Asianet Suvarna News Asianet Suvarna News

ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದರ ಹಿಂದಿದೆ ರಹಸ್ಯ..!

ಶಾಸ್ತ್ರದಲ್ಲಿ ತಿಳಿಸಿದ ಮತ್ತು ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಗಳಲ್ಲಿ ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದು ಸಹ ಒಂದಾಗಿದೆ. ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಶನಿ ಗ್ರಹಕ್ಕೆ ಪ್ರಿಯವಾದ ಬಣ್ಣ ಕಪ್ಪು. ಹಾಗಾಗಿ ಕಪ್ಪುದಾರವನ್ನು ಕಟ್ಟಿಕೊಳ್ಳುವುದರಿಂದ ಶನಿಯ ರಕ್ಷಣೆ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಆರೋಗ್ಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗಾದರೆ ಇದರಿಂದಾಗುವ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯೋಣ..

Wearing black thread around ankle gives many benefits
Author
Bangalore, First Published Aug 27, 2021, 10:15 AM IST
  • Facebook
  • Twitter
  • Whatsapp

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಮತ್ತು ಪೂರ್ವಜರು ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ಅನೇಕ ಕಾರಣಗಳಿವೆ. ಶರೀರ ಮತ್ತು ಮನಸ್ಸಿನ ಸ್ವಾಸ್ಥ್ಯ ವೃದ್ಧಿಯಾಗಲು ಹಲವಾರು ರೀತಿಯ ಆಚರಣೆಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ. 

ನೀರಿಗೆ ಅರಿಶಿಣ ಸೇರಿಸಿ ಸ್ನಾನ ಮಾಡುವುದು, ತಿಲಕವಿಟ್ಟುಕೊಳ್ಳುವುದು, ಪೂಜಿಸಿದ ದಾರ ಕಟ್ಟಿಕೊಳ್ಳುವುದು ಹೀಗೆ ಅನೇಕ ಆಚರಣೆ, ನಿಯಮಗಳನ್ನು ಪಾಲಿಸುತ್ತಾ ಬಂದಿದ್ದೇವೆ. ಹಾಗೆಯೇ ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳುವುದು ಸಹ ಅಂತಹ ಆಚರಣೆಗಳಲ್ಲೊಂದು. ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದೆ ಅನೇಕ ಲಾಭಗಳಿವೆ ಎಂಬುದನ್ನು ಶಾಸ್ತ್ರ ತಿಳಿಸಿದೆ. ಅಂತಹ ಪರಿಣಾಮಕಾರಿ ಲಾಭಗಳ ಬಗ್ಗೆ ತಿಳಿಯೋಣ....

ಇದನ್ನು ಓದಿ: ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಬಣ್ಣ ಶನಿ ದೇವನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಶನಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಕಪ್ಪು ಬಣ್ಣವನ್ನು ಹೆಚ್ಚು ಬಳಸುತ್ತಾರೆ. ಹಾಗಾಗಿ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡ ವ್ಯಕ್ತಿಗಳು ಶನಿ ದೇವರಿಂದ ರಕ್ಷಣೆ ಪಡೆದುಕೊಳ್ಳುತ್ತಾರೆ.

ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದಂತಹ ಆಚರಣೆ ಆಗಿದೆ. ತಾಯಿ ಮಗುವಿಗೆ  ಕೆಟ್ಟದೃಷ್ಟಿ ತಾಗದಿರಲೆಂದು ಕಪ್ಪು ದಾರ ಕಟ್ಟಿದರೆ, ಹೆಂಗಳೆಯರು ಚೆಂದವಾಗಿ ಕಾಣಲೆಂದು ಕಟ್ಟಿಕೊಳ್ಳುತ್ತಾರೆ. ಆದರೆ ಇನ್ನೂ ಅನೇಕ ಉತ್ತಮ ಪ್ರಯೋಜನಗಳು ಈ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಇದೆ. 

ರಾಹು ಮತ್ತು ಕೇತು ಗ್ರಹಗಳ ಅಶುಭ ಪ್ರಭಾವದಿಂದ ರಕ್ಷಣೆ:

