ಮೆಮೊರಿ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ ಈ ಹರ್ಬ್ಸ್
ಆರೋಗ್ಯ (Health)ಕರವಾಗಿರೋದು ಎಷ್ಟು ಮುಖ್ಯ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಆದರೆ ಮೆದುಳಿನ ಆಲೋಚನಾ ಶಕ್ತಿ, ಅರ್ಥ ಮಾಡಿಕೊಳ್ಳೋದು, ನೆನಪಿಟ್ಟುಕೊಳ್ಳೋದು ಕಡಿಮೆಯಾದಾಗ ಏನು ಮಾಡಬೇಕೆಂದು ತಿಳಿಯೋದಿಲ್ಲ. ಮನಸ್ಸು (Mind) ದೇಹದ ಅತ್ಯಂತ ಪ್ರಮುಖ ಭಾಗ. ಇದು ಇತರ ಎಲ್ಲಾ ಅಂಗಗಳನ್ನು ಕೆಲಸ ಮಾಡಲು ಸಿದ್ಧಗೊಳಿಸುತ್ತೆ. ಸರಿಯಿಲ್ಲದ ಲೈಫ್ ಸ್ಟೈಲಿಂದಾಗಿ, ನಿಮ್ಮ ಮೆದುಳಿನ (Brain) ಕಾರ್ಯಚಟುವಟಿಕೆಗೆ ತೊಂದರೆಯಾಗಬಹುದು. ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಕಾಳಜಿ (Care) ವಹಿಸೋದು ಅತ್ಯಂತ ಪ್ರಮುಖ ವಿಷಯವಾಗಿರ್ಬೇಕು.
ಮೆದುಳಿಗೆ (Brain) ಪ್ರಯೋಜನವಾಗುವ ಕೆಲವು ಗಿಡಮೂಲಿಕೆ ಮತ್ತು ಮಸಾಲೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಝೈಮರ್ ಕಾಯಿಲೆಯ ಮೇಲೆ ಅವುಗಳ ಪರಿಣಾಮಗಳಿಗಾಗಿ ಈ ಅನೇಕ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನ ಏನು ಹೇಳುತ್ತೆ ಮತ್ತು ಯಾವ ರೀತಿಯ ತರಕಾರಿಗಳು ಆರೋಗ್ಯಕ್ಕೆ ಉತ್ತಮ ನೋಡೋಣ.
ಕೇಸರಿ (Saffron)- ಖಿನ್ನತೆಗೆ ಪ್ರಯೋಜನಕಾರಿ
ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದು. ಇದರ ವೈಜ್ಞಾನಿಕ ಹೆಸರು ಕ್ರೋಕಸ್ ಸ್ಯಾಟಿವಸ್. ಖಿನ್ನತೆಯಲ್ಲಿ ಕೇಸರಿಯ ಬಳಕೆಯು ತುಂಬಾ ಪ್ರಯೋಜನಕಾರಿ . ಇದರಲ್ಲಿರುವ ಕ್ರೋಚೆಟಿನ್ ನಿದ್ರಾಹೀನತೆ ಕಡಿಮೆ ಮಾಡುತ್ತೆ.ಇದು ಖಿನ್ನತೆ ಸಮಸ್ಯೆ ನಿವಾರಿಸುವ ಕೆಲಸ ಸಹ ಮಾಡುತ್ತೆ.
ಬಕೋಪಾ(Bacopa) - ಅಲ್ಝೈಮರ್ ಚಿಕಿತ್ಸೆಯಲ್ಲಿ ಉಪಯುಕ್ತ
ಬ್ರಾಹ್ಮಿ ಸಸ್ಯವನ್ನು ಬಾಕೋಪಾ ಎಂದೂ ಕರೆಯಲಾಗುತ್ತೆ . ಇದರ ವೈಜ್ಞಾನಿಕ ಹೆಸರು ಬಕೋಪಾ ಮೊನ್ನೆರಿ. ಇದು ಶತಮಾನಗಳಿಂದ ಸಾಂಪ್ರದಾಯಿಕ ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿರುವ ಸಸ್ಯ. ಇದನ್ನು ಸ್ಥಳೀಯವಾಗಿ ವಂದಲಗ ಎಂದು ಸಹ ಕರೆಯಲಾಗುತ್ತೆ.
