ಶನಿವಾರ ಶನಿದೇವರ ಕೃಪೆ ಪಡೆಯಲು ಏನು ಮಾಡಬೇಕು? ಏನು ಮಾಡಬಾರದು?
ಶನಿವಾರದಂದು ಶನೀಶ್ವರ ದೇವಸ್ಥಾನಕ್ಕೆ ಹೋಗುವ ಒಳ್ಳೆಯ ರೂಢಿ ನಿಮ್ಮಲ್ಲಿ ಇರಬಹುದು. ಹಾಗೇ ಅಂದು ಕೆಲವು ಮಾಡಬೇಕಾದ ಕೆಲಸಗಳೂ ಇವೆ; ಮಾಡಬಾರದ ಕೆಲಸಗಳೂ ಇವೆ. ಅವ್ಯಾವುವು ಅಂತ ತಿಳಿಯೋಣ ಬನ್ನಿ.
ಶನಿವಾರ ಏನು ಮಾಡಬಾರದು?
- ಬಡವರು, ಅಂಧರು, ಅಂಗವಿಕಲರು ಮತ್ತು ಯಾವುದೇ ಅಸಹಾಯಕ ಮಹಿಳೆಯರನ್ನು ಎಂದಿಗೂ ಅವಮಾನಿಸಬೇಡಿ. ಹೀಗೆ ಮಾಡಿದರೆ ಶನಿ ದೇವರು ತುಂಬಾ ಕೋಪಗೊಳ್ಳುತ್ತಾನೆ. ಶನಿವಾರ ಹೀಗೆ ಮಾಡುವುದು ದೊಡ್ಡ ಬಿಕ್ಕಟ್ಟನ್ನು ಆಹ್ವಾನಿಸಿದಂತೆ.
- ಶನಿವಾರ ಎಂದಿಗೂ ಮದ್ಯಪಾನ ಮಾಡಬೇಡಿ. ಇದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ತೊಂದರೆಗಳು ಸುತ್ತುವರಿಯಬಹುದು.
- ಶನಿವಾರ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಬೇಡಿ. ನಿಮಗೆ ಬೇಕಾದರೆ, ಶುಂಠಿ ತಿಂದ ನಂತರ ಹೊರಗೆ ಹೋಗಿ ಮತ್ತು ಹೊರಡುವ ಮೊದಲು 5 ಹೆಜ್ಜೆ ಹಿಂದಕ್ಕೆ ನಡೆಯಿರಿ.
ನಾಗರ ಪಂಚಮಿ ಹೇಗೆ ಶುರು ಆಯ್ತು? ಅರ್ಥಪೂರ್ಣವಾಗಿ ನಾಗದೇವರ ಪೂಜೆ ಹೀಗೆ ಮಾಡಿ
- ಈ ದಿನ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ.
- ಮದುವೆಯಾದ ಮಗಳನ್ನು ತನ್ನ ಅತ್ತೆಯ ಮನೆಗೆ ಶನಿವಾರ ಕಳುಹಿಸಬೇಡಿ.
- ಸುಳ್ಳು ಹೇಳಬೇಡಿ. ಯಾವಾಗಲೂ ಸತ್ಯವನ್ನೇ ಹೇಳಬೇಕು. ಶನಿವಾರ ಹೇಳಿದ ಸುಳ್ಳು ಶನಿ ದೇವನ ಕೋಪಕ್ಕೆ ಕಾರಣವಾಗಬಹುದು.
- ಶನಿವಾರ ಯಾರಿಗೂ ಎಣ್ಣೆ ದಾನ ಮಾಡಬೇಡಿ ಹಾಗೂ ಎಣ್ಣೆಯನ್ನು ಖದೀದಿ ಮಾಡಬೇಡಿ. ಆರೋಗ್ಯ ಸಮಸ್ಯೆ ಉಂಟಾಗುವುದು.
- ಶನಿವಾರದಂದು ಯಾರಿಂದಲೂ ಚಪ್ಪಲಿ ಅಥವಾ ಶೂ ಗಿಫ್ಟ್ ಆಗಿ ಪಡೆಯಬೇಡಿ, ನೀವು ಕೊಡಲೂ ಬೇಡಿ.
