ಬೇಗ ತೂಕ ಇಳಿಸಿಕೊಳ್ಳಬೇಕಾ ? ಈರುಳ್ಳಿ ಸೇವಿಸಿ
ತೂಕ ಇಳಿಸಿಕೊಳ್ಳಲು ಆಹಾರಕ್ರಮದ ವಿಷಯಕ್ಕೆ ಬಂದಾಗ, ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಆಗಾಗ್ಗೆ ಕನ್ ಫ್ಯೂಶನ್ ಆಗುತ್ತೇವೆ. ಆದ್ರೆ ನಿಮಗೆ ಗೊತ್ತಾ? ಯಾವುದೇ ಕಷ್ಟವಿಲ್ಲದೆ ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ತೂಕ ಇಳಿಸುವ ಒಂದು ತರಕಾರಿ ಬಗ್ಗೆ ಇಲ್ಲಿ ಹೇಳಲಾಗಿದೆ. ನಾವಿಲ್ಲಿ ಈರುಳ್ಳಿ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು ಈರುಳ್ಳಿಯನ್ನು ತಿಂದು ಸಹ ತೂಕ ಇಳಿಸಿಕೊಳ್ಳಬಹುದು.
ಈರುಳ್ಳಿಯ ಪ್ರಯೋಜನಗಳು
ಫೈಬರ್ ನ ಉತ್ತಮ ಮೂಲ: ಈರುಳ್ಳಿ ಫೈಬರ್ ನ (fiber) ಉತ್ತಮ ಮೂಲ. 1 ಕಪ್ ಈರುಳ್ಳಿಯಲ್ಲಿ ಕೇವಲ 3 ಗ್ರಾಂ ನಾರಿನಂಶವಿದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ನೀವು ಸಾಕಷ್ಟು ಈರುಳ್ಳಿ ಸೇರಿಸಬಹುದು. ಇದಲ್ಲದೆ, ಆರೋಗ್ಯ ತಜ್ಞರ ಪ್ರಕಾರ, ಈರುಳ್ಳಿಯಲ್ಲಿ ಕಂಡುಬರುವ ಸೊಲ್ಯುಬಲ್ ಫೈಬರ್ ಕ್ರೇವಿಂಗ್ಸ್ ನ್ನು ಶಾಂತಗೊಳಿಸುತ್ತೆ ಮತ್ತು ತೂಕ ಇಳಿಸುವ ಜರ್ನಿಗೆ ಸಹಾಯ ಮಾಡುತ್ತೆ.
ಕಡಿಮೆ ಕ್ಯಾಲೋರಿ: ಈರುಳ್ಳಿಯಲ್ಲಿ ತುಂಬಾ ಕಡಿಮೆ ಕ್ಯಾಲೋರಿ ಅಂಶವಿದೆ. ತಜ್ಞರ ಪ್ರಕಾರ, 1 ಕಪ್ ಕತ್ತರಿಸಿದ ಈರುಳ್ಳಿಯಲ್ಲಿ ಕೇವಲ 64 ಕ್ಯಾಲೋರಿಗಳಿವೆ ಮತ್ತು ಆದ್ದರಿಂದ ತೂಕ ಇಳಿಸುವ (weight loss) ಪ್ರಯಾಣದ ಸಮಯದಲ್ಲಿ ಇದನ್ನು ಸೇವಿಸೋದು ಒಳ್ಳೆದು. ಇದರಿಂದ ಬೇಗನೆ ತೂಕ ಏರಿಕೆಯಾಗೋದಿಲ್ಲ.
ಸ್ಥೂಲಕಾಯ ವಿರೋಧಿ ಗುಣಲಕ್ಷಣ: ಈರುಳ್ಳಿ ಕ್ವೆರ್ಸೆಟಿನ್ ಎಂಬ ಸಸ್ಯದ ಕಂಪೌಂಡಿಂದ ಸಮೃದ್ಧವಾಗಿದೆ. ಇದು ಫ್ಲೇವನಾಯ್ಡ್ ಆಗಿದ್ದು, ಇದು ಸ್ಥೂಲಕಾಯ ವಿರೋಧಿ ಗುಣ ಹೊಂದಿದೆ ಮತ್ತು ಇದನ್ನು ದೇಹಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತೆ. ಇದನ್ನು ನಿಯಮಿತವಾಗಿ ಸೇವಿಸೋದ್ರಿಂದ ಸುಲಭವಾಗಿ ತೂಕ ಇಳಿಕೆ ಮಾಡಬಹುದು.
ಈರುಳ್ಳಿಯಿಂದ ಮಾಡಬಹುದಾದ ಮ್ಯಾಜಿಕಲ್ ರೆಸಿಪಿ
ಈರುಳ್ಳಿ ಜ್ಯೂಸ್ (onion juice)
ಇದನ್ನು ಮಾಡಲು ಒಂದು ಸಣ್ಣ ಸಿಪ್ಪೆ ಸುಲಿದ, ಕ್ಯೂಬ್ಸ್ ಆಗಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ 1 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿ ಬಂದ ಬಳಿಕ ಇದನ್ನು ತಣ್ಣಗಾಗಲು ಬಿಡಿ ಮತ್ತು 1 ಕಪ್ ನೀರನ್ನು ಸೇರಿಸಿ ಮಿಕ್ಸ್ ಮಾಡಿ. ಈ ರಸವನ್ನು ಒಂದು ಲೋಟಕ್ಕೆ ಹಾಕಿ ಕುಡಿಯಿರಿ.
ಈರುಳ್ಳಿ ಸೂಪ್
ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಮತ್ತು 2 ಬೆಳ್ಳುಳ್ಳಿ ಮೊಗ್ಗು ಹಾಕಿ ಚೆನ್ನಾಗಿ ಹುರಿಯಿರಿ. ನಂತರ 2 ಕತ್ತರಿಸಿದ ಈರುಳ್ಳಿ ಮತ್ತು ನಿಮ್ಮ ಆಯ್ಕೆಯ 1/2 ಕಪ್ ತರಕಾರಿಗಳನ್ನು ಸೇರಿಸಿ. 2-5 ನಿಮಿಷಗಳ ಕಾಲ ಬೇಯಿಸಿ. ಉಪ್ಪು ಮತ್ತು ಮೆಣಸನ್ನು ಸೇರಿಸಿ ಮತ್ತು 20 ನಿಮಿಷಗಳ ಕಾಲ ಬೇಯಿಸಿ. ನಿಮ್ಮ ಮನೆಯಲ್ಲಿ ತಯಾರಿಸಿದ ಈರುಳ್ಳಿ ಸೂಪ್ (onion soup) ಸಿದ್ಧವಾಗಿದೆ.
ಈರುಳ್ಳಿ ಮತ್ತು ವಿನೆಗರ್
ಒಂದು ಈರುಳ್ಳಿಯ ಸಿಪ್ಪೆ ಸುಲಿದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. ಈಗ ಈ ಈರುಳ್ಳಿಯನ್ನು ವಿನೆಗರ್ ನಲ್ಲಿ ನೆನೆಸಿಡಿ. ಸಲಾಡ್ ಆಗಿ ಅನ್ನದ ಜೊತೆ ಸರ್ವ್ ಮಾಡಿ. ಇದನ್ನು ನೀವು ಯಾವುದೇ ಸಂದರ್ಭದಲ್ಲಿ ಹಾಗೆಯೇ ಸೇವಿಸಬಹುದು. ಇದನ್ನು ಸೇವಿಸಲು ಚೆನ್ನಾಗಿರುತ್ತೆ, ಸುಲಭವಾಗಿ ತೂಕ ಇಳಿಸಬಹುದು.