Asianet Suvarna News Asianet Suvarna News

ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ ಅಪಾಯ ಹೆಚ್ಚು..!

ದಿನಕ್ಕೆ ನೀವೆಷ್ಟು ಗಂಟೆ ನಿದ್ದೆ (Sleep) ಮಾಡ್ತೀರಿ. ಆರೋಗ್ಯ (Health)ವಾಗಿರಲು ಸಾಕಾಗುವಷ್ಟು ಗಂಟೆ, ಗುಣಮಟ್ಟದ ನಿದ್ದೆ ಮಾಡ್ತಿದ್ದೀರಾ ? ಇಲ್ಲ ರಾತ್ರಿಯೆಲ್ಲಾ ಬೆಡ್‌ ಮೇಲೆ ಬಿದ್ಕೊಂಡು ಮೊಬೈಲ್‌ (Mobile) ಸ್ಕ್ರಾಲ್‌ ಮಾಡ್ತಾ ಸಮಯ (Time) ಕಳೆದು ಹಗಲು ಮಲಗೋ ಅಭ್ಯಾಸನಾ. ಹಾಗಿದ್ರೆ ತಿಳ್ಕೊಳ್ಳಿ, ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್‌ನ ಅಪಾಯ ಜಾಸ್ತಿಯಂತೆ.

Sleep Habits Can Predict Risk Of Developing Alzheimers Vin
Author
Bengaluru, First Published Mar 23, 2022, 2:23 PM IST

ಮನುಷ್ಯ ದಿನಪೂರ್ತಿ ಚಟುವಟಿಕೆಯಿಂದ ಇರುವುದು ಹೇಗೆ ಮುಖ್ಯವೋ ಹಾಗೆಯೇ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ (Sleep) ಮಾಡಿ ವಿಶ್ರಾಂತಿ (Rest) ಪಡೆಯುವುದು ಸಹ ಮುಖ್ಯ. ನಿದ್ದೆ ಸರಿಯಾಗಿ ಆಗದೆ, ದೇಹ (Body) ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನಿದ್ದೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಆದ್ರೆ ಮನುಷ್ಯನ ಬಿಡುವಿಲ್ಲದ ಜೀವನಶೈಲಿಯಲ್ಲಿ ಸರಿಯಾಗಿ ನಿದ್ದೆ ಮಾಡೋಕು ಸಮಯ ಸಿಗ್ತಿಲ್ಲ. ಹೆಚ್ಚು ದುಡಿಯುವ, ಹೆಚ್ಚು ಎಂಜಾಯ್ ಮಾಡುವ ಮನೋಭಾವದಿಂದ ಮನುಷ್ಯರು ನಿದ್ದೆಯ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲ್ತಿದ್ದಾರೆ. 

ಕಡಿಮೆ ನಿದ್ದೆ ಮಾಡೋ ಅಭ್ಯಾಸ ಮಾತ್ರ ಅಲ್ಲ. ಹಗಲು ನಿದ್ದೆ ಮಾಡೋ ಅಭ್ಯಾಸ ಕೂಡಾ ಹಲವು ಕಾಯಿಲೆಗಳಿಗೆ ಕಾರಣವಾಗುತ್ತೆ. ಹಗಲು ನಿದ್ದೆ ಮಾಡುವ ಅಭ್ಯಾಸದಿಂದ ಆಲ್ಝೈಮರ್ ಅಪಾಯ ಹೆಚ್ಚಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ನಿದ್ದೆ ಮಾಡದಿರುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇತ್ತೀಚಿನ ಸಂಶೋಧನೆಯು ಹಗಲಿನ ನಿದ್ದೆ ಮತ್ತು ಆಲ್ಝೈಮರ್ ಮತ್ತು ಇತರ ಬುದ್ಧಿಮಾಂದ್ಯತೆಗಳ ನಡುವಿನ ಸಂಬಂಧವನ್ನು ಕಂಡುಹಿಡಿದಿದೆ. ದಿನಕ್ಕೆ ಒಮ್ಮೆಯಾದರೂ ನಿದ್ದೆ ಮಾಡುವ ಜನರು ದಿನಕ್ಕೆ ಒಂದಕ್ಕಿಂತ ಕಡಿಮೆ ಬಾರಿ ನಿದ್ದೆ ಮಾಡುವವರಿಗಿಂತ ಆಲ್ಝೈಮರ್‌ನ ಬೆಳವಣಿಗೆಯ 40 ಪ್ರತಿಶತ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ನಿದ್ದೆ ಮಾಡುವಾಗ ಹೀಗೆಲ್ಲಾ ಆದ್ರೆ ಹಠಾತ್ ಹೃದಯಾಘಾತದ ಸಾಧ್ಯತೆ ಹೆಚ್ಚು !

