Asianet Suvarna News Asianet Suvarna News

Aries Woman: ಹೀಗಿರುತ್ತೆ ಮೇಷ ರಾಶಿಯ ಮಹಿಳೆಯ ಗುಣ ಸ್ವಭಾವ

ಪ್ರತಿ ರಾಶಿಗೂ ಜನ್ಮಜಾತಸ್ಯ ಕೆಲ ಗುಣ ಸ್ವಭಾವಗಳಿರುತ್ತವೆ. ಹುಟ್ಟುಗುಣ ಎನ್ನುವುದು ಇದನ್ನೇ. ಮೇಷ ರಾಶಿಯ ಮಹಿಳೆಯ ಸ್ವಭಾವ ಹೇಗಿರುತ್ತದೆ, ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಅವಳ ನಿರೀಕ್ಷೆ, ವರ್ತನೆಗಳೇನು ಎಂಬುದು ಇಲ್ಲಿದೆ.

Personality traits of Aries woman skr
Author
Bangalore, First Published Dec 4, 2021, 5:49 PM IST
  • Facebook
  • Twitter
  • Whatsapp

ಇವಳಿಗೆ ತಮಾಷೆ ಇಷ್ಟ, ಮಜವಾಗಿರುವುದು ಗೊತ್ತು, ಸದಾ ಚಲನಶೀಲ(free-spirited) ಇವಳ ಆತ್ಮ, ಕ್ರಿಯಾಶೀಲೆ(creative), ಸಡನ್ನಾಗಿ ಬರುವ ಕೋಪ, ಅಷ್ಟೇ ಬೇಗ ಮರೆಯುವ ಗುಣ, ತಾನು ಹೋದಲ್ಲೆಲ್ಲ ಜೀವಕಳೆ ತುಂಬುವವಳು, ವಿಷಯ ಹಾಗೂ ವ್ಯಕ್ತಿಗಳ ಮೇಲೆ ಹಿಡಿತ ಸಾಧಿಸಬಲ್ಲಳು.. ಮೇಷ ರಾಶಿಯ ಹೆಣ್ಮಕ್ಕಳಿರುವುದೇ ಹಾಗೆ. ಮಂಗಳ ಗ್ರಹ ಅಂದರೆ ಕುಜ ಮೇಷ ರಾಶಿಯ ಅಧಿಪತಿ.

 ಉತ್ಸಾಹದ ಚಿಲುಮೆಯಾಗಿರುವ ಮೇಷ ರಾಶಿಯ ಯುವತಿ ತಾನು ಹೋದಲ್ಲೆಲ್ಲ ಉತ್ಸಾಹ ತುಂಬುತ್ತಾಳೆ. ಆದರೆ, ಅವಳ ಉತ್ಸಾಹ ತಣ್ಣಗಾಗದಂತೆ ನೋಡಿಕೊಳ್ಳಲು ಅವಳ ಚಲನಶೀಲ ವ್ಯಕ್ತಿತ್ವಕ್ಕೆ ಅಗತ್ಯ ಸರಕನ್ನು, ಅವಕಾಶವನ್ನು ಪ್ರೀತಿಯಿಂದ ನೀಡುತ್ತಿರಬೇಕು. ಯಾವುದೇ ವಿಷಯವಿರಲಿ, ಮೇಷ ರಾಶಿಯ ಮಹಿಳೆ ಅದನ್ನು ನೋಡುವ ದೃಷ್ಟಿಕೋನ ವಿಶಿಷ್ಠವಾಗಿರುತ್ತದೆ. ಅವರ ಅಭಿಪ್ರಾಯ(opinion) ಹೊಸತಾಗಿರುತ್ತದೆ. ಅವರು ಜಗತ್ತನ್ನು ನೋಡುವ ದೃಷ್ಟಿಯೇ ವಿಭಿನ್ನವಾಗಿರುತ್ತದೆ. ಇದೆಲ್ಲದರ ಜೊತೆ ಅಭಿಪ್ರಾಯ ಹಾಗೂ ಸತ್ಯ ಹೇಳಲು ಹಿಂದು ಮುಂದು ನೋಡುವ ಸ್ವಭಾವ ಇವರದಲ್ಲ. 

