Wrist Thread: ರಕ್ಷಾ ಸೂತ್ರದ ವೈಜ್ಞಾನಿಕ, ಧಾರ್ಮಿಕ ಮಹತ್ವಗಳಿವು
ಹಿಂದೂ ಧರ್ಮದಲ್ಲಿ ಕೆಂಪು ದಾರ ಶುಭ ಕಾರ್ಯದಲ್ಲಿ ಕಟ್ಟುವ ಸಂಪ್ರದಾಯವಿದೆ. ದಾರ ಕಟ್ಟುವುದು ಧಾರ್ಮಿಕ ಮಹತ್ವವನ್ನು ಹೊಂದಿದೆ. ಮೊದಲು ಬಾಲು ರಾಜನು ದಾರ ವನ್ನು ಕುಬ್ಜನಿಗೆ ಕಟ್ಟಿದನು ಎಂದು ಹೇಳಲಾಗುತ್ತದೆ. ದಾರವನ್ನು ಕಟ್ಟುವುದು ಬ್ರಹ್ಮ, ವಿಷ್ಣು, ಮಹೇಶ ಸೇರಿದಂತೆ ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿಯ ಅನುಗ್ರಹವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.
ಕೆಂಪು ದಾರ ವಿವಿಧ ರೋಗಗಳ ನಿಯಂತ್ರಿಸುತ್ತದೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಚಕ್ರಚಿಹ್ನೆಗೂ ವಿವಿಧ ಬಣ್ಣಗಳ ದಾರಗಳನ್ನು ಕಟ್ಟುವುದು ಶುಭಕರ ಎಂದು ಹೇಳಲಾಗುತ್ತದೆ. ಯಾವ ರಾಶಿಚಕ್ರದವರು ಯಾವ ಬಣ್ಣದ ದಾರ ಧರಿಸಬೇಕು ಎಂದು ನಿಮಗೆ ತಿಳಿದರೆ, ಇದರಿಂದ ಜೀವನದಲ್ಲಿ ಎಲ್ಲವು ಒಳ್ಳೆಯದಾಗುತ್ತದೆ.
ಮೇಷ : ಮೇಷ ರಾಶಿಯವರು ಕೆಂಪು ದಾರ ಕಟ್ಟುವುದು ಶುಭಕರ (auspicious). ಇದೇ ವೇಳೆ ಹನುಮನ ಅನುಗ್ರಹ ಮತ್ತು ಕುಜ ಗ್ರಹವು ಜೀವನದಲ್ಲಿ ಶುಭ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಈ ರಾಶಿಯವರು ಕೆಂಪು ದಾರ ಧರಿಸುವುದು ಉತ್ತಮ ಎನ್ನಲಾಗಿದೆ.
ವೃಷಭ : ವೃಷಭ ರಾಶಿಯವರು ಬಿಳಿ ದಾರವನ್ನು ಕಟ್ಟುವುದು ಶುಭಕರ. ಈ ಬಣ್ಣದ ದಾರವನ್ನು ಮಣಿಕಟ್ಟಿನ ಮೇಲೆ ಕಟ್ಟುವುದು ಲಕ್ಷ್ಮಿ ದೇವಿಯ ಅನುಗ್ರಹವನ್ನು ಕಾಪಾಡುತ್ತದೆ. ಇದೇ ವೇಳೆ ಶುಕ್ರಗ್ರಹದ ಶುಭ ಪರಿಣಾಮವು ಜೀವನದ ಮೇಲೆ ಬೀರುತ್ತದೆ.
ಮಿಥುನ : ಮಿಥುನ ರಾಶಿಯವರು ಮೃದುವಾದ ಹಸಿರು ದಾರವನ್ನು ಕಟ್ಟುವುದು ಶುಭಕರ. ಇದರಿಂದ ಬುಧ ದೇವರ ಅನುಗ್ರಹದ ಜೊತೆಗೆ ಗಣೇಶನ(Lord Ganesha) ಆಶೀರ್ವಾದವು ಲಭಿಸುವುದು.
ಕರ್ಕಾಟಕ : ಕರ್ಕಾಟಕ ರಾಶಿಯವರು ತಮ್ಮ ಮಣಿಕಟ್ಟಿನ ಮೇಲೆ ಬಿಳಿ ದಾರವನ್ನು ಕಟ್ಟಬೇಕು. ಬಿಳಿ ದಾರ ಕಟ್ಟುವುದು ದೇವರ ಕೃಪೆ ನೀಡುತ್ತದೆ. ಇದೇ ವೇಳೆ ಚಂದ್ರ ಶುಭ ಪರಿಣಾಮ ಬೀರಿತ್ತಾನೆ.
ಸಿಂಹ : ಸಿಂಹ ರಾಶಿ ಜನರು ಕೆಂಪು ದಾರವನ್ನು ಕಟ್ಟಬೇಕು. ಇದರ ಪರಿಣಾಮವು ಜೀವನದಲ್ಲಿ ಸೂರ್ಯ ದೇವರ ಅನುಗ್ರಹವನ್ನು ಕಾಪಾಡುತ್ತದೆ.