ಆಲ್ಝೈಮರ್‌ ಎಂದರೇನು ?
ಆಲ್ಝೈಮರ್‌  ಹಾಗೂ ಡಿಮೆನ್ಷಿಯಾಗಳು ಮರೆವಿನ ಕಾಯಿಲೆಗಳು, ಕ್ರಮೇಣ ಇವು ನರವ್ಯೂಹದ ಮೇಲಿನ ನಮ್ಮ ನಿಯಂತ್ರಣವನ್ನೂ ಕುಂದಿಸುತ್ತವೆ. ಹೀಗಾಗಿಯೇ ಕಡಿಮೆ ನಿದ್ದೆ ಮಾಡುವುದರಿಂದ ಈ ಸಮಸ್ಯೆ ಬೇಗನೆ ಕಾಣಿಸಿಕೊಳ್ಳುತ್ತದೆ ಎನ್ನುತ್ತದೆ ಅಧ್ಯಯನ. ಈ ರೋಗವನ್ನು ಬರುವ ಮುನ್ನ ಗುರುತಿಸಬಹುದಾದ ಲಕ್ಷಣಗಳನ್ನು ನೆನಪಿಟ್ಟುಕೊಳ್ಳಿ, ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳತೊಡಗಿದರೆ, ನೀವು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದರ್ಥ.

ಅಲ್ಜೀಮರ್ಸ್‌ ಕಾಯಿಲೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದು ನೆನಪಿನ ಶಕ್ತಿ ನಷ್ಟವಾಗುವುದು. ಅದರಲ್ಲೂ ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು. ಮರೆತು ಹೋಗುವ ಇತರ ವಿಚಾರಗಳೆಂದರೆ ದಿನಾಂಕಗಳು ಮತ್ತು ಘಟನೆಗಳು, ಪದೇಪದೇ ಒಂದೇ ಮಾಹಿತಿಯನ್ನು ಕೇಳುವುದು, ನೆನಪಿಗೆ ಟಿಪ್ಪಣಿಗಳು ಅಥವಾ ಮೊಬೈಲ್ ಹೆಚ್ಚು ಅವಲಂಬಿಸುವುದು ಅಥವಾ ಹಿಂದೆ ಸ್ವತಃ ನಿಭಾಯಿಸುತ್ತಿದ್ದ ಕೆಲಸಗಳಿಗೆ ಕುಟುಂಬ ಸದಸ್ಯರನ್ನು ಅವಲಂಬಿಸುವುದು ಮೊದಲಾದ ಸಮಸ್ಯೆ ಕಂಡು ಬರುತ್ತದೆ. ನಿಮ್ಮ ಮೆದುಳು ಚುರುಕಾಗಿರುವಂತೆ ನೋಡಿಕೊಳ್ಳುವುದು ಈ ರೋಗಗಳನ್ನು ದೂರವಿಡುವ ಪ್ರಮುಖ ಉಪಾಯ. 

ಕಿರಿಯ ಜನರಲ್ಲಿ ಕಡಿಮೆ ನಿದ್ದೆ ಮಾಡುವ ಅಭ್ಯಾಸ ಸಾಮಾನ್ಯವಾಗಿದೆ. ವಯಸ್ಸಾದಂತೆ ಈ ಅಭ್ಯಾಸ ಹೆಚ್ಚು ರೂಢಿಯಾಗಿಬಿಡುತ್ತದೆ. ಇದರಿಂದ ಬುದ್ಧಿಮಾಂದ್ಯತೆ, ನೆನಪಿನ ಶಕ್ತಿ ಕಡಿಮೆಯಾಗುವುದು ಮೊದಲಾದ ಸಮಸ್ಯೆ ಕಂಡು ಬರುತ್ತದೆ. ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವುದು ಮೆದುಳಿನಲ್ಲಿರುವ ನ್ಯೂರಾನ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ಕಂಡುಹಿಡಿದಿದೆ.

