Cooking Tips: ಅಜ್ಜಿಯರ ಈ ಟಿಪ್ಸ್ ಅಡುಗೆಯನ್ನು ತುಂಬಾನೆ ರುಚಿಯಾಗಿಸುತ್ತೆ !
ಅಡುಗೆ ಮಾಡೋದು ನಿಜಕ್ಕೂ ಒಂದು ಕಲೆಯೇ ಸರಿ. ಅಡುಗೆ ಮಾಡಲು ನೀವೂ ಗಂಟೆಗಳೇ ತೆಗೆದುಕೊಂಡರೂ ಇನ್ನೂ ನೀವು ಬಯಸುವ ರುಚಿಪಡೆಯದಿದ್ದರೆ, ಅದಕ್ಕೆ ವಿವಿಧ ರೀತಿಯ ಮಸಾಲೆ ಮತ್ತು ಹರ್ಬ್ಸ್ ಸೇರಿಸುವ ಬದಲು, ಸರಿಯಾದ ಅಡುಗೆ ಮಾಡುವ ವಿಧಾನ ತಿಳಿದುಕೊಳ್ಳೋದು ಅಗತ್ಯ. ಗ್ರೇವಿಯೊಂದಿಗೆ ಮಸಾಲಾ ತಯಾರಿಸಲು ಬಹಳ ಸಮಯ ತೆಗೆದುಕೊಳ್ಳುತ್ತೆ ಎಂದು ಅನೇಕ ಮಹಿಳೆಯರು ದೂರಿದರೆ, ಇನ್ನೂ ಕೆಲವರು ಇಡ್ಲಿ ಮೃದುವಾಗೋದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕಲು, ಈ ಕೆಳಗಿನ ಅಜ್ಜಿ ಹೇಳಿದ ಟಿಪ್ಸ್ ಗಳನ್ನು ಫಾಲೋ ಮಾಡಿ.
ಹಿಂದಿನ ಕಾಲದ ಮಹಿಳೆಯರು, ಅಂದ್ರೆ ನಮ್ಮ ಅಜ್ಜಿಯಂದಿರು ಅಡುಗೆ ಮಾಡೋದ್ರಲ್ಲಿ ಎಕ್ಸ್ ಪರ್ಟ್ ಆಗಿದ್ದರು. ಅವರು ಏನೇ ಮಾಡಿದರೂ ಅವರ ಕೈರುಚಿ ಬಹಳ ಅದ್ಭುತವಾಗಿರುತ್ತಿತ್ತು. ಇಂದು ನಿಮಗೆ ಅಡುಗೆಯಲ್ಲಿ ರುಚಿ ಕಡಿಮೆಯಾದರೆ ಯಾವ ರೀತಿ ಅದರ ಟೇಸ್ಟ್ (Taste) ಬದಲಾಯಿಸಬಹುದು ಅನ್ನೋದನ್ನು ನಿಮಗೆ ತಿಳಿಸುತ್ತೇವೆ. ಇದು ನಾವು ಹೇಳಿದ ಟಿಪ್ಸ್ ಅಲ್ಲ, ಇದನ್ನು ಹಿಂದಿನ ಕಾಲ ಅಜ್ಜಿಯರು ಅನುಸರಿಸುತ್ತಿದ್ದ ನಿಯಮಗಳು, ಇವು ನಿಮಗೆ ಸಹಾಯ ಮಾಡಬಹುದು ನೋಡಿ.
ಟಿಪ್ - 1
ರಾಯಿತ(Raita) ತಯಾರಿಸುವಾಗ ತಕ್ಷಣ ಹುಳಿಯಾಗುತ್ತೆ, ಅದಕ್ಕೆ ಕೆಲವರು ಸಕ್ಕರೆ ಸಹ ಸೇರಿಸುತ್ತಾರೆ ಆದರೆ ಅದು ಇನ್ನೂ ಹುಳಿಯಾಗಿಯೇ ಉಳಿಯುತ್ತೆ. ಆದ್ದರಿಂದ ಅದನ್ನು ಸರಿಪಡಿಸಲು ನೀವು ಏನು ಮಾಡುತ್ತೀರಿ? ತುಂಬಾ ಯೋಚನೆ ಮಾಡ್ಬೇಡಿ.
