MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಹಬ್ಬಕ್ಕೋ, ಸಂಜೆ ಸ್ನಾಕ್ಸ್, ಎರಡಕ್ಕೂ ಸೈ ಸಾಬುದಾನ ವಡಾ.. ಇಲ್ಲಿದೆ ರೆಸಿಪಿ

ಹಬ್ಬಕ್ಕೋ, ಸಂಜೆ ಸ್ನಾಕ್ಸ್, ಎರಡಕ್ಕೂ ಸೈ ಸಾಬುದಾನ ವಡಾ.. ಇಲ್ಲಿದೆ ರೆಸಿಪಿ

ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 30ರಂದು ದೇಶಾದ್ಯಂತ ಆಚರಿಸಲಾಗುವುದು. ಈ ದಿನದಂದು, ಜನರು ಶ್ರೀಕೃಷ್ಣನನ್ನು ಪೂಜಿಸುತ್ತಾರೆ ಮತ್ತು ಕೆಲವರು ಉಪವಾಸವನ್ನು ಸಹ ಆಚರಿಸುತ್ತಾರೆ. ಭಕ್ತರು ಹಣ್ಣುಗಳನ್ನು ಸೇವಿಸುತ್ತಾರೆ ಅಥವಾ ಉಪವಾಸದ ಸಮಯದಲ್ಲಿ ಸಾಬುದಾನವನ್ನು (ಸಾಗು) ಆಹಾರವಾಗಿ ಸೇವಿಸುತ್ತಾರೆ. ಅದರಲ್ಲಿ ಕಿಚಡಿಯಿಂದ ವಡಾವರೆಗೆ ಬೇರೆ ಬೇರೆ ಖಾದ್ಯ ತಯಾರಿಸಲಾಗುತ್ತದೆ. ಆದರೆ ಆಗಾಗ್ಗೆ ಸಾಬುದಾನ ವಡಾ ಮಾಡುವಾಗ, ಇದು ಮಾರುಕಟ್ಟೆಯಂತೆ ಉಬ್ಬುವುದಿಲ್ಲ ಮತ್ತು ಅಂಟುತ್ತದೆ. ಈ ಸಂದರ್ಭದಲ್ಲಿ, ಸಾಬುದಾನ ವಡಗಳು ಬಾಣಲೆಯಿಂದ ಉಬ್ಬುವಂತೆ ಮಾಡುವ ಸಲಹೆಗಳು ಇಲ್ಲಿವೆ... 

2 Min read
Author : Suvarna News | Asianet News
Published : Aug 30 2021, 02:00 PM IST
Share this Photo Gallery
  • FB
  • TW
  • Linkdin
  • Whatsapp
18

ಸಾಬುದಾನ ವಡಾ ತಯಾರಿಸಲು, ಅದನ್ನು ನೆನೆಸುವಾಗ, ನೀರು ಹೆಚ್ಚು ಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅದರಿಂದ ತಯಾರಿಸಿದ ವಡೆಗಳು ಅಂಟು ಮತ್ತು ಚಪ್ಪಟೆಯಾಗಿ ಮಾಡಬಹುದು. 1 ಕಪ್ ನೀರು 1 ಕಪ್ ಸಾಬುದಾನ ನೆನೆ ಹಾಕಲು ಸಾಕು.  ಸಣ್ಣ ಗಾತ್ರದ ಸಾಬುದಾನವನ್ನು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿ. ನಂತರ ನೀರನ್ನು ತೆಗೆದು 2-3 ಗಂಟೆಗಳ ನಂತರವೇ ಬಳಸಿ.

28

ಎರಡು ಬೆರಳುಗಳಿಂದ, ಅಂದರೆ ತೋರು ಬೆರಳು ಮತ್ತು ಹೆಬ್ಬೆರಳಿನ ನಡುವೆ ಸಾಬುದಾನ ಮುತ್ತನ್ನು ಒತ್ತಿದಾಗ, ಸಾಬುದಾನವು ಸರಿಯಾಗಿ ಕರಗಿದೆಯೇ ಎಂದು ಪರೀಕ್ಷಿಸಲು ಸಾಧ್ಯವಾಗುತ್ತದೆ.  ಅವು ನಿಮ್ಮ ಬೆರಳುಗಳನ್ನು ಸುಲಭವಾಗಿ ಮ್ಯಾಶ್ ಆದರೆ ಅವು ಸರಿಯಾಗಿ ಮೆತ್ತಗಾಗಿದೆ ಎಂದು ಅರ್ಥ. ಒಂದು ವೇಳೆ ಅದು ಇನ್ನೂ ಗಟ್ಟಿಯಾಗಿ ಇದ್ದರೆ, ಇನ್ನೂ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಯಬೇಕು ಎಂಬುದನ್ನು ನೆನಪಿನಲ್ಲಿಡಿ. 

38

ಮುಖ್ಯವಾಗಿ ಸಾಬುದಾನ ವಡಾ ರೆಸಿಪಿಯಲ್ಲಿ ಆಲೂಗಡ್ಡೆ ಮತ್ತು ಸಾಬುದಾನದ ಅನುಪಾತ ಸಮತೋಲನದಲ್ಲಿಡಬೇಕು. ಇದಕ್ಕಾಗಿ 1 ಬಟ್ಟಲು ಸಾಬುದಾನ ತೆಗೆದುಕೊಳ್ಳುತ್ತಿದ್ದರೆ, 3-4 ಮಧ್ಯಮ ಗಾತ್ರದ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು. ಆಲೂಗಡ್ಡೆಯ ಪ್ರಮಾಣ ಸ್ವಲ್ಪ ಹೆಚ್ಚಿರಬೇಕು ಎಂಬುದನ್ನು ನೆನಪಿಡಿ. ಆಲೂ ಹೆಚ್ಚಿದ್ದರೆ ಮಾತ್ರ ಉತ್ತಮ ರುಚಿ ಬರಲು ಸಾಧ್ಯ.

48

ಆಲೂಗಡ್ಡೆ ಮತ್ತು ಸಾಬುದಾನದ ಜೊತೆಗೆ, ನೀವು ಅದರಲ್ಲಿ ಹುರಿದ ಮತ್ತು ಕತ್ತರಿಸಿದ ಕಡಲೆಕಾಯಿ ಬಳಸಬೇಕು. ಇದಕ್ಕಾಗಿ 1/2 ಕಪ್ ಕಡಲೆಕಾಯಿಯನ್ನು ಅಂದರೆ ನೆಲಕಡಲೆಯನ್ನು ಬಾಣಲೆಗೆ ಹಾಕಿ ಒಣ ಹುರಿದು ಸಿಪ್ಪೆ ತೆಗೆದು ಗಟ್ಟಿಯಾಗಿ ರುಬ್ಬಿಕೊಳ್ಳಿ. ಹೆಚ್ಚು ಪುಡಿ ಪುಡಿ ಆಗಿರದಂತೆ ರುಬ್ಬಿ. ತುಂಬಾ ನೈಸ್ ಆದರೆ ವಡಾ ಇನ್ನೂ ಮೆತ್ತಗಾಗಬಹುದು. ಆದುದರಿಂದ ಒಂದು ಬಾರಿ ಮಿಕ್ಸಿಯಲ್ಲಿ ತಿರುಗಿಸಿದರೆ ಸಾಕು. 

58

ಈಗ ಒಂದು ದೊಡ್ಡ ಬೌಲ್ಗೆ ಸಾಬುದಾನ, ಹಿಸುಕಿದ ಆಲೂಗಡ್ಡೆ ಮತ್ತು ಒರಟಾಗಿ ಹುರಿದ ಕಡಲೆಕಾಯಿಯನ್ನು ಸೇರಿಸಿ. ಇದಕ್ಕೆ ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿಯನ್ನು ಸೇರಿಸಿ. ಈ ಸಮಯದಲ್ಲಿ ನೀವು ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಮತ್ತು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ, ತಟ್ಟಿದಷ್ಟೂ, ವಡಾ ಊದಿಕೊಳ್ಳುತ್ತವೆ. (ನೀವು ಬಯಸಿದರೆ ಹ್ಯಾಂಡ್ ಬ್ಲೆಂಡರ್ ಅನ್ನು ಸಹ ಬಳಸಬಹುದು)