ಕಾಲಿಗೆ ಕಪ್ಪುಜನರ ಕಟ್ಟಿಕೊಳ್ಳುವುದು ಚೆಂದ ಅಷ್ಟೇ ಅಲ್ಲದೆ ಗ್ರಹಗಳ ಅಶುಭ ಪ್ರಭಾವದಿಂದಲೂ ರಕ್ಷಣೆ ದೊರೆಯುತ್ತದೆ. ಛಾಯಾ ಗ್ರಹಗಳೆಂದು ಕರೆಯಲ್ಪಡುವ ರಾಹು ಮತ್ತು ಕೇತು ಗ್ರಹಗಳು ಅಶುಭ ಪ್ರಭಾವಗಳನ್ನು ಬೀರುತ್ತಿದ್ದರೆ ಅಥವಾ ಶತ್ರು ಮನೆಯಲ್ಲಿ ಸ್ಥಿತವಾಗಿದ್ದರೆ ಅಂಥ ಸಂದರ್ಭದಲ್ಲಿ ಹಣ ಕಳೆದುಕೊಳ್ಳುವುದು, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಹೀಗೆ   ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಪರಿಹಾರವಾಗಿ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಛಾಯಾ ಗ್ರಹಗಳ ಅಶುಭ ಪ್ರಭಾವದಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಕೆಟ್ಟ ದೃಷ್ಟಿಯಿಂದ ರಕ್ಷಣೆ:

ಒಬ್ಬ ವ್ಯಕ್ತಿಯ ಸಂಪತ್ತು, ಸುಖ- ಸಮೃದ್ಧಿ ಮತ್ತು ಸಂತೋಷಗಳನ್ನು ನೋಡಿ ಸಹಿಸಲಾಗದ ವ್ಯಕ್ತಿಗಳು ಅನೇಕರಿರುತ್ತಾರೆ. ಅಂಥ ಸಂದರ್ಭದಲ್ಲಿ ಆ ಜನಗಳ ಕೆಟ್ಟ ದೃಷ್ಟಿ ತಾಗಿದಾಗ ಸಮಸ್ಯೆಗಳು ಉಂಟಾಗುತ್ತವೆ. ಕೆಟ್ಟ ದೃಷ್ಟಿಯಿಂದ ಬಚಾವಾಗಲು  ಕಾಲಿಗೆ ಕಪ್ಪುದಾರ ಕಟ್ಟಿಕೊಳ್ಳಬೇಕಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಮಾಟ - ಮಂತ್ರಗಳ ಅಂಥ ಕೆಟ್ಟ ಶಕ್ತಿಗಳು ತಾಗದಂತೆ ರಕ್ಷಣೆ ನೀಡುತ್ತದೆ.

ಅನೇಕ ಆರೋಗ್ಯ ಲಾಭ ಇದೆ:

ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಪರಿಹಾರವನ್ನು ಕಾಣಬಹುದಾಗಿದೆ. ಕಾಲಿಗೆ ಕಪ್ಪು ದಾರ  ಕಟ್ಟಿಕೊಳ್ಳುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದರಲ್ಲೂ ಮುಖ್ಯವಾಗಿ ಹೊಟ್ಟೆ ನೋವು ಗುಣವಾಗುತ್ತದೆ ಎಂದು ಹೇಳಲಾಗುತ್ತದೆ.

ಗಾಯಗಳನ್ನು ಗುಣಪಡಿಸುವಲ್ಲಿಯೂ ಇದು ಸಹಕಾರಿಯಾಗಿದೆ. ಕಾಲಿಗೆ ಗಾಯವಾಗಿದ್ದರೂ ಅದನ್ನು ಬೇಗ ಗುಣಪಡಿಸುವಲ್ಲಿ ಕಪ್ಪು ದಾರ ಸಹಾಯಕವಾಗುತ್ತದೆ. ಆರ್ಥರೈಟಿಸ್‌ನಿಂದ ಉಂಟಾದ ಕಾಲು ನೋವು ಬೇಗ ಗುಣವಾಗಲು ಸಹ ಇದು ಸಹಕಾರಿಯಾಗಿದೆ.

ಇದನ್ನು ಓದಿ: ಶನಿ ದೋಷದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ವಾಸ್ತು ಟಿಪ್ಸ್...!

ಅದೃಷ್ಟ ಮತ್ತು ಸಂಪತ್ತು ನೆಲೆಸುವಂತೆ ಮಾಡುತ್ತದೆ:

ಶನಿಯು ಶಕ್ತಿಶಾಲಿ ಗ್ರಹವಾಗಿದೆ. ಶನಿಯ ಕೃಪೆ ದೊರಕಿದರೆ ಸುಖ, ಸಂಪತ್ತು ಮತ್ತು ಅದೃಷ್ಟ ಬರುತ್ತದೆ. ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಶನಿ ದೇವರ ರಕ್ಷಣೆ ಸಿಗುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿವಾದಗಳು ಬೇಗ ಇತ್ಯರ್ಥವಾಗುತ್ತವೆ.

ಜಾತಕದಲ್ಲಿ ಶನಿದೋಷ ಇರುವವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡರೆ ದೋಷದ ಪ್ರಮಾಣ ತಗ್ಗುತ್ತದೆ. ಪದೇ ಪದೆ ಅನಾರೋಗ್ಯ ಸಮಸ್ಯೆ ಉಂಟಾಗುವ ಮಕ್ಕಳಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 

Follow Us:
Download App:
  • android
  • ios