ಬಕೋಪಾ ಮೆದುಳಿನಲ್ಲಿ ಆಲೋಚನೆ, ಕಲಿಕೆ ಮತ್ತು ಜ್ಞಾಪಕಶಕ್ತಿಗೆ ಅತ್ಯಗತ್ಯವಾದ ರಾಸಾಯನಿಕಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತೆ. ಇದು ಅಲ್ಜೈಮರ್ (alzheimer)ರೋಗದ ಕಾರಕಗಳಿಂದ ಮೆದುಳಿನ ಜೀವಕೋಶವನ್ನು ರಕ್ಷಿಸುತ್ತೆ. ನೀವು ಇದನ್ನು ಈಸಿಯಾಗಿ ಬ್ರೈನ್ ಬೂಸ್ಟ್ ಮಾಡೋ ಸ್ಮಾರ್ಟ್ ಡ್ರಗ್ಸ್ ಎಂದು ಕರೆಯಬಹುದು.
ಗ್ರೀನ್ ಟೀ(Green Tea) - ಆತಂಕ ಕಡಿಮೆ ಮಾಡುತ್ತೆ
ಗ್ರೀನ್ ಟೀಯನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಎಲೆಗಳಿಂದ ತಯಾರಿಸಲಾಗುತ್ತೆ. ಗ್ರೀನ್ ಟೀಯನ್ನು ಹೆಚ್ಚಾಗಿ ತೂಕ ಇಳಿಸುವ ಹರ್ಬ್ ಎಂದು ಕರೆಯಲಾಗುತ್ತೆ. ಈ ಗಿಡಮೂಲಿಕೆ ಆತಂಕ ಕಡಿಮೆ ಮಾಡುತ್ತೆ. ಮೆದುಳಿನ ಕಾರ್ಯನಿರ್ವಹಣೆ ಸುಧಾರಿಸುತ್ತೆ. ಏಕಾಗ್ರತೆ ಹೆಚ್ಚಿಸುವಲ್ಲಿ ಇದು ಪ್ರಯೋಜನಕಾರಿ.
ಲೆಮನ್ ಬಾಮ್ - ಮೂಡ್ ಬೂಸ್ಟ್ ಮಾಡುತ್ತೆ
ಲೆಮನ್ ಬಾಮ್ ನ ವೈಜ್ಞಾನಿಕ ಹೆಸರು ಮೆಲಿಸ್ಸಾ ಅಫಿನಾಲಿಸ್. ಇದನ್ನು ಬಾಮ್ ಪುದೀನಾ(Mint), ನೀಲಿ ಬಾಮ್, ಗಾರ್ಡನ್ ಬಾಮ್ ಮತ್ತು ಸ್ವೀಟ್ ಬಾಮ್ ಎಂದೂ ಕರೆಯಲಾಗುತ್ತೆ. ಲೆಮನ್ ಬಾಮ್ ನಲ್ಲಿರುವ ಆಂಟಿ-ಸ್ಟ್ರೆಸ್ ಮತ್ತು ಆಕ್ಸಿಯೋಲೈಟಿಕ್ ಗುಣಲಕ್ಷಣ ಒತ್ತಡ ಕಡಿಮೆ ಮಾಡುವ ಮೂಲಕ ಉತ್ತಮ ನಿದ್ರೆ ನೀಡುವ ಕೆಲಸ ಮಾಡುತ್ತೆ. ಲೆಮನ್ ಬಾಮ್ ಮಾನಸಿಕ ಆರೋಗ್ಯ ಸಹ ಸುಧಾರಿಸುತ್ತೆ.
ಗೋಟ್ ಕೋಲಾ - ಮೆಮೊರಿ(Memory)ಹೆಚ್ಚಿಸುತ್ತೆ
ಗೋಟ್ ಕೋಲಾದ ವೈಜ್ಞಾನಿಕ ಹೆಸರು ಸೆಂಟೆಲ್ಲಾ ಏಷ್ಯಾಟಿಕಾ. ಇದು ಚೈನೀಸ್ ಮತ್ತು ಆಯುರ್ವೇದಿಕ್ ವೈದ್ಯಕೀಯ ಪದ್ಧತಿಗಳಲ್ಲಿ ದೀರ್ಘಕಾಲದಿಂದ ಬಳಸುವ ಮೂಲಿಕೆ. 2016ರ ಸ್ಟಡಿ ಗೋಟ್ ಕೋಲಾ ಮತ್ತು ಫೋಲಿಕ್ ಆಸಿಡ್ ಸ್ಟ್ರೋಕ್ ನಂತರ ಆಲೋಚನೆ, ತಿಳುವಳಿಕೆ, ಕಲಿಕೆಯ ಶಕ್ತಿ ಸುಧಾರಿಸುವಲ್ಲಿ ಪ್ರಯೋಜನಕಾರಿ ಎಂದು ತೋರಿಸುತ್ತೆ. ಆದರೆ ಗೋಟ್ ಕೋಲಾ ಮೆಮೊರಿ ಡೊಮೇನ್ ಅನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿ.