Asianet Suvarna News Asianet Suvarna News

Health Tips: ಕೊರೋನಾ ನಂತ್ರ ನಿಮ್ಮ ಮೆಮೊರಿ ದುರ್ಬಲವಾಗ್ತಿದೆಯಾ ?

ಕೊರೊನಾ (Corona) ವರದಿ ನೆಗೆಟಿವ್ ಬಂದರೆ ರೋಗಿಗಳು ಮೊದಲಿನಂತೆಯೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗುತ್ತಾರೆ (Healthy) ಎಂದು ನಂಬಲಾಗಿತ್ತು. ಆದರೆ ಇದೀಗ ನಡೆದ ಸಂಶೋಧನೆಯ ಪ್ರಕಾರ, ಕೊರೊನಾ ವೈರಸ್ ಸೋಂಕಿನ ಪರಿಣಾಮ ಚೇತರಿಸಿಕೊಂಡ ನಂತರವೂ ವರ್ಷಗಳವರೆಗೆ ಕಾಣಬಹುದು. ಇದು ಮೆಮೊರಿ ನಷ್ಟ (Memory Loss)ದಂತಹ ಸಮಸ್ಯೆಗೆ ಕಾರಣವಾಗುತ್ತದೆ. 

Will Memory Problems and Cognitive Issues Post Covid 19
Author
Bangalore, First Published May 14, 2022, 12:27 PM IST

2019ರಲ್ಲಿ ಚೀನಾದ (China ) ವುಹಾನ್‌ನಲ್ಲಿ ಪ್ರಾರಂಭವಾದ ಕೋವಿಡ್‌ (Covid )ನ ಮಾರಣಾಂತಿಕ ಅಲೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಇಲ್ಲಿಯವರೆಗೆ ಅದರ ಹಲವು ರೂಪಾಂತರಗಳು ಜಗತ್ತಿ (World) ನಲ್ಲಿ ವಿನಾಶ (Destruction) ವನ್ನುಂಟು ಮಾಡ್ತಿದೆ. ಭಾರತದಲ್ಲಿ ಇದೀಗ ನಾಲ್ಕನೇ ಅಲೆ ನಡೆಯುತ್ತಿದೆ. ಕೊರೊನಾ ಸೋಂಕಿ (Infection) ನ ಹಲವು ಲಕ್ಷಣ (Feature) ಗಳು ಕಂಡು ಬರ್ತಿವೆ.  ಈ ನಡುವೆ ಇದೀಗ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ. ಈ ಸವಾಲು ಕೋವಿಡ್ ನಂತರದ ಲಕ್ಷಣವಾಗಿದೆ. ಇದರಲ್ಲಿ ರೋಗಿಗಳು ಅನೇಕ ರೀತಿಯ ಮಾನಸಿಕ ಮತ್ತು ನರಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೀವ್ರವಾಗಿ ಸೋಂಕಿತ ರೋಗಿಗಳು ಮಾತ್ರವಲ್ಲದೆ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಸಹ ಇದರಿಂದ ತೊಂದರೆಗೊಳಗಾಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೋವಿಡ್ -19 ನ ವೈರಸ್ ಮಾನಸಿಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಲ್ಲಿ ಗೊಣಗುವುದು, ಹೆದರಿಕೆ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿದೆ. ಈಗಾಗಲೇ ಮಾನಸಿಕವಾಗಿ ಅಸ್ವಸ್ಥರಾಗಿರುವ ಜನರು SARS-CoV-2 ಸೋಂಕಿಗೆ ಹೆಚ್ಚು ಗುರಿಯಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.  

ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಕೊರೊನಾ : ಕೋವಿಡ್ ನಂತರದ ರೋಗಲಕ್ಷಣಗಳಲ್ಲಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ. ವೈರಸ್‌ಗಳು ಮೆದುಳಿನ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬುದು ಈಗ ಪತ್ತೆಯಾಗಿದೆ. ಆದ್ರೆ ಇದಕ್ಕೆ ಸೂಕ್ತ ಪುರಾವೆ ಸಿಗ್ತಿಲ್ಲ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ. 

