ಒತ್ತಡ ಕಡಿಮೆ ಮಾಡೋ 7 ಸೂಪರ್‌ಫುಡ್‌ಗಳಿವು
ಅಧ್ಯಯನಗಳು ಹೇಳುವ ಪ್ರಕಾರ, ನಾವು ದಿನ ನಿತ್ಯ ಸೇವಿಸುವ ಕೆಲವು ಆಹಾರಗಳು ನಮ್ಮ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದ್ದು, ಅವ್ಯಾವು ಎಂದು ನೋಡೋಣ…

ಒತ್ತಡ ಕಡಿಮೆ ಮಾಡುವ ಆಹಾರ
ನಾವು ದಿನನಿತ್ಯ ಸೇವಿಸುವ ಕೆಲವು ಆಹಾರಗಳು ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದ್ದು, ಅವ್ಯಾವು ಎಂದು ನೋಡೋಣ…
ಅವಾಕಾಡೊ
ಅವಾಕಾಡೊದಲ್ಲಿ ಮೆಗ್ನೀಷಿಯಂ, ಒಮೆಗಾ-3 ಇದೆ. ಇದು ಕಾರ್ಟಿಸೋಲ್‌ನ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತೆ. ಇದರಲ್ಲಿ ವಿಟಮಿನ್‌ಗಳು (ಬಿ, ಇ, ಸಿ) ಸಹ ಹೇರಳವಾಗಿದೆ.
ಬ್ರೊಕೊಲಿ
ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಪೋಷಣೆ ನೀಡುವ ಪ್ರಿಬಯಾಟಿಕ್ಸ್‌ಗಳು ಬ್ರೊಕೊಲಿಯಲ್ಲಿವೆ. ಇವು ಕಾರ್ಟಿಸೋಲ್‌ನ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತವೆ.
ಮೊಸರು
ಬೇರೆ ಹುಳಿ ಆಹಾರಗಳಂತೆ, ಮೊಸರು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಪೋಷಣೆ ನೀಡುತ್ತೆ. ಇದು ಕಾರ್ಟಿಸೋಲ್‌ನ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತೆ.
ಡಾರ್ಕ್ ಚಾಕೊಲೇಟ್
ಮಿತವಾಗಿ ಡಾರ್ಕ್ ಚಾಕೊಲೇಟ್ ತಿನ್ನುವುದು ಕಾರ್ಟಿಸೋಲ್‌ನ ಪ್ರಮಾಣ ಕಡಿಮೆ ಮಾಡಿ, ಮನಸ್ಥಿತಿ ಸುಧಾರಿಸುತ್ತೆ ಅಂತ ಅಧ್ಯಯನಗಳು ಹೇಳುತ್ತವೆ.
ಸೀಡ್ಸ್
ಸೀಡ್ಸ್ ಗಳಲ್ಲಿ ಮೆಗ್ನೀಷಿಯಂ, ಒಮೆಗಾ-3 ಫ್ಯಾಟಿ ಆಸಿಡ್‌ಗಳಿವೆ. ಇವು ಒತ್ತಡ ಕಡಿಮೆ ಮಾಡಿ, ನರಮಂಡಲವನ್ನು ಶಾಂತಗೊಳಿಸುತ್ತವೆ.
ಪ್ರೋಟೀನ್ ಆಹಾರಗಳು
ಪ್ರೋಟೀನ್ ಶರೀರ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಅತ್ಯಗತ್ಯ. ಉತ್ತಮ ಪ್ರೋಟೀನ್ ಆಹಾರಗಳು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಸಾಲ್ಮನ್ ಮೀನು
ಸಾಲ್ಮನ್ ಮೀನಿನಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಮತ್ತು ಒಮೆಗಾ-3 ಇದೆ. ಇದು ಒತ್ತಡ ಕಡಿಮೆ ಮಾಡಲು ಸಹಾಯಕ.