ಅಜ್ಜಿಯ ಟಿಪ್ - ರಾಯಿತ ತಯಾರಿಸುವಾಗ ಅದಕ್ಕೆ ಉಪ್ಪನ್ನು(Salt) ಸೇರಿಸಬೇಡಿ, ಅದರ ಬದಲು ರಾಯಿತ ಸರ್ವ್ ಮಾಡುವಾಗ ಉಪ್ಪನ್ನು ಸೇರಿಸಿ, ಅದು ನಿಮ್ಮ ರಾಯಿತವನ್ನು ಹುಳಿಯಾಗಿಸೋದಿಲ್ಲ. ಇದಲ್ಲದೆ, ನೀವು ಮಧ್ಯಾಹ್ನದ ಊಟಕ್ಕೆ ರಾಯಿತ ಪ್ಯಾಕ್ ಮಾಡುತ್ತಿದ್ದರೆ, ಅದರಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿ. ಇದರಿಂದ ರಾಯಿತ ಫ್ರೆಶ್ ಆಗಿರುತ್ತೆ.
ಟಿಪ್ - 2
ಮೊಸರಿನ ಯಾವುದೇ ಗ್ರೇವಿ ತಯಾರಿಸುವಾಗ, ಗ್ರೇವಿ ತಯಾರಿಸುವಾಗ ಮೊಸರು(Curd) ಸೇರಿಸಿದ್ರೆ ಅದು ತುಂಬಾನೆ ಟೇಸ್ಟಿಯಾಗಿರುತ್ತೆ. ಅದು ಕೆಲವೊಮ್ಮೆ ಒಡೆದು ಹೋಗುತ್ತದೆ. ಹಾಗಾಗಿ, ಅದರ ರುಚಿಯನ್ನು ಉತ್ತಮವಾಗಿಡಲು ಮತ್ತು ಗ್ರೇವಿಯನ್ನು ಸಹ ಒಡೆಯದಂತೆ ಇರಿಸಲು ಏನು ಮಾಡಬೇಕು?
ಅಜ್ಜಿಯ ಟಿಪ್ - ತರಕಾರಿಗಳು ಕುದಿ ಬಂದ ಮೇಲೆ ಮಾತ್ರ ಮೊಸರಿನಿಂದ ತಯಾರಿಸಿದ ಎಲ್ಲಾ ಗ್ರೇವಿಗಳಿಗೆ ಉಪ್ಪನ್ನು ಸೇರಿಸಿ. ಮುಂಚಿತವಾಗಿ ಉಪ್ಪನ್ನು ಸೇರಿಸಿದರೆ ಮೊಸರಿನಿಂದ ತಯಾರಿಸಿದ ಗ್ರೇವಿ ಒಡೆಯುತ್ತೆ. ಇದಲ್ಲದೆ, ಮೊಸರನ್ನು ಚೆನ್ನಾಗಿ ಮ್ಯಾಶ್ ಮಾಡಬೇಕು. ಆಗ ಅದು ದೀರ್ಘಕಾಲ ಹಾಗೇ ಉಳಿಯುತ್ತದೆ.
ಟಿಪ್ - 3
ಈ ಅವಸರದ ಜೀವನದಲ್ಲಿ ಎಲ್ಲಾ ಅಡುಗೆಗಳು ಫಟಾಫಟ್ ಆಗಿ ಆಗಬೇಕು. ಹಾಗಾದರೆ ಮಾತ್ರ ಆಫೀಸ್, ಕಾಲೇಜಿಗೆ ಬೇಗನೆ ತಲುಪಲು ಸಾಧ್ಯವಾಗುತ್ತೆ ಅನ್ನೋದು ಜನರ ವಾದ. ಗ್ರೇವಿ(Gravy) ಇರುವ ಅಡುಗೆ ಮಾಡಲು ಯಾವಾಗಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತೆ. ಅದನ್ನು ಮಾಡಲು ಸುಲಭವಾದ ಮತ್ತು ತ್ವರಿತವಾದ ಮಾರ್ಗವಿದೆಯೇ?