DRY MOUTH: ಬಾಯಿ ಒಣಗುವುದೇ? ಈ 6 ರೋಗಗಳ ಲಕ್ಷಣವಿರಬಹುದು

ಕೊರೊನಾ ನಂತ್ರ ಕಾಣಿಸಿಕೊಳ್ಳತ್ತದೆ ಮೆದುಳಿನ ಈ ಸಮಸ್ಯೆ : ಈವರೆಗೆ ನಡೆದ ಅಧ್ಯಯನದ ಪ್ರಕಾರ, ಕೊರೊನಾ ನಂತ್ರ ಮೆದುಳು ದೊಡ್ಡ ಮಟ್ಟದಲ್ಲಿ ಪ್ರಭಾವಕ್ಕೊಳಗಾಗುತ್ತದೆ. ಕೊರೊನಾದಿಂದ ಚೇತರಿಸಿಕೊಂಡ ಜನರು, ಗೊಂದಲಕ್ಕೊಳಗಾಗುವ ಸಮಸ್ಯೆ ಎದುರಿಸುತ್ತಿದ್ದಾರೆ. ಮೂರ್ಛೆ ಹೋಗುವುದು, ಗಮನ ಕೇಂದ್ರೀಕರಿಸುವಲ್ಲಿ ತೊಂದರೆ,ಸ್ಟ್ರೋಕ್,ತಲೆನೋವು,ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.

ಮೆದುಳಿನ ಮೇಲೆ ಪರಿಣಾಮ ಬೀರುವಲ್ಲಿ ವೈರಸ್‌ಗಳು ಹೇಗೆ ಯಶಸ್ವಿಯಾಗುತ್ತವೆ? :  ಕೊರೊನಾ ವೈರಸ್ ಬಗ್ಗೆ ಅನೇಕ ಅಧ್ಯಯನ ನಡೆದಿದೆ. ಮೆದುಳಿನ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆಯೂ ಅನೇಕ ಅಧ್ಯಯನ ನಡೆದಿದೆ. ಮೊದಲ ಸಾಧ್ಯತೆಯೆಂದರೆ ವೈರಸ್ ಮೆದುಳಿಗೆ ಪ್ರವೇಶಿಸುವ ಮೂಲಕ ತೀವ್ರ ಮತ್ತು ಹಠಾತ್ ಸೋಂಕನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದು ಸಾಧ್ಯತೆಯೆಂದರೆ, ಕೋವಿಡ್-19 ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಓವರ್‌ಡ್ರೈವ್‌ಗೆ ಹೋಗುತ್ತದೆ. ಇದು ಉರಿಯೂತದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಅಂಗಾಂಶಗಳು ಮತ್ತು ಅಂಗಗಳನ್ನು ಹಾನಿಗೊಳಗಾಗುತ್ತವೆ.

ಕೊರೊನಾದಿಂದ ಉಂಟಾಗುವ ಎಲ್ಲಾ ದೈಹಿಕ ಬದಲಾವಣೆಗಳು ಮೆದುಳಿನ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತವೆ.  ಕಡಿಮೆ ಮಟ್ಟದಲ್ಲಿ ಆಮ್ಲಜನಕ ದೇಹದ ಒಳ ಸೇರುವುದು ಇದಕ್ಕೆ ಮುಖ್ಯ ಕಾರಣ . ನಾಲ್ಕನೇ ಸಿದ್ಧಾಂತದ ಪ್ರಕಾರ, ಕೊರೊನಾ ರೋಗಿಗಳಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವ ಪ್ರವೃತ್ತಿಯು ಮೆದುಳಿನ ಮೇಲೆ ಪರಿಣಾಮ ಬೀರಬಹುದು ಎಂದು ನಂಬಬಹುದು.

ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

30-40 ವರ್ಷ ವಯಸ್ಸಿನ ರೋಗಿಗಳಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು : ಕೋವಿಡ್ ರೋಗಿಗಳಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಕೋವಿಡ್-19 ಹೆಚ್ಚಾಗಿ 30-40 ವರ್ಷ ವಯಸ್ಸಿನ ರೋಗಿಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂದು ಲಭ್ಯವಿರುವ ಡೇಟಾದಿಂದ ತೀರ್ಮಾನಿಸಬಹುದು ಎಂದು ಇದ್ರ ಬಗ್ಗೆ ಅಧ್ಯಯನ ನಡೆಸಿದ ವೈದ್ಯರು ಹೇಳ್ತಾರೆ. ಕೇವಲ ಈ ವಯಸ್ಸಿನವರಿಗೆ ಮಾತ್ರವಲ್ಲ ಕೊರೊನಾ ಎಲ್ಲ ವಯಸ್ಸಿನವರಲ್ಲೂ ಪಾರ್ಶ್ವವಾಯು ಅಪಾಯ ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

Follow Us:
Download App:
  • android
  • ios