ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಮನೆಯವರು ಆರ್ಥಿಕವಾಗಿ ತೊಂದರೆ ಅನುಭವಿಸುವುದಲ್ಲದೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಇಡೀ ಕುಟುಂಬಕ್ಕೆ ತೊಂದರೆಯಾಗಬಹುದು, ಕುಟುಂಬದ ಸದಸ್ಯರ ಆರೋಗ್ಯ ಹದಗೆಡುತ್ತದೆ. ಅವರಲ್ಲಿ ಪ್ರೀತಿಯ ಕೊರತೆ ಉಂಟಾಗುತ್ತದೆ. ಅಡುಗೆ ಮಾಡುವವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೂ ಬೀರುತ್ತದೆ. ಹಾಗಾಗಿ ಯಾವಾಗಲೂ ಅಡುಗೆಮನೆಯ ವಾಸ್ತು ಸರಿಯಾಗಿರಬೇಕು. ಇಂದು ನಾವು ನಿಮಗೆ ವಾಸ್ತುವಿನ ಕೆಲವು ನಿಯಮಗಳ ಬಗ್ಗೆ ಹೇಳಲಿದ್ದೇವೆ- ಅವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಕಾಣಬಹುದು.

ಅಡುಗೆ ಮನೆಗೆ ವಾಸ್ತು ಸಲಹೆಗಳು

  • ವಾಸ್ತು ಶಾಸ್ತ್ರದ ಪ್ರಕಾರ ಬೆಂಕಿಯ ಕೋನದಲ್ಲಿ ಅಡುಗೆ ಮನೆ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು, ಇಲ್ಲದಿದ್ದರೆ ಅದು ಕೆಟ್ಟ ಪರಿಣಾಮ ಬೀರುತ್ತದೆ.
  • ಅಡುಗೆ ಮನೆಯು ಈಶಾನ್ಯ ದಿಕ್ಕಿನಲ್ಲಿದ್ದರೆ, ಮನೆಯವರಿಗೆ ಹಣದ ಕೊರತೆ ಉಂಟಾಗುತ್ತದೆ ಮತ್ತು ಸಂಬಂಧಗಳು ಹಳಸುತ್ತವೆ. ಮಗು ಕೂಡ ಆರೋಗ್ಯ ಸಮಸ್ಯೆ ಎದುರಿಸಬಹುದು.
  • ಅಡುಗೆ ಮನೆಯು ವಾಯುವ್ಯ ದಿಕ್ಕಿನಲ್ಲಿದ್ದರೆ, ವಾಸ್ತು ದೋಷಗಳನ್ನು ಉಂಟು ಮಾಡುವುದಿಲ್ಲ, ಆದರೆ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವು ಹಾಳಾಗಬಹುದು.

    Vastu tips: ಮನೆಯಲ್ಲಿ ಈ ವಸ್ತುಗಳಿಟ್ರೆ, ಸಮೃದ್ಧಿ ಸಿದ್ಧಿಯಾಗೋದ್ರಲ್ಲಿ ಡೌಟೇ ಇಲ್ಲ!
  • ನೈಋತ್ಯ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಮನೆಯ ಮುಖ್ಯಸ್ಥರಿಗೆ ತೊಂದರೆಯಾಗುತ್ತದೆ. ಗೌರವ ಮತ್ತು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
  • ಅಡುಗೆಮನೆಯಲ್ಲಿ ಸುಂದರವಾದ ಹಣ್ಣು ಅಥವಾ ಹೂವಿನ ಚಿತ್ರವನ್ನು ಹಾಕಿ, ಅದು ಧನಾತ್ಮಕ ಶಕ್ತಿ(Positive energy)ಯನ್ನು ಇಡುತ್ತದೆ. ಕುಟುಂಬದ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ.
  • ತಾಯಿ ಅನ್ನಪೂರ್ಣೆಯ ಸುಂದರ ಚಿತ್ರವನ್ನು ಅಡುಗೆಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಇಡಬೇಕು, ಸಾಧ್ಯವಾದರೆ, ಶ್ರೀಗಂಧದ ಮಾಲೆಯನ್ನು ಹಾಕಿ, ಈ ​​ರೀತಿ ಮಾಡುವುದರಿಂದ ಆ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆಯಿರುವುದಿಲ್ಲ.
  • ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬಾರದು. ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಆಹಾರವನ್ನು ಸಹ ತಿನ್ನಬಾರದು, ಅದು ರೋಗವನ್ನು ಹೆಚ್ಚಿಸುತ್ತದೆ ಮತ್ತು ಶನಿ(Saturn) ಗ್ರಹದ ಕೋಪ ಎದುರಿಸಬೇಕಾಗುತ್ತದೆ.
  • ಸಿಂಕ್ ಯಾವಾಗಲೂ ಅಡುಗೆಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು ಮತ್ತು ಅಡುಗೆಮನೆಯ ನೀರಿನ ಇಳಿಜಾರು ಕೂಡ ಅದೇ ದಿಕ್ಕಿನಲ್ಲಿದ್ದರೆ ಉತ್ತಮ.
  • ಅಡುಗೆಮನೆಯಲ್ಲಿ ಕಪ್ಪು ಕಲ್ಲು ಅಥವಾ ಕಪ್ಪು ಬಣ್ಣವನ್ನು ಬಳಸಬಾರದು, ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
  • ಅಡುಗೆ ಕೋಣೆ ಯಾವಾಗಲೂ ಸ್ವಚ್ಛವಾಗಿ ಮತ್ತು ಹೊಳೆಯುವಂತಿರಬೇಕು. ಅಲ್ಲಿ ಯಾವುದೇ ರೀತಿಯ ಕೀಟಗಳು ಅಥವಾ ಕೊಳಕು ಇರಬಾರದು.
  • ಅಡುಗೆಮನೆಯಲ್ಲಿ ಜಿರಳೆಗಳು ಇರಬಾರದು, ಇದು ಆರ್ಥಿಕ ನಷ್ಟವನ್ನು ಉಂಟುಮಾಡುವುದು ಮತ್ತು ವ್ಯಾಪಾರದಲ್ಲಿ ನಷ್ಟ ಉಂಟುಮಾಡುವುದು.
  • ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ಬೆಂಕಿಯ ದಿಕ್ಕಿನಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇಡಬೇಕು, ಇದು ಆ ಮನೆಯಲ್ಲಿ ವಾಸಿಸುವ ಜನರ ಗೌರವವನ್ನು ಹೆಚ್ಚಿಸುತ್ತದೆ.
  • ಅಡುಗೆಮನೆಯಲ್ಲಿ ಇಟ್ಟಿರುವ ಉಪ್ಪ(salt)ನ್ನು ಎಂದಿಗೂ ತೆರೆದಿಡಬಾರದು, ಯಾವಾಗಲೂ ಅದರ ಮುಚ್ಚಳವನ್ನು ಮುಚ್ಚಬೇಕು. ಇಲ್ಲದಿದ್ದರೆ ನಿಮ್ಮ ಸಾಲವು ಹೆಚ್ಚಾಗಬಹುದು.

    ಕೈಗೆ ರಕ್ಷೆ ಕಟ್ಟುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ..
  • ಯಾರು ಅಡುಗೆ ಮಾಡುತ್ತಾರೋ ಅವರ ಮುಖವು ದಕ್ಷಿಣ ದಿಕ್ಕಿಗೆ ಇರಬಾರದು. ಹಾಗಿದ್ದರೆ ಅವರ ಸೌಂದರ್ಯವು ಬೇಗನೆ ಕಡಿಮೆಯಾಗುತ್ತದೆ.
  • ಅಡುಗೆ ಮನೆಯಲ್ಲಿ ಕುಳಿತು ಆಹಾರ ಸೇವಿಸಿದರೆ ರಾಹು ಗ್ರಹ ದೋಷ ಬಹುಬೇಗ ಶಮನವಾಗುತ್ತದೆ. ರಾಹು ಗ್ರಹವು ಸಂಬಂಧ(relationship)ವನ್ನು ಹಾಳು ಮಾಡಲು ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.