- ಶನಿವಾರ ಕಬ್ಬಿಣವನ್ನು ಖರೀದಿ ಮಾಡಬಾರದು. ಕಬ್ಬಿಣದಿಂದ ಮಾಡಿದಂಥ ವಸ್ತುಗಳನ್ನು ಮನೆಗೆ ತರಬಾರದು, ಅದು ಅದೃಷ್ಟವಲ್ಲ. ಉಪ್ಪು ತಂದ್ರೆ ಸಾಲ ಹೆಚ್ಚುವುದು. ಕತ್ತರಿ ಕೊಂಡು ತಂದರೆ ಜಗಳವಾಗುವುದು. ಪೊರಕೆ ತಂದರೆ ಸಾಲ ಹೆಚ್ಚುವುದು. ಇಂಕ್ ತರುವುದರಿಂದ ಬದುಕಿನಲ್ಲಿ ಸೋಲಾಗುವುದು, ಆದ್ದರಿಂದ ಇವುಗಳೆನ್ನೆಲ್ಲಾ ತರಬಾರದು ಎಂದು ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಬಲವಾಗಿ ನಂಬುತ್ತಾರೆ.
ಕೃಷ್ಣ ಕಾಳಿಂಗಮರ್ದನ ಮಾಡಿದ ದಿನ ಇಂದು ನಾಗರ ಪಂಚಮಿ
ಶನಿವಾರ ಏನು ಮಾಡಬೇಕು?
- ಸಮೀಪದ ಹನುಮಂತನ ಗುಡಿಗೆ ಹೋಗಿ ದೀಪ ಹಚ್ಚಿ.
- ಶನೀಶ್ವರನ ದೇವಸ್ಥಾನಕ್ಕೆ ಹೋಗಿ ಎಳ್ಳಿನ ದೀಪ ಹಚ್ಚಿ. ಅಥವಾ ಎಳ್ಳೆಣ್ಣೆಯನ್ನು ಅಗ್ನಿಕುಂಡಕ್ಕೆ ಅರ್ಪಿಸಿ.
- ಶನಿವಾರದಂದು ಅರಳಿ ಮರಕ್ಕೆ ನೀರು ಹಾಕಿ ಪೂಜಿಸಿ.
- ಶನಿವಾರ ಕಪ್ಪು ವಸ್ತ್ರ, ನೀಲಿ ವಸ್ತ್ರ ಅಥವಾ ಕಪ್ಪು ಎಳ್ಳು ದಾನ ಮಾಡಿ.
- ಶನಿವಾರ ಉಪವಾಸವಿದ್ದು ಶನಿ ದೇವಾಲಯಕ್ಕೆ ಹೋಗಿ ಎಣ್ಣೆ ಅರ್ಪಿಸಿ, ಪ್ರಾರ್ಥಿಸಿ. ಪ್ರಾರ್ಥಿಸುವಾಗ ಅಥವಾ ಪೂಜಿಸುವಾಗ ಮೂರ್ತಿಯ ಎದುರಿಗೆ ಶನಿಯ ದೃಷ್ಟಿ ನೇರವಾಗಿ ಬೀಳುವಂತೆ ನಿಲ್ಲಬಾರದು.
- ಶನಿ ಮಂತ್ರಗಳನ್ನು ಹೇಳಿ.
- ಈ ದಿನ ಬಡವರಿಗೆ, ಹಸಿದವರಿಗೆ ಆಹಾರ ದಾನ ಮಾಡಿ. ನಿರ್ಗತಿಕರಿಗೆ ಕಪ್ಪು ಅಥವಾ ಕಡು ನೀಲಿ ವಸ್ತ್ರ ದಾನ ಮಾಡಿ. ಹಿರಿಯರನ್ನು ಗೌರವಿಸಿ.
ಪಾಂಡವರ ಕಡೆ ನಿಂತು ಹೋರಾಡಿದ ಏಕೈಕ ಕೌರವನೀತ!