68

ವಡೆಗಳನ್ನು ಮಾಡುವ ಮೊದಲು ಕಲ್ಲು ಉಪ್ಪನ್ನು ಸೇರಿಸಬೇಕು ಎಂಬುದನ್ನು ನೆನಪಿಡಿ, ಉಪ್ಪನ್ನು ನಂತರವೇ ಯಾಕೆ ಸೇರಿಸಬೇಕು ಎಂದು ನೀವು ಪ್ರಶ್ನಿಸಬಹುದು, ಅದಕ್ಕೂ ಕಾರಣ ಇದೆ, ಮೊದಲು ಉಪ್ಪನ್ನು ಸೇರಿಸಿದರೆ, ಮಿಶ್ರಣವು ನೀರನ್ನು ಬಿಡುಗಡೆ ಮಾಡುತ್ತದೆ ಮತ್ತು ವಡಾಗಳು ಅಂಟಿಕೊಳ್ಳುವಂತೆ ಆಗುತ್ತದೆ. ಉಪ್ಪು ಸೇರಿಸಿದ ನಂತರ ಚೆನ್ನಾಗಿ ಮಿಶ್ರಣ ಮಾಡಿ ಕಟ್ಲೇಟ್ ರೀತಿ ಆಕಾರ ನೀಡಿ.

78

ಬಾಣಲೆಯಲ್ಲಿ ಹುರಿಯಲು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾದಾಗ 2-3 ವಡೆಗಳನ್ನು ಎಣ್ಣೆಗೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಹುರಿಯಿರಿ. ಟಿಶ್ಯೂ ಪೇಪರ್ ಮೇಲೆ ಹುರಿದ ಸಾಬುದಾನ ವಡಾವನ್ನು ಹಾಕಿ ಮತ್ತು ಅದು ಹೆಚ್ಚುವರಿ ಎಣ್ಣೆಯನ್ನು ಹೊರತೆಗೆಯಲು ಬಿಡಿ. ಸರಿಯಾಗಿ ಎಣ್ಣೆ ಬಿಟ್ಟ ಮೇಲೆ ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಲು ತಯಾರು ಮಾಡಿ. 

88

ಈಗ ಸವಿಯಲು ಸೂಪರ್ ಟೇಸ್ಟಿ ಮತ್ತು ದುಂಡಗಿನ ಉಬ್ಬಿದ ಸಾಬುದಾನ ವಡೆಗಳು ಸಿದ್ಧ. ಇದನ್ನು ನೆಚ್ಚಿನ ಚಟ್ನಿ ಅಥವಾ ಮೊಸರಿನೊಂದಿಗೆ ಸರ್ವ್ ಮಾಡಿ. ಅಥವಾ ಕೆಚಪ್ ಜೊತೆಗೂ ಇದನ್ನು ಸೇವಿಸಬಹುದು ಮತ್ತು ಜನ್ಮಾಷ್ಟಮಿಯಂದು ಎಲ್ಲರಿಗೂ ಅದನ್ನು ತಿನ್ನಿಸಿ. ಉಪವಾಸದ ಸಮಯದಲ್ಲಿ ಇದನ್ನು ಸೇವಿಸುವುದು ಚೆನ್ನಾಗಿರುತ್ತದೆ. ಜೊತೆಗೆ ಹೆಚ್ಚು ರುಚಿಕರವೂ ಆಗಿರುತ್ತದೆ. ಅಷ್ಟಮಿಗೆ ಅಲ್ಲದಿದ್ದರೂ ಸಂಜೆಯ ಸ್ನಾಕ್ಸ್ ಗೆ ಚಹಾ ಜೊತೆ ಇದು ಬೆಸ್ಟ್ ಕಾಂಬಿನೇಷನ್ ಆಗಿದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
Instant Idli Mix: ಹಿಟ್ಟು ರುಬ್ಬೋ ತಲೆನೋವೇ ಇಲ್ಲ, 15 ನಿಮಿಷದಲ್ಲಿ ಹೋಟೆಲ್ ಶೈಲಿಯ ಮೃದುವಾದ ಇಡ್ಲಿ ರೆಡಿ
Recommended image2
ಈ ಸೆಕೆಗೆ 2 ನಿಮಿಷದಲ್ಲೇ ಮಾವಿನಕಾಯಿ ತಂಬುಳಿ ಮಾಡಿ; ತಂಪೂ ಹೌದು, ಅನ್ನಕ್ಕೆ ರುಚಿ
Recommended image3
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved