ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶವಿದೆ. ವಿಟಮಿನ್ ಕೆ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂನಿಂದ ಸಮೃದ್ಧವಾಗಿರುವ ಇದು ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
health-life Feb 26 2026
Author: Ashwini HR Image Credits:Getty
Kannada
ತೂಕ ನಿಯಂತ್ರಣಕ್ಕೆ ಸಹಕಾರಿ
ಶೇ. 95ರಷ್ಟು ನೀರಿನಾಂಶ ಇರುವುದರಿಂದ ಸೌತೆಕಾಯಿ ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ಫೈಬರ್ ಇರುವುದರಿಂದ ತೂಕ ನಿಯಂತ್ರಣಕ್ಕೆ ಇದು ಸಹಾಯ ಮಾಡುತ್ತದೆ.
Image credits: Getty
Kannada
ಮಲಬದ್ಧತೆ ಸಮಸ್ಯೆ ತಡೆಯುತ್ತೆ
ಸೌತೆಕಾಯಿಯಲ್ಲಿರುವ ನೀರು ಮತ್ತು ಕರಗುವ ಫೈಬರ್ ಅಂಶಗಳು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ.
Image credits: Social Media
Kannada
ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೇದು
ಸೌತೆಕಾಯಿ ಚರ್ಮದ ಉರಿಯೂತ, ಮೊಡವೆ ಮತ್ತು ಸನ್‌ಬರ್ನ್ ಕಡಿಮೆ ಮಾಡುತ್ತದೆ. ಕಣ್ಣುಗಳ ಮೇಲೆ ಸೌತೆಕಾಯಿ ತುಂಡುಗಳನ್ನು ಇಡುವುದರಿಂದ ಕಣ್ಣಿನ ಸುತ್ತಲಿನ ಊತ ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತೆ.
Image credits: gemini
Kannada
ಮೂಳೆಗಳನ್ನು ಬಲಪಡಿಸುತ್ತೆ
ಸೌತೆಕಾಯಿ ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಅತ್ಯಗತ್ಯವಾಗಿದೆ.
Image credits: Getty
Kannada
ರಕ್ತದೊತ್ತಡವನ್ನು ನಿಯಂತ್ರಿಸುತ್ತೆ
ಸೌತೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು, ಸೋಡಿಯಂ ಕಡಿಮೆಯಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
Image credits: Facebook
Kannada
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತೆ
ಸೌತೆಕಾಯಿಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದರಲ್ಲಿರುವ ಫೈಬರ್ ಅಂಶದೊಂದಿಗೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.