ನಿದ್ದೆ ಮಾಡುವಾಗ ಮೂಗಿನಲ್ಲಿ ರಕ್ತಸ್ರಾವ ಆಗೋಕೆ ಕಾರಣವೇನು ?

ನಿದ್ರಾಹೀನತೆ ಅಥವಾ ಅತಿಯಾದ ಹಗಲಿನ ನಿದ್ರೆ (Day Sleep)ಗಳನ್ನು ಮಾಡಿದ ಜನರು, ಮಾಡದ ಜನರಿಗೆ ಹೋಲಿಸಿದರೆ ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಒಂದು ಅಧ್ಯಯನವು ತೋರಿಸಿದೆ. ಕಡಿಮೆ ನಿದ್ರೆಯ ಸಮಯವನ್ನು ಹೊಂದಿರುವ ಜನರು ತಮ್ಮ ಮೆದುಳಿನಲ್ಲಿ ಹೆಚ್ಚಿನ ಮಟ್ಟದ ಬೀಟಾ-ಅಮಿಲಾಯ್ಡ್ ಅನ್ನು ಹೊಂದಿರುತ್ತಾರೆ ಎಂದು ಇತರ ಸಂಶೋಧನೆಗಳು ತೋರಿಸಿವೆ. ಇದು ಸಾಮಾನ್ಯವಾಗಿ ಆಲ್ಝೈಮರ್ಸ್ ಕಾಯಿಲೆ ಇರುವ ಜನರ ಮೆದುಳಿನಲ್ಲಿ ಕಂಡುಬರುತ್ತದೆ.

ಅಧ್ಯಯನದಲ್ಲಿ, ಸಂಶೋಧಕರು 1,401 ಹಿರಿಯರಿಂದ ಡೇಟಾವನ್ನು ಟ್ರ್ಯಾಕ್ ಮಾಡಿದ್ದಾರೆ, ಅವರು ದಿನದಲ್ಲಿ ಅವರ ಚಲನವಲನವನ್ನು ಮೇಲ್ವಿಚಾರಣೆ ಮಾಡುವ ವಾಚ್ ತರಹದ ಸಾಧನವನ್ನು ಧರಿಸಿದ್ದರು. ಸಂಶೋಧಕರು ಅಧ್ಯಯನದ ಪ್ರಾರಂಭದಲ್ಲಿ ಸಾಮಾನ್ಯ ಜ್ಞಾನವನ್ನು ಹೊಂದಿದ್ದ 24 ಪ್ರತಿಶತವನ್ನು ನೋಡಿದಾಗ ಆರು ವರ್ಷಗಳ ನಂತರ ಆಲ್ಝೈಮರ್‌ನ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಿದರು ಮತ್ತು ಅವರ ಅರಿವು ಸ್ಥಿರವಾಗಿ ಉಳಿದಿರುವವರೊಂದಿಗೆ ಹೋಲಿಸಿದಾಗ, ಅವರು ನಿದ್ದೆ ಮಾಡುವ ಅಭ್ಯಾಸದಲ್ಲಿ ವ್ಯತ್ಯಾಸಗಳನ್ನು ಕಂಡುಕೊಂಡರು ಎಂದು ತಿಳಿದುಬಂದಿದೆ.

ಆಲ್ಝೈಮರ್‌ 80 ವರ್ಷಕ್ಕಿಂತ ಮೇಲ್ಪಟ್ಟ ಆರು ಜನರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಟ್ಟಾರೆಯಾಗಿ ಸುಮಾರು 850,000 ಜನರು ಯುಕೆಯಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೆದುಳಿನಲ್ಲಿ ಅಮಿಲಾಯ್ಡ್ ಬೀಟಾ ಪ್ರೋಟೀನ್‌ಗಳ ರಚನೆಯು ರೋಗದ ವಿಶಿಷ್ಟ ಲಕ್ಷಣವಾಗಿದೆ,

Follow Us:
Download App:
  • android
  • ios