ಇವುಗಳನ್ನು ತಪ್ಪಿಯೂ ನಿಮ್ಮ ಗ್ರೀನ್ ಟೀಗೆ ಸೇರಿಸಬೇಡಿ..!
ಗ್ರೀನ್ ಟೀ ಕುಡಿಯೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು, ಇದು ಪೂರ್ತಿ ದಿನ ನಮ್ಮನ್ನು ಫ್ರಶ್ ಆಗಿಡುತ್ತೆ ಎಂದು ಬಹಳಷ್ಟು ಜನ ಬೆಳಗ್ಗೆ ಗ್ರೀನ್ ಟೀ ಹೀರುತ್ತಾರೆ. ಆದರೆ ಕೆಲವೊಂದು ವಿಚಾರ ಗಮನದಲ್ಲಿಡದಿದ್ದರೆ ನೀವೆಷ್ಟು ಗ್ರೀನ್ ಟೀ ಕುಡಿದರೂ ರಿಸಲ್ಟ್ ಝೀರೊ. ಗ್ರೀನ್ ಟೀ ತಯಾರಿಸುವಾಗ ನೀವು ಗಮನದಲ್ಲಿಡಬೇಕಾದ ವಿಚಾರಗಳಿವು
ಕೆಲವೊಂದು ವಿಚಾರ ಗಮನದಲ್ಲಿಡದಿದ್ದರೆ ನೀವೆಷ್ಟು ಗ್ರೀನ್ ಟೀ ಕುಡಿದರೂ ರಿಸಲ್ಟ್ ಝೀರೊ. ಗ್ರೀನ್ ಟೀ ತಯಾರಿಸುವಾಗ ನೀವು ಗಮನದಲ್ಲಿಡಬೇಕಾದ ವಿಚಾರಗಳಿವು
ಗ್ರೀನ್ ಟೀಯನ್ನು ಸಂಸ್ಕರಿಸದ ಎಲೆಗಳಿಂದ ತಯಾರಿಸಲಾಗುತ್ತದೆ. ಆದ್ದರಿಂದಲೇ ಇತರ ಚಹಾಗಳಿಗಿಂತ ಭಿನ್ನವಾಗಿರುತ್ತದೆ. ಈ ಟೀ ಪಾಲಿಫಿನಾಲ್ಸ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳ ಸಾಂದ್ರತೆಯನ್ನು ಹೊಂದಿರುತ್ತದೆ.
ಗ್ರೀನ್ ಟೀ ನಿಮ್ಮ ಮೆದುಳಿಗೆ ಮುಖ್ಯ. ಇದು ಮೆದುಳಿನ ಶಾಂತ ಚಿಂತನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಸಾಮಾನ್ಯ ಚಾಹಾವನ್ನು ಕುಡಿಯುತ್ತಾರೆ.
ಇದು ಇಜಿಸಿಜಿಯನ್ನು ಕೂಡಾ ಒಳಗೊಂಡಿದೆ. ಇದು ಕಣ್ಣಿನ ತಡೆಗೋಡೆ ದಾಟಬಲ್ಲ ಏಕೈಕ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ.
ಇಂದಿನ ದಿನಗಳಲ್ಲಿ ಜನರು ಮೊಬೈಲ್, ಕಂಪ್ಯೂಟರ್‌ಗಳನ್ನು ಹೆಚ್ಚಾಗಿ ಬಳಸುವಾಗ ನಿಮ್ಮ ಕಣ್ಣಿಗೂ ಸುಸ್ತಾಗುತ್ತದೆ. ನಿಮ್ಮ ಕಣ್ಣಿಗೂ ವಿಶ್ರಾಂತಿ ಬೇಕಲ್ಲವೇ
ಗ್ರೀನ್ ಟೀಗೆ ಎಂದಿಗೂ ಸಕ್ಕರೆ ಸೇರಿಸಬೇಡಿ. ಬದಲಿಗೆ ಜೇನುತುಪ್ಪವನ್ನು ಸೇರಿಸಿ ನೋಡಬಹುದು. ಸಕ್ಕರೆಯಲ್ಲಿ ಕ್ಯಾಲೊರಿ ಸಮೃದ್ಧವಾಗಿದೆ ಇದು ತೂಕ ಇಳಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಸವಾಲಾಗಬಹುದು.
ಗ್ರೀನ್ ಟೀಗೆ ಎಂದಿಗೂ ಹಾಲು ಸೇರಿಸಬೇಡಿ. ಹಾಲು ನಿಮ್ಮ ದೇಹ ಸೇರಿದಾಗ ಉತ್ಕರ್ಷಣ ನಿರೋಧಕಗಳ ಶಕ್ತಿ ಕಡಿಮೆ ಮಾಡುತ್ತದೆ.