ಕೊಬ್ಬಿನ ಪದರಗಳು ರಕ್ಷಣೆ ನೀಡುತ್ತವೆ. ಡೈಪರ್ ದೇಹದ ಹೊರಭಾಗಕ್ಕೆ ಮಾತ್ರ ತಗಲುತ್ತದೆ. ಅದು ಯಾವುದೇ ಕಾರಣಕ್ಕೂ ಕಿಡ್ನಿಯವರೆಗೆ ತಲುಪುವುದಿಲ್ಲ. ಹಾಗಾಗಿ ಡೈಪರ್ ಬಳಸಿದರೆ ಕಿಡ್ನಿಗೆ ಹಾನಿ ಎಂಬುದು ಸಂಪೂರ್ಣ ತಪ್ಪು ಮಾಹಿತಿ.
ಬೇರೆ ಸಮಸ್ಯೆಗಳು ಬರ್ಬೋದು
ಡೈಪರ್‌ನಿಂದ ಕಿಡ್ನಿ ಸಮಸ್ಯೆ ಬರುವುದಿಲ್ಲ. ಆದರೆ ಬೇರೆ ಸಣ್ಣಪುಟ್ಟ ಸಮಸ್ಯೆಗಳು ಬರಬಹುದು.
ಡೈಪರ್ ರಾಶ್: ಒಂದೇ ಡೈಪರ್ ಹೆಚ್ಚು ಹೊತ್ತು ಒದ್ದೆಯಾಗಿದ್ದರೆ ಚರ್ಮ ಕೆಂಪಾಗುತ್ತದೆ. ಇದು ಕೇವಲ ಚರ್ಮದ ಸಮಸ್ಯೆ.
ಮೂತ್ರನಾಳದ ಸೋಂಕು (UTI): ಮಕ್ಕಳಲ್ಲಿ UTI ಬ್ಯಾಕ್ಟೀರಿಯಾದಿಂದ ಬರುತ್ತದೆ. ಇದು ನೇರವಾಗಿ ಡೈಪರ್‌ನಿಂದ ಬರುವುದಿಲ್ಲ. ಒದ್ದೆಯಾಗಿರುವುದು ಮತ್ತು ಸ್ವಚ್ಛತೆ ಇಲ್ಲದಿರುವುದರಿಂದ ಸಾಧ್ಯತೆ ಹೆಚ್ಚುತ್ತದೆ. ಆದರೆ ಕಿಡ್ನಿ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಯಾವುದೇ ತೊಂದರೆಯಾಗಲ್ಲ
ಡೈಪರ್ ಬಳಸುವುದರಿಂದ ಸಮಸ್ಯೆಗಳು ಬರುತ್ತವೆ ಎಂದು ಹಲವರು ಭಾವಿಸುತ್ತಾರೆ. ಆದರೆ ಡೈಪರ್ ಬಳಸುವುದು ತಪ್ಪಲ್ಲ. ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸಣ್ಣಪುಟ್ಟ ಸಮಸ್ಯೆಗಳು ಬರುತ್ತವೆ. ಸರಿಯಾದ ಕ್ರಮಗಳನ್ನು ಅನುಸರಿಸಿದರೆ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಚರ್ಮಕ್ಕೆ ಗಾಳಿಯಾಡುತ್ತೆ
ಸಾಮಾನ್ಯವಾಗಿ 3-4 ಗಂಟೆಗೊಮ್ಮೆ ಡೈಪರ್ ಬದಲಾಯಿಸಬೇಕು. ನವಜಾತ ಶಿಶುಗಳಿಗೆ ಪ್ರತಿ 2 ಗಂಟೆಗೊಮ್ಮೆ ಬದಲಾಯಿಸುವುದು ಉತ್ತಮ. ರಾತ್ರಿ ಹೆಚ್ಚು ಹೀರಿಕೊಳ್ಳುವ ಡೈಪರ್ ಮತ್ತು ಹಗಲಿನಲ್ಲಿ ಕಾಟನ್ ನ್ಯಾಪಿ ಬಳಸಿದರೆ ಚರ್ಮಕ್ಕೆ ಗಾಳಿಯಾಡುತ್ತದೆ. ಪ್ರತಿ ಬಾರಿ ಡೈಪರ್ ಬದಲಾಯಿಸುವಾಗ ಚರ್ಮವನ್ನು ಒಣಗಿಸಬೇಕು.
ಯಾವುದೇ ಸಮಸ್ಯೆ ಇರಲ್ಲ
ಡೈಪರ್ ಹಾಕುವ ಮೊದಲು ಚರ್ಮದ ಮೇಲೆ ರಾಶ್ ಕ್ರೀಮ್ ಅಥವಾ ಕೊಬ್ಬರಿ ಎಣ್ಣೆ ಹಚ್ಚಿದರೆ ರಕ್ಷಣಾತ್ಮಕ ಪದರ ಉಂಟಾಗುತ್ತದೆ. ಚರ್ಮವನ್ನು ತೇವವಾಗಿಡಬೇಕು. ಒಟ್ಟಿನಲ್ಲಿ ಮಕ್ಕಳಿಗೆ ಸರಿಯಾದ ಸ್ವಚ್ಛತೆ ಮತ್ತು ಸಮಯಕ್ಕೆ ಡೈಪರ್ ಬದಲಾಯಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