ಕನ್ಯಾ: ಕನ್ಯಾ ರಾಶಿಯವರು (virgo sign) ಹಸಿರು ದಾರವನ್ನು ಕಟ್ಟುವುದು ಶುಭಕರ. ಈ ರಾಶಿಚಕ್ರಚಿಹ್ನೆಗೆ ಹಸಿರು ಬಣ್ಣದ ರೇಷ್ಮೆ ದಾರವನ್ನು ಕಟ್ಟುವುದು ಬುಧ ಗ್ರಹದಿಂದ ಜೀವನದ ಮೇಲೆ ಶುಭ ಪರಿಣಾಮ ಬೀರುತ್ತದೆ.
ತುಲಾ : ತುಲಾ ರಾಶಿ ಮಣಿಕಟ್ಟಿನ ಮೇಲೆ ಬಿಳಿ ದಾರವನ್ನು ಕಟ್ಟುವುದು ಶುಭಕರ. ಈ ಬಣ್ಣ ಶುಕ್ರಗ್ರಹಕ್ಕೆ ಸಂಬಂಧಿಸಿದ್ದು. ಬಿಳಿ ಬಣ್ಣದ ಕಲ್ವಾ ವನ್ನು ಕಟ್ಟುವುದು ಲಕ್ಷ್ಮಿ ಮಾತೆಯ ಅನುಗ್ರಹವನ್ನು ಹಾಗೆಯೇ ಶುಕ್ರನ ಅನುಗ್ರಹವನ್ನು ನೀಡುತ್ತದೆ.
ವೃಶ್ಚಿಕ: ಈ ರಾಶಿಚಕ್ರದ ಜನರು ಹನುಮಾನ್ ಜೀ ಅವರ ಅನುಗ್ರಹವನ್ನು ಪಡೆಯಲು ಮಣಿಕಟ್ಟಿನ ಮೇಲೆ ಕೆಂಪು ದಾರಗಳನ್ನು (red thread)ಕಟ್ಟಬೇಕು. ಕೆಂಪು ದಾರ ಕಟ್ಟುವುದು ಮಂಗಳನನ್ನು ಬಲಪಡಿಸುತ್ತದೆ.
ಧನು : ಧನು ರಾಶಿಯವರು ಕೈ ಮೇಲೆ ಹಳದಿ ಬಣ್ಣದ ರೇಷ್ಮೆ ದಾರವನ್ನು ಕಟ್ಟಬೇಕು. ಇದು ಜೀವನದಲ್ಲಿ ವಿಷ್ಣುವಿನ ಅನುಗ್ರಹವನ್ನು ತರುತ್ತದೆ. ಇದೇ ವೇಳೆ ಗುರು ಗ್ರಹವು ಶುಭ ಪರಿಣಾಮವನ್ನು ಬೀರುತ್ತದೆ. .
ಮಕರ : ಮಕರ ರಾಶಿ ಮಣಿಕಟ್ಟಿನ ಮೇಲೆ ನೀಲಿ ದಾರವನ್ನು ಕಟ್ಟುವುದು ಶುಭಕರ. ಹಾಗೆಯೇ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ಕುಂಭ : ಕುಂಭ ರಾಶಿಯವರು ಶನಿದೇವ(Shani)ನ ಕೃಪೆ ಪಡೆಯಲು ನೀಲಿ ಬಣ್ಣದ ದಾರ ಧರಿಸಬೇಕು. ಮಣಿಕಟ್ಟಿನ ಮೇಲೆ ನೀಲಿ ದಾರವನ್ನು ಕಟ್ಟುವುದು ಶನಿಯ ದೋಷದ ಅಶುಭ ಪರಿಣಾಮಗಳನ್ನು ನಿವಾರಿಸುತ್ತದೆ.
ಮೀನ : ಮೀನ ರಾಶಿಯು ವಿಷ್ಣುವಿನ ಅನುಗ್ರಹವನ್ನು ಪಡೆಯಲು ಹಳದಿ ಬಣ್ಣದ ದಾರವನ್ನು ಕಟ್ಟಬೇಕು. ಹಳದಿ ಬಣ್ಣದ ರೇಷ್ಮೆ ದಾರವನ್ನು ಕಟ್ಟುವುದು ಗುರು ಗ್ರಹದ ಅಶುಭ ಪರಿಣಾಮವನ್ನು ನಿವಾರಿಸುತ್ತದೆ
ರಕ್ಷಣಾ ಸೂತ್ರಗಳನ್ನು ಕಟ್ಟಿಹಾಕುವ ವೈಜ್ಞಾನಿಕ ಪ್ರಾಮುಖ್ಯತೆ
ರಕ್ಷಣಾ ಸೂತ್ರವನ್ನು ಕಟ್ಟುವುದು ಅನೇಕ ರೋಗಗಳನ್ನು ತೆಗೆದುಹಾಕುತ್ತದೆ. ಅಲ್ಲದೆ ಕಫ ಮತ್ತು ಪಿತ್ತಕ್ಕೆ ಸಂಬಂಧಿಸಿದ ರೋಗಗಳು ದೂರಾಗುತ್ತವೆ. ರಕ್ಷಣಾ ಸೂತ್ರವನ್ನು ಕಟ್ಟುವುದು ರಕ್ತದೊತ್ತಡ, ಹೃದಯಾಘಾತ(Heart attack), ಮಧುಮೇಹ ಮತ್ತು ಪಾರ್ಶ್ವವಾಯು ಮೊದಲಾದ ರೋಗವನ್ನು ಹೆಚ್ಚಿಸುವುದಿಲ್ಲ ಎಂದು ನಂಬಲಾಗಿದೆ.