MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Colorectal Cancer: ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ

Colorectal Cancer: ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ

Early onset colorectal cancer signs: ನಮ್ಮ ದೇಹ ನೀಡುವ ಕೆಲವು ಸಣ್ಣ ಸಂಕೇತಗಳನ್ನು ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತೇವೆ, ಆದರೆ ಅವು ಮಾರಣಾಂತಿಕ ಕಾಯಿಲೆಯ ಮುನ್ಸೂಚನೆಯೂ ಆಗಿರಬಹುದು. ನೀವು ಎಂದಿಗೂ ಕಡೆಗಣಿಸಬಾರದ ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಎಚ್ಚರಿಕೆ ಲಕ್ಷಣಗಳಿವು. 

2 Min read
Author : Ashwini HR
| Updated : Feb 27 2026, 01:26 PM IST
Share this Photo Gallery
  • FB
  • TW
  • Linkdin
  • Whatsapp
17
50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ
Image Credit : social media

50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ

ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಆರಂಭಿಕ ಹಂತದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ದೊಡ್ಡ ಕರುಳಿನಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಕೊಲೊರೆಕ್ಟಲ್ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಎನ್ನುತ್ತಾರೆ. 

27
ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಿವು
Image Credit : Getty

ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಿವು

ಮಲವಿಸರ್ಜನೆಯಲ್ಲಿ ಬದಲಾವಣೆ, ಮಲದಲ್ಲಿ ರಕ್ತ, ಕಾರಣವಿಲ್ಲದೆ ತೂಕ ಇಳಿಕೆ, ನಿರಂತರ ಹೊಟ್ಟೆ ನೋವು ಮತ್ತು ಅಸಾಮಾನ್ಯ ಸುಸ್ತು ಇವೆಲ್ಲವೂ ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ.

Related Articles

Related image1
Health Tips: ಡಾಕ್ಟರ್ ಹತ್ತಿರ ಹೋಗೋದು ಬೇಡ ಅಂದ್ರೆ, ಪ್ರತಿದಿನ ಈ 5 ತರಕಾರಿ ಮಿಸ್ ಮಾಡದೆ ತಿನ್ನಿ!
Related image2
Chicken Health: ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಭಾರೀ ಡೇಂಜರ್!
37
ಯಾರಲ್ಲಿ ಹೆಚ್ಚು?
Image Credit : Getty

ಯಾರಲ್ಲಿ ಹೆಚ್ಚು?

ಸಾಮಾನ್ಯವಾಗಿ 45-50 ವರ್ಷ ಮೇಲ್ಪಟ್ಟವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಕಳೆದ 30 ವರ್ಷಗಳಲ್ಲಿ, ವಿಶ್ವಾದ್ಯಂತ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಪ್ರಕರಣಗಳು ಸುಮಾರು 80% ಹೆಚ್ಚಾಗಿದೆ. ದೊಡ್ಡ ಕರುಳಿನ ಕ್ಯಾನ್ಸರ್ ಈಗ ವೇಗವಾಗಿ ಬೆಳೆಯುತ್ತಿದೆ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಹೇಳುತ್ತಾರೆ.
47
ಕ್ಯಾನ್ಸರ್ ಸಾವು ಶೇ. 44ರಷ್ಟು ಇಳಿಕೆ
Image Credit : Getty

ಕ್ಯಾನ್ಸರ್ ಸಾವು ಶೇ. 44ರಷ್ಟು ಇಳಿಕೆ

ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ 2026ರ ವರದಿಯ ಪ್ರಕಾರ, 1990ರಿಂದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಮೆರಿಕನ್ನರಲ್ಲಿ ಕ್ಯಾನ್ಸರ್‌ನಿಂದಾಗುವ ಸಾವುಗಳು ಶೇ. 44ರಷ್ಟು ಕಡಿಮೆಯಾಗಿವೆ. ಸುಧಾರಿತ ಚಿಕಿತ್ಸೆಗಳು ಮತ್ತು ಧೂಮಪಾನದ ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ದೊಡ್ಡ ಕರುಳಿನ ಕ್ಯಾನ್ಸರ್ ಪ್ರಮಾಣ ಮಾತ್ರ ಹೆಚ್ಚಾಗುತ್ತಲೇ ಇದೆ.

57
ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಅತಿಯಾದ ಸೇವನೆ
Image Credit : Getty

ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಅತಿಯಾದ ಸೇವನೆ

ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಅತಿಯಾದ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅತಿ ಹೆಚ್ಚು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವ ಮಹಿಳೆಯರಲ್ಲಿ ಕ್ಯಾನ್ಸರ್‌ಗೆ ಮುನ್ನ ಕಾಣಿಸಿಕೊಳ್ಳುವ ಕರುಳಿನ ಪಾಲಿಪ್ಸ್ (Precancerous colon polyps) ಉಂಟಾಗುವ ಸಾಧ್ಯತೆ ಶೇ. 45ರಷ್ಟು ಹೆಚ್ಚು ಎಂದು ಡಾ. ಸೌರಭ್ ಸೇಥಿ ಹೇಳುತ್ತಾರೆ.
67
ಈ ಆಹಾರಗಳ ಸೇವನೆ ಕಡಿಮೆ ಮಾಡಿ
Image Credit : Getty

ಈ ಆಹಾರಗಳ ಸೇವನೆ ಕಡಿಮೆ ಮಾಡಿ

ದೊಡ್ಡ ಕರುಳಿನ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುವ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಬ್ರೆಡ್, ಸಿಹಿಯಾದ ಮೊಸರು, ಫ್ಲೇವರ್ ಇರುವ ಕ್ರೀಮರ್‌ಗಳು ಮತ್ತು ಸಾಸ್‌ಗಳನ್ನು ಆದಷ್ಟು ದೂರವಿಡಿ.
77
ಪ್ರತಿದಿನ 25–38 ಗ್ರಾಂ ನಾರಿನಾಂಶವಿರುವ ಆಹಾರ
Image Credit : Getty

ಪ್ರತಿದಿನ 25–38 ಗ್ರಾಂ ನಾರಿನಾಂಶವಿರುವ ಆಹಾರ

ಪ್ರತಿದಿನ 25-38 ಗ್ರಾಂ ನಾರಿನಾಂಶವಿರುವ ಆಹಾರ ಸೇವಿಸಿ. ನಾರಿನಾಂಶವು ಕರುಳಿನ ಆರೋಗ್ಯಕ್ಕೆ ಸಹಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ ಮತ್ತು ದೊಡ್ಡ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಚಯಾಪಚಯ ಕ್ರಿಯೆಯ ಒತ್ತಡ ಮತ್ತು ಕರುಳಿನ ಉರಿಯೂತಕ್ಕೆ ಕಾರಣವಾಗುವ ಸಕ್ಕರೆಯನ್ನು ತ್ಯಜಿಸಿ. ನೀರು ಮತ್ತು ಸಕ್ಕರೆ ಇಲ್ಲದ ಚಹಾವನ್ನು ಕುಡಿಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಕ್ಯಾನ್ಸರ್

Latest Videos
Recommended Stories
Recommended image1
ಸೌತೆಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು
Recommended image2
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು
Recommended image3
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Related Stories
Recommended image1
Health Tips: ಡಾಕ್ಟರ್ ಹತ್ತಿರ ಹೋಗೋದು ಬೇಡ ಅಂದ್ರೆ, ಪ್ರತಿದಿನ ಈ 5 ತರಕಾರಿ ಮಿಸ್ ಮಾಡದೆ ತಿನ್ನಿ!
Recommended image2
Chicken Health: ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಭಾರೀ ಡೇಂಜರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved