ಇವುಗಳನ್ನ ತಿಂತೀರಾ…. ತಲೇಲಿ ಕೂದಲೇ ಉಳಿಯಲ್ಲ ಹುಷಾರ್!
ಕೆಲವು ಆಹಾರಗಳು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಿಸಬಹುದು. ಆ ಆಹಾರಗಳಾನ್ನು ಸೇವಿಸೊದ್ರಿಂದ ಕೂದಲು ಉದುರುವ ಸಮಸ್ಯೆ (hair fall problem) ಉಂಟಾಗುತ್ತೆ. ಯಾವ ಆಹಾರ ಸೇವಿಸೋದ್ರಿಂದ ಕೂದಲು ಉದುರುತ್ತೆ, ಅದಕ್ಕಾಗಿ ನೀವು ಯಾವ ಆಹಾರ ಅವಾಯ್ಡ್ ಮಾಡಬೇಕು ನೋಡೋಣ.
ಹಾರ್ಮೋನುಗಳಲ್ಲಿ ಒತ್ತಡ (stress), ಹೆಚ್ಚಿನ ಔಷಧಗಳ ಸೇವನೆ ಮತ್ತು ಆಹಾರದ ಅಸಮತೋಲನದಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತೆ. ಅದೇ ಸಮಯದಲ್ಲಿ, ಕಳಪೆ ಆಹಾರವು ಕೂದಲು ಉದುರುವಿಕೆಗೆ ಮುಖ್ಯ ಕಾರಣವಾಗಿದೆ. ತಜ್ಞರ ಪ್ರಕಾರ, ನಾವು ತಿನ್ನುವಂತಹ ಕೆಲವು ಆಹಾರಗಳು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತವೆ. ಹಾಗಿದ್ರೆ ನೀವು ತಿನ್ನಬಾರದ 7ಆಹಾರಗಳು ಯಾವುವು ಎಂದು ತಿಳಿಯಿರಿ.
ಅಧಿಕ ಸಕ್ಕರೆ ಸೇವನೆ
ನೆತ್ತಿಯ ಬ್ಯಾಕ್ಟೀರಿಯಾ ಹೆಚ್ಚಿಸುವಲ್ಲಿ ಸಕ್ಕರೆ ಪ್ರಮುಖ ಪಾತ್ರ ವಹಿಸುತ್ತೆ. ಇದು ನೆತ್ತಿಯ ಸೋಂಕುಗಳಿಗೆ ಕಾರಣವಾಗಬಹುದು. ಹೆಚ್ಚು ಸಿಹಿ ವಸ್ತುಗಳನ್ನು ಸೇವಿಸುವುದರಿಂದ ತಲೆಹೊಟ್ಟು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಧಿಕ ಸಕ್ಕರೆ ಸೇವನೆಯು ನಿಮ್ಮ ಕೂದಲನ್ನು ದುರ್ಬಲಗೊಳಿಸಿ ಕೂದಲು ಉದುರುವ ಸಮಸ್ಯೆಯನ್ನುಂಟು ಮಾಡುತ್ತೆ.
ಸಂಸ್ಕರಿಸಿದ ಆಹಾರ
ಕೂದಲು ತುಂಬಾನೆ ಉದುರುತ್ತಿದ್ದರೆ, ಸಂಸ್ಕರಿಸಿದ ಆಹಾರವನ್ನು (processes food) ತಕ್ಷಣ ತಿನ್ನೋದನ್ನು ನಿಲ್ಲಿಸಿ. ಸಂಸ್ಕರಿಸಿದ ಆಹಾರವು ಕೆಮಿಕಲ್ ಮತ್ತು ಕೃತಕ ಟೇಸ್ಟ್ ಸೇರಿಸಲಾಗುತ್ತೆ, ಅದು ಕೂದಲಿನ ಎಳೆಯನ್ನು ದುರ್ಬಲಗೊಳಿಸುತ್ತದೆ. ಅವು ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಇವುಗಳನ್ನು ಅವಾಯ್ಡ್ ಮಾಡಿ ಸಾಧ್ಯವಾದಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
ಆಲ್ಕೋಹಾಲ್
ಆಲ್ಕೋಹಾಲ್ (alcohol) ಸೇವನೆಯು ಕೂದಲಿನ ಕಿರುಚೀಲಗಳನ್ನು ಹಾನಿಗೊಳಿಸುತ್ತೆ. ಇದರಿಂದ ಕೂದಲು ಡ್ರೈ ಆಗುತ್ತೆ, ಇದು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಒಡೆಯುತ್ತದೆ. ಇದಲ್ಲದೆ, ಆಲ್ಕೋಹಾಲ್ ಸೇವನೆಯು ಮೊಡವೆಗಳ ಸಮಸ್ಯೆಯನ್ನು ಸಹ ಉಂಟುಮಾಡಬಹುದು.
ರೆಡ್ ಮೀಟ್
ಕೆಂಪು ಮಾಂಸದಲ್ಲಿ (red meat) ಕಬ್ಬಿಣದ ಅಂಶವು ತುಂಬಾ ಹೆಚ್ಚಾಗಿದೆ, ಇದು ಕೂದಲಿನ ಕಿರುಚೀಲಗಳನ್ನು ಹಾನಿಗೊಳಿಸುತ್ತದೆ. ಹೆಚ್ಚು ಕೆಂಪು ಮಾಂಸವನ್ನು ತಿನ್ನೋದ್ರಿಂದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಲ್ಲದೇ ಕೂದಲಿನ ಮೇಲೆಯೂ ಗಂಭೀರ ಪರಿಣಾಮ ಬೀರುತ್ತೆ.
ಕರಿದ ಆಹಾರಗಳು
ಕರಿದ ಆಹಾರವು (fried food) ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ. ಇದು ಕೂದಲನ್ನು ತುಂಬಾನೆ ಒರಟಾಗಿ ಮತ್ತು ದುರ್ಬಲಗೊಳಿಸುತ್ತದೆ, ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಕರಿದ ಆಹಾರ ಸೇವಿಸಬೇಡಿ. ಸಾಧ್ಯವಾದಷ್ಟು ಅವುಗಳನ್ನು ಅವಾಯ್ಡ್ ಮಾಡಿ
ಸಕ್ಕರೆಯುಕ್ತ ಡ್ರಿಂಕ್ಸ್
ಕೂಲ್ ಡ್ರಿಂಕ್ಸ್ (cool drinks) ಸೇವಿಸೋದ್ರಿಂದ ನಿಮ್ಮ ಕೂದಲು ಜಿಗುಟಾಗಿ ಮತ್ತು ಭಾರವಾಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ನಿಮ್ಮ ದೇಹವನ್ನು ಡೀಹೈಡ್ರೇಟ್ ಮಾಡುತ್ತೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಕೂದಲಿನ ಸಮಸ್ಯೆಗೂ ಕಾರಣವಾಗಬಹುದು ಎಚ್ಚರವಾಗಿರಿ.
ಡೈರಿ ಉತ್ಪನ್ನಗಳು
ಹಾಲಿನಲ್ಲಿ ಕೇಸಿನ್ ಇದೆ, ಇದು ಒಂದು ರೀತಿಯ ಪ್ರೋಟೀನ್ ಆಗಿದೆ. ಇದು ಕೂದಲಿನ ಕಿರುಚೀಲಗಳನ್ನು ಒರಟಾಗಿ, ಶುಷ್ಕವಾಗಿ ಮತ್ತು ತೆಳುವಾಗಿಸುತ್ತದೆ. ಮೊಸರು ಮತ್ತು ಚೀಸ್ ಸಹ ಅದೇ ಪ್ರೋಟೀನ್ ಅನ್ನು ಹೊಂದಿರುತ್ತವೆ. ನಿಮಗೂ ಹೇರ್ ಫಾಲ್ (hair fall) ಆಗುತ್ತಿದ್ದರೆ, ಡೈರಿ ಉತ್ಪನ್ನಗಳನ್ನು ಸ್ವಲ್ಪ ಸಮಯದವರೆಗೆ ತಿನ್ನೋದನ್ನು ಅವಾಯ್ಡ್ ಮಾಡಿ.