Lucky Zodiac of 2022: ಹೊಸ ವರ್ಷ ಈ ಆರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಇವರನ್ನು ಸಂಗಾತಿ(companion)ಯಾಗಿ ಹೊಂದಲು ಸಂತಸ ಪಡಬೇಕು. ಏಕೆಂದರೆ ಪಾರ್ಟಿಗೂ ಸೈ, ಪೂಜೆಗೂ ಜೈ ಎನ್ನುವ ಗುಣ ಇವರದ್ದು. ಎಲ್ಲರ ಗಮನ ತಮ್ಮ ಮೇಲೆ ಕೇಂದ್ರೀಕೃತವಾದರೆ ನಾಚುವವರಲ್ಲ, ಮನಸ್ಸಿಗೆ ಬಂದಂತಿರಲು ಹೆದರುವವರಲ್ಲ. ಯಾರಾದರೂ ಬೆನ್ನ ಹಿಂದೆ ಮಾತಾಡಿದ್ದು ತಿಳಿದರೆ ಸುಮ್ಮನಿರುವವರೂ ಅಲ್ಲ. ಆ ಮಟ್ಟಿನ ಡಾಮಿನೇಟಿಂಗ್ ನೇಚರ್ ಮೇಷದ ಮಹಿಳೆಯದ್ದು. 

ಪ್ರೀತಿ ಹಾಗೂ ಲೈಂಗಿಕ ಬದುಕು (love and sex life)
ಹೆದರುಜೀವಿಗಳಿಗೆ, ಧೈರ್ಯವಿಲ್ಲದವರಿಗೆ ಮೇಷ ರಾಶಿಯ ಹುಡುಗಿಯಲ್ಲ. ಈಕೆಯ ವೈಲ್ಡ್ ಹಾಗೂ ಸ್ಟ್ರಾಂಗ್ ಗುಣಕ್ಕೆ ಸರಿತೂಗುವವರಿಗೆ ಮಾತ್ರ ಇವಳೊಂದಿಗಿನ ಪ್ರೀತಿ ಗೀತಿ ಇತ್ಯಾದಿ ಹೇಳ ಮಾಡಿಸಿದ್ದು. ಈಕೆಯ ವ್ಯಂಗ್ಯಭರಿತ ಹಾಸ್ಯಪ್ರಜ್ಞೆ, ಮುಖಕ್ಕೆ ಹೊಡೆವಂಥ ಪ್ರಾಮಾಣಿಕತೆ ತಡೆದುಕೊಳ್ಳುವ ಗಂಡೆದೆ ಬೇಕು. ರೊಮ್ಯಾಂಟಿಕ್ ಜೀವನವೇ ಆಗಲಿ, ಔದ್ಯೋಗಿಕ ಬದುಕೇ ಆಗಲಿ, ಸಮಾನತೆ(equality)ಗಾಗಿ ಹಪಹಪಿಸುವ ಸ್ವಭಾವ ಮೇಷ ರಾಶಿಯ ಮಹಿಳೆಯದ್ದು. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು, ತನ್ನ ಮೇಲೆ ಹಿಡಿತ ಸಾಧಿಸುವುದನ್ನು, ಅಧಿಕಾರ ಚಲಾಯಿಸುವುದನ್ನು ಅಥವಾ ಯಾವುದೇ ರೀತಿಯ ಅನ್ಯಾಯವನ್ನು ಸಹಿಸುವವಳಿವಳಲ್ಲ. ಇವಳೊಂದಿಗೆ ವಾದ ಮಾಡಿ ಗೆಲ್ಲುವುದೂ ಸಾಧ್ಯವಿಲ್ಲ. 

The great Indian kitchen: ಹೆಸರಿಲ್ಲದವಳ ದಿನವಾರ್ತೆ, ಇದು ಹಲವು ಮನೆಗಳ ಕತೆ

ಹಾಗಂಥ ಪ್ರೀತಿಯ ವಿಷಯದಲ್ಲಿ ಈಕೆ ತುಂಬಿದ ಕೊಡ. ತನ್ನನ್ನು ಇಷ್ಟ ಪಡುವವರಿಗೆ ಪ್ರೀತಿಯನ್ನು ಮೊಗೆಮೊಗೆದು ಕೊಡಬಲ್ಲಳು. ಉತ್ತಮ ಸ್ನೇಹಿತೆ(friend)ಯಾಗಬಲ್ಲಳು. ಈಕೆಯೊಂದಿಗಿನ ಲೈಂಗಿಕ ಬದುಕು ಪ್ರೇಮದ ಅಗ್ನಿಮಳೆಯೇ. ನಿಮ್ಮನ್ನು ಸಂಪೂರ್ಣವಾಗಿ ಆವರಿಸಬಲ್ಲಳು. ಅವಳಿಗೆ ಪ್ರೀತಿ, ಬುದ್ಧಿವಂತಿಕೆ ಎಷ್ಟು ಬೇಕೋ ಲೈಂಗಿಕ ಅನುಭವವೂ ಸಮನಾಗಿ ಬೇಕು. 

