Asianet Suvarna News Asianet Suvarna News

ಮಕ್ಕಳಲ್ಲಿ ಮರೆವಿನ ಸಮಸ್ಯೆ ಹೊಡೆದೋಡಿಸಲು ಒಂದೆಲಗ

ಸಣ್ಣ ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿ ನೆನಪಿನ ಶಕ್ತಿಯ ಕೊರತೆಯಿದ್ದರೆ, ದಿನವೂ ಒಂದು ಅಥವಾ ಎರಡು ಎಳೆಯ ಒಂದೆಲಗ ಎಲೆಗಳನ್ನು ತಿನ್ನಿಸಿದರೆ ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಇದನ್ನು ಆಯುರ್ವೇದಲ್ಲೂ ಹೇಳಲಾಗಿದೆ.

For better memory eat this plant leaves
Author
Bengaluru, First Published Jul 20, 2021, 4:38 PM IST

ಕನ್ನಡದಲ್ಲಿ ಒಂದೆಲಗ, ತಿಮರೆ ಎಂದು ಕರೆಯಲಾಗುವ, ಸಂಸ್ಕೃತದಲ್ಲಿ ಬ್ರಾಹ್ಮಿ ಎಂಬ ಹೆಸರು ಹೊಂದಿರುವ ಸಸ್ಯದ ಎಲೆಗಳು ಜ್ಞಾಪಕ ಶಕ್ತಿಯ ವೃದ್ಧಿಗೆ ತುಂಬಾ ಇಂಬು ಕೊಡುತ್ತವೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿ. ಇದನ್ನು ಮನೆಯಲ್ಲಿ ಬೆಳೆಸುವುದೂ ಸುಲಭ.

ಸಣ್ಣ ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿ ನೆನಪಿನ ಶಕ್ತಿಯ ಕೊರತೆಯಿದ್ದರೆ, ದಿನವೂ ಒಂದು ಅಥವಾ ಎರಡು ಎಳೆಯ ಒಂದೆಲಗ ಎಲೆಗಳನ್ನು ತಿನ್ನಿಸಿದರೆ ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಇದನ್ನು ಆಯುರ್ವೇದಲ್ಲೂ ಹೇಳಲಾಗಿದೆ. ಒಂದೆಲಗದ ರೆಡಿಮೇಡ್ ಪುಡಿಗಳೂ ಲಭ್ಯ. ಇದನ್ನು ಹಾಲು ಅಥವಾ ಜೇನಿನ ಜೊತೆಗೆ ಕೊಡಬಹುದು.

ಮಾನಸಿಕ ಒತ್ತಡ ನಿವಾರಣೆ

ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ. ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಚಿಕಿತ್ಸಕ ಗುಣ ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿ ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು.

ಉಸಿರಿನ ದುರ್ವಾಸನೆ ಓಡಿಸೋ ಪಾನ್‌ನಿಂದ ಪುರುಷರಿಗಿದೆ ಮತ್ತೊಂದು ಪ್ರಯೋಜನ!

ಇಂದಿನ ದಿನಗಳಲ್ಲಿ ಹೆಚ್ಚಿನ ಜನ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಒತ್ತಡ ಹಾಗೂ ಆತಂಕ. ಕೊರೊನಾ ಲಾಕ್ಡೌನ್‌ನಿಂದಾಗಿ ಇದು ಹೆಚ್ಚಾಗಿದೆ. ಬ್ರಾಹ್ಮಿ ತಿಂದರೆ ಅದರಿಂದ ಪರಿಹಾರ ಪಡೆಯಬಹುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಅಂಶಗಳು ಇವೆ. ಬ್ರಾಹ್ಮಿಯು ನರ ವ್ಯವಸ್ಥೆಯನ್ನು ಶಾಂತವಾಗಿಟ್ಟು, ಆರಾಮ ನೀಡುವುದು ಹಾಗೂ ಆಮ್ಲಜನಕವನ್ನು ಉತ್ತಮಪಡಿಸುವುದು. ದಿನಿವಿಡೀ ಕೆಲಸ ಮಾಡಿದರೂ ದಣಿವು ಕಂಡುಬರದು. ಹೃದಯದ ಮತ್ತು ಶ್ವಾಸಕೋಶದ ಆರೋಗ್ಯವನ್ನು ಇದು ಕಾಪಾಡುವುದು.

​ಅಲ್ಜೈಮರ್ ಸಮಸ್ಯೆ ದೂರ

ವಯಸ್ಸಾದವರಲ್ಲಿ ಅಲ್ಝೈಮರ್ ಸಮಸ್ಯೆ ಉಂಟಾದಾಗ ಕೇವಲ ನೆನಪು ಶಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೆ, ಖಿನ್ನತೆ ಹಾಗೂ ಭ್ರಮೆಯಂತಹ ಸಮಸ್ಯೆಗೆ ಒಳಗಾಗುವರು. ಇದನ್ನು ನಿಭಾಯಿಸುವುದು ತುಂಬಾ ಕಷ್ಟ. ಅವರಿಗೆ ಇಂತಹ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಬ್ರಾಹ್ಮಿಯನ್ನು ಪ್ರತಿನಿತ್ಯವೂ ನೀಡಿ. ಮಾನಸಿಕವಾಗಿ ಕುಗ್ಗುವುದು ಮತ್ತು ನೆನಪಿನ ಶಕ್ತಿ ಕುಂದುವುದನ್ನು ಬ್ರಾಹ್ಮಿ ನಿವಾರಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಮಳೆಗಾಲದಲ್ಲಿ ಧರಿಸೋ ಒಳ ಉಡುಪು ಹೇಗಿರಬೇಕು?

ಅಪಸ್ಮಾರ ನಿವಾರಣೆ

ಅಪಸ್ಮಾರ ಅಥವಾ ಫಿಟ್ಸ್ ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು, ನರವ್ಯವಸ್ಥೆ ಸರಿಪಡಿಸಿ ಆಘಾತವನ್ನು ತಡೆಯುವುದು.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿವೆ. ವಿಶೇಷವಾಗಿ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಹೊಸ ಜೀವಕೋಶಗಳನ್ನು ಪಡೆಯುವ ಮೂಲಕ ಸಹಜ ಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಚರ್ಮದ ಕೆಳಪದರ (ಹೈಪೋಡರ್ಮಿಸ್) ಮತ್ತು ಸಂಪರ್ಕ ಅಂಗಾಂಶಗಳಲ್ಲಿ ರಕ್ತಪರಿಚಲನೆ, ತೈಲಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಚರ್ಮವ್ಯಾಧಿಗಳಾದ ಸೋರಿಯಾಸಿಸ್, ತುರಿಕೆ, ಕೀವು ಮತ್ತು ವ್ರಣಗಳಾಗುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇದ್ದರೆ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

ಪತ್ನಿ ಹೆರಿಗೆಯ ನಂತರ ಪುರುಷರನ್ನೂ ಕಾಡುತ್ತೆ ಖಿನ್ನತೆ!

ಕೂದಲು ಉದುರುವಿಕೆ ತಡೆ

ಒಂದೆಲಗವನ್ನು ತುಂಬಾ ಹಿಂದಿನಿಂದಲೂ ಕೂದಲು ಉದುರುವಿಕೆ ತಡೆಯಲು ಬಳಸಲಾಗುತ್ತಿದೆ. ಇದು ಕೂದಲಿನ ಮರುಬೆಳವಣಿಗೆಗೆ ನೆರವಾಗುವುದು. ಕೂದಲಿನ ಕಿರುಚೀಲಗಳು ಪೋಷಣೆಯಿಲ್ಲದೆ ದುರ್ಬಲಗೊಂಡಾಗ ಕೂದಲು ಉದುರುವುದು. ಈ ಗಿಡಮೂಲಿಕೆಯು ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ, ತಲೆಬುರುಡೆಗೆ ಪೋಷಣೆ ನೀಡುವುದು. ಇದು ರಕ್ತಸಂಚಾರ ಉತ್ತಮಪಡಿಸಿ, ಕೂದಲ ಬೆಳವಣಿಗೆಗೆ ನೆರವಾಗುವುದು.

ಒಂದೆಲಗವನ್ನು ಸಣ್ಣ ಕುಂಡಗಳಲ್ಲಿ ನೆಟ್ಟು, ಬಿಸಿಲು ಬೀಳುವ ಜಾಗದಲ್ಲಿ ಇಟ್ಟರೆ ಅದು ಕಡಿಮೆ ಸಮಯದಲ್ಲೇ ಸಾಕಷ್ಟು ಎಲೆಗಳನ್ನು ಬಿಡುತ್ತದೆ. ಸಾಕಲು ಕಷ್ಟವಿಲ್ಲ.

Follow Us:
Download App:
  • android
  • ios