ಅಜ್ಜಿಯ ಟಿಪ್ - ಗ್ರೇವಿ ತಯಾರಿಸಲು ಬಿಳಿ ಈರುಳ್ಳಿಯನ್ನು(White onion) ಬಳಸಿ. ಇದು ಕೆಂಪು ಈರುಳ್ಳಿಗಿಂತ ಕಡಿಮೆ ನೀರನ್ನು ಬಿಡುಗಡೆ ಮಾಡುತ್ತೆ, ಇದರಿಂದಾಗಿ ಗ್ರೇವಿ ಬೇಗನೆ ದಪ್ಪವಾಗುತ್ತೆ. ಅಲ್ಲದೆ, ನೀವು ಗ್ರೇವಿಯಲ್ಲಿ ಧನಿಯಾ ಪುಡಿಯನ್ನು ಬಳಸುತ್ತಿದ್ದರೆ, ಅದನ್ನು ಬೇಗ ಹಾಕಿ. ಇದು ಮಸಾಲೆಗಳನ್ನು ಬೇಗನೆ ಮಿಕ್ಸ್ ಆಗುವಂತೆ ಮಾಡುತ್ತೆ .
ಟಿಪ್ - 4
ಫಟಾಫಟ್ ಆಗಿ ಇಡ್ಲಿ(Idli) ತಯಾರಿಸಲು ಬಯಸಿದಾಗ ಉದ್ದಿನ ಬೇಳೆ, ಅಕ್ಕಿಯನ್ನು ಅರೆದು ಮಾಡೋದು ಕಷ್ಟದ ಕೆಲಸವಾಗುತ್ತೆ. ಹಾಗಾಗಿ ರವೆ ಇಡ್ಲಿ ಮಾಡುತ್ತೀರಿ. ರವೆ ಅಥವಾ ಅಕ್ಕಿ ಇಡ್ಲಿಯನ್ನು ತಯಾರಿಸುವಾಗ, ಅದು ಪ್ರತಿ ಬಾರಿಯೂ ಗಟ್ಟಿಯಾಗಿರುತ್ತಾ? ಯೂಟ್ಯೂಬ್ ವೀಡಿಯೊ ಅನೇಕ ಬಾರಿ ನೋಡಿದ ನಂತರವೂ, ಅದು ಮೃದುವಾಗುತ್ತಿಲ್ವ. ಹಾಗಾದ್ರೆ ಅದಕ್ಕಾಗಿ ಏನು ಮಾಡಬೇಕು?
ಅಜ್ಜಿಯ ಟಿಪ್ - ಇಡ್ಲಿ ಮೃದುವಾಗಬೇಕಾ,ಹಾಗಾದ್ರೆ ಇದಕ್ಕಾಗಿ, ಇಡ್ಲಿ ಹಿಟ್ಟಿನ ಜೊತೆ ಸ್ವಲ್ಪ ಸಾಬುದಾನ(Sabudana) ಮತ್ತು ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ, ಆಗ ನೀವೇ ವ್ಯತ್ಯಾಸವನ್ನು ಸುಲಭವಾಗಿ ನೋಡುತ್ತೀರಿ. ಇದು ನಿಮ್ಮ ಇಡ್ಲಿ ಗಳನ್ನು ಮೃದುವಾಗಿಸುತ್ತೆ. ಸುಲಭವಾಗಿ ನೀವು ಮಲ್ಲಿಗೆಯಂತಹ ಇಡ್ಲಿಯನ್ನು ತಯಾರಿಸಲು ಸಾಧ್ಯವಾಗುತ್ತದೆ.