ಮನೆ ಹಾಗೂ ಕುಟುಂಬ ಜೀವನ(family life)
ಮನೆ ಹೇಗಿರಬೇಕು, ಜೀವನ ಹೇಗೆ ನಡೆಸಬೇಕು ಎಂಬ ಬಗ್ಗೆ ಅವಳದೇ ಆದ ಇಷ್ಟಗಳಿರುತ್ತವೆ. ಅದನ್ನು ಮೀರುವವಳಲ್ಲ, ಮೀರಲೂ ಬಿಡುವವಳಲ್ಲ. ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಒಬ್ಬಳೇ ಇರಲೂ ಹೆದರುವುದಿಲ್ಲ. ಮನೆಯನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವ ಈಕೆ ಗಿಡಗಳನ್ನು ಬೆಳೆಸುವಲ್ಲಿ ಆಸಕ್ತಿ ಹೊಂದಿರುತ್ತಾಳೆ. ಈಕೆಯ ಮನೆ ಯಾವಾಗಲೂ ಮಾತು, ನಗು, ಬೆಳಕು ಹಾಗೂ ಸಂಗೀತದಿಂದ ಜೀವಕಳೆ ಹೊಂದಿರುತ್ತದೆ. ತಾಯಿಯಾಗಿ ತ್ಯಾಗಮಯಿಯಾಗುವುದಕ್ಕಿಂತ ಸಾಹಸವಂತೆಯಾಗಿ ಮಗುವನ್ನು ಕರೆದುಕೊಂಡೇ ಸ್ವತಂತ್ರವಾಗಿ ಓಡಾಡಬಲ್ಲಳು. 

ಔದ್ಯೋಗಿಕ ಬದುಕು ಹಾಗೂ ಹಣ(job and money)
ಈಕೆ ಸಿಕ್ಕಾಪಟ್ಟೆ ಸ್ವತಂತ್ರಳಾಗಿರಲು ಬಯಸುವವಳಾದ್ದರಿಂದ ಉದ್ಯೋಗದಲ್ಲಿ ಬೇಗ ನಾಯಕಿಯಾಗುತ್ತಾಳೆ. ದೊಡ್ಡ ಹುದ್ದೆ ಅಲಂಕರಿಸುತ್ತಾಳೆ. ತನ್ನ ಸಾಮರ್ಥ್ಯದಿಂದ ದೊಡ್ಡ ತಂಡವನ್ನೂ ಸುಲಭವಾಗಿ ಮುನ್ನಡೆಸಬಲ್ಲಳು. ಇತರರಿಗೆ ಭಯದಿಂದ ಹೊರ ಬರಲು ಸಹಾಯ ಮಾಡಬಲ್ಲಳು. ಸ್ವಲ್ಪ ಸಿಟ್ಟು ಜಾಸ್ತಿಯೆನ್ನುವುದಷ್ಟೇ ಇವಳಿಗೆ ತಡೆಯಾಗುವುದು. ಯಶಸ್ಸು ಈಕೆಗೆ ಬಹಳ ಮುಖ್ಯ. ಸೋತಾಗ ಕೂಡಾ ಕೆಲ ದಿನಗಳಲ್ಲೇ ಮತ್ತೆ ಉತ್ಸಾಹಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಳ್ಳಬಲ್ಲಳು. ಆತ್ಮವಿಶ್ವಾಸದಿಂದ ತುಂಬಿ ತುಳುಕುವ ಈಕೆಯ ಬಳಿ ಹಣಕಾಸು ಚೆನ್ನಾಗಿಯೇ ಓಡಾಡುತ್ತದೆ. 
 

Follow Us:
Download App:
  • android
  • ios